Breaking News

Breaking News

ನರೇಗಾ ಯೋಜನೆಯ ಮಾಹಿತಿ ಹಂಚಿಕೆಗೆ ಡಿಜಿಟಲ್ ತಂತ್ರಜ್ಞಾನ ಬಳಕೆ

ಕಾರವಾರ: ನರೇಗಾ ಯೋಜನೆಯ ಮಾಹಿತಿಯನ್ನು ಜನರಿಗೆ ಸುಲಭವಾಗಿ ತಲುಪಿಸಲು ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಯೋಜನೆಯ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ನರೇಗಾ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಸಂದೀಪ್ ಕೋಠಾರಕರ ಹೇಳಿದರು. ತಾಲ್ಲೂಕಿನ ಚೆಂಡಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕ್ರಿಯಾ ಯೋಜನೆ ಸಿದ್ದಪಡಿಸುವ ಸಲುವಾಗಿ ಐಇಸಿ ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಉದ್ಯೋಗ ಖಾತರಿ ನಡಿಗೆ …

Read More »

ಪ್ರವಾಸೋದ್ಯಮ ಅಭಿವೃದ್ಧಿಗೆ 47 ಸಾವಿರ ನೇರ ಉದ್ಯೋಗ ಕಲ್ಪಿಸುವ ಗುರಿ: ಸಂಪುಟ ಒಪ್ಪಿಗೆ

ಬೆಂಗಳೂರು: ರಾಜ್ಯ ಸರಕಾರದ ಮಹತ್ವದ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, 2024-29ರ ವರೆಗೆ ಈ ನೀತಿ ಜಾರಿಯಲ್ಲಿರುತ್ತದೆ. 9 ಪ್ರಮುಖ ಕೇಂದ್ರೀಕೃತ ಪ್ರದೇಶಗಳನ್ನು ಗುರುತಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕೆ ಯೋಜಿಸಲಾಗಿದೆ. ಕನಿಷ್ಟ 47 ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವರೂ ಆಗಿರುವ ಎಚ್‌.ಕೆ. ಪಾಟೀಲ್‌ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 25 ವಿಷಯಾಧಾರಿತ ಕ್ಷೇತ್ರಗಳ 44 …

Read More »

ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಸಹಾಯಧನ 2 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ: ಕಾರ್ಮಿಕರ ಸಭೆ ಮಂಡಳಿ ತೀರ್ಮಾನ

ಬೆಂಗಳೂರು: ಕಟ್ಟಡ ಕಾರ್ಮಿಕರು ಕ್ಯಾನ್ಸರ್, ಹೃದ್ರೋಗ ಚಿಕಿತ್ಸೆ ಪಡೆಯಲು ವೈದ್ಯಕೀಯ ವೆಚ್ಚ ಸಹಾಯಧನವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ಕಾರ್ಮಿಕ ಮಂಡಳಿ ಸಭೆ ತೀರ್ಮಾನಿಸಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 43ನೇ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಆಯುಷ್ಮಾನ್ ಯೋಜನೆಯ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚದ …

Read More »

ವಿಜೃಂಭಣೆಯಿಂದ ನೆರವೇರಿದ ತೆಪ್ಪದ ತೇರು ಮಹಾ ರಥೋತ್ಸವ

ಕುಂದಗೋಳ : ಪಟ್ಟಣದ ಕೆರೆಯಂಗಳ ಮತ್ತು ಅಗಸಿಹೊಂಡ ತುಂಬಿದ ಹಿನ್ನೆಲೆಯಲ್ಲಿ ಇಂದು ತೆಪ್ಪದ ತೇರು ಮಹಾ ರಥೋತ್ಸವ ವಿಜೃಂಭಣೆಯಿಂದ ಸಾಗಿದೆ. ಮೊದಲು ಕೆರೆಯಂಗಳದಲ್ಲಿ ನಡೆದ ತೆಪ್ಪದ ರಥೋತ್ಸವ ಬಳಿಕ ಅಗಸಿ ಹೊಂಡಕ್ಕೆ ಸಾಗಿ ಭಜನೆ ಮತ್ತು ತತ್ವಪದಗಳ ನಡುವೆ ಕೆರೆಯಂಗಳವನ್ನು ಯಶಸ್ವಿಯಾಗಿ ದಾಟಿ ಅಗಸಿಹೊಂಡದಲ್ಲಿ ಯಶಸ್ವಿಯಾಗಿ ಜರುಗಿತು. ತೆಪ್ಪದ ರಥೋತ್ಸವದ ವೇಳೆ ಕೇಸರಿ ಧ್ವಜಗಳು ಯುವಕರ ಕೇಕೆ, ಶಿಳ್ಳೆ, ಚಪ್ಪಾಳೆ ಕೇಳಿ ಬಂದರೇ ಹಿರಿಯ ನಾಗರೀಕರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ …

