Breaking News

ಕರ್ನಾಟಕ

ರಾಜ್ಯ ಹೆದ್ದಾರಿಯಲ್ಲಿ ಸಸಿನೆಟ್ಟು ಕರವೇ ಪ್ರತಿಭಟನೆ

ಲಕ್ಷ್ಮೇಶ್ವರ :ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ರಸ್ತೆ ಹದಗೆಟ್ಟರ ಬಗ್ಗೆ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿ ರಸ್ತೆಯಲ್ಲಿ ಸಸಿ ನೆಟ್ಟರು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರುಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆಸೊಪ್ಪಿನ ಮಾತನಾಡಿ ಕಳೆದ 10 ರಿಂದ 15ವರ್ಷದಿಂದ ಹದಗೆಟ್ಟಿ ರಸ್ತೆ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಹಾಗೂ ಪಟ್ಟಣದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದೆ ನಮ್ಮ ಜಿಲ್ಲೆಯವರಾದ ಲೋಕೋಪಯೋಗಿ ಸಚಿವರಾದ …

Read More »
Featured Video Play Icon

ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ :

ಧಾರವಾಡ : ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯದಲ್ಲಿ ಮಾರಾ ಮಾರಿ ನಡೆದಿರುವಂತಹ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ. ನಗರದ ಬಹುತೇಕ ಶಾಲಾ ಕಾಲೇಜುಗಳಿಗೆ ತೆರಳ ಬೇಕಾದರೆ, ಹಳೆ ಬಸ್ ನಿಲ್ದಾಣವೇ ಸಂಪರ್ಕಕೊಂಡಿಯಾಗಿದ್ದು, ಹೀಗಾಗಿ ಧಾರವಾಡ ನಗರಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ನಗರದ ಹಳೆ ಬಸ್ ನಿಲ್ದಾಣವನ್ನೇ ಬಳಸುತ್ತಾರೆ. ಅದರಂತೆ ಇಂದು ಕೂಡ ಬೆಳಗ್ಗೆ ಕಾಲೇಜಿಗೆ ತೆರಳು ಬಂದಿದ್ದ ವಿದ್ಯಾರ್ಥಿಗಳು, ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡಿದ್ದು, ಕೆಲ …

Read More »

ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಲೆ, ಗೋಧಿ, ಕುಸುಬಿ ಜಲಾವೃತ

ಧಾರವಾಡ : ಜಿಲ್ಲೆಯಾದ್ಯಂತ ಸತತ ಐದನೇ ದಿನವೂ ಮುಂದುವರೆದಿದ್ದು ಮಳೆಯ ಅಬ್ಬರದಿಂದ ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಅಮ್ಮಿನಭಾವಿ ಭಾಗದ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಹಿಂಗಾರು ಬಿತ್ತನೆ ಮಾಡಿ ಉತ್ತಮವಾದ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸತತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ರೈತರು ಹಿಂಗಾರು ಬಿತ್ತನೆ ಮಾಡಿದ ಕಡಲೆ, ಗೋಧಿ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ಕೋಳೆಯುಂತಾಗಿದೆ. ಧಾರವಾಡ ಗ್ರಾಮೀಣ ಪ್ರದೇಶಗಳಲ್ಲಿ …

Read More »

ಫ್ಲೈ ಓವರ್ ನಿರ್ಮಾಣದ ಸಲಹಾ ಸಮಿತಿ ಸಭೆ

ಹುಬ್ಬಳ್ಳಿ : ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಬಿವಿಬಿ ಕಾಲೇಜು ಸೆನೆಟ್ ಹಾಲ್‌ನಲ್ಲಿ ಹುಬ್ಬಳ್ಳಿ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣ ಕುರಿತು ಸಲಹಾ ಸಮಿತಿ ಜರುಗಿತು. ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜು ಉಪ ಕುಲಪತಿ ಅಶೋಕ ಶೆಟ್ಟರ್, ಪೊಲೀಸ್ ಆಯುಕ್ತ ಲಾಭುರಾಮ್ , ವಾ.ಕ.ರ.ಸಾ.ಸಂ ಹಾಗೂ ಬಿ.ಆರ್‌.ಟಿ.ಎಸ್ ವ್ಯವಸ್ಥಾಪಕ ನಿರ್ದೇಶಕ ಗುರುದತ್ ಹೆಗಡೆ, ಧಾರವಾಡ ಐ.ಐ.ಟಿ. ಡೀನ್, ಪ್ರೋ.ನಾಗೇಶ ಐಯ್ಯರ , ಡಿ.ಆರ್.ಎನ್ . …

Read More »

