Shaikh BigTv
October 28, 2024
Breaking News, ಹುಬ್ಬಳ್ಳಿ
ಕುಮಟಾ: ಹುಬ್ಬಳ್ಳಿಯಿಂದ ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಇಮ್ಮಿಯಾಝ್ (25) ಕೊಲೆಯಾದ ಯುವಕ. ಗಾರೆ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕುಮಟಾ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರನಲ್ಲಿ ತಂಗಿದ್ದ. ಈತನ ಜೊತೆ ಹುಬ್ಬಳ್ಳಿ ಮೂಲದ ಮೊಯುದ್ದೀನ್, ಮೌನೇಶ್ ಹಾಗೂ ಸಾದಿಕ್ ಕೂಡ ಇದ್ದರು. ಇಮ್ಮಿಯಾಝ್ ಕೊಲೆಯ ಬಳಿಕ ಜೊತೆಗಿದ್ದ …
Read More »
Shaikh BigTv
October 28, 2024
Breaking News, ಧಾರವಾಡ
ನವಲಗುಂದ : ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ ಮೆಣಸಿನ ಗಿಡ, ಈರುಳ್ಳಿ ಬೆಳೆ ಸೇರಿ ಹಲವು ಬೆಳೆಗಳು ಹಾಳಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕಂದಾಯ ಇಲಾಖೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿವೆ. ತಾಲೂಕಿನ ತಿರ್ಲಾಪುರ ಗ್ರಾಮದ ರೈತ ವಿರೂಪಾಕ್ಷಯ್ಯ ಬಸಲಿಂಗಯ್ಯ ಹಿರೇಮಠ ಅವರ ಅರೇಕುರಹಟ್ಟಿ ಹದ್ದಿನ ಜಮೀನಿನಲ್ಲಿ ಹತ್ತಿ ಬೆಳೆ ಹಾಳಾಗಿರುವುದನ್ನು ತಹಶೀಲ್ದಾರ ಸುದೀರ್ ಸಾಹುಕಾರ ಅವರು …
Read More »
BigTv News
October 28, 2024
Breaking News, ಬೆಂಗಳೂರು
ಬೆಂಗಳೂರು: ಈ ಬಾರಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸುರಿದ ವಾಡಿಕೆಗಿಂತ ಹೆಚ್ಚು ಮಳೆಯ ಕಾರಣ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಮಳೆಯಿಂದಾಗಿ ಮನೆಗಳು ಸಹ ಹಾನಿಯಾಗಿವೆ ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಮುಂದಿನ 15 ದಿನಗಳಲ್ಲಿ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆ ಕೋಡಿ ವೀಕ್ಷಣೆ ಮಾಡಿದರು, ಹಿರೇಮಲ್ಲನಹೊಳೆಯಲ್ಲಿ …
Read More »
BigTv News
October 28, 2024
Breaking News, ವಿಜಯಪುರ
ವಿಜಯಪುರ: ಜಿಲ್ಲೆಯ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಿರುವ ವಿಚಾರವು ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ಮತ್ತೊಂದೆಡೆ ಇದೇ ವಿಚಾರ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ದೇಶನದಂತೆ ಒಂದು ತಂಡ ಕೂಡ ರಚನೆಯಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೊಳಗಾದ ರೈತರ ಅಹವಾಲು ಸ್ವೀಕರಿಸಲು ರಾಜ್ಯ ಬಿಜೆಪಿ ವತಿಯಿಂದ ತಂಡ ರಚಿಸಲಾಗಿದೆ. ಈ ತಂಡವು ಅಕ್ಟೋಬರ್ 29ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದೆ. …
Read More »
BigTv News
October 28, 2024
Breaking News
ನವದೆಹಲಿ: ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಎಂ ಎಸ್ ಪಿ ಅನ್ನು 2013-14 ರಲ್ಲಿ ಭತ್ತಕ್ಕೆ(ಸಾಮಾನ್ಯ) ಕ್ವಿಂಟಾಲ್ ಗೆ 1310 ರೂ. ನಿಂದ 2024-25 ರಲ್ಲಿ 2300 ರೂ. ಗೆ ಹೆಚ್ಚಿಸಲಾಗಿದೆ. ಪಂಜಾಬ್ ರಾಜ್ಯದಲ್ಲಿ ಭತ್ತ ಮತ್ತು ಕಸ್ಟಮ್ ಮಿಲ್ಡ್ ರೈಸ್(ಸಿಎಂಆರ್) ಖರೀದಿ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಕಾಲದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಪ್ರತಿಭಟನಾ …
Read More »
BigTv News
October 28, 2024
Breaking News, ಬೀದರ್
