Breaking News

ಧಾರವಾಡ

ರಾಷ್ಟ್ರ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ : ಬಿ.ವಿ.ಏಣಗಿ

ನವಲಗುಂದ: ಸ್ವಾತಂತ್ರ್ಯವೆಂದರೆ ಸ್ಟೇಚ್ಚೆಯಲ್ಲ, ಅದರ ಇತಿಮಿತಿಯನ್ನು ಅರಿತು ಪ್ರಜೆಗಳಾದ ನಾವು ಅಭಿವೃದ್ಧಿಯನ್ನು ಹೊಂದುವುದರ ಜೊತೆಗೆ, ಪರಿಸರ ಸಂರಕ್ಷಣೆ, ರಾಷ್ಟ್ರ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ ಎಂದು ಬಿ.ವಿ.ಏಣಗಿ ಹೇಳಿದರು. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ ಬಾಗಡಿ ಮಾತನಾಡಿ, ರಾಷ್ಟ್ರದ ಕೀರ್ತಿಯನ್ನು ಮೆರೆದ ಒಲಂಪಿಕ್ಸ್ ಆಟಗಾರರನ್ನು ನೆನೆಯುತ್ತಾ, ದೇಶಭಕ್ತಿ, …

Read More »

ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ : ಮಾಬುಸಾಬ ಯರಗುಪ್ಪಿ

ನವಲಗುಂದ: ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಅವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಾವಿರಾರು ಮಹನೀಯರ ಹೋರಾಟದ ಫಲವಾಗಿ ಇಂದು ನಾವು ಎಪ್ಪತ್ತೆಂಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು, ಮಹಾತ್ಮರ ತ್ಯಾಗ ಬಲಿದಾನದಿಂದ ಸಿಕ್ಕಿರುವಂತಹ ಪವಿತ್ರವಾದ …

Read More »

ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹೆಸರು ಇಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೇಂದ್ರ ಸ್ಥಾನವಾದ ಕುಂದಗೋಳ ನಗರದಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ನಿರ್ಮಾಣವಾಗಿವೆ.ಬೀದಿಗಳಿಗೆ ಹೋರಾಟಗಾರರ ಹೆಸರು ಇಡಬೇಕು ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಮನವಿ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಕೇಂದ್ರ ಸ್ಥಾನವಾದ ಕುಂದಗೋಳ ಪಟ್ಟಣದಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರಿನ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮತ್ತು ಕ್ರಾಂತಿಕಾರಿಗಳಾದಂತಹ ಸುಭಾಸ ಚಂದ್ರ ಭೋಸ …

Read More »

ಧಾರವಾಡದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಜಾಥಾ

ಧಾರವಾಡ: ಸ್ವಾತಂತ್ರೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಧಾರವಾಡ ನಗರದಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದ ಸ್ವಾತಂತ್ರ್ಯ ಗುರುತಿಸಲು ತಿರಂಗವನ್ನು ಮನೆಗೆ ತರಲು ಮತ್ತು ಅದನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸಲು ಈ ಜಾಗೃತಿ ಜಾಥಾ ಹಮ್ಮಿಕೊಳ್ಳಲಾದ್ದು, ಭಾರತ ಮಾತೆಗೆ ಜಯವಾಗಲಿ, ಹರ್ ಘರ್ ತಿರಂಗಾ ಎಂದು ಘೋಷಣೆ ಕೂಗುತ್ತ ಎನ್ ಸಿ ಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

Read More »

ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯ ಅರ್ಜಿಗೆ ಕೊನೆ ದಿನ ನೀರ್ಧಾರ

ಕುಂದಗೋಳ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಎಲೆಕ್ನಿಷಿಯನ್ ಕಿಟ್, ರಸ್ತೆ ಕಾಮಗಾರಿ ಮಂಡಳಿಯಿಂದ ಕಾರ್ಮಿಕರಿಗೆ ನೀಡಲು ಒದಗಿ ಬಂದಿವೆ. ಪ್ರಸ್ತುತ ವರ್ಷ ಕಿಟ್‌ಗಳನ್ನು ಪಡೆಯಬೇಕಾದ ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕರು ಸಲ್ಲಿಸಬೇಕಾದ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ನವೀಕರಣಗೊಂಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಈ ಹಿಂದೆ ಕಿಟ್‌ಗಳನ್ನು ಪಡೆದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು. ಈ ಎಲ್ಲಾ …

Read More »

ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ

ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ನಿಮಿತ್ತ ಎರಡು ದಿನಗಳವರೆಗೆ ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಎನ್. ಎಚ್. ಕೋನರಡ್ಡಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಭಾಗವಹಿಸಿದ್ದರು.

