Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಅಂಗಡಿ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 77 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ರಮೇಶ ಮುಂಭಾಗದಲ್ಲಿರುವ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಳ್ಳತನವಾಗಿರುವ ಚಿನ್ನಾಭರಣಗಳಲ್ಲಿ 780 ಗ್ರಾಂ ಚಿನ್ನ, 23.3 ಕೆಜಿ ಮೌಲ್ಯದ ಬೆಳ್ಳಿ ಆಭರಣ, ಕಳ್ಳತನ ಕೃತ್ಯಕ್ಕೆ …
Read More »
Shaikh BigTv
September 5, 2024
Breaking News, ಧಾರವಾಡ
ನವಲಗುಂದ: ನವಲಗುಂದ ನಗರದ ಗಣೇಶ ಗುಡಿ ಕರಾವಳಿ ಪ್ರದೇಶದಲ್ಲಿ ಇಡಗುಂಜಿ ಗಣೇಶ ಪ್ರಖ್ಯಾತಿ ಪಡೆದರೆ ನಂತರದ ಸ್ಥಾನ ಪಡೆದು ರಾಜ್ಯದಲ್ಲೇ ಪ್ರಖ್ಯಾತಿ ಹೊಂದಿದೆ. ಇಲ್ಲಿ ಇದೀಗ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಇಡೀ ರಾಜ್ಯದಲ್ಲೇ ಗಮನ ಸೆಳೆದ ನವಲಗುಂದ-ನರಗುಂದ ಬಂಡಾಯ ನೆಲದಲ್ಲಿ ಒಂದು ವಿಶಿಷ್ಟವಾದ ಚರಿತ್ರೆ ಇದೆ. ಅಜಾತ ನಾಗಲಿಂಗ ಸ್ವಾಮೀಜಿ ಅವರ ಪವಾಡ, ಗವಿಮಠದ ಶ್ರೀ ಬಸಲಿಂಗ ಸ್ವಾಮೀಜಿ ಅದೃಶ್ಯ – ಚರಿತ್ರೆ, ಯಮನೂರಿನ ರಾಜಾಭಾಗಸವಾರ ಹಾಗೂ ಬೇಡಿದ …
Read More »
Shaikh BigTv
September 5, 2024
Breaking News, ಹುಬ್ಬಳ್ಳಿ
ಹುಬ್ವಳ್ಳಿ: ರಾಜ್ಯ ಸರ್ಕಾರ ನಿವೃತ್ತ ನೌಕರರಿಗೆ ಸರ್ಕಾರದಿಂದ ತಾರತಮ್ಯ ಮಾಡಿದೆಂದು ಹೋರಾಟ ಮಾಡುಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 7 ನೇ ವೇತನ ಆಯೋಗವನ್ನು ಹೊರಡಿಸಿದೆ. ಆದ್ರೆ ಪರಿಷ್ಕರಣೆಯಂತೆಯೇ ನೀಡಬೇಕಿದ್ದ ಆರ್ಥಿಕ ಸೌಲಭ್ಯದಲ್ಲಿ ತಾರತಮ್ಯ ಮಾಡಿದೆ. ಇದೇ 18 ರಂದು ಬೆಂಗಳೂರು ಛೆಲೋ ಹೋರಾಟ ಮಾಡಲು ಮುಂದಾಗಿದ್ದಾರೆ. 7 ನೇ ವೇತನ ಆಯೋಗದಂತೆ ನಿವೃತ್ತಿ ವೇತನ ಪಡೆಯಬೇಕಿದ್ದ ನಿವೃತ್ತಿ ಶಿಕ್ಷಕರು, ಆದ್ರೆ ಇವರು ಇನ್ನೂ 6 ನೇ ವೇತನ ಆಯೋಗದ …
Read More »
BigTv News
September 5, 2024
Breaking News
ಬೆಂಗಳೂರು: ಪಡಿತರದಾರರಿಗೆ ಹೆಚ್ಚುವರಿ 5kg ಅಕ್ಕಿಗೆ ಪರ್ಯಾಯವಾಗಿ ನೇರ ನಗದು ವರ್ಗಾವಣೆ ವ್ಯವಸ್ಥೆ ಬದಲು ಆಹಾರ ಕಿಟ್ ನೀಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರವಾಗುವ ಸಾಧ್ಯತೆಯಿದೆ. ಅನ್ನಭಾಗ್ಯ ಯೋಜನೆಯಡಿ 10 kg ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಮೊದಲಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆಗೆ ಒಪ್ಪಿಗೆ ನೀಡದ ಕಾರಣ ಕಾರ್ಡ್‌ದಾರರಿಗೆ ಹೆಚ್ಚುವರಿ ಅಕ್ಕಿ ಬೆಲೆಯಷ್ಟು ಹಣ ನೀಡಲಾಗುತ್ತಿತ್ತು. …
Read More »
BigTv News
September 5, 2024
Breaking News, ಮಂಡ್ಯ
ಮಂಡ್ಯ: ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ಎಂಬಾತನನ್ನು ಬಂಧಿಸಲಾಗಿದೆ. ಸಾವಿರಾರು ಕರುಳಬಳ್ಳಿ ಕೊಂದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಐಡಿಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಅಭಿಷೇಕ್ ಪ್ರಮುಖ ಆರೋಪಿಯಾಗಿದ್ದಾನೆ. ಅಭಿಷೇಕ್ ಜೊತೆ ವಿರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದ್ದು ಈಗಾಗಲೇ ಭ್ರೂಣ ಹತ್ಯೆ ಕೇಸ್ ನಲ್ಲಿ ವಿರೇಶ್ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್, …
