Shaikh BigTv
October 10, 2024
Breaking News, ಧಾರವಾಡ
ಧಾರವಾಡ: ಸಂಪಿಗೆನಗರ, ನೀಲ ಸಿಟಿ, ವ್ಯಾಸ ವಿಹಾರ ಲೇಔಟ್, ಶ್ರೀಶ್ ರೆಸಿಡೆನ್ಸಿ ಲೇಔಟ್‌ಗಳಲ್ಲಿ ವ್ಯಾಪಕವಾಗಿ ಮಳೆ ನೀರು ನುಗ್ಗಿದೆ. ಮನೆಯ ಮುಂದೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಜನ ಹೊರಗಡೆ ಬರಲೂ ಆಗುತ್ತಿಲ್ಲ. ನೀರಿನೊಂದಿಗೆ ಹಾವು, ಚೇಳುಗಳು ಸಹ ಬರುತ್ತಿದ್ದು, ಜನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಪ್ರೋಣ್ ಕ್ಯಾಮೆರಾ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಸ್ಥಳೀಯರು …
Read More »
Shaikh BigTv
October 10, 2024
Breaking News, ಧಾರವಾಡ
ಕುಂದಗೋಳ : ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಇಂದು ಬೆಳಿಗ್ಗೆವರೆಗೂ ಸುರಿದ ಧಾರಾಕಾರ ಮಳೆಗೆ ರೈತಾಪಿ ಜನ ಕಿತ್ತು ಕೈ ಬಿಟ್ಟ ಶೇಂಗಾ, ಸೋಯಾಬಿನ್ ಸೇರಿದಂತೆ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾಗಿವೆ. ಇನ್ನೂ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಕೆರೆ ಕಾಲುವೆ ಒಡೆದು ಅಕ್ಕಪಕ್ಕದ ಹೊಲಗಳಿಗೆ ರಭಸದಿಂದ ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಸದ್ಯ ನೀರಿನ ವೇಗ ಹೆಚ್ಚುತ್ತಿರುವ ಕಾರಣ ರೈತಾಪಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. …
Read More »
Shaikh BigTv
October 10, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಬಹುದೊಡ್ಡ ಉದ್ಯಮಿ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ. ತತ್ವ ಸಿದ್ಧಾಂತಗಳ ಮೇಲೆ ಜೀವನ ನಡೆಸಿದ ರತನ್ ಟಾಟಾ ಅವರು, ತಮ್ಮ ಉಜ್ವಲ ಭವಿಷ್ಯದ ಮೂಲಕ ಯುವ ಉದ್ಯಮಿಗಳಿಗೆ ಸಾಕಷ್ಟು ಪ್ರೇರಣೆಯಾಗಿದ್ದ ಬಹುದೊಡ್ಡ ಸಾರ್ಥಕ ಸಾಧಕರು ರತನ್ ಟಾಟಾ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಕಂಬನಿ ಮಿಡಿದಿದ್ದಾರೆ. ರತನ್ ಟಾಟಾ ಅವರ ನಿಧನದ …
Read More »
Shaikh BigTv
October 10, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕುಸುಗಲ್ ರಸ್ತೆಯಲ್ಲಿರುವ ಕುಬೇರಪುರಂನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿನೂತನ ರೀತಿಯಲ್ಲಿ ಶ್ರೀನಿವಾಸ ಕಲ್ಯಾಣವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಆರಂಭದಲ್ಲಿಯೇ ವಿಶ್ವೇಶ್ವರ ಪೂಜೆ ಸಲ್ಲಿಸುವ ಮೂಲಕ ಕಲ್ಯಾಣ ಕಾರ್ಯಕ್ರಮ ನಡೆಸಿದ್ದು, ಮಹಿಳೆಯರು, ಮಕ್ಕಳು ಮದುವೆ ಮನೆಯಲ್ಲಿ ಲವಲವಿಕೆಯಿಂದ ಓಡಾಡುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ನೃತ್ಯ, ಸಂಗೀತ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮಕ್ಕೆ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್, ಪಾಲಿಕೆ ಸದಸ್ಯೆ ಉಮಾ ಮುಕುಂದ ಆಗಮಿಸಿದ್ದು, ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದೇ …
Read More »
Shaikh BigTv
October 10, 2024
Breaking News, ಧಾರವಾಡ
ಕುಂದಗೋಳ : ರಾತ್ರೋರಾತ್ರಿ ಗುಡೇನಕಟ್ಟಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಯಾರೋ ಸದ್ದಿಲ್ಲದೆ ಪ್ರತಿಷ್ಠಾಪನೆ ಮಾಡಿದ್ದು ಸಂಪೂರ್ಣ ಗ್ರಾಮವೇ ಗೊಂದಲಕ್ಕೆ ಸಿಲುಕಿದೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ 5 ರಿಂದ 6 ಫೂಟ್ ಎತ್ತರದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಯಾರು ಈ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ, ಮಾರುತಿ ದೇವಸ್ಥಾನದ ಬಳಿಯಿರುವ ಸರ್ಕಲ್’ನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಸಿಸಿ ಕ್ಯಾಮೆರಾ ವ್ಯವಸ್ಥೆ …
