Breaking News

ಹುಬ್ಬಳ್ಳಿ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ

ಹುಬ್ಬಳ್ಳಿ: ಬಿಜೆಪಿಯವರು ಕಳೆದ 11 ವರ್ಷಗಳಿಂದ 600 ಭರವಸೆಗಳನ್ನು ನೀಡಿದ್ದಾರೆ. ಇದರಲ್ಲಿ 10%ರಷ್ಟನ್ನು ಕೂಡಾ ಜಾರಿಗೊಳಿಸಿಲ್ಲ. ಕಾಂಗ್ರೆಸ್ ಸರ್ಕಾರ 2013-18 ರ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಯನ್ನು ಈಡೇರಿಸಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಸವಾಲ್ ಹಾಕಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸದ್ಯ ಗ್ಯಾರಂಟಿ ಯೋಜನೆಗಾಗಿ ವರ್ಷಕ್ಕೆ 55,000 ಕೋಟಿ ರೂಪಾಯಿಗಳನ್ನು ಕೊಡುತ್ತಿದ್ದೇವೆ. ಬಡವರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕೆಂದು ನಾವು ಬಯಸಿದ್ದೇವೆ. …

Read More »

*ಸಾರ್ವಜನಿಕರ ಸಹಕಾರದಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯ;ನೊಂದವರಿಗೆ ತಕ್ಷಣ ಪರಿಹಾರಕ್ಕೆ ಕ್ರಮ*: *ಎಸ್.ಪಿ. ಡಾ.ಗೋಪಾಲ ಬ್ಯಾಕೋಡ

ಧಾರವಾಡ : ಪೊಲೀಸ ಇಲಾಖೆಯ ನಿರಂತರ ನಿಗಾ ಮತ್ತು ಕಠಿಣ ಕ್ರಮ, ಜನಜಾಗೃತಿ ಕಾರ್ಯಕ್ರಮಗಳಿಂದಾಗಿ ರಸ್ತೆ ಅಪಘಾತ, ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ. ಸಾರ್ವಜನಿಕರ ಸಹಕಾರದಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಪರಿಶಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಮುಖರ ಕುಂದುಕೊರತೆ ಸಭೆ ಜರುಗಿಸಿ, ಮಾತನಾಡಿದರು. ಸಾರ್ವಜನಿಕರ …

Read More »

ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? : ಈಶ್ವರ ಖಂಡ್ರೆ

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹಣದ ಹೊಳೆ ಹರಿಸುವವರು ಬಿಜೆಪಿಯವರು. ಭ್ರಷ್ಟಾಚಾರ ಮಾಡುವವರು ಬಿಜೆಪಿಯವರು. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ರಾಜ್ಯದಲ್ಲಿ ಸುಮಾರು 50 ಸಾವಿರ ಜನರು ಸಾವನ್ನಪ್ಪಿದ್ದಾರೆ. ಆದ್ರೆ ಅವರು ತೋರಿಸಿದ್ದು ಮಾತ್ರ 4 ಸಾವಿರ ಜನ. ಅತೀ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ …

Read More »

ಅಪ್ರಾಪ್ತ ಬಾಲಕಿಯರ ಜೊತೆ ಪೊಲೀಸ್ ಹೆಡ್ ಕಾನ್ಸೆಬಲ್ ಅನುಚಿತ ವರ್ತನೆ

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ತೋರಿದ ಹಿನ್ನೆಲೆ ಸಾರ್ವಜನಿಕರೇ ಪೊಲೀಸ್ ಹೆಡ್ ಕಾನ್ಸೆಬಲ್ ನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್‌ ಠಾಣೆಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಬರಿನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಖದೀಮನವರ ಎಂಬಾತನೇ ತಾನು ವಾಸವಿದ್ದ ಮನೆಯ ಅಕ್ಕಪಕ್ಕದಲ್ಲಿ ವಾಸವಿದ್ದ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ಕಂಡು …

Read More »

ಶಿಗ್ಗಾಂವಿ ಉಪಚುನಾವಣೆಯಲ್ಲಿ ನಾವೇ ಗೆಲ್ತೀವಿ: ಕಾಂಗ್ರೆಸ್​ ಶಾಸಕ ಲಕ್ಷ್ಮಣ ಸವದಿ

ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆ ಗೆಲುವಿಗಾಗಿ ಸಭೆ ಮಾಡಲಾಗಿದೆ ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್‌, 23 ತಾಲೂಕ ಪಂಚಾಯತ್‌ ಸಭೆ ಮಾಡಿದ್ದೇವೆ. ಸಭೆಯಲ್ಲಿ ಅನೇಕ ಹಿರಿಯರು ಭಾಗಿಯಾಗಿದ್ದು ಪದಾಧಿಕಾರಿಗಳಿಗೆ ಅನೇಕ ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ ಶಿಗ್ಗಾಂವಿಯಲ್ಲಿ ನಾವೇ ಗೆಲ್ತೀವಿ ಎಂದು ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ ನಾನು …

Read More »

ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 31 ಆರೋಪಿಗಳ ಬಂಧನ

ಹುಬ್ಬಳ್ಳಿ : ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 31 ಆರೋಪಿಗಳ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ದೀಪಗಳ ಹಬ್ಬ ದೀಪಾವಳಿ ನೆಪದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂಜುಕೋರರು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಗ್ರಾಮೀಣ ಠಾಣೆ ಇನ್ಸೆಕ್ಟ‌ರ್ ಮುರುಗೇಶ ಚನ್ನಣ್ಣವರ ಹಾಗೂ ಪಿಎಸ್‌ಐ ಸಚಿನ್‌ ಅಲಮೇಲ್ಕ‌ರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಕುಸುಗಲ್, ಅಂಚಟಗೇರಿ, ಚನ್ನಾಪುರ, ಚವರಗುಡ್ಡದಲ್ಲಿ ಒಟ್ಟು 31 ಜನರನ್ನು ಬಂಧಿಸಿ, …

Read More »

BRTS ರಸ್ತೆ ಮೇಲೆ ಹೆಬ್ಬಾವೊಂದು ಪತ್ತೆ

ಹುಬ್ಬಳ್ಳಿ : BRTS ರಸ್ತೆ ಮೇಲೆ, ಜಾಲರಿ ಮೇಲೆ ಬೃಹತ್ತಾದ ಹೆಬ್ಬಾವೊಂದು ಕಂಡು ಬಂದಿದ್ದು, ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಮುಂಬಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸುಮಾರು 10 ರಿಂದ 12 ಪೂಟ್‌ ಇರುವಂತ ಹೆಬ್ಬಾವು ಶನಿವಾರ ರಾತ್ರಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸುತ್ತಿತ್ತು, ಅದನ್ನು ನೋಡಿದ ಸುನೀಲ ಎಂಬ ಯುವಕ, ಬಸ್‌ ತಡೆದಿದ್ದಾನೆ. ಅಷ್ಟೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಿಸಿಪಿ ಮಹಲಿಂಗ ನಂದಗಾವಿ ಅವರನ್ನು ತಡೆದು ತೋರಿಸಿದ್ದಾನೆ. ಕೂಡಲೇ …

Read More »

ಬಿಜೆಪಿ ವಿರುದ್ಧ ಕಿಡಿಕಾರಿದ ಈಶ್ವರ ಖಂಡ್ರೆ

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹಣದ ಹೊಳೆ ಹರಿಸುವವರು ಬಿಜೆಪಿಯವರು. ಭ್ರಷ್ಟಾಚಾರ ಮಾಡುವವರು ಬಿಜೆಪಿಯವರು. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ರಾಜ್ಯದಲ್ಲಿ ಸುಮಾರು 50 ಸಾವಿರ ಜನರು ಸಾವನ್ನಪ್ಪಿದ್ದಾರೆ. ಆದ್ರೆ ಅವರು ತೋರಿಸಿದ್ದು ಮಾತ್ರ 4 ಸಾವಿರ ಜನ. ಅತೀ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ …

Read More »

ಮರಗಳು ಇಲ್ಲೆ ಉಳಿದವು, ಮರ ನೀಡಿದ ಹಣ್ಣುಗಳು ಪಟ್ಟಣ ಸೇರಿದವು

ಅನಾದಿ ಕಾಲದಿಂದಲೂ ಇದೇ ಆಗಿರುವುದು, ಈಗಲೂ ಅದೇ ಆಗುತ್ತಿರುವುದೂ ಕೂಡ.  ಆದರೆ ಈಗ ಆಗುತ್ತಿರುವ ಬದಲಾವಣೆ ಭಯ ಹುಟ್ಟಿಸುವಂತಾದ್ದು.  ಆ ಭೂಮಿ, ಆ ಪರಿಸರ, ಆ ವ್ಯವಸ್ಥೆಯೊಂದಿಗೆ ಬೆಸಗೊಂಡ ಹೃದಯಗಳ ಭಾವನೆಗಳು ಕ್ರಮೆಣ ಕಡಿಮೆಯಾಗುತ್ತಿದೆ.  ಇದರ ಪರಿಣಾಮವೇ * ಹಣ್ಣುಗಳನ್ನು ನೀಡಿದ ಮರಗಳು ಇಲ್ಲೇ ಉಳಿದವು, ಹಣ್ಣುಗಳು ಮಾತ್ರ ಪಟ್ಟಣ ಸೇರಿದವು. ಹಿಂದೆ ಹಳ್ಳಿಗಳು ಅನ್ನದ ಕಣಜ ಎಂದೇ ಹೆಸರಾಗಿದ್ದವು.  ಆದರೆ ಅದೇ ಈ ಹಳ್ಳಿಗಳು ಕೇವಲ ವೃದ್ದಾಶ್ರಮಗಳಾಗಿ ಮಾರ್ಪಟ್ಟಿವೆ.  …

Read More »

ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ : ಜೋಶಿ

ಹುಬ್ಬಳ್ಳಿ: ಜಮೀ‌ರ್ ಅಹ್ಮದ್ ಒಬ್ಬ ಮತಾಂಧ ಶಕ್ತಿ, ಖರ್ಗೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದ ಹಾಗಿದೆ. ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ. ಕಾಂಗ್ರೆಸ್ ಪಕ್ಷದ ಅಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲವೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಖರ್ಗೆ ಅಸಮಾಧಾನ ವಿಚಾರಕ್ಕೆ ಜೋಶಿ ವ್ಯಂಗ್ಯವಾಡಿದರು. ಖರ್ಗೆ ಅವರ ಹೇಳಿಕೆ ನಂತರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗೊಂದಲದಲ್ಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ …

Read More »