Breaking News

ಹುಬ್ಬಳ್ಳಿ

ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಖಾಸಗಿ ಬಸ್

ಹುಬ್ಬಳ್ಳಿ: ಪುಣೆ ನಗರದಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನ ಹಿಂದಿನ ಚಕ್ರ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಖಾಸಗಿ ಬಸ್ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಬಳಿ ರವಿವಾರ ಬೆಳಗಿನ ಜಾವ 2.45ರ ಸುಮಾರಿಗೆ ನಡೆದಿದೆ. ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ನಿನ್ನೆ ಪುಣೆ ನಗರದಿಂದ ಉಡುಪಿಯತ್ತ ಹೋಗುತ್ತಿದ್ದಾಗ ಹು-ಧಾರವಾಡ …

Read More »

ವೈಯಕ್ತಿಕ ಜಗಳ : ಯುವಕನಿಗೆ ಚಾಕು ಇರಿತ

ಹುಬ್ಬಳ್ಳಿ : ವೈಯಕ್ತಿಕ ಜಗಳದಿಂದಾಗಿ ಯುವಕರು ಇಬ್ಬರು ಹೊಡೆದಾಡಿಕೊಂಡ ಚಾಕು ಇರಿತವಾದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಹುಬ್ಭಳ್ಳಿ ದುರ್ಗದ ಬೈಲ್ ಸರ್ಕಲ್ ಸಮೀಪ ಕಾರ್ಪೊರೇಷನ್ ಆಫೀಸ್ ಮುಂದೆ ನಡೆದಿದೆ. ಸಂತೋಷ ಮುರಗೋಡ ( ೩೪ ವರ್ಷ ) ಹಲ್ಲೆ ಗೀಡಾದ ಯುವಕ. ಶಿವಾನಂದ ನಾಯ್ಕ ( ೩೨ ) ಕುರುಬರ ಓಣಿ ಇತನು ತನ್ನ ವೈಯಕ್ತಿಕ ಜಗಳದಿಂದಾಗಿ ಬೈದಾಡಿಕೊಂಡು ನಂತರ ಸಿಟ್ಟಿನಿಂದ ಸಂತೋಷ ಮುರಗೋಡ ಇತನಿಗೆ ಹೊಟ್ಟೆಗೆ …

Read More »

ಸ್ಮಾರಕ ನಿರ್ಮಾಣವಾಗಲಿ, ಪಾಪು ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆ ಮಾಡಿ- ಪಾಪು ಮೊಮ್ಮಗಳು ವಿಜಯಾ ಪಾಟೀಲ್

ಹುಬ್ಬಳ್ಳಿ; ಕನ್ನಡದ ಕಟ್ಟಾಳು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಸ್ಮಾರಕವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ನಾಡೋಜ ದಿ.ಪಾಟೀಲ ಪುಟ್ಟಪ್ಪ ಅವರ ಮೊಮ್ಮಗಳು ವಿಜಯಾ ಪಾಟೀಲ ಆಗ್ರಹಿಸಿದರು ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿದು ಮಾತನಾಡಿದ ಅವರು, ಡಾ ಪಾಟೀಲ್ ಪುಟ್ಟಪ್ಪನವರ ಈ ಹಿಂದೆ ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಅಂತಿಮ ನಮನಗಳನ್ನು ಪಡೆದು ಪಾಪು ಅವರನ್ನು ಹಾಡಿ ಹೊಗಳಿ …

Read More »

ಟಿಪ್ಪು ದೇಶದ್ರೋಹಿ ಜಯಂತಿ ಆಚರಣೆ ಮಾಡಲು ಬಿಡಲ್ಲ; ಮುತಾಲಿಕ್

ಹುಬ್ಬಳ್ಳಿ : ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಹೀಗಾಗಿ ನಮಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ಟಿಪ್ಪು ಹಿಂದು ಮತ್ತು ಕನ್ನಡ ವಿರೋಧಿ. ಹಾಗಾಗಿ ಎಲ್ಲಿಯೂ ಆಚರಣೆ ಮಾಡಲು ಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲಿ ಆಚರಣೆ ತಡೆಯುತ್ತೇವೆ. ಎಲ್ಲ ಮಹಾಪುರುಷರಿಗೆ ಟಿಪ್ಪು ಸುಲ್ತಾನ್ ಹೋಲಿಕೆ ಮಾಡಬಾರದು. ಆತ ದೇಶದ್ರೋಹಿ, ಯಾರ ಜಯಂತಿ ಬೇಕಾದರೂ ಮಾಡಿ ಆದರೆ ಟಿಪ್ಪು ಜಯಂತಿ ಮಾಡಬೇಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. …

