Shaikh BigTv
September 4, 2024
Breaking News, ಧಾರವಾಡ
ನವಲಗುಂದ: ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬಸ್ಥರು, ಪರಿಸರ ಸ್ನೇಹಿ ಬಣ್ಣ ಬಳಿಯುವ ಮೂಲಕ ಹಬ್ಬದ ಸಡಗರಕ್ಕೆ ಮನೆ ಮನೆಗೆ ಗಣೇಶಗಳನ್ನು ನವಲಗುಂದ ಪಟ್ಟಣದ ದೇವೇಂದ್ರಪ್ಪ ಬಡಿಗೇರ ಕುಟುಂಬದವರು ತಯಾರಿಸುತ್ತಾರೆ. ವಿಧ ವಿಧದ ಗಣೇಶ ಮೂರ್ತಿ ತಯಾರಿ ಮಾಡಿದ್ರೆ, ಅವುಗಳಿಗೆ ಇವರ ಮನೆಯವರು ಅಂದದ ಬಣ್ಣ ಲೇಪಿಸಿ ಹೊಸ ರೂಪ ನೀಡುತ್ತಿದ್ದಾರೆ.ಸುಮಾರು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಶ್ರೀ ಮೌನೇಶ್ವರ ಆರ್ಟ್ಸ್ ಎಂಬ ಶೀರ್ಷಿಕೆ ಅಂಗಡಿಯವರಾದ ಇವರು …
Read More »
Shaikh BigTv
September 4, 2024
Breaking News, ಧಾರವಾಡ
ಧಾರವಾಡ: ಪ್ರಸಕ್ತ ಸಾಲಿನ ಮೈಸೂರು ದಸರಾದಲ್ಲಿ ಅಕ್ಟೋಬರ 12 ರಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯ ಪರಂಪರೆ, ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಸ್ಥಬ್ದಚಿತ್ರವನ್ನು ರೂಪಿಸಲಾಗುವುದು. ಮೈಸೂರು ದಸರೆಯಲ್ಲಿ ದೇಶ, ವಿದೇಶಗಳ ಜನರು ಭಾಗಬಹಿಸುವುದರಿಂದ ನಮ್ಮ ಜಿಲ್ಲೆಯ ಸಂಸ್ಕøತಿಯನ್ನು ಹೆಚ್ಚು ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಿಂದ ಮೈಸೂರು …
Read More »
BigTv News
September 4, 2024
Breaking News
ಶ್ರೀನಗರ : ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಜೊತೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ತಳ್ಳಿಹಾಕಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಬಳಿಕ ಸರಕಾರ ರಚನೆಯಲ್ಲಿ ತನ್ನ ಪಕ್ಷದ ಸೇರ್ಪಡೆಯಿಲ್ಲದೆ ಯಾವುದೇ ಸರಕಾರ ರಚನೆಯಾಗುವುದು ಅಸಾಧ್ಯವೆಂದು ಅವರು ಪ್ರತಿಪಾದಿಸಿದ್ದಾರೆ. ಶ್ರೀನಗರದಲ್ಲಿರುವ ಪಿಡಿಪಿ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಎದುರಾಳಿ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಮ್ಮುಕಾಶ್ಮೀರದಲ್ಲಿ ಹೇಗಾದರೂ ಮಾಡಿ …
Read More »
Shaikh BigTv
September 4, 2024
Breaking News, ಧಾರವಾಡ
ಧಾರವಾಡ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳೊಂದಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯು ಜರುಗಿತು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸೂಚಿಸಿದರು. 2024 ರಲ್ಲಿ ಪದವಿ ಪಾಸಾದ, ಡಿಪ್ಲೋಮಾ ವಿದ್ಯಾರ್ಥಿಗಳು ಎನ್‍ಎಡಿ ದಲ್ಲಿ ನೋಂದಣೆ ಮಾಡಿಕೊಳ್ಳಲು ಹೆಚ್ಚು …
Read More »
BigTv News
September 4, 2024
Breaking News
ಬೆಂಗಳೂರು : ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂಧಿರಾಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದಾರೆ ಇದು ಅತ್ಯಂತ ನಿಷ್ಠುರವಾಗಿದೆ ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಕಟ್ಟು ನಿಟ್ಟಾಗಿ ಅರಣ್ಯ ಒತ್ತುವರಿಯನ್ನು ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಸಮಾರಂಭದಲ್ಲಿ ಪದಕ ವಿತರಿಸಿ ಅವರು …
Read More »
BigTv News
September 4, 2024
Breaking News
