Breaking News

ಹುಬ್ಬಳ್ಳಿ

ಬಿ.ಕೆ ಹರಿಪ್ರಸಾದ್ ವಿರುದ್ಧ “ವಿಶ್ವ ವಿಪ್ರ ಸೇವಾ” ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಆಕ್ರೋಶ

ಹುಬ್ಬಳ್ಳಿ: ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ವಿರುದ್ಧ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವಹೇಳನಕಾರಿ ಪದ ಬಳಕೆ ಮಾಡಿದ್ದು ತಪ್ಪು, ತಕ್ಷಣವೇ ಕ್ಷಮೆ ಕೇಳಬೇಕೆಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಮತ್ತು ಹಿಂದೂ ಸಮಾಜವನ್ನು ಹಾಳು ಮಾಡುವ ದುರುದ್ದೇಶದಿಂದ, ಮಾಡಿದ ಜನಗಣತಿಯ ಕುರಿತು ಅತ್ಯಂತ ಸಮರ್ಥವಾಗಿ ಹೇಳಿಕೆಯನ್ನು ಪರಮ ಪೂಜ್ಯ …

Read More »

ಬಡತನದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದ ಯುವತಿಗೆ ಕಮಿಷನರ್ ಎನ್‌. ಶಶಿಕುಮಾ‌ರ್ ಸನ್ಮಾನ

ಹುಬ್ಬಳ್ಳಿ: ನಗರದ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಹಪ್ಪಾ ಬಾನು ಎಂಬ ಯುವತಿ ಬಡತನದಲ್ಲಿಯೂ ಕೂಡಾ ಸರ್ಕಾರಿ ಕೋಟಾದಡಿಯಲ್ಲಿ ಕೊಪ್ಪಳ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನ‌ರ್ ಎನ್‌. ಶಶಿಕುಮಾ‌ರ್ ಹಪ್ಪಾ ಬಾನುಗೆ ಸನ್ಮಾನ ಮಾಡಿದರು. ಹಪ್ಪಾ ಬಾನು ತಂದೆ ಬಡತನದಲ್ಲಿದ್ದರೂ ಕೂಡಾ ಮಗಳಿಗೆ ಉನ್ನತ ವ್ಯಾಸಂಗ ಕೊಡಿಸಬೇಕು ಎಂದು ಹಗಲು ರಾತ್ರಿ ದುಡಿದು ಮಗಳಿಗೆ ಉತ್ತಮ ವ್ಯಾಸಂಗ ಮಾಡಿಸಿದ್ದಾರೆ. ಮಗಳು ಕೂಡಾ ತಂದೆ- …

Read More »

ಕುಮಾರಸ್ವಾಮಿ ಗೆ ವ್ಯಂಗ್ಯ ಮಾಡಿದ ಸಿಎಂ

ಹುಬ್ಬಳ್ಳಿ: ಉಪಚುನಾವಣೆಗೆ ಬಹಳಷ್ಟು ತಯಾರಿ ಮಾಡಿದ್ದೇವೆ. ಮೂರು ಕ್ಷೇತ್ರದಲ್ಲಿ ಜನ ಆಶೀರ್ವಾದ ಮಾಡ್ತಾರೆ. ಕುಮಾರಸ್ವಾಮಿ ಅವರ ಭಾವನಾತ್ಮಕವಾಗಿ ಮಾತನಾಡೋದು ಅಳೋದನ್ನ ನೋಡಿ ಜನರಿಗೆ ಸಾಕಾಗಿದೆ. ಇದನ್ನೆಲ್ಲ ಜನ ನೋಡಲ್ಲ, ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಕುರಿತು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಬಂಡಾಯವಾಗಿ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ. ಪಠಾಣ್ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಇಬ್ಬರಿಗೆ ಕೊಡಲು ಆಗುವುದಿಲ್ಲ ಎಂದರು.

