Breaking News

Breaking News

ವಿವಿಧ ಮೇರುಗು ತುಂಬಿದ ವೀರಾಂಜನೇಯನ ರಥೋತ್ಸವ

ಧಾರವಾಡ : ಸುರಿಯುವ ಮಳೆಯಲ್ಲೇ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಆಂಜನೇಯನ ತೇರನ್ನೆಳೆದಿದ್ದಾರೆ . ಅನೇಕ ಕಡೆಗಳಲ್ಲಿ ವೀರಾಂಜನೇಯನ ರಥೋತ್ಸವ ನಡೆದಿದೆ . ಅದೇ ರೀತಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲೂ ಆಂಜನೇಯನ ರಥೋತ್ಸವವಿತ್ತು . ಸಂಜೆ 7 ಗಂಟೆಯ ಸುಮಾರಿಗೆ ಭಕ್ತರೆಲ್ಲರೂ ಸೇರಿ ತೇರು ಎಳೆಯುವ ಸಂದರ್ಭದಲ್ಲೇ ಮಳೆ ಬರಲಾರಂಭಿಸಿತು.ಬಮಳೆಯನ್ನೂ ಲೆಕ್ಕಿಸದೇ ಭಕ್ತ ಸಮೂಹ ಆಂಜನೇಯನ ತೇರನ್ನು ಎಳೆದು ಪುನೀತರಾಗಿದ್ದಾರೆ.ಇನ್ನು ರಥೋತ್ಸವದಲ್ಲಿ ಕರಡಿ ಮೇಳ , ಜಗ್ಗಲಿಗೆ ಮೇಳ …

Read More »

ಕೇಸರಿ ಧ್ವಜ ರಾರಾಜಿಸಿ ಅರ್ಥಪೂರ್ಣವಾಗಿ‌ ಆಚರಿಸಿದ ಮುಸ್ಲಿಂ ಭಾಂದವರು

ಕಲಘಟಗಿ :  ಪಟ್ಟಣದ ಶ್ರೀರಾಮ ಸೇನೆಯ ಯುವಕರಿಂದ ಶ್ರೀ ಹನುಮ ಜಯಂತಿ ನಿಮಿತ್ತ ಹನುಮನ ಮೂರ್ತಿಯ ಬೃಹತ್ ಶೋಭಾಯಾತ್ರೆ ಶನಿವಾರ ಸಂಜೆ ಜರುಗಿತು. ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿದವು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿದ್ದವರಿಗೆ ಪಾನಕ ವಿತರಿಸುವುದರೊಂದಿಗೆ ಸೌಹಾರ್ದತೆ ಮೆರೆದರು . ಮೆರವಣಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಯುವಕರು ಸೇರಿದ್ದು , ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು .

Read More »

ಇಂದು ಸಚಿವ ಸಿ.ಎಂ. ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿ ಪದಗ್ರಹಣ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‍ ರಾಜ್ಯಾಧ್ಯಕ್ಷರಾಗಿ ಇಂದು ಬೆಳಗ್ಗೆ ಪದಗ್ರಹಣ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ ಅವರು ತಿಳಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

Read More »

ಏ. 20ರವರೆಗೆ ನಗರದಾದ್ಯಂತ ಸಿಆರ್ ಪಿಸಿ 144 ಅನ್ವಯ ನಿಷೇಧಾಜ್ಞೆ ಜಾರಿ

ಹುಬ್ಬಳ್ಳಿ: ಠಾಣೆ ಎದುರು ಸುತ್ತಮುತ್ತ ಬಿದ್ದಿರುವ ಕಲ್ಲಿನ ರಾಶಿಗಳನ್ನು ಪಾಲಕೆಯ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ. ಗಲಭೆಕೋರರು ಮೊದಲೇ ಸಂಚು ರೂಪಿಸಿ ರಾಶಿ ಕಲ್ಲು ತಂದಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.ಏ.20ರವರೆಗೆ ನಗರದಾದ್ಯಂತ ಸಿಆರ್ ಪಿಸಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ. ಗಲಭೆ ನಿಯಂತ್ರಿಸುವ ಉದ್ದೇಶದಿಂದ ನಗರದಾದ್ಯಂತ ನಾಲ್ಕು ದಿನ ಏ.16 ರಾತ್ರಿಯಿಂದ ಏ.20ರ ಬೆಳಗ್ಗೆ 6 ಗಂಟೆವರೆಗೆ …