Read More »
BigTv News
September 5, 2024
Breaking News, ಚಿಕ್ಕಬಳ್ಳಾಪುರ
ಶಿಡ್ಲಘಟ್ಟ: ಮೆಕ್ಕೆಜೋಳ ಬೆಳೆ ನಡುವೆ ಬೆಳೆದಿದ್ದ ಗಾಂಜಾ ಗಿಡವನ್ನು ಪತ್ತೆ ಮಾಡಿರುವ ದಿಬ್ಬೂರಹಳ್ಳಿ ಪೊಲೀಸರು ಸುಮಾರು 4 ಕೆ.ಜಿ.70 ಗ್ರಾಂ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಂಬಾರ್ಲಹಳ್ಳಿ ದಾಸರ್ಲಹಳ್ಳಿ ಸರಹದ್ದಿನ ಮೆಕ್ಕೆ ಜೋಳದ ಜಮೀನಿನಲ್ಲಿ ಗಾಂಜಾ ಗಿಡಗಳು ಬೆಳೆದಿದ್ದ ಶಿಡ್ಲಘಟ್ಟ ತಾಲ್ಲೂಕಿನ ಟಿ.ವೆಂಕಟಾಪುರ ಗ್ರಾಮದ ಜನಮಡಗಪ್ಪನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸ್.ಪಿ.ಕುಶಾಲ್ ಚೌಕ್ಸಿ ಸಾರಥ್ಯದಲ್ಲಿ ಡಿವೈಎಸ್ಪಿ ಮುರಳೀಧರ್, …
Read More »
BigTv News
September 5, 2024
Breaking News
ಬೆಂಗಳೂರು: ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಗ್ಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ನಮಗೆಲ್ಲರಿಗೂ ನಮ್ಮ ಗುರುಗಳು ನೀಡಿದ ಬೋಧನೆಗಳು ಉತ್ತಮ ಜೀವನವನ್ನು ನಡೆಸಲು ನಮಗೆ ಸ್ಫೂರ್ತಿ ನೀಡುತ್ತವೆ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಈ ವಿಶಿಷ್ಟ ಸಂಬಂಧವನ್ನು ಆಚರಿಸಲು ಭಾರತದಲ್ಲಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯು ಗುರು ಮತ್ತು ಶಿಷ್ಯ ನಡುವಿನ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯು ಡಾ. ಸರ್ವಪಲ್ಲಿ …
Read More »
BigTv News
September 5, 2024
Breaking News, ರಾಯಚೂರು
ರಾಯಚೂರು: ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ನಡೆದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಖಾಸಗಿ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಘಟನೆ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳ ಕಾಲು ಕಟ್ ಆಗಿತ್ತು ಗಂಭೀರ ಗಾಯಗೊಂಡ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು …
Read More »
BigTv News
September 5, 2024
Breaking News, ಗದಗ
ಗದಗ:- ರಾಂಗ್ ರೂಟ್ ನಲ್ಲಿ ಬಂದು ಬೈಕ್ ಗೆ ಬೈಕ್ ಡಿಕ್ಕಿ ಹೊಡೆದು ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಹಾಗೂ ಹಳ್ಳಿಗುಡಿ ಗ್ರಾಮಗಳ ನಡುವೆ ಜರುಗಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ನಿವಾಸಿ ವಸಂತ ಚೆನ್ನಳ್ಳಿ (38) ಮೃತ ದುರ್ದೈವಿ. ರಾಂಗ್ ರೂಟ್ ನಲ್ಲಿ ಒನ್ ವೇ ನಲ್ಲಿ ಬಂದು ಎದುರಿಗೆ ಬರುತ್ತಿದ್ದ ಬೈಕ್ ಗೆ ಬೈಕ್ ಡಿಕ್ಕಿ …
Read More »
Shaikh BigTv
September 5, 2024
Breaking News, ಧಾರವಾಡ
2024-2025 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆರ್ ಎಲ್ ಎಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧಾರ್ಮಿಕ ಪಠಣ, ಕನ್ನಡ ಪ್ರಬಂಧ ಸ್ಪರ್ಧೆ, ಕನ್ನಡ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಕ್ಲಸ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿತು.
Read More »