BigTv News
July 29, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಶಾಸಕರ ಅಸಮಾಧಾನ ತಣಿಸಲು ಆಗಸ್ಟ್ 2ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಕರೆದ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ ಕೆ ಪಾಟೀಲ್ ದೆಹಲಿಯಲ್ಲಿ ಕರೆದ ಸಭೆಗೂ ಶಾಸಕರ ಅಸಮಾಧಾನಕ್ಕೂ ಸಂಬಂಧ ಬೇಡ ಎಂದರು. ರಾಹುಲ್ ಗಾಂಧಿಯವರು ಸಭೆ ಕರೆದಿದ್ದು ಪಕ್ಷದ ಸಂಘಟನೆ ಸಲುವಾಗಿ ಆಡಳಿತದಲ್ಲಿ ಏನೆಲ್ಲಾ ಸುಧಾರಣೆ ತರಬೇಕೆಂಬ ನಿಟ್ಟಿನಲ್ಲಿ ಚರ್ಚೆ ಮಾಡುವ ಸಲುವಾಗಿ ಎಂದರು. ಈ ಎರಡು ಸಭೆ ಸಹ ಅನಿವಾರ್ಯ ಕಾರಣದಿಂದ ಮುಂದೂಡಲಾಗಿತ್ತು …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಪ್ರತಿಪಕ್ಷಗಳು ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಮಾತುಗಳ ಮೇಲೆ ವಿಶೇಷ ಗಮನ ಹರಿಸುತ್ತಿವೆ. ನಮ್ಮ ಹಲವು ಯೋಜನೆಗಳು ಸಂಪೂರ್ಣವಾಗಿ ಜನರನ್ನು ತಲುಪಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಮ್ಮ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. 135 ಶಾಸಕರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಹಾಗೂ ಒಂದಿಷ್ಟು ವರ್ಷಗಳ ಅಂತರದ ಬಳಿಕ ಆಗಮಿಸಿದ್ದೀರಿ. ಆದ್ದರಿಂದ ಮಾತನಾಡುವಾಗ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡುವಾಗ ನಿಗಾ ವಹಿಸಿ. ಹಗುರವಾಗಿ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಗೆ …
Read More »
BigTv News
July 28, 2023
News, ಕರ್ನಾಟಕ, ಜಿಲ್ಲೆ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಫ್ಯೂಯಲ್ ಬಿಸಿನೆಸ್ ಸ್ಕೂಲ್ ( ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೆಸಿಂಗ್ ಲೈವ್ಸ್ ) ವತಿಯಿಂದ ಪೋಸ್ಟ್ ಗ್ಯಾಜ್ಯುಯೇಟ್ ಡಿಪ್ಲೋಮಾ ಇನ್ ಮ್ಯಾನೇಜಮೆಂಟ್ ಕೋರ್ಸ್‍ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ 60 ಅರ್ಹ ವಿದ್ಯಾರ್ಥಿನಿಯರಿಗೆ 100% ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ , ಪಿಜಿಡಿಎಂ ಕೋರ್ಸ್‍ನಲ್ಲಿ 120 …
Read More »
BigTv News
July 27, 2023
ಕರ್ನಾಟಕ, ಧಾರವಾಡ, ಸುದ್ದಿ
ನವಲಗುಂದ: 24ನೇಯ ಕಾರ್ಗಿಲ್ ವಿಜಯೋತ್ಸವವನ್ನು ದೇಶ್ಯಾದ್ಯಂತ ಆಚರಿಸಲಾಗುತ್ತಿದ್ದು, ಅದರ ಪ್ರಯುಕ್ತ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮತ್ತು ಶ್ರೀ ಶಂಕರ ಕಲಾ ಹಾಗೂ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಎನ್ ಎಸ್ ಎಸ್, ಎನ್ ಸಿ ಸಿ, ಮತ್ತು ಭಾರತ ಸೌಟ್ಸ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ, ಜಾಥಾವನ್ನು ಶ್ರೀ ಗಣೇಶ ಗುಡಿಯಿಂದ ಆರಂಭಿಸಲಾಯಿತು. ಅಲ್ಲಿಂದ ರೈತ ಭವನಕ್ಕೆ ಹೋಗಿ ರೈತರ ಸ್ಮಾರಕಕ್ಕೆ ವಂದಿಸಿ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಕೈಗೊಂಡು ಕೃಷ್ಣ …
Read More »
