Breaking News

ಧಾರವಾಡ

ವಿನಯ್ ಕುಲಕರ್ಣಿ ಮನೆಗೆ ಅನಾಮಧೇಯ ಪತ್ರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿವಲೀಲಾ

ಧಾರವಾಡ: ಈ ಹಿಂದೆ ತಮ್ಮ ಮನೆಗೆ ಬರುತ್ತಿದ್ದ ಅನಾಮಧೆಯ ಪತ್ರಗಳ ವಿರುದ್ಧ ಧ್ವನಿ ಎತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಆ ರೀತಿ ಪತ್ರ ಬರೆಯುವವರನ್ನು ಪತ್ತೆ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಕಳೆದ ನಾಲ್ಕೂವರೆ ವರ್ಷಗಳಿಂದ ಈ ರೀತಿಯ ಯಾವುದೇ ಪತ್ರಗಳು ಬಂದಿರಲಿಲ್ಲ. ಆದರೆ, ಇದೀಗ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಮತ್ತೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿದ್ದು, ಇದರ ವಿರುದ್ಧ ಇದೀಗ ವಿನಯ್ …

Read More »

ಜನೇವರಿ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಧಾರವಾಡಕ್ಕೆ ಐಐಟಿ ಕೇಂದ್ರ ಉದ್ಘಾಟನೆ: ಜೋಶಿ

ಧಾರವಾಡ: ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕೇಂದ್ರದ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶನಿವಾರ ವೀಕ್ಷಣೆ ಮಾಡಿದರು. ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಪದವಿ ಪ್ರದಾನ ಸಮಾರಂಭ ಮುಗಿಸಿಕೊಂಡು ನೇರವಾಗಿ ಐಐಟಿ ಕೇಂದ್ರಕ್ಕೆ ಭೇಟಿ ನೀಡಿದ ಜೋಶಿ, ಅಲ್ಲಿನ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಜನೇವರಿ 1ನೇ ತಾರೀಖಿಗೆ ಕಾಮಗಾರಿ ಪೂರ್ಣಗೊಳಿಸಿ ರೆಡಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, …

Read More »

ಎಂಇಎಸ್‌ ವಿರುದ್ಧ ಧಾರವಾಡದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಎಂಇಎಸ್‌ ಕಾರ್ಯಕರ್ತರ ವಿರುದ್ಧ ಧಾರವಾಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ಮರಾಠಿಗರು ಕರ್ನಾಟಕದ ಬಸ್ಸುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದ್ದಾರೆ. ಕರ್ನಾಟಕದಲ್ಲಿರುವ ಎಂಇಎಸ್ ಗೂಂಡಾಗಳು ಕನ್ನಡಿಗರ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು. ಮಹಾರಾಷ್ಟ್ರದ ಮರಾಠಿಗರು ಎಷ್ಟೇ ದಬ್ಬಾಳಿಕೆ ಮಾಡಿದರೂ …

Read More »

ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ-ನೇಣು…

ಧಾರವಾಡ ನವಲಗುಂದ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಖಾಸಗಿ ಲಾಡ್ಜ್‌ನಲ್ಲಿ ಯುವಕ, ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಮೇಲ್ನೋಟಕ್ಕೆ ಇವರು ಪ್ರೇಮಿಗಳು ಎಂಬ ಶಂಕೆ ವ್ಯಕ್ತವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಹಾಗೂ ಯುವತಿಯ ಶವ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತ ದೇಹಗಳನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Read More »

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಪ್ಪರ್, ತಪ್ಪಿದ ದುರಂತ

ಧಾರವಾಡ: ಟಿಪ್ಪರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಧಾರವಾಡದ ಬಾರಾಕೊಟ್ರೆ ಬಳಿಯ ಪವನ್ ಸ್ಕೂಲ್ ಎದುರುಗಡೆ ಸಂಭವಿಸಿದೆ. ಇಂದು ಬೆಳಗಿನ ಜಾವ ಈ ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವಿದ್ಯುತ್ ತಂತಿಗಳು ಲಾರಿ ಮೇಲೆ ಬೀಳದೇ ಇದ್ದಿದ್ದರಿಂದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ವಿದ್ಯುತ್ ತಂತಿಗಳು ಟಿಪ್ಪರ್ ಮೇಲೆ ಬಿದ್ದಿದ್ದರೆ …

Read More »

ನನ್ನ ಬಲಿದಾನವಾದ್ರೂ ಸರಿ, ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಬಿಡೋದಿಲ್ಲ: ಮುತಾಲಿಕ್

ಧಾರವಾಡ: ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವ ಕ್ರಮವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ನನ್ನ ಬಲಿದಾನವಾದರೂ ಸರಿ. ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಒಪ್ಪುವುದಿಲ್ಲ. ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ವಿರೋಧ ಮಾಡುತ್ತೇನೆ. ಈ ಸಂಬಂಧ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಅದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಸಪೋರ್ಟ್ ಮಾಡಿದ ಪರಿಣಾಮವಾಗಿ …

Read More »