ಉಕ್ರೇನ್: ಉಕ್ರೇನ್ ಮತ್ತು ರಷ್ಯಾ ಯುದ್ಧದ ಭೀಕರತೆಗೆ ಮತ್ತೆ ಮತ್ತೆ ಅಮೂಲ್ಯ ಮತ್ತು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅದರಲ್ಲೂ ತನ್ನ ಮೇಲೆ ಪದೇ ಪದೇ ಅಟ್ಯಾಕ್ ಮಾಡುತ್ತಿದೆ ಉಕ್ರೇನ್ ಸೇನೆ ಎಂದು ಆಕ್ರೋಶ ಹೊರ ಹಾಕುತ್ತಿದ್ದ ರಷ್ಯಾ ಮಿಲಿಟರಿ, ಇದೀಗ ದಿಢೀರ್ ಭಾರಿ ದೊಡ್ಡದಾಗಿ ದಾಳಿ ಆರಂಭ ಮಾಡಿದೆ. ಹೀಗಾಗಿ ಉಕ್ರೇನ್ ದೇಶದ ನೆಲ ಛಿದ್ರ ಛಿದ್ರವಾಗಿ ಹೋಗುತ್ತಿದ್ದು, ಇದೀಗ ರಷ್ಯಾ ಮಿಲಿಟರಿ ನಡೆಸಿದ ಅತ್ಯಂತ ಡೆಡ್ಲಿ ಕ್ಷಿಪಣಿ ದಾಳಿಯಲ್ಲಿ …
Read More »
BigTv News
September 4, 2024
Breaking News, ಆಂಧ್ರ ಪ್ರದೇಶ
ಹೈದರಾಬಾದ್: ಉಭಯ ತೆಲುಗು ರಾಜ್ಯಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದು ಎರಡೂ ರಾಜ್ಯಗಳಿಗೆ 1ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. ಕೇರಳದ ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಹೆಚ್ಚು ನೆರವು ನೀಡಿದ್ದ ಟಾಲಿವುಡ್ ಮಂದಿ ಈಗ ತಮ್ಮದೇ ನೆಲದಲ್ಲಿ ಜಲತಾಂಡವವಾಡುತ್ತಿದ್ದು, ಜನ ಜಾನುವಾರು ಪ್ರಾಣ ಕಳೆದುಕೊಂಡಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದು ದೇಣಿಗೆಯನ್ನು ಘೋಷಿಸುತ್ತಿದ್ದಾರೆ. ವಯನಾಡ್ ಸಂತ್ರಸ್ತರ ನೆರವಿಗೆ 1 ಕೋಟಿ ನೆರವು ನೀಡಿದ್ದ ಚಿರಂಜೀವಿ …
Read More »
Shaikh BigTv
September 4, 2024
Breaking News, ಧಾರವಾಡ
ಕುಂದಗೋಳ : ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮತ್ತು ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ ಏಕೆ ಕಾಲಕ್ಕೆ ಲಭಿಸಿದೆ. ಹುಬ್ಬಳ್ಳಿ ಪಟ್ಟಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕಿಮ್ಸ್ ಆವರಣದ, ಪ್ರಾಂಶುಪಾಲರ ಹುದ್ದೆಗೆ ಡಾ.ಎಸ್.ಎಂ. ಕಗ್ಗಲಗೌಡರ ಪದೋನ್ನತಿ ಮತ್ತು ವರ್ಗಾವಣೆ ಆಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆಪ್ಟೆಂಬರ್ 03.2024 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ವಿಷಯ ತಿಳಿಸಲಾಗಿದೆ.
Read More »
Shaikh BigTv
September 4, 2024
Breaking News, ಹುಬ್ಬಳ್ಳಿ
ಭೂಗತ ಪಾತಕಿ ಬಚ್ಚಾಖಾನ್ ಪೋಲಿಸರ ಬಲೆಗೆ.. ಹುಬ್ಬಳ್ಳಿ: ಅವಳಿ ನಗರದಲ್ಲಿನ ವ್ಯಕ್ತಿಯೊಬ್ಬರಿಗೆ ತನ್ನ ಸಹಚರರ ಮೂಲಕ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಅವಳಿ ನಗರದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ. ಅವಳಿ ನಗರದ ಪೊಲೀಸರು ಕಮಿಷನರ್ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಬಂಧಿಸಿದ್ದಾರೆ.ಸದ್ಯ ಬಚ್ಚಾಖಾನ್ ಹಾಗೂ ಆತನ ಸಹಚರರನ್ನು ಇದೀಗ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಳೆದ …
Read More »
Shaikh BigTv
September 4, 2024
Breaking News, ಧಾರವಾಡ
ಧಾರವಾಡ: ಅಕ್ಟೋಬರ್ 12 ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯ ಪರಂಪರೆ, ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಸ್ಥಬ್ದಚಿತ್ರವನ್ನು ರೂಪಿಸಲಾಗುವುದು ಎಂದು ಜಿಪಂ ಸಿಇಓ ಸ್ವರೂಪ ಟಿ. ಕೆ. ತಿಳಿಸಿದರು. ನಗರದ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದ ಅವರು, ಮೈಸೂರು ದಸರೆಯಲ್ಲಿ ದೇಶ, ವಿದೇಶಗಳ ಜನರು ಭಾಗಬಹಿಸುವುದರಿಂದ ಜಿಲ್ಲೆಯ ಸಂಸ್ಕೃತಿಯನ್ನು ಹೆಚ್ಚು ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು. ಇತರರು ಉಪಸ್ಥಿತರಿದ್ದರು.
Read More »