admin
May 3, 2022
Breaking News, ಧಾರವಾಡ
ಧಾರವಾಡ : ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದ ಶ್ರೀ ಕಲೇಶ್ವರ ದೇವರ ಶಿಲಾ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಮಾತಾನಡಿ ಆಧುನಿಕ ಬದುಕಿನ ಜಂಜಾಟಗಳಿಂದ ಮುಕ್ತಿಗೆ ಹಾಗೂ ಮಾನಸಿಕ ನೆಮ್ಮದಿ ಶಾಂತಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅತ್ಯವಶ್ಯವಿದೆ . ನಿತ್ಯಧ್ಯಾನ- ಪ್ರಾರ್ಥನೆಯಿಂದ ಮನಸಿನ ದುಗುಡಗಳು ದೂರಾಗಲಿವೆ ಎಂದರು .
Read More »
admin
May 2, 2022
Breaking News, ಧಾರವಾಡ
ಧಾರವಾಡ: ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರ ಡಾ. ರಾಜಶೇಖರ ಮನಸೂರ ಅವರು ಜೈಪುರ ಅತ್ರೌಲಿ ಘರಾಣೆ ಸಂಗೀತದ ಮೇರು ಗಾಯಕರಾಗಿದ್ದರು.
Read More »
Shaikh BigTv
May 1, 2022
Breaking News, ಅಪರಾಧ, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
(ಚಿಟೀಂಗ್ ಕೇಸ್ )ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್ ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದ ಲಾರಿಯ ಬಿಡಿ ಭಾಗಗಳನ್ನು ಸ್ಕ್ರ್ಯಾಪ್ ಮಾಡಿ ಮಾರಾಟ ಮಾಡಲಾಗಿದ್ದ ಕುರಿತು ಬಿಗ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.ಇದೀಗ ಆ ಪ್ರಕರಣ ದಿನಕ್ಕೊಂದು ತಿರುವು ಪಡೆದಿದ್ದು ಸ್ಕ್ರ್ಯಾಪ ಮಾಡಿ ಮಾರಾಟ ಮಾಡಲಾಗಿದ್ದ ಬಿಡಿ ಭಾಗಗಳು ರಾತ್ರೋ ರಾತ್ರಿ ಠಾಣೆಯ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು,ಒಂದೊಂದೆ ಸಾಮಾನುಗಳನ್ನು ವಾಪಸ್ ತರಿಸಲಾಗ್ತಿದೆ. ಹೌದು ಬಿಗ್ ಟಿವಿ ನ್ಯೂಸ್ ವರದಿಗೆ …
Read More »
admin
May 1, 2022
Breaking News, ಧಾರವಾಡ
ಧಾರವಾಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೋರ್ವಳು ತಾನು ಫೇಲಾಗುತ್ತೇನೆ ಎಂಬ ಭಯದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ . ಪ್ರಿಯಾಂಕಾ ತಳವಾರ ( 19 ) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳು.ಮೊನ್ನೆಯಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಪ್ರಿಯಾಂಕಾ ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ .
Read More »
admin
April 29, 2022
Breaking News, ಧಾರವಾಡ
ಧಾರವಾಡ : ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಪಿಂಜಾರಾಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಯೋಜನೆ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಆಸಕ್ತರು ಮೇ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ , ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಧಾರವಾಡ ದೂರವಾಣಿ ಸಂಖ್ಯೆ 0836-2447672 ಅಥವಾ 9900675607 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Read More »
admin
April 28, 2022
Breaking News, ಧಾರವಾಡ
ಧಾರವಾಡ : ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಹೆತ್ತ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ . ಪುಂಡಲೀಕ ಒಂಟಿಗಡ ಎಂಬಾತನೇ ಮಗನಿಂದ ಹತ್ಯೆಗೀಡಾದವನು.ಪುಂಡಲೀಕ ಪ್ರತಿನಿತ್ಯ ಮದ್ಯ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ . ಬುಧವಾರ ಇದೇ ರೀತಿ ಪುಂಡಲೀಕ ಜಗಳವಾಡಿದ್ದಾನೆ . ಈ ಜಗಳ ವಿಕೋಪಕ್ಕೆ ತಿರುಗಿ ಸ್ವತಃ ಪುಂಡಲೀಕನ ಮಗನೇ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ . ಹತ್ಯೆ ಮಾಡಿದ ಮಗ ಅಪ್ರಾಪ್ತನಾಗಿದ್ದಾನೆ . ಘಟನಾ ಸ್ಥಳಕ್ಕೆ …
Read More »
admin
April 28, 2022
Breaking News, ಧಾರವಾಡ
ಧಾರವಾಡ: ನಗರದ ಆಲೂರು ವೆಂಕಟರಾವ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಭಾರಂಭದಲ್ಲಿ ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಹಿರೇಮಠ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ . ಕೃಷ್ಣಕಾಂತ ಹಾಗೂ ಅಧಿಕಾರಿಗಳು , ಲಿಪಿಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ .
Read More »
admin
April 19, 2022
Breaking News, ಧಾರವಾಡ
ಹುಬ್ಬಳ್ಳಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ಕೆಸಿ ಪಾರ್ಕ್ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಪರ್ಹಾನ್ ಹಾಗೂ ಮತೀನ್ ಬೈಕ್ನಲ್ಲಿ ಹೊರಟಿದ್ದು, ಅತೀ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ, ಬಳಿಕ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿ ಯಾಗಿದ್ದು, , ಅಪಘಾತದ ಭೀಕರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರ್ಹಾನ್ ಹಾಗೂ ಮತೀನ್ ಮೃತ ದುರ್ದೈವಿಗಳು.ಘಟನಾ ಸ್ಥಳಕ್ಕೆ ಕೆಸಿ ಪಾರ್ಕ್ ಸಂಚಾರಿ ಠಾಣೆ …
Read More »
admin
April 17, 2022
Breaking News, ಧಾರವಾಡ
ಧಾರವಾಡ : ಸುರಿಯುವ ಮಳೆಯಲ್ಲೇ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಆಂಜನೇಯನ ತೇರನ್ನೆಳೆದಿದ್ದಾರೆ . ಅನೇಕ ಕಡೆಗಳಲ್ಲಿ ವೀರಾಂಜನೇಯನ ರಥೋತ್ಸವ ನಡೆದಿದೆ . ಅದೇ ರೀತಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲೂ ಆಂಜನೇಯನ ರಥೋತ್ಸವವಿತ್ತು . ಸಂಜೆ 7 ಗಂಟೆಯ ಸುಮಾರಿಗೆ ಭಕ್ತರೆಲ್ಲರೂ ಸೇರಿ ತೇರು ಎಳೆಯುವ ಸಂದರ್ಭದಲ್ಲೇ ಮಳೆ ಬರಲಾರಂಭಿಸಿತು.ಬಮಳೆಯನ್ನೂ ಲೆಕ್ಕಿಸದೇ ಭಕ್ತ ಸಮೂಹ ಆಂಜನೇಯನ ತೇರನ್ನು ಎಳೆದು ಪುನೀತರಾಗಿದ್ದಾರೆ.ಇನ್ನು ರಥೋತ್ಸವದಲ್ಲಿ ಕರಡಿ ಮೇಳ , ಜಗ್ಗಲಿಗೆ ಮೇಳ …
Read More »
admin
April 16, 2022
Breaking News, ಧಾರವಾಡ
ಧಾರವಾಡ : ಭಕ್ತರ ಜೈಕಾರ ಹಾಕುವ ಮೂಲಕ ಧಾರವಾಡ ಮದಿಹಾಳ ಮಾರುತಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮಹಾ ರಥೋತ್ಸವಕ್ಕೆ ಭಕ್ತರು ಲಿಂಬೆಹಣ್ಣು, ಉತ್ತತ್ತಿ, ಬಾಳೆಹಣ್ಣು, ಎಸೆಯುವ ಮೂಲಕ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತೇರು ಎಳೆದರು. ಅದ್ದೂರಿಯಾಗಿ ಜರುಗಿದಮಹಾ ರಥೋತ್ಸವಕ್ಕೆ ಹರಿದು ಬಂದ ಜನಸಾಗರ ರಾಮ ನಾಮ ಸ್ಮರಣೆ ಮಾಡಿ ಪವನಸುತ್ತ ಹನುಮಂತ ದೇವರಿಗೆ ಭಕ್ತಿ ಸೇವೆ ಸಮರ್ಪಣೆ ಮಾಡಿದರು.
Read More »