Breaking News

Breaking News

ಲಾವೋಸ್ ಗೆ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸ

ನವದೆಹಲಿ: ಆಸಿಯಾನ್ ಅಂದರೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಪ್ರವಾಸದಲ್ಲಿ ಲಾವೋಸ್‌ಗೆ ತೆರಳುತ್ತಿದ್ದಾರೆ. ಲಾವೋಸ್ ಒಂದು ಚಿಕ್ಕ ದೇಶವಾಗಿದ್ದು, ಇದರ ಒಟ್ಟು ಜನಸಂಖ್ಯೆ ಕೇವಲ 75 ಲಕ್ಷವಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಡ್ರ್ಯಾಗನ್‌ನ ಪ್ರಾಬಲ್ಯ ಎಲ್ಲರಿಗೂ ತಿಳಿದಿದೆ ಈ ಪ್ರದೇಶದಲ್ಲಿ ತನ್ನ ಎಲ್ಲಾ ನೆರೆಹೊರೆಯವರನ್ನು ಬೆದರಿಸುವುದಕ್ಕೆ ಚೀನಾ ಪ್ರಯತ್ನಿಸುತ್ತಿದೆ. ಈ ದೇಶಗಳಲ್ಲಿ ಲಾವೋಸ್ ಕೂಡ ಸೇರಿದೆ, 2014ರಲ್ಲಿ …

Read More »

ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ಮಾಡುವ ಆಯ್ಕೆ ಸಮಿತಿಗೆ ಜೆ.ಅಬ್ಬಾಸ್ ಮುಲ್ಲಾ ಆಯ್ಕೆ

ಹುಬ್ಬಳ್ಳಿ/ಬೆಂಗಳೂರು: ಕರ್ನಾಟಕ ಸರ್ಕಾರದ ಅಧೀನದ ವಾರ್ತಾ ಇಲಾಖೆಯಿಂದ ಕೊಡಮಾಡುವ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ಮಾಡುವ ಆಯ್ಕೆ ಸಮಿತಿಗೆ ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾ ಆಯ್ಕೆಯಾಗಿದ್ದಾರೆ. ಮಹಾನ ಸಾಧಕರ ಪ್ರಶಸ್ತಿಯನ್ನು ಅರ್ಹರನ್ನು ಆಯ್ಕೆ ಮಾಡುವ ಸಮಿತಿಗೆ ಆಯ್ಕೆಯಾಗಿರುವುದು ಹುಬ್ಬಳ್ಳಿಗೆ ಹೆಮ್ಮೆಯ ಸಂಗತಿಯಾಗಿದೆ. ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ‘ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ’ಗೆ ಅರ್ಹರನ್ನು ಆಯ್ಕೆ …

Read More »

ರಾಜಸ್ಥಾನದಲ್ಲಿ 7 ಕೋಟಿ ಮೌಲ್ಯದ ಡ್ರಗ್ಸ್ ವಶ: ಆರೋಪಿ ಬಂಧನ

ಜೈಪುರ: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ₹7 ಕೋಟಿ ಮೌಲ್ಯದ 3.5 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ತೋರಗಢ ನೀಮಚ್ ಹೆದ್ದಾರಿಯಲ್ಲಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿತ್ತೋರಗಢ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಜೋಶಿ ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಪೊಲೀಸ್‌ ಸಿಬ್ಬಂದಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಕಾರಿನ ಚಾಲಕ ನಿಲ್ಲಿಸುವ ಬದಲು, ಕಾರಿನ ವೇಗ ಹೆಚ್ಚಿಸಿ …

Read More »

