Breaking News

Breaking News

ಸೈಬರ್‌ ಕ್ರೈಮ್‌, ಇ.ಡಿ, ಸಿ.ಬಿ.ಐ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ 22 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ ಜಿಲ್ಲೆಯ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಪೊಲೀಸ್, ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ₹22 ಲಕ್ಷ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಜಯಕರ ಕಾಮತ್ ಪಿ. (76) ಎಂಬವರು ವಂಚನೆಗೆ ಒಳಗಾದವರು. ವಾಟ್ಸಾಪ್‌ ವಿಡಿಯೋ ಕರೆ ಮೂಲಕ ಸಂಪರ್ಕಿಸಿದ ಆರೋಪಿಗಳು, ಅವರ ಬ್ಯಾಂಕ್ ಖಾತೆಯಿಂದ ಮನಿ ಲಾಂಡರಿಂಗ್ ನಡೆಯುತ್ತಿದೆ ಎಂದು ಬೆದರಿಕೆ ಹಾಕಿ, ಫಂಡ್‌ ಪರಿಶೀಲನೆ ಹೆಸರಿನಲ್ಲಿ RTGS ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜುಲೈ …

Read More »

ಹಾವೇರಿ| ಬಂಡಿ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ; ವೃದ್ಧ ಕೊಲೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬಂಡಿ ದಾರಿ ವಿವಾದಕ್ಕೆ ಸಂಬಂಧಿಸಿದ ಎರಡು ಕುಟುಂಬಗಳ ನಡುವಿನ ಮಾರಾಮಾರಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಡಿವೆಪ್ಪ ಉದ್ದನಕಾಲು (60) ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜುಲೈ 15ರಂದು ನಡೆದ ಘರ್ಷಣೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಜಮೀನಿನ ಬಂಡಿ ದಾರಿ ಅತಿಕ್ರಮಣ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ಜಗಳದ ವೇಳೆ ಬಡಿಗೆ, ಕುಡಗೋಲುಗಳಿಂದ ಹಲ್ಲೆ ನಡೆದಿದ್ದು, ಆರೋಪಿಯೊಬ್ಬ ಟೆಂಪೋ …

Read More »

ಕೌಟುಂಬಿಕ ಕಲಹ: ಇಬ್ಬರು ಸಹೋದರರ ಹತ್ಯೆ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಲಗಮಪ್ಪ ರಾಮಣ್ಣವರ (32) ಹಾಗೂ ಬಸಪ್ಪ ರಾಮಣ್ಣವರ (38) ಮೃತರು. ಸಹೋದರರು ಮತ್ತು ಸಂಬಂಧಿಕರ ನಡುವೆ ಆರಂಭವಾದ ವಾಗ್ವಾದ ತೀವ್ರಗೊಂಡು, ಸುಮಾರು ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ …

Read More »

ಅಕ್ರಮ ನಾಡ ಬಂದೂಕು ಸಾಗಣೆ: ನಾಲ್ವರು ಪೊಲೀಸರ ವಶಕ್ಕೆ!

ಗುಂಡ್ಲುಪೇಟೆ: ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 3 ಬಂದೂಕು, 18 ಕಾರ್ಟ್ರಿಜ್‌ ಗುಂಡುಗಳು, ಎರಡು ಚಾಕುಗಳು ಹಾಗೂ ಒಂದು ಕಾರನ್ನು ತೆರಕಣಾಂಬಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಜು.17ರ ಶುಕ್ರವಾರ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ಕುಮಾರಪ್ಪ, ಸುನೀಲ್, ದಿನೇಶ್ ಮತ್ತು ಕಾಂತ ಬಂಧಿತ ಆರೋಪಿಗಳು. ಇವರು ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ …

Read More »

ಸಂಪ್‌ ವಿಚಾರಕ್ಕೆ ಗಲಾಟೆ : ಮರ್ಮಾಂಗಕ್ಕೆ ಒದ್ದು ಪ್ಲಂಬರ್‌ ಕೊಲೆ

ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ನೀರಿನ ಸಂಪ್‌ ನಿರ್ಮಾಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಆಂಧ್ರಪ್ರದೇಶ ಮೂಲದ 38 ವರ್ಷದ ರವಿ ಎಂಬ ಪ್ಲಂಬರ್‌ ಹಾಗೂ ಗಾರೆ ಕೆಲಸಗಾರ ಹಲ್ಲೆಯಿಂದ ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಮನೆಯ ಸಂಪ್‌ಗೆ ಹಾಳಾದ ಮುಚ್ಚುಳ ಅಳವಡಿಸಿರುವ ವಿಚಾರವಾಗಿ ಮನೆ ಮಾಲೀಕ ದೇವರಾಜ್‌ ಮತ್ತು ಗಾರೆ ಮೇಸಿ ಮಂಜುನಾಥ್ ನಡುವೆ ವಾಗ್ವಾದ ನಡೆದಿದೆ. ಬಳಿಕ ದೇವರಾಜ್‌ ತನ್ನವರೊಂದಿಗೆ ಮಂಜುನಾಥ್ ಮನೆಗೆ …