ಧಾರವಾಡದಲ್ಲಿ ಯುವಕನ ಮೇಲೆ ಹಾಡಹಗಲೇ ಮೂವರಿಂದ ಹಲ್ಲೆ

ಧಾರವಾಡ: ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಬಾಸೆಲ್ ಮಿಶನ್ ಹೆಬ್ರಿಕ್ ಮೆಮೋರಿಯಲ್ ಚರ್ಚ್ ಬಳಿ ಹಾಡಹಗಲೇ ನಡೆದಿದೆ. ಈ ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದರೆ ಮೂವರು ಯುವಕರು ಸೇರಿಕೊಂಡು ಓರ್ವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಆತ ಕೆಳಗಡೆ ಬಿದ್ದರೂ ಬಿಡದ ಆ ಮೂರೂ ಜನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. …

Read More »

ಪಿಎಸ್ಐ ಪರೀಕ್ಷೆ ಅಕ್ರಮ ಕುರಿತು ಧಾರವಾಡದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ

ಧಾರವಾಡ : ಪಿಎಸ್ಐ ಪರೀಕ್ಷೆ ಅಕ್ರಮ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇನ್ನೂ ಪ್ರಕರಣ ಕುರಿತು ಬಗೆದಷ್ಟು ಅಕ್ರಮಗಳು ಹೊರಗೆ ಬರುತ್ತಿವೆ. ಅಕ್ರಮದಿಂದ ಪಿಎಸ್ಐ ಪರೀಕ್ಷೆ ಬರೆದು ಈಗ ಸಿಕ್ಕು ಬಿದ್ದಿದ್ದಾರೆ. ಆದರೆ, ನಿಯತ್ತಿನಿಂದ ಹಗಲು ರಾತ್ರಿ ಸತತ ಪ್ರಯತ್ನ ಪಟ್ಟು ಓದಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಅಕ್ರಮ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸುವುದಕ್ಕಾಗಿ ಹೇಳಿತ್ತು. ಇದರಿಂದ ಸಕ್ರಮವಾಗಿ ಕಷ್ಟ ಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾದಂತಾಗಿದ್ದು …

Read More »

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದ ಸಂಜಯಕುಮಾರ

ಧಾರವಾಡ: UNICEF for every child ಹಾಗೂ ಯು-ರಿಪೋರ್ಟ ಇಂಡಿಯಾ ಇವರುಗಳು ಅಕ್ಟೋಬರ್‌ನಲ್ಲಿ ನಡೆಸಿದ “ಗ್ರೀನ್ಸ್ ಜಾಬ್ ಸೀರೀಸ್ 2.0” ರ ರಸಪ್ರಶ್ನೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಕು. ಸಂಜಯಕುಮಾರ ಯ ಬಿರಾದಾರ ಅವರು ಭಾಗವಹಿಸಿ “ಭಾರತದಲ್ಲಿ ಟಾಪ್ ಸ್ಕೋರರ್‌ಗಳಲ್ಲಿ ಒಬ್ಬರಾಗುವ ಮೂಲಕ ಯು-ರಿಪೋರ್ಟರ್ ಇಂಡಿಯಾ ದೆಹಲಿಯಿಂದ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಸಂದರ್ಭದಲ್ಲಿ ಸಂಜಯಕುಮಾರ ಅವರನ್ನು …

Read More »

ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ
ಸಾಧನೆಯ ಶ್ರಯಾಂಕ ಆಧರಿಸಿ ವಿವಿಧ ಠಾಣೆಗಳಿಗೆ ಪ್ರಶಸ್ತಿ; ಅಧಿಕಾರಿ, ಸಿಬ್ಬಂದಿಗಳಲ್ಲಿ ವೃತ್ತಿಪರತೆ, ಪ್ರೋತ್ಸಾಹ ಹೆಚ್ವಿಸಲು ಪೊಲೀಸ್ ಅಧೀಕ್ಷಕರಿಂದ ವಿನೂತನ ಕ್ರಮ

ಧಾರವಾಡ ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ಪ್ರಮಾಣಿಕತೆ, ಕಾರ್ಯತತ್ಪರತೆಯನ್ನು ಹೆಚ್ಚಿಸಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಅವರು ಜಿಲ್ಲೆಯ ಠಾಣೆಗಳ ಕಾರ್ಯಸಾಧನೆ ಆಧಾರದ ಮೇಲೆ ರ್ಯಾಂಕಿಂಗ ಮಾಡಿ, ಪ್ರಶಸ್ತಿ ನೀಡುವ ಮೂಲಕ ಇಲಾಖೆ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ವಿನೂತನ ಕ್ರಮ ಜಾರಿಗೆ ತಂದಿದ್ದಾರೆ. ಪೋಲಿಸ್ ಮ್ಯಾನುವಲ್ ದಲ್ಲಿ ಗೊತ್ತುಪಡಿಸಿರುವ ಕಾಲಮಿತಿಯಲ್ಲಿ ಪ್ರಕರಣಗಳ ಪ್ರತಿ ಹಂತದಲ್ಲೂ ಕ್ರಮವಹಿಸುವ ಕುರಿತು ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ಮಾಡಿರುವ …

Read More »