ಆಂಧ್ರ ಪ್ರದೇಶದ ವೈಝಾಗ್ ನಲ್ಲಿ ಐಟಿ ಕೇಂದ್ರ ಸ್ಥಾಪನೆ

ವೈಝಾಗ್: ರತನ್ ಟಾಟಾ ಕಟ್ಟಿದ ಉದ್ಯಮ ಸಾಮ್ರಾಜ್ಯದಲ್ಲಿ ಟಿಸಿಎಸ್(ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಕೂಡ ಒಂದು. ಇದೀಗ ಟಿಸಿಎಸ್ ಹಾಗೂ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಆಂಧ್ರ ಪ್ರದೇಶದ ವೈಝಾಗ್‌ನಲ್ಲಿ ಐಟಿ ಕೇಂದ್ರ ಸ್ಥಾಪನೆ ಮಾಡಲು ಟಿಸಿಎಸ್ ಮುಂದಾಗಿದೆ. ಈ ಐಟಿ ಕೇಂದ್ರದಿಂದ ಬರೋಬ್ಬರಿ 10,000 ಮಂದಿಗೆ ಉದ್ಯೋಗವಕಾಶ ಸಿಗಲಿದೆ. ಈ ಕುರಿತು ಆಂಧ್ರ ಪ್ರದೇಶ ಸಂಪುಟ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ …

Read More »

ಹರಿಯಾಣ ವಿಧಾನಸಭಾ ಫಲಿತಾಂಶವು ಅನಿರೀಕ್ಷಿತ: ರಾಹುಲ್ ಗಾಂಧಿ

ನವದೆಹಲಿ: ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿ ಕಾಂಗ್ರೆಸ್‌ ಗೆಲ್ಲಬಹುದು ಎಂದಿದ್ದ ಸಮೀಕ್ಷೆಗಳೆಲ್ಲ ತಲೆಕೆಳಗಾಗಿ ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿರುವ ಹೊತ್ತಿನಲ್ಲೇ, ಇದು ಅನಿರೀಕ್ಷಿತ ಫಲಿತಾಂಶ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕೇಳಿಬಂದ ದೂರುಗಳ (ಮತ ಎಣಿಕೆ/ಇವಿಎಂ ಕುರಿತ ದೂರು) ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಿದ್ದೇವೆ ಎಂದಿದ್ದಾರೆ. ಫಲಿತಾಂಶ ಘೋಷಣೆ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಅನ್ನು ಬೆಂಬಲಿಸಿದ …

Read More »

ಸುರಿಯುವ ಮಳೆಯಲ್ಲಿಯೇ ಹೊತ್ತಿ ಉರಿದ ಕಾರ್

ಹುಬ್ಬಳ್ಳಿ: ಆಕಸ್ಮಿಕವಾಗಿ ಕಾರ್‌ವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುರಿಯುವ ಮಳೆಯಲ್ಲಿಯೇ ಕಾರ್‌ವೊಂದು ಹೊತ್ತಿ ಉರಿದಿರುವ ಘಟನೆ ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಯ ಎದುರಿನ ರಸ್ತೆಯಲ್ಲಿ ನಡೆದಿದೆ. ಖಾಸಗಿ ಹೊಟೇಲ್ ಮುಂದೆಯೇ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿದ್ದು, ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲದೇ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಂಶಯ ವ್ಯಕ್ತವಾಗಿದ್ದು, ಕಾರಿನ ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

Read More »

ಮಳೆಯಿಂದಾಗಿ ಧಾರವಾಡ ಬೈಪಾಸ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಧಾರವಾಡ: ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿ, ಧಾರವಾಡ ಬೈಪಾಸ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಈ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಯರಿಕೊಪ್ಪ ಗ್ರಾಮದ ಬಳಿಯ ಮನಸೂರು ಹಳ್ಳಕ್ಕೆ ದೊಡ್ಡ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ನೀರು ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲೂ ಹರಿದು ಬರುತ್ತಿದ್ದು, ಇದರಿಂದ ವಾಹನಗಳು ಸಂಚಾರ ನಡೆಸದೇ ಸಾಲುಗಟ್ಟಿ ನಿಂತಿವೆ. ನಿನ್ನೆ ರಾತ್ರಿಯಿಂದಲೇ ಈ ರಸ್ತೆಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಸ್ತೆ …