ಠಾಣೆಯಲ್ಲಿ ಸಿಬ್ಬಂದಿ ಎದುರು ಅಸಭ್ಯ ವರ್ತನೆ ಆರೋಪ: ಹುಬ್ಬಳ್ಳಿ ಪೊಲೀಸ್​ ಕಾನ್ಸ್​​ಟೇಬಲ್​ ಅಮಾನತು

ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ. ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು ಆದೇಶ ಹೊರಡಿಸಿದ್ದಾರೆ

Read More »

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಲಿಂಗರಾಜ ಅಂಗಡಿ ಸ್ಫರ್ಧೆ

ಡಾ.ಲಿಂಗರಾಜ ರುದ್ರಪ್ಪ ಅಂಗಡಿ ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳ ಒತ್ತಾಸೆ ಬೆಂಬಲದೊಂದಿಗೆ ಪುನರ್ ಆಯ್ಕೆ ಬಯಸಿ ಸ್ಪರ್ಧೆ ಮಾಡಿದ್ದು, ನನ್ನ ಆಯ್ಕೆ ನೂರಕ್ಕೆ ನೂರರಷ್ಟು ಖಚಿತವಾಗಿದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಲಿಂಗರಾಜ ರುದ್ರಪ್ಪ ಅಂಗಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ …

Read More »

ಕಾರ್ತಿಕ ಮಾಸ ಮುಗಿಯೊವರೆಗೂ ಮಳೆ ಮುಂದುವರೆಯಕಿದೆ-ಕೋಡಿಮಠದ ಸ್ವಾಮೀಜಿ ಭವಿಷ್ಯ

ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಧಾರವಾಡ: ರಾಜ್ಯದಲ್ಲಿ ಕಾರ್ತಿಕ ಮುಗಿಯುವವರೆಗೂ ಮಳೆ ಮುಂದುವರೆಯಲಿದೆ ಎಂದು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪವಾಗಿದೆ. ಏನೂ ಮಾಡಲು ಆಗುವುದಿಲ್ಲ ಎಂದರು.ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರಲಿದೆ ಎಂದರು. ಇದೇ ವೇಳೆ ರಾಜಕೀಯದ ಬಗ್ಗೆ ಭವಿಷ್ಯ …

Read More »

ಆರೋಗ್ಯ ಸಲಹೆ: ನೀವು ಸಕ್ಕರೆ ಪ್ರಿಯರೇ?.. ಅತಿ ಬಳಕೆಗೂ ಮೊದಲು ಕೊಂಚ ಯೋಚಿಸೋದು ಒಳ್ಳೇದು..

ಬೆಂಗಳೂರು : ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಕ್ಕರೆ ಸೇವನೆ ಒಂದು ರೀತಿಯ ಸ್ಲೋ ಪಾಯಿಸನ್ (ನಿಧಾನಗತಿಯ ವಿಷ). ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಸಕ್ಕರೆಯೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ?. ಖಂಡಿತ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಮಾಡಬೇಕು, ಯಾವ …

Read More »

ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್​ ಪಡೆಯುವ ಸರ್ಕಾರವಿದೆ-ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರು: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್​ ಪಡೆಯುವ ಸರ್ಕಾರವಿದೆ. ರಾಜ್ಯಪಾಲರು ಇಂತಹ ಸರ್ಕಾರವನ್ನು ವಜಾ ಮಾಡುವಂತೆ ಪತ್ರ ಬರೆಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಕಾಮಗಾರಿ ತೆಗೆದುಕೊಳ್ಳಬೇಕಾದರೆ ಮಂತ್ರಿಗಳಿಗೆ, ಎಂಎಲ್​ಎಗಳಿಗೆ 40 ಪರ್ಸೆಂಟ್ ಕಮಿಷನ್​ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದಿದೆ ಎಂದರು. ಇಷ್ಟೊಂದು ಕಮಿಷನ್​ ತೆಗೆದುಕೊಳ್ಳುವ ಸರ್ಕಾರವನ್ನು …

Read More »

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು ಮಾಜಿ ಸಿಎಂ ಯಡಿಯೂರಪ್ಪ

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಎರಡನೇ ದಿನದ ಜನಸ್ವರಾಜ್ ಸಮಾವೇಶ. ನಾಳೆ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ. ಪರಿಷತ್ ಚುನಾವಣೆಯಲ್ಲಿ ನಾವು 20 ಸೀಟುಗಳನ್ನು ಹಾಕಲಿದ್ದೇವೆ. ಅದರಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇವತ್ತು ಬಹಳ ಐತಿಹಾಸಿಕ ದಿನ. …

Read More »