Breaking News

Breaking News

ಏಕಾಏಕಿ ಕೆಲಸದಿಂದ ವಜಾ : ನೌಕರರಿಂದ ಅರೆಬೆತ್ತಲೆ ಪ್ರತಿಭಟನೆ

ಹುಬ್ಬಳ್ಳಿ : ಸುಮಾರು ದಿನಗಳಿಂದ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಗುತ್ತಿಗೆ ಆಧಾರದ ನೌಕರರನ್ನು , ಏಕಾಏಕಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ನೌಕರರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು . ನಗರದ ಚನ್ನಮ್ಮ ವೃತ್ತದಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದವರೆಗೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಗುತ್ತಿಗೆ ಆಧಾರದ ಕಾರ್ಮಿಕರು , ಕೂಡಲೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .

Read More »

ಡಿ.20ರಂದು  ಬೃಹತ ರೈತ ಪ್ರತಿಭಟನೆ : ಮಾಜಿ ನವಲಗುಂದ  ಸಚಿವ ಕೆ .ಎನ್. ಗಡ್ಡಿ

ನವಲಗುಂದ :  ಡಿಸೆಂಬರ್ 20 ರಂದು ಮಂಗಳವಾರ ನಗರದ ರೈತ ಭವನದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ ರೈತ ಪ್ರತಿಭಟನೆ ಹಮ್ಮಿಕೊಂಡಿದ್ದು , ಅಂದಾಜು ಐದು ಸಾವಿರ ರೈತರು ಹಾಗೂ ಜನಸಾಮಾನ್ಯರು ಭಾಗವಹಿಸಲಿದ್ದಾರೆ . ತಾಲೂಕಿನ ಹಾಗೂ ಸುತ್ತಲಿನ ಗ್ರಾಮಗಳಿಗೆ ಮನೆ ಮನೆ ಭೇಟಿ ಮಾಡಿ ಪ್ರತಿಭಟನೆ ಮಾಡಲು ಮನವಿ ಮಾಡಲಾಗಿದೆ ಎಂದು ಮಾಜಿ ನವಲಗುಂದ  ಸಚಿವ ಕೆ ಎನ್ ಗಡ್ಡಿ ಹೇಳಿದರು . ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ …

Read More »

ನೀರು ಸರಬರಾಜು ಕಾರ್ಮಿಕರನ್ನು ಪುನರ್ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು ಪುನರ್ ನೇಮಕಾತಿ ಮಾಡಿಕೊಳ್ಳುವಂತೆ ಹಾಗೂ ಏಳು ತಿಂಗಳ ಸಂಬಳ ತುರ್ತಾಗಿ ಬಿಡುಗಡೆಗೊಳಿಸುವ ಮೂಲಕ ಅವಳಿನಗರದ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಕಾಮಿ೯ಕರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅಪಿ೯ಸಿದರು. ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು …

Read More »

ಫೆಬ್ರವರಿಯಲ್ಲಿ ವಿಶ್ವ ವಿಪ್ರ ಮಹಾಹಬ್ಬ; ಪೂರ್ವ ಸಿದ್ದತಾ ಸಭೆ

ಹುಬ್ಬಳ್ಳಿ: ವಿಶ್ವ ವಿಪ್ರ ಸಮಾವೇಶ-2023 ನ್ನು ಅತ್ಯಂತ ಯಶಸ್ವಿಯಾಗಿ ಹುಬ್ಬಳ್ಳಿಯಲ್ಲಿ, ಮಾಡಲು ವಿಶ್ವ ವಿಪ್ರ ಸೇವಾ ಟ್ರಸ್ಟ್ ಪೂರ್ವ ಸಿದ್ಧತಾ ಸಭೆಯನ್ನು ನಗರದ ವಿದ್ಯಾನಗರದ ಸುಧರ್ಮ ಸಭಾಂಗಣದಲ್ಲಿ ಆಯೋಜಿಸಿತ್ತು. ಈ ಸಭೆಯಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ, ತಾಲ್ಲೂಕುಗಳಿಂದ ಪ್ರತಿನಿಧಿಗಳು ಆಗಮಿಸಿ, ಸುಮಾರು 20 ರಿಂದ 25 ಸಾವಿರ ಜನರನ್ನು ಸೇರಿಸಿ ವಿಪ್ರ ಮಹಾ ಸಮಾವೇಶ-2023 ಯಶಸ್ವಿಯಾಗಿ ಫೆಬ್ರುವರಿ ಮೊದಲನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು. ಎಲ್ಲ ವೃತ್ತಿಪರರನ್ನು, ಉದ್ಯಮಿಗಳನ್ನು, …

Read More »

ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

ತಮಿಳುನಾಡು: ಡಿಸೆಂಬರ್ 19 ರಿಂದ ಅಂದ್ರೆ, ಇಂದಿನಿಂದ ತಮಿಳುನಾಡಿನಲ್ಲಿ 4 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. IMD ಪ್ರಕಾರ, ತಮಿಳುನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 21 ರಂದು ತಮಿಳುನಾಡಿನ ತೂತುಕುಡಿ, ರಾಮನಾಥಪುರಂ, ಪುದುಕ್ಕೊಟ್ಟೈ, ಶಿವಗಂಗಾ, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ ಮತ್ತು ತಮಿಳುನಾಡಿನ ಕಡಲೂರು ಮತ್ತು ಕಾರೈಕಲ್ …

Read More »