Read More »

ಭಾರಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತ

ಹುಬ್ಬಳ್ಳಿ: ಭಾರೀ ಮಳೆಯಿಂದಾಗಿ ಕೆಲವೊಂದು ಏರಿಯಾಗಳು ಕೆರೆಯಂತಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 32 ರಲ್ಲಿ ಬರುವ ಆನಂದ ನಗರದ ಗೌತಮ ಕಾಲೋನಿ, ಜೈ ಹನುಮಾನ್ ನಗರದಲ್ಲಿ ರಸ್ತೆ ಮೇಲೆ ನೀರು ಕೆರೆಯಂತೆ ನಿಂತಿದೆ. ಅಷ್ಟೇ ಅಲ್ಲೇ ಮನೆ ಒಳಗೆ ನೀರು ನುಗ್ಗಿದ್ದು ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಹೀಗೆ ನೀರು ನಿಲ್ಲುವುದಕ್ಕೆ ಮುಖ್ಯ ಕಾರಣವೆಂದ್ರೆ ಸೂಕ್ತವಾದ ರಸ್ತೆ ಇಲ್ಲ, …

Read More »

ಅಮೆರಿಕ ಕಡಲ ತೀರಕ್ಕೆ ಅಪ್ಪಳಿಸಿದ ಮಿಲ್ಟನ್ ಚಂಡಮಾರುತ: 2 ಲಕ್ಷ ಜನರ ಸ್ಥಳಾಂತರ

ಅಮೆರಿಕ: ಭೀಕರ ಮಿಲ್ಟನ್ ಚಂಡಮಾರುತ ಅಮೆರಿಕದ ಫ್ಲೋರಿಡಾದ ಕಡಲ ತೀರಕ್ಕೆ ಅಪ್ಪಳಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 2 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಎರಡು ವಾರಗಳ ಹಿಂದೆ ಅಟ್ಲಾಂಟಿಕಾ ಸಾಗರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಒಂದೇ ಬಾರಿ ಸೃಷ್ಟಿಯಾದ ಮೂರು ಚಂಡಮಾರುತಗಳ ಪೈಕಿ ಒಂದಾದ ಮಿಲ್ಟನ್ ಚಂಡಮಾರುತ ಗುರುವಾರ ಬೆಳಿಗ್ಗೆ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದೆ. 120 ಕಿ.ಮೀ. ವೇಗದಲ್ಲಿ ಚಂಡಮಾರುತ ಚಲಿಸುತ್ತಿದೆ. ಇದರಿಂದ ಭಾರೀ ಪ್ರಮಾಣದ ಹಾನಿ …

Read More »

ಮೈಸೂರು ದಸರಾ ವೀಕ್ಷಣೆಗೆ ವಿಶೇಷ ರೈಲು ಸೇವೆ

ಮೈಸೂರು: ನಾಡಹಬ್ಬ ದಸರಾ ಸಂಭ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದು, ದಟ್ಟಣೆ ತಪ್ಪಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗವು ವಿಶೇಷ ರೈಲು ಸೇವೆ ಆರಂಭಿಸಿದೆ. ಅರಸೀಕೆರೆ- ಮೈಸೂರು ರೈಲು ಅ.10ರಿಂದ ಅ.12ರ ವರೆಗೆ ಮೂರು ಟ್ರಿಪ್‌ ಓಡಾಡಲಿದೆ. ಮಧ್ಯಾಹ್ನ 2 ಗಂಟೆಗೆ ಅರಸೀಕೆರೆಯಿಂದ ಹೊರಟು ಸಂಜೆ 6.40ಕ್ಕೆ ಮೈಸೂರು ತಲುಪಲಿದೆ. ಸಂಜೆ 6.50ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 11.45ಕ್ಕೆ ತಲುಪಲಿದೆ. ಬೆಳಗಾವಿ- ಮೈಸೂರು ರೈಲು ಬೆಳಗಾವಿಯನ್ನು …

Read More »