Read More »

ಮೃತ ಅಂಜಲಿ ಕುಟುಂಬಕ್ಕೆ ಸಿಎಂ ಐದು ಲಕ್ಷ ರೂಪಾಯಿ ಚೆಕ್‌ ವಿತರಣೆ

ಹುಬ್ಬಳ್ಳಿ : ನಗರದ ವಿಮಾನ ನಿಲ್ದಾಣದಲ್ಲಿಂದ ಮೃತ ಅಂಜಲಿ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ನವರು ಐದು ಲಕ್ಷ ರೂಪಾಯಿ ಚೆಕ್‌ ವಿತರಿಸಿದರು. ಮೇ 15ರಂದು ಅಂಜಲಿ ಕೊಲೆಯಾಗಿದ್ದಳು. ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಗಿರೀಶ್ ಅಂಜಲಿ ಮನೆಯಲ್ಲಿ ಅಂಜಲಿಯನ್ನು ಚಾಕುವಿನಿಂದ ಕೊಂದಿದ್ದನು. ಕೆಲ ದಿನಗಳ ಹಿಂದೆ ಅಂಜಲಿ ಕುಟುಂಬಕ್ಕೆ ಸರ್ಕಾರ ಪರಿಹಾರ ಬಿಡುಗಡೆ ಮಾಡಿತ್ತು. ಹುಬ್ಬಳ್ಳಿಗೆ ಸಿಎಂ ಆಗಮನದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಮಾಡಿದರು.

Read More »

ಹುಬ್ಬಳ್ಳಿಗೆ ಆಗಮಿಸಿದ ಸಿಎಂ

ಹುಬ್ಬಳ್ಳಿ: ಇಂದು ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆ, ಜಿಲ್ಲಾಡಳಿತದಿಂದ ಸ್ವಾಗತ ಮಾಡಿಕೊಂಡು ಅವರಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು.

Read More »

ಬಿಜೆಪಿ ವಿರುದ್ಧ ಹರಿಹಾಯ್ದ ಈಶ್ವರ ಖಂಡ್ರೆ

ಹುಬ್ಬಳ್ಳಿ: ಮಹಾರಾಷ್ಟ್ರ ಚುನಾವಣೆ ನಂತರ ರಾಜ್ಯ ಸರಕಾರ ಬೀಳಲಿದೆ ಎಂದು ಹೇಳುವವರ ಬುದ್ದಿ ಭ್ರಮಣೆಯಾಗಿದೆ. ಅವರು ತಿರುಕನ ಕನಸು ಕಾಣುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಚಿವ ಈಶ್ವರ ಖಂಡ್ರೆ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದುರಾಡಳಿತ ನಡೆಸಿದವರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಹಪಾಹಪಿಯಲ್ಲಿದ್ದಾರೆ. ಅಧಿಕಾರ ದುರ್ಬಳಿಕೆ ಮಾಡಿಕೊಂಡವರಿಗೆ ಅಧಿಕಾರ ಬೇಕಾಗಿದೆ. ಆದರೆ ನಮ್ಮ ಪಕ್ಷದ ೧೩೬ ಶಾಸಕರು ಒಗ್ಗಟ್ಟಾಗಿದ್ದಾರೆ. ನಮ್ಮ ಸರಕಾರ ಸುಭದ್ರವಾಗಿ ಇರಲಿದೆ ಎಂದರು.

Read More »

ಕಾಂಗ್ರೆಸ್ ಪಕ್ಷದ ವತಿಯಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ : ಸಚಿವ ಈಶ್ವರ ಖಂಡ್ರೆ

ಹುಬ್ಬಳ್ಳಿ: ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿವೆ. ಕಾಂಗ್ರೆಸ್ ಪಕ್ಷದ ವತಿಯಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಗೆಲುವಿನ ಒಲವು ನಮ್ಮ ಕಡೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,ಇನ್ನು ಕೊಟ್ಟ ಮಾತಿನಂತೆ ನಡೆದಿದ್ದೇವೆ. ನಾವು ಗೆದ್ದೇ ಗೆಲ್ತಿವಿ. ಶಿಗ್ಗಾಂವಿಯಲ್ಲಿ ಪಠಾಣ್ ನಾಮಪತ್ರ ಸಲ್ಲಿಕೆಗೆ ಬಂದಿದ್ದೇನೆ. ನಾಯಕರನ್ನು ಒಂದು ಕಡೆ ಸೇರಿಸಿ ಚುನಾವಣೆ ಎದುರಿಸ್ತೇವೆ. …

