Breaking News

ಕರ್ನಾಟಕ

ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ ಲಿಂಗಕ್ಯ….

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಭಾಗದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ (62) ಇಂದು ಬೆಳಗ್ಗೆ ಲಿಂಗಕ್ಯರಾಗಿದ್ದಾರೆ.ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ‌ನಿಧನರಾಗಿದ್ದು, ಮೃತರ ಪಾರ್ಥಿವ ಶರೀರವನ್ನು ಹೊಟ್ಯಾಪುರಕ್ಕೆ ತರಲಾಗುತ್ತದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೊಟ್ಯಾಪುರ ಹಿರೇಕಲ್ಮಠ ಮಾಹಿತಿ ನೀಡಿದೆ. ಶ್ರೀಗಳ ನಿಧನದಿಂದ ಹೊಟ್ಯಾಪುರ ‌ಮಠದಲ್ಲಿ ನೀರವ ಮೌನ ಆವರಿಸಿದ್ದು, ಮಠಕ್ಕೆ …

Read More »

ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್​ನ ಸ್ಥಿತಿ.

ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಗಳಿಸಿರುವ ಧಾರವಾಡದ ಸರ್ಕಾರಿ ಕಾಲೇಜೊಂದು ಮಳೆ ಬಂದರೆ ಸಾಕು ಎಲ್ಲೆಡೆ ಸೋರುತ್ತಿದ್ದು, ವಿದ್ಯಾರ್ಥಿನಿಯರಿಗೆ ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಲೇಜಿನ ಕಟ್ಟಡಗಳು ಸಂಪೂರ್ಣವಾಗಿ ಹಳೆಯದಾಗಿದ್ದು, ಮೇಲ್ಛಾವಣಿ ಸಹ ಬಿರುಕು ಬಿಟ್ಟಿದ್ದು, ಮಳೆ ಬಂದರೇ ಸೋರಲಾರಂಭಿಸುತ್ತದೆ. ಧಾರವಾಡದಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಕಾಲೇಜಿನ ಕೊಠಡಿಗಳಿಗೆ ನೀರು ನುಗ್ಗಿದೆ. ಜತೆಗೆ ಮೇಲ್ಛಾವಣಿ ಸೋರುತ್ತಿರುವುದರಿಂದ ವಿದ್ಯಾರ್ಥಿನಿಯರು ಕೊಡೆ ಹಿಡಿದೇ ಪಾಠ ಕೇಳುವುದು ಅನಿವಾರ್ಯವಾಗಿದೆ ಇದು …

Read More »

ನಂದಿನಿ ಹಾಲು ದರ 3 ರೂಪಾಯಿ ಏರಿಕೆ: ಆಗಸ್ಟ್‌ 1 ರಿಂದಲೇ ಹೊಸ ದರ ಜಾರಿ

ಬೆಂಗಳೂರು: ಕರೆಂಟ್ ಫ್ರೀ, ಬಸ್ ಫ್ರೀ ಎಂದು ಯೋಚಿಸುತ್ತಿರುವ ಜನರಿಗೆ ಸರ್ಕಾರ ದೊಡ್ಡ ಶಾಕ್ ಕೊಟ್ಟಿದೆ. ಹೌದು ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಹೀಗ ಹೆಚ್ಚುವರಿ ಹಣವನ್ನ ರೈತರಿಗೆ ವರ್ಗಾವಣೆ ಮಾಡಲಿ ಮಂಡಳಿ ನಿರ್ಧಾರ ಮಾಡಿದೆ. ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್ ಹಾಲಿನ ದರ‌ವನ್ನ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಆದ್ರೆ, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ. ಮತ್ತು …

Read More »

ಬ್ಯಾಂಕ್​ ಮ್ಯಾನೇಜರ್ ಬ್ಯಾಂಕ್​ಗೆ ಕನ್ನ..

ಗ್ರಾಮೀಣ ಬ್ಯಾಂಕ್​ವೊಂದರಲ್ಲಿ ಗ್ರಾಹಕರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ತಮ್ಮ ಜಮೀನು ಮಾರಿ ಅದರಿಂದ ಬಂದ ಹಣವನ್ನ ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ನಮ್ಮ ಹಣ ಸೇಫ್​ ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕ್​ ಮ್ಯಾನೇಜರ್ ಬ್ಯಾಂಕ್​ಗೆ ಕನ್ನ ಹಾಕಿ ಪರಾರಿಯಾಗಿದ್ದಾರೆ. ಗಣೇಶ್ ಬಾಬು ಹೀಗೆ ಹಣ ಆರ್​​ಟಿಜಿಎಸ್​ ಮಾಡಿ ಪರಾರಿಯಾದ ಆರೋಪಿ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು …

Read More »

ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆ….