Read More »

ಹುಬ್ಬಳ್ಳಿಯಲ್ಲಿ ಬನಾರಸ್ ಸಿನಿಮಾ ವೀಕ್ಷಿಸಿದ ಝೈನದ ಖಾನ್

ಹುಬ್ಬಳ್ಳಿ: ಬನಾರಸ್ ಸಿನಿಮಾ ಭರ್ಜರಿ ಎಂಟ್ರಿಕೊಟ್ಟಿದ್ದು, ಚೊಚ್ಚಲ ಎಂಟ್ರಿಯಲ್ಲೇ ಝೈನದ ಖಾನ್ ಜೈಕಾರ ಹಾಕಿಸಿಕೊಂಡಿದ್ದಾರೆ. ಇಂದು ಚಿತ್ರದ ತಂಡ ಹುಬ್ಬಳ್ಳಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇಲ್ಲಿನ ಸ್ಟೇಷನ್‌ ರಸ್ತೆಯ ಚಂದ್ರಕಲಾ ಚಿತ್ರಮಂದಿರದಲ್ಲಿ ಝೈನ್ ಖಾನ್ ಫ್ಯಾನ್ ಇಂಡಿಯಾ ಸಿನಿಮಾಗೆ ಭರ್ಜರಿ ವೆಲ್ ಕಮ್ ಮಾಡಲಾಗಿದೆ. ಥೀಯೇಟರ್ ಗಳ ಮುಂದೆ ಫ್ಯಾನ್ಸ್ ಕಿಕ್ಕಿರಿದು ಸೇರಿ ಪಟಾಕಿ ಸಿಡಿಸಿ, ಚಿತ್ರದ ನಾಯಕ ಹಾಗೂ ನಾಯಕಿಗೆ ಹೂಮಳೆ ಸೂರಿಸಿದ್ದಾರೆ. ಇನ್ನು ಶಾಸಕ ಜಮೀರ್ ಅಹ್ಮದ್ …

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಕುರಿತಂತೆ ದಲಿತ ವಿರೋಧಿ ಹಾಗೂ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಕಳೆದ 15 ವರ್ಷಗಳು ಗತಿಸುತ್ತಿದ್ದರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಭೆಯ ನಡಾವಳಿ ಅನುಷ್ಠಾನ ಮಾಡದೇ ಇರುವುದು ಖಂಡನೀಯ. ಕೂಡಲೇ ಪಾಲಿಕೆ ಪೌರಕಾರ್ಮಿಕ …

Read More »

ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಮಾಜಿ ಸಿಎಂ ಗರಂ

ಹುಬ್ಬಳ್ಳಿ: ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ನಗರದ ಹೊಟೇಲ್‌ವೊಂದಕ್ಕೆ ಆಗಮಿಸಿದ್ದರು. ಈ ವೇಳೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ಸ್ಥಳೀಯ ಮುಖಂಡ ಗಿರೀಶ ಗದಿಗೆಪ್ಪಗೌಡರ ಅವರು ‘ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಗದಿಗೆಪ್ಪಗೌಡರ ಜತೆ ಬಂದವರು ‘ಹೌದೋ ಹುಲಿಯಾ’ ಎಂದು ಪ್ರತಿಕ್ರಿಯಿಸಿದರು. ಈ ಸಂಗತಿ ಸಿದ್ದರಾಮಯ್ಯ ಅವರನ್ನು …

Read More »

