Breaking News

Breaking News

ಮೇವು ತರಲು ಹೋದ 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ, ಹತ್ಯೆ!

ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಕರಸನಹಳ್ಳಿ ಗ್ರಾಮದಲ್ಲಿ 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಹಸುಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೃದ್ಧೆ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೊಲಕ್ಕೆ ತೆರಳಿ ಹುಡುಕಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು, ಶ್ವಾನದಳ ಹಾಗೂ …

Read More »

ಕೇವಲ ಒಂದೇ ಒಂದು ತಲೆಗೂದಲಿನಿಂದ ಬಯಲಾಯ್ತು ಮರ್ಡರ್ ರಹಸ್ಯ – ಕೊಲೆಗಡುಕನಿಗೆ ಜೀವಾವಧಿ ಶಿಕ್ಷೆ

ತುಮುಕೂರಿನ ಅಮಾನಿಕೆರೆ ಫುಟ್‌ಪಾತ್‌ನಲ್ಲಿ 2021ರಲ್ಲಿ ನಡೆದ ಮಂಜುನಾಥ್ ಕೊಲೆ ಪ್ರಕರಣದಲ್ಲಿ, ಆರೋಪಿ ಶಿವಕುಮಾರ್ ಅಲಿಯಾಸ್ ಮಾಲಾಶ್ರೀಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶೆ ನರಸಮ್ಮ ಅವರು ಡಿಎನ್‌ಎ ಸಾಕ್ಷ್ಯದ ಆಧಾರದ ಮೇಲೆ ಈ ಮಹತ್ವದ ತೀರ್ಪು ನೀಡಿದ್ದಾರೆ. ಕೊಲೆ ನಡೆದ ವೇಳೆ ಮೃತ ಮಂಜುನಾಥ್ ಆರೋಪಿಯೊಂದಿಗೆ ಹೋರಾಡಿದ್ದರಿಂದ, ಆರೋಪಿಯ ತಲೆಯಿಂದ ಕಿತ್ತುಬಂದ ಒಂದು ತಲೆಗೂದಲು ಮೃತನ ಕೈಯಲ್ಲಿ ಸಿಲುಕಿತ್ತು. ಪೊಲೀಸರು ಆ ಕೂದಲನ್ನು …

Read More »

ನಡು ರಸ್ತೆಯಲ್ಲೇ ತಲೆಗೆ ಗುಂಡಿಟ್ಟುಕೊಂಡು ಪೊಲೀಸ್ ಆತ್ಮಹತ್ಯೆ!

ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಿಎಆರ್ ಪೊಲೀಸ್ ಪೇದೆ ಶಿವಕುಮಾರ್ ಮಾವನೂರ್ (32) ಇಲಾಖೆಯಿಂದ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ವಾಹನದೊಳಗೇ ಈ ಘಟನೆ ನಡೆದಿದ್ದು, ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸಹೋದ್ಯೋಗಿಗಳು ಅಷ್ಟರಲ್ಲೇ ಅವರು ಮೃತಪಟ್ಟಿರುವುದನ್ನು ಕಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. …

Read More »

ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪ: ಶಿಕ್ಷಕ ಅಮಾನತು!

ಹಾಸನ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ಅನುಚಿತ ವರ್ತನೆ ಆರೋಪದ ಮೇಲೆ ಬಿಇಓ ಅವರು ಶಿಕ್ಷಕನನ್ನು ಅನಮಾತುಗೊಳಿಸಿ ಆದೇಶ ಹೊರಡಿಸಿದ ಪ್ರಕರಣ ನಡೆದಿದೆ.ಧನಂಜಯ್ ಅನಮಾತುಗೊಂಡ ಶಿಕ್ಷಕ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮುರುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾಗಿರುವ ಧನಂಜಯ್ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಹಾಗೂ ಶಿಕ್ಷಕನ ವರ್ತನೆಯಿಂದ ಬೇಸತ್ತು ಹನ್ನೆರಡು ವಿದ್ಯಾರ್ಥಿಗಳು ದೂರು ಪೆಟ್ಟಿಗೆಗೆ ಚೀಟಿ ಬೆರೆದು ಹಾಕಿದ್ದರು. …

Read More »

ಮದ್ದೂರು ಬಳಿ ಕಾರು ಅಡ್ಡಗಟ್ಟಿ ಕಬ್ಬಿಣದ ರಾಡಿನಿಂದ ಹಲ್ಲೆ: ಮೂವರ ಬಂಧನ

ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಸಾಗರ್ ಹಾಗೂ ಅವರ ಕುಟುಂಬದ ಕಾರಿಗೆ ಮತ್ತೊಂದು ಕಾರು ಲಘುವಾಗಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಆರೋಪಿಗಳು ಕಾರನ್ನು ಹಿಂಬಾಲಿಸಿ ಮದ್ದೂರಮ್ಮ ದೇವಸ್ಥಾನದ ಸಮೀಪದ ಮೇಲ್ಸೇತುವೆಯಲ್ಲಿ ಅಡ್ಡಗಟ್ಟಿದ್ದಾರೆ. ಆರೋಪಿಗಳು ಸಾಗರ್ ಮೇಲೆ ಕಬ್ಬಿಣದ ಜಾಕ್‌ ರಾಡ್‌ನಿಂದ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಪತ್ನಿ, ತಾಯಿ ಹಾಗೂ ಕುಟುಂಬದ ಇತರ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು …

Read More »

