Breaking News

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದ ಪ್ರಭಾರಿಗಳ ಸಭೆ

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಪ್ರಭಾರಿಗಳ ಸಭೆ ನಡೆಸಲು ಇಂದು ಹುಬ್ಬಳ್ಳಿಗೆ ಆಗಮಿಸಿದ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರನ್ನು ಬಿಜೆಪಿ ನಾಯಕರು ಹಾಗೂ ಮೇಯ‌ರ್ ರಾಮಣ್ಣ ಬಡಿಗೇರ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ. ಮಜ್ಜಗಿ, ಪಾಲಿಕೆ ಸದಸ್ಯರಾದ ಬೀರಪ್ಪ. ಕಂಡೇಕರ ಇದ್ದರು.

Read More »

ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಭಾಗಿ

ಹುಬ್ಬಳ್ಳಿ :ಬೆಂಗೇರಿಯ ಗಾಯತ್ರಿ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಶ್ರೀ ಗಾಯತ್ರಿ ದೇವಿಯ ದರ್ಶನ ಪಡೆದು, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಮೂರುಸಾವಿರ ಮಠದ ಪರಮಪೂಜ್ಯರಾದ ಶ್ರೀಮನ್ಮಹಾರಾಜ ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಗಾಯಿತ್ರಿ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಶ್ರೀ ಸದಾಶಿವ ಚೌಶೆಟ್ಟಿ ಇದ್ದರು.

Read More »

ಹುಬ್ಬಳ್ಳಿ ಸಿದ್ದಾರೂಢರು ಇತಿಹಾಸ, ಪವಾಡ ಪುರುಷರು: ವಿ. ಸೋಮಣ್ಣ

ಹುಬ್ಬಳ್ಳಿ: ಹುಬ್ಬಳ್ಳಿ ಸಿದ್ದಾರೂಢರು ಇತಿಹಾಸ, ಪವಾಡ ಪುರುಷರು, ಈ ದೇಶದಲ್ಲಿ ಅದೆಷ್ಟೋ ಘಜ್ಜಿ ಮಹಮ್ಮದ್ ಎಷ್ಟೋ ಸಾರಿ ದಾಳಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಹುಬ್ಬಳ್ಳಿ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ಇಂತಹ ಶರಣರು, ತಪಸ್ವಿಗಳು ಬದುಕಿದ್ದರಿಂದ ನಾವು ಈ ದೇಶದಲ್ಲಿ ನೆಮ್ಮದಿಯಾಗಿದ್ದೇವೆ. ಇಂತಹ ಪುಣ್ಯಾತ್ಮರ ಸಂದೇಶಗಳು ನಮಗೆ ಶಕ್ತಿಯನ್ನು ಕೊಡುತ್ತವೆ. ನಿಷ್ಕಲ್ಮಶವಾಗಿ ಈ ದೇವರನ್ನು ಯಾರು ಪ್ರಾರ್ಥನೆ ಮಾಡುತ್ತಾರೆ ನಿನಗೂ ಸಿಗ್ತಾರೆ, ನಮಗೂ …

Read More »

ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ

ಹುಬ್ಬಳ್ಳಿ: ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ವಿಚಾರ, ದಿನೇಶ್ ಗುಂಡೂರಾವ್ ಅವರಿಗೆ ಗುಂಡೂರಾವ್ ಮಗ ಎಂದು ತುಂಬಾ ಗೌರವ ಇದೆ.ಇತಿಹಾಸ ತಿಳಿದುಕೊಳ್ಳದೇ ಸಾವರ್ಕರ್ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ..? ದಿನೇಶ್ ಗುಂಡೂರಾವ್ ಯಾವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆಂಬುದು ನನಗೆ ಗೊತ್ತಿಲ್ಲವೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

Read More »

ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ : ಕೇಂದ್ರ ಸಚಿವ ವಿ. ಸೋಮಣ್ಣ

ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿರುವುದು ನನಗೆ ಸರಿಯಾದ ಮಾಹಿತಿ ಇಲ್ಲ. ಒಂದಂತೂ ಸತ್ಯ ಬಿಜೆಪಿಯಲ್ಲಿ ಬಣ ಇಲ್ಲ, ಒಂದೇ ಬಣ ಭಾರತೀಯ ಜನತಾ ಪಕ್ಷ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಸಾಹೇಬರು ಯಾಕೆ ಹಾಗೇ ಮಾತನಾಡುತ್ತಾರೋ ನನಗೆ ಗೊತ್ತಿಲ್ಲ. ಸಿಟ್ಟಿನಲ್ಲಿ ಮಾತನಾಡಿದ ಮಾತು ವಾಪಾಸ್‌ ಬರೋಲ್ಲ, ಅದರ ಅವಶ್ಯಕತೆ ಇಲ್ಲ ಎಂದು ನಾನು ಅವರಿಗೆ …

Read More »