ಬೈಕ್ ಕಳ್ಳರನ್ನು ಎಡೆಮುರಿ ಕಟ್ಟಿದ ಹುಬ್ಬಳ್ಳಿ ಖಾಕಿಪಡೆ : ಇಬ್ಬರು ಬಂಧನ

ಹುಬ್ಬಳ್ಳಿ : ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್ ಕಳೆದುಕೊಂಡು ಠಾಣೆ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗಿದೆ. ಮನೆ ಮುಂದೆ ಅಂಗಡಿ ಮುಂದೆ ನಿಲ್ಲಿಸಿದ ಬೈಕ್ ಗಳನ್ನೇ ಎಸ್ಕೇಪ್ ಮಾಡುತ್ತಿದ್ದ ಚಾಲಾಕಿ ಬೈಕ್ ಖದೀಮರನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲಿಸರು ಇದೀಗ ಎಡೆಮುರಿ ಕಟ್ಟಿದ್ದಾರೆ. ವಿವಿಧ ಜಿಲ್ಲೆಗಳಿಂದ ಬೈಕಗಳನ್ನು ಕದ್ದು ಮಾರಾಟ ಮಾಡುತಿದ್ದ ಇಬ್ಬರನ್ನೂ ಬಂಧಿಸಿದ್ದು ಇನ್ನೊಬ್ಬ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳಿಂದ ಸುಮಾರು 580,000 ಲಕ್ಷ ರೂಪಾಯಿ …

Read More »

ರೌಡಿಶೀಟರ್ ಯಾರು ? ಅಂಗವಿಕಲನಿಗೆ ಚಾಕು ಇರಿದು ಕೊಂದಿದ್ದ ಪಾಪಿ ಮರ್ಡರ್ ಮಾಡಿದವನ ರಕ್ಷಣೆ ಮಾಡಿತಾ ಖಾಕಿ ?

ಹುಬ್ಬಳ್ಳಿ : ತಾನಾಯ್ತು ತನ್ನ ಕೆಲಸ ಆಯ್ತು ಎಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಯುವಕನ ನೆತ್ತರು ಅಂದು ಹರಿದು ಹೋಗಿತ್ತು.. ಪುಡಿ ರೌಡಿಯೊಬ್ಬನ ಇರಿತ ಆ ಕನಸುಗಾರನ ಜೀವ ಕಳೆದಿತ್ತು.. ಸಿಸಿ ಕ್ಯಾಮರಾ ಸಾಕ್ಷಿಯಿದ್ದರೂ ಪ್ರಕರಣ ಉಲ್ಟಾ ಆಗಿತ್ತು..ಕೊಲೆಗಾರ ಆರೋಪಿ ನಂಬರ್ 3 ಆಗಿದ್ದ.. ಅಷ್ಟಕ್ಕೂ ಏನಿದು ಪ್ರಕರಣ? ಈ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್.. ಹಿನ್ನೆಲೆ: ಅಂದು ತನ್ನ ಮನೆಗೆ ಆ ಯುವಕ …

Read More »

ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಪ್ರಯಾಣಿಕ ಬಸ್ಸಿನಿಂದ ಹೊರಬಿದ್ದು ಕಾಲು ಮುರಿದಿದೆ

ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಪ್ರಯಾಣಿಕರೊಬ್ಬರು ಬಸ್ಸಿನಿಂದ ಹೊರಬಿದ್ದು ಕಾಲು ಮುರಿದ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಹೌದು, ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬೇದರೆ ಸಾರಿಗೆ ಬಸ್ಸಿನಲ್ಲಿಯೇ ಘಟನೆ ನಡೆದಿದೆ. ಬಸ್ಸು ವಿದ್ಯಾನಗರದ ಬಿ.ವ್ಹಿ.ಬಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದ ವೇಳೆಯಲ್ಲಿಯೇ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಪ್ರಯಾಣಿಕ ನಿಯಂತ್ರಣ ತಪ್ಪಿ ಬಸ್ಸಿನ ಹೊರಗಡೆ ಬಿದ್ದಿದ್ದಾನೆ. ಪರಿಣಾಮ ಪ್ರಯಾಣಿಕನ …

Read More »