ಮೈಸೂರು:ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆಯಾಡಿ, ಆರೋಪಿಗಳು ಜೋಳದ ಹೊಲದಲ್ಲಿ ಮಾಂಸವನ್ನು ಬಚ್ಚಿಟ್ಟಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರವನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿಕೊಂಡ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ. ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ, ಹಾಗು ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರಿನ ಜೋಳದ ಹೊಲದಲ್ಲಿ, ಅಕ್ರಮವಾಗಿ ಕಾಡು ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆಂದು ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು …

Read More »

ಮೈಸೂರು ವಿಶ್ವವಿದ್ಯಾನಿಲಯದ ಪ್ರದವಿ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು:ಮೈಸೂರು ವಿಶ್ವವಿದ್ಯಾನಿಲಯ ಪದವಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ. ಸರಿಯಾಗಿ ಪಾಠ ಪ್ರವಚನ ನಡೆಯದ ಕಾರಣ ಪದವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಎಐಡಿಎಸ್​ಒ ಸಂಘಟನೆ, ಮೈಸೂರಿನ ಕ್ರಾಫರ್ಡ್ ಹಾಲ್ ಬಳಿ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿರುವ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಶೈಲಜಾ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದೇಶಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ …

Read More »

ಮಳೆಯಲ್ಲಿ ನೆನದು ಕೆಲಸ ಮಾಡೋ ಪೊಲೀಸರಿಗೆ ಕಣ್ತೆರೆಯದ ಸರ್ಕಾರ…

ಸರ್ಕಾರದ ನೀರ್ಲಕ್ಷ ಪೊಲೀಸರಿಗೆ ಸಿಗುತಿಲ್ಲ ಯಾಕೆ ಸ್ಥಾನ ಮಾನ…. ಹುಬ್ಬಳ್ಳಿ:ಕರ್ನಾಟಕ ಪೊಲೀಸರ ಬಗ್ಗೆ ಯಾರು ಏನೇ ಹೇಳಿದ್ರು ಅದರಲ್ಲಿ ನಿಷ್ಠಾವಂತ ಪೊಲೀಸರು ಇದ್ದಾರೆ . ಮಳೆ ಚಳಿ ಅನ್ನದೆ ಅವರ ಕೆಲಸ ಕಾರ್ಯ ವೈಕರಿಗೆ ನಾವು ಸಲಾಂ ಎನ್ನೆಲೆ ಬೇಕು. ಸರ್ಕಾರದಿಂದ ಬರುವ ಸೌಲತ್ತುಗಳು ಪೊಲೀಸರಿಗೆ ಯಾಕೆ ಸಿಗುವುದಿಲ್ಲ, ಹಬ್ಬ ಹರಿದಿನ ಎನ್ನದೆ ನಿರಂತರವಾಗಿ 24 ಗಂಟೆಗಳ ಕಾಲ ಪೊಲೀಸರು ಸೇವೆ ಸಲ್ಲಿಸುತ್ತಾರೆ. ಮನೆ ಮಕ್ಕಳನ್ನ ಲೆಕ್ಕಿಸದೆ ಸಾರ್ವಜನಿಕ ಸೇವೆಯಲ್ಲಿ …

Read More »

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕರ್ನಾಟಕದ ಜನರ ಬದುಕು ದುಸ್ತರ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣಕಾಸು ಹೊಂದಿಸಲು ಎಸ್ಸಿ ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿ, ಎಸ್ಸಿ ಎಸ್ಟಿ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಬಿಜಿಪಿ ಸದಸ್ಯರನ್ನು ವಿಧಾನಸಭೆ ಕಲಾಪದಿಂದ ಹೊರಹಾಕಿರುವುದನ್ನು ಖಂಡಿಸಿ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸರ್ಕಾರ ಬಂದ …

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕವಿವಿ ಬಂದ್

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಶಿಕ್ಷಕ ಶಿಕ್ಷಕೇತರ, ಗುತ್ತಿಗೆ ಆಧಾರಿತ ನೌಕರರು ಹಾಗೂ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ಮಾಡುವ ಮೂಲಕ ಸಂಪೂರ್ಣ ಕವಿವಿ ಬಂದ್ ಮಾಡಲಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿಯನ್ನು ಎಚ್.ಆರ್.ಎಂ.ಎಸ್ ದಲ್ಲಿ ಸೇರಿಸಬೇಕು ಹಾಗೂ 150 ಕೋಟಿ ಬಾಕಿ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ದಿನಾಂಕ 01 ಎಪ್ರಿಲ್ 2006ಕ್ಕಿಂತ …

Read More »

ಕಲಾಪ ಪ್ರತಿಭಟನೆ ವೇಳೆ ಶಾಸಕ ಬಸನಗೌಡ ಯತ್ನಾಳ ಅಸ್ವಸ್ಥ..

ಬೆಂಗೂರು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸುತ್ತಿದ್ದಂತೆ ಮಾರ್ಷಲ್‌ಗಳು ಶಾಸಕರನ್ನ ಹೊರ ಹಾಕಲು ಹರಸಾಹಸ ಪಡುವಾಗ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ ಅಸ್ವಸ್ಥರಾಗಿ ಕುಸಿದು ಬಿದ್ದರು. ಕಲಾಪ ಪ್ರತಿಭಟನೆ ವೇಳೆ ಬಿಪಿ ಹೆಚ್ಚಾಗಿದ್ದರಿಂದ ಶಾಸಕ ಬಸನಗೌಡ ಯತ್ನಾಳ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್‌ಲ್ಲಿ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Read More »