Breaking News

ಧಾರವಾಡ

ವಾಹನ ಮತ್ತು ಬೈಕ್‌ ನಡುವೆ ಅಪಘಾತ : ಸವಾರ ಸಾವು

ಕುಂದಗೋಳ: ಟಾಟಾ ಏಸ್ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಕುಂದಗೋಳ ಕಡೆಯಿಂದ ಬೆನಕನಹಳ್ಳಿ ಮಾರ್ಗವಾಗಿ ವೇಗವಾಗಿ ಟಾಟಾ ಏಸ್ ವಾಹನ ನಡೆಸಿಕೊಂಡು ಬಂದ ವಾಹನ ಚಾಲಕ ಕುಂದಗೋಳ ಸೋನಾರ್ ಪ್ಲಾಟ್ ಕಡೆಯಿಂದ ಮೂರಂಗಡಿ ಕೂಟ್ ಮಾರ್ಗವಾಗಿ ಹೊರಟಿದ್ದ ಬೈಕ್ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದಾನೆ. ಅಪಘಾತದ ವೇಳೆ ಅಕ್ಟೋಬರ್ 14 ರಂದು ಗಾಯಗೊಂಡ ಬೈಕ್‌ ಸವಾರನನ್ನು …

Read More »

ಸರ್ಕಾರಿ ಶಾಲೆ ಇದೀಗ ಕೆರೆಯಾಗಿ ನೀರ್ಮಾಣ

ನವಲಗುಂದ: ಮಳೆಗೆ ತಾಲೂಕಿನ ಬಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಸಂಪೂರ್ಣ ಕೆರೆಯಂತಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದಸರಾ ರಜೆ ಮುಗಿಸಿ ಶಾಲೆಯತ್ತ ಮುಖ ಮಾಡಿದ ಮಕ್ಕಳಿಗೆ ವರುಣ ಸೃಷ್ಟಿಸಿದ ಅವಾಂತರದಿಂದಾಗಿ ಕುಳಿತುಕೊಳ್ಳಲು ಶಾಲೆಯಲ್ಲಿ ಜಾಗ ಇಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ 1ರಿಂದ 8ನೇ ತರಗತಿಯನ್ನು ಹೊಂದಿರುವಂತಹ ಈ ಶಾಲೆಯಲ್ಲಿ 227 ಮಕ್ಕಳು ಕಲಿಯುತ್ತಿದ್ದಾರೆ. ಸನ್ 2020-21ನೇ ಸಾಲಿನಲ್ಲಿ ಹೊಸದಾಗಿ ಎರಡು …

Read More »

ಮನೆಬಿದ್ದ ಯುವತಿ ಸಾವು: ಮನೆಗೆ ಕಾಂಗ್ರೆಸ್‌ ಕಮಿಟಿ ಭೇಟಿ

ನವಲಗುಂದ : ಅತಿವೃಷ್ಟಿಯಿಂದ ಇತ್ತೀಚಿಗೆ ತಾಲೂಕಿನ ಹನಸಿ ಗ್ರಾಮದದಲ್ಲಿ ಮನೆಬಿದ್ದ ಪರಿಣಾಮ ಸುಮಂಗಲಾ ಮರಿಗೌಡ ಪಾಟೀಲ(54) ಎಂಬುವರು ತೀವ್ರ ಗಾಯಗೊಂಡ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮೃತರ ಮನೆಗೆ ಇಂದು ತಾಲೂಕಾ ಕಾಂಗ್ರೆಸ್‌ ಕಮಿಟಿಯವರು ಸಾಂತ್ವನ ಹೇಳಿ ತಮ್ಮ ನೋವು ಹಾಗೂ ಕಷ್ಟಕ್ಕೆ ಸರಕಾರ ಪರಿಹಾರ ನೀಡಲು ಬದ್ದವಾಗಿದೆ. ಕ್ಷೇತ್ರದ ಶಾಸಕ ಎನ್.ಎಚ್‌.ಕೋನರಡ್ಡಿ ಅವರ ಜೊತೆಗೆ ಚರ್ಚಿ ಮಾಡಿ ಸರಕಾರದಿಂದ ಬರುವಂತಹ ಎಲ್ಲ ಸೌಲಭ್ಯಗಳನ್ನು …

Read More »