2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು : ಡಾ : ಪರಮೇಶ್ವರ್‌

ಮಧುಗಿರಿ: ನಾನೊಬ್ಬ ವಿದ್ಯಾವಂತ ಕುಟುಂಬ ದಿಂದ ಬಂದವನು ಹಾಗೂ 30 ವರ್ಷಗಳಿಂದ ಜನಸೇವೆ ಯಲ್ಲಿದ್ದೇನೆ. 2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು. ಜಾತಿ ಆಧಾರದಲ್ಲಿ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್‌ ಹೇಳಿದರು. ತಾಲೂಕಿನ ಪುರವರ ಹೋಬಳಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಈ ಭಾಗದ ಜನ ನನ್ನ ರಾಜಕೀಯದಲ್ಲಿ ಜತೆ …

Read More »

2 ಬಸ್ ಗಳ ನಡುವೆ  ಅಪಘಾತ : 3 ಜನ ಸಾವು, 10 ಜನರಿಗೆ ಗಾಯ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಭಾನುವಾರ ಬೆಳಿಗ್ಗೆ ಎರಡು ಬಸ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಮೂವರು ಮೃತಪಟ್ಟು, ಇತರ ಹತ್ತು ಜನರು ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಬೆಳಿಗ್ಗೆ 5.30ರ ಸುಮಾರಿಗೆ ಪಿಸಿಆರ್ ಕರೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಬಸ್ ಉತ್ತರ ಪ್ರದೇಶದ ಪ್ರತಾಪಗಢದಿಂದ ದೆಹಲಿ ಕಡೆಗೆ ಹೋಗುತ್ತಿದ್ದರೆ, ಎರಡನೇ ಬಸ್ ಮಧ್ಯಪ್ರದೇಶದ ಶಿವಪುರಿಯಿಂದ ದೆಹಲಿಯ ಆನಂದ್ ವಿಹಾರ್ …

Read More »

ಜ. 1ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನ ಪ್ರಕಟಿಸಲು ಸಿದ್ದಪಡಿಸಲಾಗಿದೆ : ಡಿಕೆಶಿ

ಬೆಳಗಾವಿ: ಜನವರಿ 1 ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನ ಪ್ರಕಟಿಸಲು ಸಿದ್ದಪಡಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಆಧಾರ ಸ್ಥಂಭವಾಗಿರುವ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯ ಪಡೆಯಲಾಗುವುದು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಧ್ವನಿ ಪಕ್ಷದ ಧ್ವನಿಯಾಗಬೇಕು ಎಂಬುದು …

Read More »

ಪಿಎಸ್‌ಐ ಗೀತಾಂಜಲಿ ಶಿಂಧೆ ಅಮಾನತು

ರಾಯಚೂರು: ಇತ್ತೀಚಿಗೆ ಹಲವು ಕಾರಣಕ್ಕಾಗಿ ಸುದ್ದಿಯಾಗಿದ್ದ ಸಿರಿವಾರ ಪೊಲೀಸ್ ಠಾಣೆ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಲ ದಿನಗಳ ಹಿಂದೆ ಯುವಕನೊಬ್ಬ ಪಿಎಸ್‌ಐ ಗೀತಾಂಜಲಿ ವಿರುದ್ಧ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ. ಅನಗತ್ಯವಾಗಿ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ. ಪಿಎಸ್‌ಐ ಗೀತಾಂಜಲಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ. ಅಲ್ಲದೇ ಸಾರ್ವಜನಿಕರು ಕೂಡ ಗೀತಾಂಜಲಿ ವಿರುದ್ಧ ಹಲವು ಆರೋಪ …

Read More »

ನವನಗರ, ಸುತಗಟ್ಟಿಯಿಂದ ಚಿಗರಿ ಬಸ್ ಸಂಪರ್ಕ ಸಾರಿಗೆ ಆರಂಭ

ಹುಬ್ಬಳ್ಳಿ : ನವನಗರ ಹಾಗೂ ಸುತಗಟ್ಟಿ ಪ್ರಯಾಣಿಕರ ಅನುಕೂಲಕ್ಕಾಗಿ ಚಿಗರಿ ಬಸ್ ಸಂಪರ್ಕ ಸಾರಿಗೆಯನ್ನು ಆರಂಭಿಸಲಾಗಿದೆ. ನವನಗರದ ಕರ್ನಾಟಕ ಸರ್ಕಲ್ ದಿಂದ RTO ಚಿಗರಿ ಬಸ್ ಸ್ಟೇಶನ್ ವರಗೆ ಈ ಬಸ್ ಸಂಚರಿಸಲಿದೆ. ಈ ಬಸ್ಸಿನಲ್ಲಿ ಪ್ರಯಾಣಿಸುವವರು RTO ಚಿಗರಿ ಬಸ್ ಸ್ಟೇಶನ್ ಧಾರವಾಡ ಕಡೆಗೆ ಅಥವಾ ಹುಬ್ಬಳ್ಳಿ ಕಡೆಗೆ ಪ್ರಯಾಣಿಸಬಹುದಾಗಿದೆ. ಪ್ರಾಯೋಗಿಕವಾಗಿ ಮಾಸಿಕ ಸ್ಮಾರ್ಟ್ ಕಾರ್ಡ ಪಾಸ್ ಹೊಂದಿದವರು ಈ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈಚೆಗೆ ನವನಗರದಲ್ಲಿ ನಡೆದ …

Read More »