Shaikh BigTv
September 29, 2024
Breaking News, ಧಾರವಾಡ
ಕುಂದಗೋಳ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆದ ಸದುಪಯೋಗ ಆಗಬೇಕು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬೆಳೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡದೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು. ಅವರು ಯಲಿವಾಳ ಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಬಳಿಕ ತಹಶೀಲ್ದಾರ್ ರಾಜು ಮಾವರಕರ ಮಾತನಾಡಿ ಹೆಸರು ಖರೀದಿ ಕೇಂದ್ರದ ನಂತರದಲ್ಲಿ ಉದ್ದು, ಸೋಯಾಬಿನ್ ಖರೀದಿ ಸಹ ಆರಂಭವಾಗಲಿದೆ …
Read More »
Shaikh BigTv
September 29, 2024
Breaking News, ಧಾರವಾಡ
ನವಲಗುಂದ: ಪಟ್ಟಣದ ಶೆಟ್ಟರ ಕೆರೆಯ ಹತ್ತಿರ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಟಿಸಿ ಕಂಪನಿಯ ನಕಲಿ ಸಿಗರೇಟ್ ವಾಹನವನ್ನು ಇಂದು ಬೆಳಿಗ್ಗೆ ಪೊಲೀಸರು ಹಾಗೂ ಐಟಿಸಿ ಕಂಪನಿಯವರ ದಾಳಿ ಮಾಡಿ ಲಕ್ಷಾಂತರ ರೂಪಾಯಿ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಸಿಗರೇಟ್ ಮಾರಾಟಗಾರ ಮಹಮ್ಮದ್ ನೌಶಾದ್ ಮೋಹಿದ್ದಿನ್ (24) ಉಡುಪಿಯ ಸಂತೇಕಟ್ಟಿ ಗ್ರಾಮದ ಈತ ಬೆಳಗಾವಿದಿಂದ ಬಿಜಾಪುರ್, ಬಾಗಲಕೋಟೆ ಸೇರಿದಂತೆ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಾ ಬರುತ್ತಿದ್ದ. …
Read More »
Shaikh BigTv
September 29, 2024
Breaking News, ಧಾರವಾಡ
ಧಾರವಾಡ: ಗೊಲ್ಲರ ಕಾಲೊನಿಯ ನಜೀರಸಾಬ್ ಅತ್ತಾರ (68) ಎಂಬ ವ್ಯಕ್ತಿಯೇ ಬಡ್ಡಿ ಕಿರುಕುಳದಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ. ನಜೀರಸಾಬ್ ಚುರುಮುರಿ ವ್ಯಾಪಾರಸ್ಥರು. ಖಾಸಗಿ ವ್ಯಕ್ತಿ ಕಡೆಯಿಂದ 1.20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ನಜೀರ್‌ಸಾಬ್ ಕಳೆದ ಎರಡು ವರ್ಷಗಳಿಂದ 2.50 ಲಕ್ಷ ರೂಪಾಯಿ ಬಡ್ಡಿಯನ್ನೇ ಕಟ್ಟಿದ್ದರು. ಕಳೆದ ಎರಡು ತಿಂಗಳಿನಿಂದ ಬಡ್ಡಿ ಕಟ್ಟಿಲ್ಲ ಎಂದು ಆ ಖಾಸಗಿ ವ್ಯಕ್ತಿ …
Read More »
Shaikh BigTv
September 29, 2024
Breaking News, ಹುಬ್ಬಳ್ಳಿ
ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ಸಂಘಗಳು, ಪಂಚಾಯತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅಕ್ಟೋಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಪಿಡಿಓ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾವತಿ ಮೇದಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಂಚಾಯತಿ ಕಚೇರಿಯಿಂದ ಮೂಲಭೂತ ಸೌಕರ್ಯ ಹೊರತುಪಡಿಸಿ ಉಳಿದೆಲ್ಲಾ ಸೌಲಭ್ಯದಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಗುವುದು. …
Read More »
Shaikh BigTv
September 29, 2024
Breaking News, ಧಾರವಾಡ