ಬೆಳೆ ಪರಿಹಾರ ಮತ್ತು ಬೆಳೆ ಸಾಲಮನ್ನಾ ಮಾಡುವಂತೆ ಮನವಿ‌ ಸಲ್ಲಿಕೆ

ನವಲಗುಂದ: ವಿಧಾನಸಭಾ ಕ್ಷೇತ್ರದದಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದಿದ್ದರಿಂದ ರಸ್ತೆ, ಸೇತುವೆ ಹಾಳಾಗಿವೆ ಹಾಗೂ ಬೆಳೆ ಪರಿಹಾರ ಮತ್ತು ಬೆಳೆ ಸಾಲಮನ್ನಾ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ಆಗ್ರಹಿಸಿ ತಹಸೀಲ್ದಾರ ಮುಖಾಂತರ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ಕರವೇ ನವಲಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಿರಾಜುದ್ದೀನ್ ಧಾರವಾಡ ಮಾತನಾಡಿ, ನಗರ ಹಾಗೂ ಗ್ರಾಮಗಳಲ್ಲಿ ಅತೀಯಾಗಿ ಮಳೆಯಾಗಿದ್ದರಿಂದ ಮನೆಗಳು ನೆಲಕಚ್ಚಿವೆ, ಜಮೀನುಗಳಲ್ಲಿ ಬೆಣ್ಣೆಹಳ್ಳ …

Read More »

ಬಸವರಾಜ ಮುತ್ತಗಿಗೆ ಸಿಬಿಐ ಭದ್ರತೆ

ಧಾರವಾಡ: ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಬಸವರಾಜ ಮುತ್ತಗಿಗೆ ಸಿಬಿಐ ಭದ್ರತೆ ಒದಗಿಸಿದೆ. ನಾಳೆ ಸಿಐಎಸ್‌ಎಫ್‌ ಅಥವಾ ಸಿಆರ್‌ಪಿಎಫ್ ಪೊಲೀಸರಿಂದ ಮುತ್ತಗಿಗೆ ಭದ್ರತೆ ನೀಡಲಾಗುತ್ತಿದೆ. ಯೋಗೀಶಗೌಡರ ಹತ್ಯೆ ಪ್ರಕರಣದ ಎ1 ಆರೋಪಿಯಾಗಿರುವ ಬಸವರಾಜ ಮುತ್ತಗಿ 17ನೇ ಎಸಿಎಂಎಂ ಕೋರ್ಟ್‌ಲ್ಲಿ 164 (1) ಅಡಿ ತಪ್ರೊಪ್ಪಿಗೆ . 22 3060 ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸಿಬಿಐ ಸಮ್ಮತಿ ನೀಡಿದೆ. ಆದರೆ, ತಮಗೆ ಜೀವ ಬೆದರಿಕೆ ಇದ್ದು ಭದ್ರತೆ …

Read More »

ಸರ್ಕಾರ ವಿರುದ್ಧ ಹರಿಹಾಯ್ದು ಮುನೇನಕೊಪ್ಪ

ನವಲಗುಂದ : ವಿಧಾನಸಭಾ ಕ್ಷೇತ್ರದಲ್ಲಿ ಸತತ ಮಳೆಯಿಂದ ರೈತರ ಬೆಳೆಗಳು ಸಂರ್ಪೂಣವಾಗಿ ಹಾಳಾಗಿದ್ದು, ಹಾಗೂ ನಿರಂತರ ಮಳೆ ನೂರಾರು ಮನೆಗಳು ನೆಲಕ್ಕೆ ಉರುಳಿದ್ದರೂ ಸರಕಾರ ಇನ್ನೂವರೆಗೂ ರೈತರಿಗಾಗಲಿ ಸಂತ್ರಸ್ಥರಿಗಾಗಿ ಒಂದು ನೈಯಾ ಪೈಸೆ ನೀಡದೇ ಜನರ ಬದುಕಿನ ಜೋತೆಗೆ ಚಲ್ಲಾಟವಾಡುತ್ತಿದ್ದರೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕಿನ ತಿರ್ಲಾಪೂರ, ಶಿರಕೋಳ, ಹಾಗೂ ಹಣಸಿ ಗ್ರಾಮಕ್ಕೆ ಬೆಳೆ ಹಾನಿ ಪರೀಶಿಲನೆ ನಡೆಸಿ ಮಾತನಾಡಿದ ಅವರು, ಕಳೆದ …

Read More »

ಉಚಿತ ಕಲ‌ರ್ ಟಿವಿಯನ್ನು ವಿತರಣೆ ಮಾಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ದೀಪಾವಳಿ ಹಬ್ಬಕ್ಕೆ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಕಡು ಬಡವರಿಗೆ ಉಚಿತ ಕಲ‌ರ್ ಟಿವಿಯನ್ನು ವಿತರಣೆ ಮಾಡುವಂತೆ ಕಾಂಗ್ರೆಸ್ ಮುಖಂಡ ಮಂಜುನಾಥ ಎಂಟೂವಿ ಅವರು ಗ್ರೇಡ್-2 ತಹಶೀಲ್ದಾರ್ ಹೆಚ್‌.ಭಜಂತ್ರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಹಳ್ಳಿಗಳಲ್ಲಿ ಇಂದಿಗೂ ಕಡು ಬಡವರು ತಮ್ಮ ಮನೆಗಳಲ್ಲಿ ಟಿವಿಯನ್ನು ಹೊಂದಿಲ್ಲದೆ ಎಷ್ಟೋ ಕುಟುಂಬಗಳು ಇವೆ, ಇಂತಹ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಂತಹ ಬಿಪಿಎಲ್ ಕುಟುಂಬಗಳಿಗೆ …

Read More »

ಮಳೆಗೆ ಕೊಚ್ಚಿಕೊಂಡು ಹೋದ ಎಮ್ಮೆ

ಅಳ್ಳಾವರ: ಭಾರಿ ಮಳೆಗೆ ಸುಮಾರು ಇಪ್ಪತ್ತು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಅಳ್ಳಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ. ಶಿವನಗರ ಗ್ರಾಮದ ಗೌಳಿಗರು ದನಗಳನ್ನ ಮೇಯಿಸಲು ಪ್ರತಿದಿನದಂತೆ ಕಾಡಿಗೆ ತೆರಳಿದ್ದರು.ಸಂಜೆ ಏಕಾಏಕಿ ಸುರಿದ ರಕ್ಕಸ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಪ್ರವಾಹದ ಭೀತಿ ಎದುರಾಗಿದೆ. ನೋಡ ನೋಡುತ್ತಿದ್ದಂತೆ ಹಳ್ಳದ ನೀರು ಸಾವಿನ ಕೂಪವಾಗಿ, ಗೌಳಿಗರ ಸುಮಾರು ಇಪ್ಪತ್ತು ಎಮ್ಮೆಗಳು ತೇಲಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿವೆ. ಸಿದ್ದು ಎಮಕರ ಎಂಬುವವರ …

Read More »

ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವಕವಿ ಗೋಷ್ಠಿಗೆ ಕವಿತೆಗಳ ಆಹ್ವಾನ

ಧಾರವಾಡ : ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಸಂಭ್ರಮ-50 ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ಯುವಕವಿ ಗೋಷ್ಠಿಗಳನ್ನು ಆಯೋಜಿಸುತ್ತಿದ್ದು, ಆಸಕ್ತ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾಸಲಾಗಿದೆ. ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಅಕ್ಟೋಬರ್ 30, 2024 ರೊಳಗಾಗಿ ಸಲ್ಲಿಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahityaacademy.org ಗೆ ಭೇಟಿ ನೀಡಬಹುದು ಎಂದು …

Read More »

ಜಿಲ್ಲಾ ಮಟ್ಟದ 7ನೇ ಜನತಾ ದರ್ಶನ 213 ಅಹವಾಲು ಸ್ವೀಕಾರ; ಕಾಲಮಿತಿಯಲ್ಲಿ ಅಹವಾಲು ಪರಿಹರಿಸುವ ಭರವಸೆ ನೀಡಿದ ಸಚಿವ ಸಂತೋಷ ಲಾಡ್

ಧಾರವಾಡ : ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 7 ನೇ ಜಿಲ್ಲಾ ಮಟ್ಟದ ಜನ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಾನಗರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರಿಂದ ಸುಮಾರು 213 ಅಹವಾಲುಗಳನ್ನು ಸ್ವೀಕರಿಸಲಾಯಿತು. ಸಾರ್ವಜನಿಕರಿಂದ ಅಹವಾಲು, ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಸಚಿವ ಸಂತೋಷ ಲಾಡ ಅವರು, ಸಲ್ಲಿಕೆ …

Read More »