ಸಿದ್ಧಾರೂಢರ ದರ್ಶನ ಪಡೆದ ವಿ.ಸೋಮಣ್ಣ

ಹುಬ್ಬಳ್ಳಿ: ಪ್ರತಿಷ್ಠಿತ ಶ್ರೀ ಸಿದ್ಧಾರೂಢರ ಮಠಕ್ಕೆ ಆಗಮಿಸಿದ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಸಿದ್ಧಾರೂಢರ ದರ್ಶನ ಪಡೆದರು. ಪ್ರತಿಷ್ಠಿತ ಮಠಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಅವರು ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇವರ ಜೊತೆಗೆ ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರೂಪ್ ಆಪ್ ಕಂಪನಿ ಮಾಲೀಕರಾದ ವಿಎಸ್‌ವಿ ಪ್ರಸಾದ್‌ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು. ಪ್ರಥಮ ಬಾರಿಗೆ ಸಿದ್ಧಾರೂಢ ಮಠಕ್ಕೆ …

Read More »

ಸ್ವಚ್ಛತಾ ಅಭಿಯಾನದ ಅಂಗವಾಗಿ ಸಾರಿಗೆ ನೌಕರರಿಂದ ಸ್ವಯಂ ಪ್ರೇರಿತ ಸ್ವಚ್ಛತಾ ಕಾರ್ಯಕ್ರಮ

ಹುಬ್ಬಳ್ಳಿ: ಸ್ವಚ್ಚತಾ ಅಭಿಯಾನದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಗೋಕುಲ ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 5 ಡಿಪೊಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರ …

Read More »

ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ : ಕಾರ್ಪೊರೇಟರ್ ಮಗ ಗಂಭೀರವಾಗಿ ಗಾಯ

ಹುಬ್ಬಳ್ಳಿ: ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲನೆ ಮಾಡುತ್ತಿದ್ದ ಕಾರ್ಪೊರೇಟರ್ ಮಗ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್ ಬಳಿ ನಡೆದಿದೆ. ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿರುವ ದೊರೆರಾಜ್ ಮಣಿಕುಂಟಲ್ ಅವರ ಮಗ ಪ್ರಥ್ವಿರಾಜ್ ಗಂಭೀರವಾಗಿ ಗಾಯಗೊಂಡ ಬಾಲಕ ಅಂತ ತಿಳಿದು ಬಂದಿದೆ. ಗದಗ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕ್ಯಾಂಟ‌ರ್ ವಾಹನಕ್ಕೆ ಗಟ್ಟೂರು ಕಡೆಯಿಂದ ಸ್ಕೂಟಿಯಲ್ಲಿ ವೇಗವಾಗಿ …

Read More »

ಯುವಕನ ಮೇಲೆ ಪುಡಿ ರೌಡಿಗಳು ಹಲ್ಲೆ: ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ : ಯುವಕನೊಬ್ಬನ ಮೇಲೆ ನಾಲೈದು ಪುಡಿ ರೌಡಿಗಳ ಗುಂಪು ಶೆಡ್‌’ಕರೆದೊಯ್ದು ರಾಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ ಯುವಕನ ಕೈ ಕಾಲು ಮುರಿದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನ ವಿನಾಯಕ ಅಂತಾ ತಿಳಿದು ಬಂದಿದ್ದು ಈತ ಅಭಿಷೇಕ ಸಿದ್ದಾಪುರ ಎಂಬಾತನ ಬಳಿಯಲ್ಲಿ 5000 ಸಾವಿರ ಸಾಲವನ್ನು ಮಾಡಿದ್ದ,ಆದ್ರೆ ಕಳೆದ ಎರಡು ತಿಂಗಳುಗಳಿಂದ …

Read More »

ಜಿಲ್ಲಾ ಮಟ್ಟದ ಭಾಸ್ಕೆಟಬಾಲ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಚೇತನ ಮತ್ತು ಸಚೇತನ ಕಾಲೇಜಿನ ವಿದ್ಯಾರ್ಥಿಗಳು

ಹುಬ್ಬಳ್ಳಿ : ದ್ಯಾವಪ್ಪನವರ -ವಳಸಂಗ ಎಜ್ಯುಕೇಶನಲ್‌ ಮತ್ತು ಅಕ್ಯಾಡೆಮಿಕ್ ಟ್ರಸ್ಟನ ಚೇತನ ಮತ್ತು ಸಚೇತನ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಭಾಸ್ಕೆಟಬಾಲ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸದರೀ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದಕ್ಕಾಗಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಕುಮಾರಿ. ಅರ್ಪಿತಾ ಮುರಗೋಡ ಇವಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಡಿ.ವಿ.ಇ. ಟ್ರಸ್ಟಿನ ಅಧ್ಯಕ್ಷ ಜಿ. ವಿ. ವಳಸಂಗ, ಕಾರ್ಯದರ್ಶಿಗಳಾದ ಶ್ರೀ ಮಹೇಶ ದ್ಯಾವಪ್ಪನವರ, ಈ …

Read More »