ಧಾರವಾಡ: ಮುರುಘಾಮಠಕ್ಕೆ ನಮಸ್ಕರಿಸಲೆಂದು ಬರುತ್ತಿದ್ದ ಇಬ್ಬರು ಬಾಲಕರು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗುತ್ತಿದ್ದರು.ಈ ದೃಶ್ಯವನ್ನು ಇಂದು ಸಿಸಿಟಿವಿಯಲ್ಲಿ ಗಮನಿಸಿದ ಮಠದ ಸಿಬ್ಬಂದಿ ಹಾಗೂ ಸಾರ್ವಜನಿಕರು, ಆ ಬಾಲಕರನ್ನು ಹಿಡಿದು ಅವರ ಬಟ್ಟೆ ಬಿಚ್ಚಿಸಿ ಬುದ್ಧಿವಾದ ಹೇಳಿದ್ದಾರೆ. ಪ್ರತಿದಿನ ನಮಸ್ಕಾರ ಮಾಡಲೆಂದು ಈ ಬಾಲಕರು ಬರುತ್ತಿದ್ದರು. ವಾಪಸ್ ಹೋಗುವಾಗ ಹುಂಡಿಯಲ್ಲಿ ಹಣ ಕದ್ದು ಪರಾರಿಯಾಗುತ್ತಿದ್ದರು. ಕಳೆದ ಎರಡು ವರ್ಷದಿಂದ ಇವರು ಆಗಾಗ ಮಠಕ್ಕೆ ಬಂದು ಕಳ್ಳತನ ಮಾಡುತ್ತಿದ್ದರು. ಹಾಗೂ ಮಠದ …
Read More »
Shaikh BigTv
September 28, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಲ್ಯಾಪ್ ಟಾಪ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ, ಕಾರ್ಮಿಕ ಇಲಾಖೆಯಲ್ಲಿ ನಡೆದಿದ್ದ ಲ್ಯಾಪ್ ಟಾಪ್ ಕಳ್ಳತನ ಪ್ರಕರಣದಲ್ಲಿ 26 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸರಿಂದ ಲ್ಯಾಪ್ ಟಾಪ್ ಗಳ ವಶಕ್ಕೆ ಪಡೆಯಲಾಗಿದೆ ಕಾರ್ಮಿಕರ ಮಕ್ಕಳಿಗಾಗಿ ಇದ್ದ 101 ಲ್ಯಾಪ್ ಟಾಪ್ ಕಳುವಾಗಿದ್ದವು, ಸೆಪ್ಟೆಂಬರ್ …
Read More »
Shaikh BigTv
September 28, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅವಳಿ ನಗರದಲ್ಲಿ ಗಾಂಜಾ ಗುಂಗಲ್ಲಿದ್ದ ಮಾದಕ ವ್ಯಸನಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು ಇಂದು 518 ಜನರಿಗೆ ವೈದ್ಯಕೀಯ ಪರೀಕ್ಷೆ, ಈ ಪೈಕಿ 147 ಜನರಿಗೆ ಪಾಸಿಟಿವ್ ಬಂದಿದ್ದು ಈ ಕುರಿತು 34 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಜಾಗೃತಿ ಸಭೆ ಮಾದಕ ವ್ಯಸನಿ ಹಾಗೂ ಪೆಡ್ಲರ್ ಗಳಿಗೆ ಪೊಲೀಸ್ ರು ಪಾಲಕರ ಸಮ್ಮುಖದಲ್ಲಿ ವ್ಯಸನಿಗಳಿಗೆ ಬುದ್ದಿವಾದ …
Read More »
BigTv News
September 28, 2024
Breaking News, ಮಹಾರಾಷ್ಟ್ರ
ಮುಂಬಯಿ: ಮಾಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದು, ಶನಿವಾರ(ಸೆ.28) ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ಸಮ್ಮುಖದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣೆ ಸಿದ್ಧತೆಗಳ ಕುರಿತು ಮಹಾರಾಷ್ಟ್ರದ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಮಹಾರಾಷ್ಟ್ರದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯ …
Read More »
BigTv News
September 28, 2024
Breaking News, ಬೀದರ್
ಬೀದರ್ : ಪೌರ ಕಾರ್ಮಿಕರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿಗೆ ಒಳಪಟ್ಟ 2127 ಪೌರ ಕಾರ್ಮಿಕರನ್ನು ಕಾಯಂಗೊಳಿಸಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ತಿಳಿಸಿದರು. ರಾಜ್ಯ ಪೌರ ನೌಕರರ ಸಂಘದಿಂದ ನಗರದ ಜನವಾಡ ರಸ್ತೆಯಲ್ಲಿರುವ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ …
Read More »
BigTv News
September 28, 2024
Breaking News
ಶ್ರೀನಗರ: ಅಕ್ಟೋಬರ್ 1ರಂದು ನಡೆಯಲಿರುವ 3ನೇ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ರ್ಯಾಲಿಯನ್ನು ನಡೆಸಿದರು. ಈ ವೇಳೆ ಅವರು ಕಾಂಗ್ರೆಸ್, ಅದರ ಮಿತ್ರರಾಷ್ಟ್ರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಹಾಗೇ, ಮೊದಲ ಎರಡು ಹಂತದ ಮತದಾನದ ನಂತರ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಸರ್ಕಾರ …
Read More »