Read More »
BigTv News
October 10, 2024
Breaking News, ಮಂಡ್ಯ
ಮಂಡ್ಯ: ಜಿಲ್ಲೆಯ ವ್ಯಕ್ತಿಯೊಬ್ಬ 500 ರೂಪಾಯಿ ಕೊಟ್ಟು ಕೇರಳದ ಲಾಟರಿ ಟಿಕೆಟ್ ಖರೀದಿಸಿದ್ದರು ಅವರ ಅದೃಷ್ಟ ಖುಲಾಯಿಸಿದೆ. 500 ರೂ ಕೊಟ್ಟು ಖರೀದಿಸಿದಂತ ಲಾಟರಿಗೆ ಬರೋಬ್ಬರಿ 25 ಕೋಟಿ ಬಹುಮಾನ ಬಂದಿದೆ ಈ ಮೂಲಕ ಮಂಡ್ಯದ ಕುವರನೊಬ್ಬ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಕೇರಳ ಲಾಟರಿಯಲ್ಲಿ ಮಂಡ್ಯದ ಕುವರನೊಬ್ಬ ಕೋಟಿ ಕೋಟಿ ಗೆದ್ದಿದ್ದಾನೆ. ಪಾಂಡವಪುರ ಪಟ್ಟಣದ ವ್ಯಕ್ತಿಗೆ ಒಲಿದ 25 ಕೋಟಿ ಬಹುಮಾನ ಬಂದಿದೆ. ಪಾಡವಪುರ ನಗರದ ಸ್ಕೂಟರ್ ಮೆಕ್ಯಾನಿಕ್ ಅಲ್ತಾಫ್ …
Read More »
BigTv News
October 10, 2024
Breaking News, ತುಮಕೂರು
ತುಮಕೂರು: ಅವೈಜ್ಞಾನಿಕವಾಗಿ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿ ಜನಗಣತಿ) ವರದಿಯನ್ನು ತಿರಸ್ಕರಿಸಿ ಮತ್ತೊಮ್ಮೆ ಗಣತಿ ನಡೆಸಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಒತ್ತಾಯಿಸಿದರು. ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಜನಗಣತಿಗೆ ಕಾಂಗ್ರೆಸ್‌ನಲ್ಲೇ ವಿರೋಧ ವ್ಯಕ್ತವಾಗಿದ್ದು, ಯಾವುದೇ ಜಾತಿ, ಸಮುದಾಯಕ್ಕೂ ಅನ್ಯಾಯವಾಗಬಾರದು. ಮತ್ತೊಮ್ಮೆ ವೈಜ್ಞಾನಿಕವಾಗಿ ಗಣತಿ ನಡೆಸಬೇಕು ಎಂದು ಆಗ್ರಹಿಸಿದರು. ಜಾತಿ ಜನಗಣತಿ …
Read More »
BigTv News
October 10, 2024
Breaking News
ನವದೆಹಲಿ: 2 ಪರಮಾಣು ಸಾಮರ್ಥ್ಯದ ಸಬ್ ಮೇರಿನ್ ನಿರ್ಮಾಣ ಹಾಗೂ 31 ಪ್ರೀಡಿಯೇಟರ್ ಡ್ರೋಣ್ ಗಳ ಖರೀದಿಗೆ 80 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ರಕ್ಷಣಾ ಸಮಿತಿ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ನೌಕಾಪಡೆ ಬಲವರ್ಧನೆಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಲು ತೀರ್ಮಾನಿಸಲಾಯಿತು. ಇದರಿಂದ ಭಾರತದ ಬಳಿ ಸಬ್ ಮೇರಿನ್ ಗಳ ಸಂಖ್ಯೆ 5ಕ್ಕೆ ಏರಿಕೆಯಾಗಲಿದೆ, ಸಮುದ್ರದಲ್ಲಿ ಭಾರತ …
Read More »
BigTv News
October 10, 2024
Breaking News
ನವದೆಹಲಿ: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಐತಿಹಾಸಿಕ ವಿಜಯವನ್ನು ದಾಖಲಿಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಮಂತ್ರಿಮಂಡಲದ ಸಭೆಯ ಅಧ್ಯಕ್ಷತೆ ವಹಿಸಿದರು ಮತ್ತು ತಮ್ಮ ಸಹೋದ್ಯೋಗಿಗಳಿಗೆ ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಸಂದೇಶವನ್ನು ನೀಡಿದರು. ಇದು ಅವರ ಮೂರನೇ ಅವಧಿಯಲ್ಲಿ ಮಂತ್ರಿಮಂಡಲದ ಎರಡನೇ ಸಭೆಯಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ವೇದಿಕೆಯಾದ ಐಜಿಒಟಿಯಲ್ಲಿ ಆಯಾ ಇಲಾಖೆಗಳ ಎಲ್ಲಾ ಅಧಿಕಾರಿಗಳು ತಮ್ಮ ತರಬೇತಿ ಮಾಡ್ಯೂಲ್ಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಸಚಿವರಿಗೆ …
Read More »
BigTv News
October 10, 2024
Breaking News
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ನ ಒಂದು ಗೇಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಗೇಟ್ ಮುಚ್ಚುವುದು ಸಾಧ್ಯವಾಗುತ್ತಿಲ್ಲ. ಇನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ನಿಂದ 3 ಗೇಟ್ ಗಳ ಮೂಲಕ ನೀರು ಹೊರ ಹಾಕಲಾಗುತ್ತಿತ್ತು. ಮೂರು ಗೇಟ್ ಬಂದ್ ಮಾಡುವ ಸಂದರ್ಭದಲ್ಲಿ 7 ನೇ ನಂಬರ್ ಗೇಟ್ ಬಂದ್ ಆಗಲಿಲ್ಲ. ಸದ್ಯ ಯುಕೆಪಿ ಎಂಜಿನಿಯರ್ ಗಳು ಪರಿಶೀಲನೆ ನಡೆಸಿದ್ದು, ತಾಂತ್ರಿಕ …
Read More »