Read More »

ನೀರು ಪೂರೈಕೆಯಾಗದೆ ಹಿನ್ನಲೆ ರಸ್ತೆಯಲ್ಲಿ ಪ್ರತಿಭಟನೆ

ಧಾರವಾಡ:ಕುಡಿಯಲು ನೀರು ಇಲ್ಲ ಎಂದು ಆಕ್ರೋಶಗೊಂಡ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಸೋಮಾಪುರ ಗ್ರಾಮದಲ್ಲಿ ನೀರು ಪೂರೈಕೆ ಆಗುತ್ತಿಲ್ಲ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಕುರಿತು ಹಲವಾರು ಭಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Read More »

ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಭಾಗಶಃ ಒಂದು ಅರ್ಧ ಗುಂಟೆ ನಿವೇಶನವನ್ನು ಹಸ್ತಾಂತರ ಮಾಡುವ ಮೂಲಕ ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡಲು ಅನುಕೂಲ ಮಾಡಿ ಕೊಡುವಂತೆ ನಿವೃತ್ತ ಅಧಿಕಾರಿಗಳು ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ಅವರಿಗೆ ಮನವಿ ಪತ್ರ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕ ಘಟಕ ಕಾರ್ಯಾಧ್ಯಕ್ಷರಾದ ಶೇಖರಪ್ಪ ಬಿಸೆರೊಟ್ಟಿಯವರು ಮತ್ತು ಅಧ್ಯಕ್ಷರಾದ ನದಾಪ …

Read More »

ಅಂಜುಮನ್ ಇ ಇಸ್ಲಾಂ ಸಂಸ್ಥೆಗೆ 34 ಜನ ನಾಮಪತ್ರ ಾರ

ನವಲಗುಂದ: ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ತುರುಸಿನ ನಾಮಪತ್ರ ಸಲ್ಲಿಕೆ ನಡೆಯುತ್ತಿದ್ದು, ಈ ವರೆಗೆ 34 ಜನ ನಾಮಪತ್ರ ಸಲ್ಲಿಕೆಯಾಗಿವೆ.21ಜನರ ಕಮೀಟಿಯೊಂದಿಗೆ ಏಕಕಾಲಕ್ಕೆ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆಗೆ ಶಿರಾಜುದ್ದೀನ ಧಾರವಾಡ, ರಿಯಾಜ ನಾಶಿಪುಡಿ ಸೇರಿದಂತೆ ಅನೇಕರು ಗುರು -ಹಿರಿಯರು ಯುವಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೈಪುದ್ದಿನ ಅವರಾದಿ, ಮೋದಿನಸಾಬ ಶಿರೂರ, ಜಬ್ಬರಸಾಬ ಧಾರವಾಡ, ಮೆಹೇಬೂಬಸಾಬ ಮಿರ್ಜಿ, ಸಲೀಂ ಮಕಾನದಾರ, ಇಮ್ಮಿಯಾಜ್ …

Read More »

ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯಲ್ಲಿ ಕೋನರಡ್ಡಿ ಭಾಗಿ

ನವಲಗುಂದ: ತಾಲೂಕಿನ ಹೆಬ್ಬಾಳ ಗ್ರಾಮದ ನೂತನ ಶ್ರೀಕಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ನಾರಾಯಣ ದೇವರಡ್ಡಿ, ಶಂಕರ ಅಂಬಲಿ, ಮಂಜುನಾಥ ಹುಲಗಪ್ಪನವರ, ಸಂಗಪ್ಪ ಉದಪುಡಿ, ತುಕಾರಾಮ ಕಾಲವಾಡ, ಕುಮಾರ ಮಾದರ, ನಿರೂಪಕಿ ಕು.ಸೃಷ್ಟಿ ಹಂಪಣ್ಣವರ ಸೇರಿದಂತೆ ಗ್ರಾಮದ ಯುವ ಮುಖಂಡರು ಹಾಗೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »