Shaikh BigTv
October 22, 2024
Breaking News, ಧಾರವಾಡ
ಧಾರವಾಡ: ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್ ಅವರು, ವಿಕಲಚೇತನ ವ್ಯಕ್ತಿಯೊಬ್ಬರ ಸಮಸ್ಯೆ ತಿಳಿಯಲು ತಾವೂ ಕೂಡ ನೆಲದ ಮೇಲೆಯೇ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದ ಪ್ರಸಂಗ ನಡೆಯಿತು. ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಮೂಲಕವೂ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಲಾಡ್ ಅವರು ಭರವಸೆ ನೀಡಿದರು.
Read More »
Shaikh BigTv
October 21, 2024
Breaking News, ಧಾರವಾಡ
ನವಲಗುಂದ: ಸತತ ಮಳೆಯಿಂದಾಗಿ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲಾ ಕೊಠಡಿ ಹಾಗೂ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು, ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಶಾಲೆಗೆ ದಸರಾ ರಜೆ ಇರುವ ಕಾರಣಕ್ಕೆ ಅದೃಷ್ಟಾವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಎರಡು ದಿನದ ಹಿಂದೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಗ್ರಾಮಕ್ಕೆ ಭೇಟಿ ನೀಡಿದ್ದರೂ ಶಾಲೆಯತ್ತ ತಿರುಗಿಯೂ ನೋಡದೇ ಇರುವುದು ಶೋಚನೀಯ. ಭೂಮಿ ಮಟ್ಟದಲ್ಲಿ …
Read More »
Shaikh BigTv
October 21, 2024
Breaking News, ಧಾರವಾಡ
ಹುಬ್ಬಳ್ಳಿ : ಶೀಗಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯಿಂದ ಮಾಡಲಾಗಿದ್ದ ಯಲ್ಲಮ್ಮನಗುಡ್ಡ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಯಾಣಿಕರ ಬೇಡಿಕೆಯ ಮೇರೆಗೆ ದೀಪಾವಳಿಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದಂದು ವಿಶೇಷ ಬಸ್ ಗಳ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಶೀಗಿ ಹುಣ್ಣಿಮೆಯ ಪ್ರಯುಕ್ತ ಸೌದತ್ತಿ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಅಕ್ಟೋಬರ್ 17ರಂದು ಗುರುವಾರ, …
Read More »
Shaikh BigTv
October 20, 2024
Breaking News, ಧಾರವಾಡ
ಧಾರವಾಡ: ಲಾರಿ ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದ ಸಂಪಿಗೆನಗರದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ. ಆಟೋ ಚಾಲಕ ರಮೇಶ ಹಂಚಿನಮನಿ (35) ಹಾಗೂ ಮರೆವ್ವ ಹಂಚಿನಮನಿ (55) ಎಂಬುವವರೇ ಈ ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಗಳು. ಆಟೋದಲ್ಲಿದ್ದ ರೇಣುಕಾ, ಪ್ರಣವ್ ಮತ್ತು ಪೃಥ್ವಿ ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಟ್ಟು …
Read More »
BigTv News
October 20, 2024
Breaking News, ಧಾರವಾಡ
ಧಾರವಾಡ: ಲಾರಿ ಮತ್ತು ಅಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾದ ಘಟನೆ ಧಾರವಾಡದ ಸಂಪಿಗೆನಗರ ಬಳಿ ಇಂದು ಬೆಳಗ್ಗೆ ನಡೆದಿದೆ. ಆಟೋ ಚಾಲಕ ರಮೇಶ ಹಂಚನಿಮನಿ(35), ಮರೆವ್ವ ಹಂಚಿನಮನಿ(55) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 6 ವರ್ಷದ ಮಗು ಕೂಡ ಸಾವನ್ನಪ್ಪಿದೆ. ಗಾಯಾಳುಗಳಾದ ರೇಣುಕಾ, ಪ್ರಣವ ಮತ್ತು ಪೃತ್ವಿ ಇಬ್ಬರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. …
Read More »
Shaikh BigTv
October 20, 2024
Breaking News, ಧಾರವಾಡ
ನವಲಗುಂದ: ತಾಲೂಕಿನ ಬೆಣ್ಣೆಹಳ್ಳ ಅಕ್ಕಪಕ್ಕ ಇರುವ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ ಬೆಳೆ ಹಾನಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಬೆಣ್ಣೆಹಳ್ಳದ ಅಗಲೀಕರಣ ಮಾಡಿ ಗ್ರಾಮಗಳಿಗೆ ನೀರು ನುಗ್ಗದಂತೆ ಈ ವರ್ಷವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ ಹಾಗೂ ತಡಹಾಳ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತಡಹಾಳ ಹತ್ತಿರ ಪ್ರತಿ ವರ್ಷ …
Read More »
Shaikh BigTv
October 19, 2024
Breaking News, ಧಾರವಾಡ
ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿವೃತ್ತ ನೌಕರರು ಹಾಗೂ ಇಪಿಎಸ್-95 ನೌಕರರ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ನಿವೃತ್ತ ನೌಕರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೇಶದ ಎಲ್ಲ 78 ಲಕ್ಷ ಇಪಿಎಸ್ ನಿವೃತ್ತ ನೌಕರರಿಗೆ 1 ಸಾವಿರದಿಂದ 3 ಸಾವಿರ ಮಾತ್ರ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಈ ಪಿಂಚಣಿಯಲ್ಲಿ ಜೀವನ ನಡೆಸುವುದೇ ದುರ್ಬರವಾಗಿದೆ. ಆದ್ದರಿಂದ ಭಗತ್‌ಸಿಂಗ್ ಕೋಶ್ಯಾರಿ ವರದಿಯನ್ನು ಜಾರಿ ಮಾಡಬೇಕು ಎಂದು ನಿವೃತ್ತ …
Read More »
Shaikh BigTv
October 19, 2024
Breaking News, ಧಾರವಾಡ
ಕುಂದಗೋಳ : ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ ಹಂಚಿನಾಳ ಗ್ರಾಮದ ಜನರನ್ನೂ ನಿರಾಶ್ರಿತರ ಕೇಂದ್ರದಲ್ಲೇ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಕ್ಕೆ ಬೆಣ್ಣೆ ಹಳ್ಳದ ಪ್ರವಾಹದಿಂದ ನೀರು ನುಗ್ಗಿ 25 ಮನೆಗಳು ಜಲಾವೃತವಾಗಿ ನಿರಾಶ್ರಿತರ ಕೇಂದ್ರ ತೆರೆದಿತ್ತು. ಈ ವಿಷಯವಾಗಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರಾಶ್ರಿತರ ಸಮಸ್ಯೆ ಆಲಿಸಿದಾಗ …
Read More »
Shaikh BigTv
October 19, 2024
Breaking News, ಧಾರವಾಡ
ನವಲಗುಂದ: ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಿಡುವ ಮಟ್ಟಿಗೆ ದೇಶವನ್ನು ಬೆಳೆಸಿದ ಕೀರ್ತಿ ಎಪಿಜೆ ಅಬ್ದುಲ್ ಕಲಾಂ ಅವರದು. ಇಂದಿನ ಯುವ ಪೀಳಿಗೆ ಅವರ ಆದರ್ಶ ಮತ್ತು ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಿಎಸ್‌ಐ ಜನಾರ್ಧನ ಭಟ್ರಳ್ಳಿ ಹೇಳಿದರು. ಎಪಿಜೆ ಅಬ್ದುಲ್ ಕಲಾಂ ಅಭಿಮಾನಿ ಸಂಘದಿಂದ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನಡುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಪರಿಸರ ಪ್ರೇಮಿ ದಾವಲಸಾಬ ಅಣ್ಣಿಗೇರಿ ಹಾಗೂ ಭಟ್ರಳ್ಳಿ ಅವರನ್ನು …
Read More »
BigTv News
October 19, 2024
Breaking News, ಧಾರವಾಡ
ಹುಬ್ಬಳ್ಳಿ: ವ್ಯಾಪಕ ಮಳೆಯಿಂದಾಗಿ ಬೆಣ್ಣೆ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನೂರಾರು ಕುರಿ ಹಾಗೂ ಮೂವರು ಕೊಚ್ಚಿ ಹೋಗಿರುವ ಅವಾಂತರ ಸೃಷ್ಟಿಯಾಗಿತ್ತು. ಬೆಣ್ಣೆ ಹಳ್ಳದ ನೀರಿಗೆ ಸಿಲುಕಿ ಹಾಕಿಕೊಂಡಿದ್ದ ಮೂವರನ್ನು ಹಾಗೂ 150 ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಹತ್ತಿರ ನಡೆದಿದೆ. ಕುರಿಗಳನ್ನು ಮೇಯಿಸಲು ಹೋದ ಹನುಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಮತ್ತು ಇನ್ನೋರ್ವ ವ್ಯಕ್ತಿ …
Read More »