BigTv News
July 27, 2023
ಕರ್ನಾಟಕ, ಮಂಗಳೂರು, ಸುದ್ದಿ
ಮಂಗಳೂರು:ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ವ್ಯಕ್ತಿ. 2014ರ ಆ.1ರಿಂದ 2016ರ ಸೆ.2ರವರೆಗೆ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಅಸ್ವಾಭಾವಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ …
Read More »
BigTv News
July 26, 2023
ಕರ್ನಾಟಕ, ಗದಗ, ಸುದ್ದಿ
ಮುಳಗುಂದ : ಸಮೀಪದ ಚಿಂಚಲಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಕ್ಕ ಹೇಮರಡ್ಡಿ ಬಂಗಾರಿ, ಉಪಾಧ್ಯಕ್ಷರಾಗಿ ಲಲಿತಾ ಮಾಲತೇಶ ಕುರಹಟ್ಟಿ ಅವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷೆ,ಉಪಾಧ್ಯಕ್ಷರಿಗೆ ಗ್ರಾಮ ಪಂಚಾಯ್ತಿ ಸದಸ್ಯರು,ಮುಖಂಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ,ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಎಚ್.ವೈ.ಪೂಜಾರ, …
Read More »
BigTv News
July 26, 2023
ಕರ್ನಾಟಕ, ಮಂಡ್ಯ, ಸುದ್ದಿ
ಮಂಡ್ಯ: ಕಾವೇರಿ ನದಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯ (ಕೆಆರ್‌ಎಸ್) ನೀರಿನ ಮಟ್ಟ 100 ಅಡಿ ತಲುಪಿದೆ. ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕಾವೇರಿ ಜಲಾಶಯಕ್ಕೆ ಜೀವಕಳೆ ತಂದಿದೆ. ಕಳೆದ 24 ಗಂಟೆಯಲ್ಲಿ 4 ಟಿಎಂಸಿ ನೀರು ಹರಿದು ಬಂದಿದೆ.ಇಂದು ಬೆಳಗ್ಗೆ 51,508 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. 124.80 ಅಡಿ ಗರಿಷ್ಠ …
Read More »
BigTv News
July 26, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಗಂಟಲು ನೋವು, ಕೆಮ್ಮು, ಶೀತ, ನೆಗಡಿ ಮತ್ತಿತರ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳ ಮುಖ್ಯ ಲಕ್ಷಣವೇ ಜ್ವರ. ಮಳೆ ಬಿದ್ದಾಗ ಸೊಳ್ಳೆ ಹೆಚ್ಚಾಗುವುದರಿಂದ ಡೆಂಘೀ, ಟೈಫಾಯ್ಡ್, ವೈರಾಣು ಜ್ವರ, ಕಾಲರ ಇನ್ನಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ಎಲ್ಲ ಕಾಯಿಲೆಗಳ ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ, ಜೊತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಕಾಣಿಸುತ್ತವೆ. ಮಳೆ ಹೆಚ್ಚಾಗಿರುವ ಕಾರಣದಿಂದ ಬೆಂಗಳೂರು …
Read More »
BigTv News
July 26, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯದಲ್ಲಿನ ಹವಾಮಾನ ಮತ್ತು ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳ ಜೊತೆಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುವರು. ಬಳಿಕ ಮುಂದಿನ ಕ್ರಮಗಳ ಬಗ್ಗೆ ತಿಳಿಸಲಿದ್ದಾರೆ. ವಿಡಿಯೋ ಸಂವಾದದಲ್ಲಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು, ಕಂದಾಯ ಸಚಿವರು ಹಾಗು ಕೃಷಿ ಸಚಿವರು ಸೇರಿದಂತೆ ಹಿರಿಯ ಸಚಿವರುಗಳು ಭಾಗಿಯಾಗಲಿದ್ದಾರೆ. …
Read More »