Read More »

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದಾಗ್ಯೂ NDA ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಈ ಮೂರೂ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಚಿವರನ್ನು ಇರಿಸಿ, ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನವರು ಭ್ರಮನಿರಸನರಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರ್ಕಾರಿ …

Read More »

ನಾವೇನು ಅಲ್ಲಾನ ವಿರುದ್ಧ ಇಲ್ಲಾ‌: ಜೋಶಿ

ಹುಬ್ಬಳ್ಳಿ : ಅಲ್ಲಾಗೆ ಆಸ್ತಿ ಮಾಡೋದೊಂದೇ ಕೆಲಸ ಇತ್ತಾ? ಅಲ್ಲಾ ಹೆಸರು ಹೇಳೋದೆಲ್ಲ ಬೋಗಸ್ ಇವರು ಬೇಕಂತಲೇ ಹೇಳ್ತಾರೆ, ನಾವೇನು ಅಲ್ಲಾನ ವಿರುದ್ಧ ಇಲ್ಲಾ, ಅಲ್ಲಾನ ವಿರುದ್ಧ ಭದ್ಮಶ್ ಗಿರಿ ಮಾಡೋರ ವಿರುದ್ಧ ನಾವಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಷ ಬೋರ್ಡ್ ಆಸ್ತಿ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಅಳ್ಳಾವರದಲ್ಲಿ ಪೊಲೀಸ್‌ ಠಾಣೆ ಕಾಪೌಂಡ್ ಹಾಕಿಕ್ಕೋಳೋಕೆ ಬಿಟ್ಟಿಲ್ಲ. ಪೊಲೀಸರು …

Read More »

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ವಕ್ಷ ಬೋರ್ಡ್‌ ನವರು ಮುಂಬರುವ ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ, ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ರೆ, ಉಪಚುನಾವಣೆ ಇರದೇ ಹೋಗಿದ್ರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಹೇಳ್ತಿದ್ದಾರೆ. ಕೊಡಲಿಕೆ ಇವರ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40-50 …

Read More »

ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನ‌ರ್ ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು. ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. …

Read More »

ಮಳೆಯಿಂದ ಹಾನಿಯಾದ ಕಾಮಗಾರಿಯನ್ನು ಪರಿಶೀಲಿಸಿದ ಸತೀಶ್ ಜಾರಕಿಹೊಳಿ

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಹಾನಿಯಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಭೀಕರ ಮಳೆಯ ಅನಾಹುಕ್ಕೆ ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಅದರಂತೆ ಪ್ರವಾಹದ ಸೆಳೆತಕ್ಕೆ ರಸ್ತೆ ಬ್ರಿಡ್ಜ್ ಕೊಚ್ಚಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಮಾಣ ಬೆಳೆಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ …

Read More »

ಸತತ 5 ದಿನಗಳ ಕುಸಿತದ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 602.75 ಅಂಕ ಏರಿಕೆ

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 5 ದಿನಗಳ ಕುಸಿತ ಬಳಿಕ ಇಂದು ಅಂದರೆ ವಾರದ ಮೊದಲ ದಿನವೇ ಭರ್ಜರಿ ಚೇತರಿಕೆ ಕಂಡಿದೆ. ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 158.35 ಅಂಕಗಳ ಏರಿಕೆಯೊಂದಿಗೆ 24,339.15 ಅಂಕಗಳಿಗೆ ಏರಿಕೆಯಾಗಿ …

Read More »