Read More »

ಲಂಚ ಪಡೆಯುವಾಗಲೇ ರೇಡ್​​: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು

ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಬಿಗಿ ಕಾರ್ಯಾಚರಣೆ ನಡೆಸಿದ್ದು, ಕಲಬುರಗಿ ಜಿಲ್ಲಾ ನ್ಯಾಯಾಲಯದ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಅವರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಪ್ರವಾಸೋದ್ಯಮ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿರಿಯೂರು ಬಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 48 ಲಕ್ಷ …

Read More »

ಪ್ರೀತಿಸಿ ಮದುವೆಯಾಗಿದ್ರೂ ಮತ್ತೊಬ್ಬನೊಂದಿಗೆ ಚಾಟಿಂಗ್ ಮಾಡ್ತಿದ್ದ ಅಪ್ರಾಪ್ತೆಗೆ ಗುಂಡು ಹಾರಿಸಿ ಕೊಲೆ: ಶವ ಹೂತಿಟ್ಟಿದ್ದ ಅಪ್ರಾಪ್ತ ಪತಿ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತೆಯನ್ನು ಅಪ್ರಾಪ್ತ ಕೊಲೆ ಮಾಡಿದ್ದಾನೆ. ನಾಡ ಬಂದೂಕಿನಿಂದ ಗುಂಡು ಹಾರಿಸಿ ಆರೋಪಿ ಹತ್ಯೆ ಮಾಡಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತನಿಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು. ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮತ್ತೊಬ್ಬನ ಜೊತೆಗೆ ಅಪ್ರಾಪ್ತೆ ಚಾಟಿಂಗ್ ಮಾಡುತ್ತಿದ್ದಳು. ವಿವಾಹಿತ ಅಪ್ರಾಪ್ತೆ ಬೇರೆಯವನ …

Read More »

ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ!

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಂಪಲನಾಥ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ಪ್ರಾರ್ಥನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಪ್ರಾರ್ಥನಾ ಮತ್ತು ಸುರೇಶ್ ನಡುವೆ ಪ್ರೀತಿಯಿದ್ದು, ಬಾಲಕಿ ಮತ್ತೊಬ್ಬ ಯುವಕನಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಸುರೇಶ್ …

Read More »

2 ವರ್ಷದ ಕಂದಮ್ಮನನ್ನೇ ಕೊಂದನಾ ತಾಯಿಯ ಪ್ರಿಯಕರ? ಮದುವೆಯಾಗದೇ ಒಟ್ಟಿಗೆ ಇದ್ದ ಈ ಜೋಡಿ ಮೇಲೆ ಡೌಟ್​!

ಬೆಂಗಳೂರು ನಗರದ ಬಾಣಸವಾಡಿಯಲ್ಲಿ 2 ವರ್ಷದ ಕಾರ್ಲೆಟ್ ಡೈಸಿ ಎಂಬ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ತಂದೆ ಹೇಳಿದ್ದರೂ, ಮಗುವಿನ ದೇಹದ ಮೇಲಿನ ಗಾಯದ ಗುರುತುಗಳಿಂದ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಮಗುವಿನ ತಾಯಿ ರೋಸ್ಲಿನ್, ತನ್ನ ಪ್ರಿಯಕರ ಜೇಸನ್ ಆಂಥೋನಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ದಂಪತಿಯ ಸ್ನೇಹಿತೆಯೊಬ್ಬರು ಕೂಡ ಮಗುವಿಗೆ ತಾಯಿ ಹೊಡೆಯುತ್ತಿದ್ದುದನ್ನು ನೋಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹವನ್ನು …

Read More »

ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಎರಡನೇ ಬಾರಿಗೆ ಗರ್ಭಿಣಿಯಾದ 15 ವರ್ಷದ ಬಾಲೆ

ಹುಬ್ಬಳ್ಳಿಯ ಉಣಕಲ್ ಪ್ರದೇಶದಲ್ಲಿ 15 ವರ್ಷ 6 ತಿಂಗಳ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಒಮ್ಮೆ ಮಗುವಿಗೆ ಜನ್ಮ ನೀಡಿದ್ದ ಬಾಲಕಿ ಇದೀಗ ಎರಡನೇ ಬಾರಿಗೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮತ್ತೆ ಗರ್ಭಿಣಿಯಾಗಿರುವ ವಿಚಾರವನ್ನು ಮುಚ್ಚಿಟ್ಟ ಆರೋಪದಡಿ ಪೋಷಕರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. …

Read More »