11 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ, 2.85 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 9 ಹೊರ ರಾಜ್ಯದವರು ಹಾಗೂ ಇಬ್ಬರು ಸ್ಥಳೀಯರು ಸೇರಿ 11 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಎಂಡಿಎಂಎ, ಹೈಡ್ರೋ ಗಾಂಜಾ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 2.85 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಜಪ್ತಿಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು, ಪರಿಚಿತರ ಮೂಲಕ ಕಾಲೇಜು ವಿದ್ಯಾರ್ಥಿಗಳು ಹಾಗೂ …

Read More »

ಬಳ್ಳಾರಿಯಲ್ಲಿ ಭೀಕರ ಜೋಡಿ ಕೊಲೆ, ಮಾತುಕತೆಗೆ ಪತ್ನಿ-ಮಾವನನ್ನು ಕರೆಸಿ ಕೊಂದೇ ಬಿಟ್ಟ!

ಬಳ್ಳಾರಿಯ ಗುಗ್ಗರಟ್ಟಿಯಲ್ಲಿ 24 ವರ್ಷದ ನಾಗಲಕ್ಷ್ಮೀ ಹಾಗೂ ಆಕೆಯ ತಂದೆ ಶ್ರೀನಿವಾಸ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಗಲಕ್ಷ್ಮಿಯ ಪತಿ ತೇಜಾ ಹಾಗೂ ಆತನ ತಂದೆ ಗುರುಶಂಕರ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೌಟುಂಬಿಕ ಕಲಹದ ವಿಚಾರವಾಗಿ ಸಂಧಾನ ನಡೆಸೋಣ ಎಂದು ಮನೆಗೆ ಕರೆಸಿಕೊಂಡ ಬಳಿಕ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆರೋಪಿಗಳು ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿಯ ನಡತೆಯ …

Read More »

12 ವರ್ಷಗಳ ವಂಚನೆಯ ಆಟಕ್ಕೆ ಬಿತ್ತು ಬ್ರೇಕ್: ನಕಲಿ ಡಿವೈಎಸ್‌ಪಿ ಕೊನೆಗೂ ಅರೆಸ್ಟ್!

ವಿಜಯಪುರ: ಪೊಲೀಸ್ ಹಾಗೂ ಪಿಎಸ್‌ಐ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕಲಿ ಡಿವೈಎಸ್‌ಪಿ ಗ್ಯಾನನಗೌಡ ಉರ್ಫ್ ಗಣೇಶನನ್ನು ಎಪಿಎಂಸಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಖಾಕಿ ಸಮವಸ್ತ್ರ ಧರಿಸಿ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡು ನಿರುದ್ಯೋಗಿ ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ. 2014ರಲ್ಲಿ ಹಣ ವಾಪಸ್ ಕೇಳಿದ್ದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಯತ್ನ ನಡೆಸಿದ ಆರೋಪವೂ ಈತನ ಮೇಲಿದೆ. ತಾಂತ್ರಿಕ ಮಾಹಿತಿಯ ಆಧಾರದ …

Read More »

ಕಾಡಿನ ಜಿಂಕೆ ಮನೆಗೆ ತಂದು ಸಾಕಿದ್ದ ಅರಣ್ಯ ಗಾರ್ಡ್ ಬಂಧನ: ಮನೆಯಲ್ಲಿ ಅಕ್ರಮ ಬಂದೂಕು ಪತ್ತೆ

ಹುಣಸೂರು: ಕಾಡಿನಿಂದ ಜಿಂಕೆ ಮರಿಗಳನ್ನು ತಂದು ಮನೆಯಲ್ಲಿ ಸಾಕಿದ್ದ ಆರೋಪದ ಮೇಲೆ ನಾಗರಹೊಳೆ ವನ್ಯಜೀವಿ ವಲಯದ ಬೀಟ್ ಗಾರ್ಡ್ ಪೊನ್ನಪ್ಪ ಅಲಿಯಾಸ್ ನವೀನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ವಿಜಿಲೆನ್ಸ್, ಜಾಗೃತ ದಳ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆರೋಪಿಯು ಕೆಲ ತಿಂಗಳ ಹಿಂದೆ ಎರಡು ಜಿಂಕೆ ಮರಿಗಳನ್ನು ಮನೆಗೆ ತಂದಿದ್ದು, ಅವುಗಳಲ್ಲಿ ಒಂದನ್ನು ಕೊಂದು ಅದರ ಮಾಂಸವನ್ನು ಸೇವಿಸಿ …

Read More »

ಹೊಗೆಸೊಪ್ಪು ಬ್ಯಾರನ್ ಬೆಂಕಿಗಾಹುತಿ

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಮದಲ್ಲಿ ಸೋಮವಾರ ಸಂಜೆ ತಂಬಾಕು ಹದ ಮಾಡುವ ವೇಳೆ ಬ್ಯಾರನ್‌ಗೆ ಬೆಂಕಿ ತಗುಲಿ, ಹದಗೊಳಿಸುತ್ತಿದ್ದ ಹೊಗೆಸೊಪ್ಪು ಹಾಗೂ ಬ್ಯಾರನ್ ಸಂಪೂರ್ಣ ಸುಟ್ಟು ಹೋಗಿದೆ. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಬ್ಯಾರನ್‌ಗೆ ವ್ಯಾಪಿಸಿತು. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲೇ ಬ್ಯಾರನ್‌ನಲ್ಲಿದ್ದ ತಂಬಾಕು ಹಾಗೂ ಬ್ಯಾರನ್ …

Read More »