Read More »

ಬಿಜೆಪಿಯಿಂದ 8 ಶಾಸಕರು ಅಷ್ಟೇ ಅಲ್ಲ, ಇನ್ನಷ್ಟು ಶಾಸಕರು ಕಾಂಗ್ರೆಸ್‌ಗೆ ಬರಬಹುದು : ಈಶ್ವರ ಖಂಡ್ರೆ

ಹುಬ್ಬಳ್ಳಿ: ಬಿಜೆಪಿಯಿಂದ 8 ಶಾಸಕರು ಅಷ್ಟೇ ಅಲ್ಲ, ಇನ್ನಷ್ಟು ಶಾಸಕರು ಕಾಂಗ್ರೆಸ್‌ಗೆ ಬರಬಹುದು. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಶಾಸಕರು ಬೇಸತ್ತು ಹೋಗಿದ್ದಾರೆಂದು ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಹುಬ್ಬಳ್ಳಿಯಲ್ಲಿ ನಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ ಶಾಸಕರು, ಜನರು ಕೂಡ ಬೇಸತ್ತಿದ್ದಾರೆ. ಪ್ರಜಾಸತ್ತಾತ್ಮಕ ಸರಕಾರ ಬುಡಮೇಲು ಮಾಡಲು ಹೊರಟಿದ್ದಾರೆ. ದ್ವೇಷದ ರಾಜಕಾರಕ್ಕೆ ಜನರೇ ಪಾಠ ಕಲಿಸಲಿದ್ದಾರೆ. ಹೀಗಾಗಿಯೇ ಅಲ್ಲಿನ ಶಾಸಕರು …

Read More »

ಮೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಖಂಡಿತವಾಗಿ ಗೆಲ್ತಾರೆ: ಗೋವಿಂದ ಕಾರಜೋಳ

ಹುಬ್ಬಳ್ಳಿ: ಮೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಖಂಡಿತವಾಗಿ ಗೆಲ್ತಾರೆ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಭರತ್ ಬೊಮ್ಮಾಯಿ ನಾಮ ಪತ್ರಸಲ್ಲಿಕೆಗೆ ಯಡಿಯೂರಪ್ಪನವರು, ನಾನು ಬಸವರಾಜ ಬೊಮ್ಮಾಯಿ, ಬೈರತಿ, ಮುರ್ಗೆಶ್ ನಿರಾಣಿ ಹೋಗ್ತಾ ಇದ್ದೇವೆ. ನೂರಕ್ಕೆ ನೂರು ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ಗೆದ್ದೇ ಗೆಲ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Read More »

ರಾಜ್ಯದಲ್ಲಿ ಸರ್ಕಾರದ ನಡೆ ವಿರುದ್ಧ ರಾಜ್ಯದ ಜನ ನಿರಾಶರಾಗಿದ್ದಾರೆ: ಬೈರತಿ ಬಸವರಾಜ

ಹುಬ್ಬಳ್ಳಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ, ರಾಜ್ಯದಲ್ಲಿ ಸರ್ಕಾರದ ನಡೆ ವಿರುದ್ಧ ರಾಜ್ಯದ ಜನ ನಿರಾಶರಾಗಿದ್ದಾರೆಂದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು. ಬಿಜೆಪಿಯ ಎಂಟು ಜನ ಶಾಸಕರು ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಸೋಮಶೇಖರ್ ಹೇಳಿಕೆ ವಿಚಾರ, ಸುಮ್ಮನೇ ಈ ರೀತಿ ಸುಳ್ಳು ಹೇಳಿಕೆ ನೀಡೋದು ಸರಿಯಲ್ಲ. ಅವರು ನಮ್ಮ ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಈ ರೀತಿ ಮಾತನಾಡುತ್ತಿದ್ದಾರೆ. ಯಾವ್ಯಾವ ಶಾಸಕರು …

Read More »