ಬೀದರ್: ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಟಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ನಗರದ ಸಿಂದೋಲ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ದಿ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾರು ಖರೀದಿ, ನಿವೇಶನ ಮತ್ತು ಮನೆ ನಿರ್ಮಾಣಕ್ಕೆ, ಲಗ್ನಕ್ಕೆ ಸಹಕಾರಿ ಬ್ಯಾಂಕುಗಳು ಸಾಲ ಕೊಡುತ್ತವೆ ಆದರೆ, ಕೈಗಾರಿಕೆಗಳ ಸ್ಥಾಪನೆಗೆ ಸಾಲ ಕೊಡುವುದಿಲ್ಲ. …
Read More »
BigTv News
October 28, 2024
Breaking News, ಬಳ್ಳಾರಿ
ಬಳ್ಳಾರಿ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮೂಲಕ ಜಿಲ್ಲೆಯ ತೋರಣಗಲ್‌ನ ಜಿಂದಾಲ್ ಸಂಸ್ಥೆಗೆ 35 ಟನ್ ನಂದಿನಿ ಮೈಸೂರು ಪಾಕ್ ಅನ್ನು ಪೂರೈಕೆ ಮಾಡಲಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದ (ರಾಬಕೊವಿ) ಮಧ್ಯಸ್ಥಿಕೆಯಲ್ಲಿ ಈ ವ್ಯಾಪಾರ ನಡೆದಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೀರ್ಯ ನಾಯಕ್ ಅವರು ತಿಳಿಸಿದರು. ಅರ್ಧ ಕೆ.ಜಿ ತೂಕದ ಒಟ್ಟು 70 ಸಾವಿರ ಪ್ಯಾಕೆಟ್‌ಗಳಲ್ಲಿ ಸಿಹಿ ಉತ್ಪನ್ನವನ್ನು ಪೂರೈಕೆ ಮಾಡಲಾಗಿದೆ. …
Read More »
BigTv News
October 27, 2024
Breaking News
ಕೋಲ್ಕತಾ: ಒಳನುಸುಳುವಿಕೆ ತಡೆಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸುವಂತೆ ಮಾಡಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಗಡಿಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ನೂತನ ಟರ್ಮಿನಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸಲು ಗಡಿಗಳಲ್ಲಿ ನುಸುಳುವಿಕೆ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಗತ್ಯವಾಗಿದೆ. 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸೆಯನ್ನು ತಡೆಯಲಾಗುವುದು ಎಂದು ತಿಳಿಸಿದರು. …
Read More »
Shaikh BigTv
October 27, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅತೀದೊಡ್ಡ ಮಾರುಕಟ್ಟೆಯನ್ನು ಹೊಂದಿದ ನಮ್ಮ ಹುಬ್ಬಳ್ಳಿಯ ಎಪಿಎಮ್‌ಸಿಯಲ್ಲಿ, ಕೊಳೆತ ಟಮೊಟೆ ಮಾರುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಕಳಸಿದ್ದಾರೆ. ಬೆಳಗಿನ ಜಾವ ಹುಬ್ಬಳ್ಳಿ ಎಪಿಎಮ್‌ಸಿಯಲ್ಲಿ ತರಕಾರಿ ಮಾರಾಟ ಮಾಡಿಕೊಂಡು ನಂತರ, ನಗರದ ವಿವಿಧ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಾರೆ. ದಿನಂಪ್ರತಿ ಮಾರಾಟ ಮಾಡುವ ವೇಳೆ ಟಮೊಟೆಗಳು ಕೊಳೆತು ಹುಳ ಹತ್ತಿದ್ದ ಟಮೊಟೆಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಮಾಡಿ ಕಳಿಸಿದ್ದಾರೆ. ಈ ಬಗ್ಗೆ ಎಪಿಎಮ್‌ಸಿ ಅಧ್ಯಕ್ಷರು ಇತ್ತ ಗಮನಿಸಬೇಕಾಗಿದೆ.
Read More »
BigTv News
October 27, 2024
Breaking News, ಶಿವಮೊಗ್ಗ
ಶಿವಮೊಗ್ಗ : ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಗೃಹ ಸಚಿವ ಜಿ.ಪರಮೇಶ್ವರ್ ಪೊಲೀಸರಿಗೆ ತಾಕೀತು ಮಾಡಿದರು. ನಗರದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿದ ಬಳಿಕ ಶಿವಮೊಗ್ಗ ಜಿಲ್ಲಾ ವಿಮರ್ಶನಾ ಸಭೆಯಲ್ಲಿ ಅವರು ಮಾತನಾಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ಓದಿಗಾಗಿ ಗ್ರಂಥಾಲಯಗಳಲ್ಲಿ ಹೆಚ್ಚಿನ …
Read More »