Read More »

ಕಳಸಾ ಬಂಡೂರಿ ಕುರಿತು ಮಹತ್ವದ ಮಾಹಿತಿ ನೀಡಿದ ಸಿಎಂ

ಗದಗ : ಶೀಘ್ರವೇ ಕಳಸಾ ಬಂಡೂರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಳಸಾ ಬಂಡೂರಿ ಕಾಮಗಾರಿ ಸಂಬಂಧ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಅನುಮತಿಗೆ ವಿನಂತಿಸಲಾಗಿದೆ.

Read More »

ಪ್ರಚೋದನಕಾರಿ ಪೋಸ್ಟ್ : ಪೋಲಿಸ್ ವಾಹನ ಜಖಂ ಗೋಳಿಸಿದ ಕಿಡಿಗೇಡಿಗಳು

ಹುಬ್ಬಳ್ಳಿ : ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಹಳೆಹುಬ್ಬಳ್ಳಿಯ ಆನಂದನಗರದ ಫೊಡೈ ಪ್ಲಾಟಿನ ಯುವಕ ಮೆಕ್ಕಾದ ಮೇಲೆ ಕೇಸರಿ ಧ್ವಜ ಹಾರಿಸಿರುವ ಎಡಿಟ್ ಮಾಡಿದ ಪೋಸ್ಟ್ ಹರಿಬಿಟ್ಟಿದ್ದ . ಆದರೆ ಹಳೆಹುಬ್ಬಳ್ಳಿ ಪೊಲಿಸರು ಅದಾಗಲೇ ಕೃತ್ಯವೆಸಗಿದ್ದ ಯುವಕನನ್ನು ಅರೆಸ್ಟ್ ಕೂಡ ಮಾಡಿದ್ದರು . ಆದರೆ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆ ಎದುರು ಜಮಾವಣೆಗೊಂಡ ಇಸ್ಲಾಂ ಸಮುದಾಯದ ಯುವಕರು ವಿವಾದಾತ್ಮಕ ಪೊಸ್ಟ್ ಹಾಕಿದ ಆರೋಪಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ …

Read More »

ಮದಿಹಾಳ ಮಾರುತಿ ಜಾತ್ರಾ ಮಹೋತ್ಸವ : ಹರಿದು ಬಂದ ಜನಸಾಗರ

ಧಾರವಾಡ : ಭಕ್ತರ ಜೈಕಾರ ಹಾಕುವ ಮೂಲಕ ಧಾರವಾಡ ಮದಿಹಾಳ ಮಾರುತಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮಹಾ ರಥೋತ್ಸವಕ್ಕೆ ಭಕ್ತರು ಲಿಂಬೆಹಣ್ಣು, ಉತ್ತತ್ತಿ, ಬಾಳೆಹಣ್ಣು, ಎಸೆಯುವ ಮೂಲಕ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತೇರು ಎಳೆದರು. ಅದ್ದೂರಿಯಾಗಿ ಜರುಗಿದಮಹಾ ರಥೋತ್ಸವಕ್ಕೆ ಹರಿದು ಬಂದ ಜನಸಾಗರ ರಾಮ ನಾಮ ಸ್ಮರಣೆ ಮಾಡಿ ಪವನಸುತ್ತ ಹನುಮಂತ ದೇವರಿಗೆ ಭಕ್ತಿ ಸೇವೆ ಸಮರ್ಪಣೆ ಮಾಡಿದರು.

Read More »

ಹುಬ್ಬಳ್ಳಿಯಲ್ಲಿ ಆಂಜನೇಯನ ನೇತ್ರದಿಂದ ಆನಂದ ಭಾಷ್ಪ

ಹುಬ್ಬಳ್ಳಿ : ಇಂದು ದೇಶಾದ್ಯಂತ ಶ್ರೀ ರಾಮನ ಪರಮ ಭಕ್ತ ಹನುಮಂತನ ಜಯಂತಿ ಜೋರಾಗಿ ನಡೆಯುತ್ತಿದೆ. ಇದೇ ದಿನ ಆಂಜನೇಯನ ದೇವಸ್ಥಾನದಲ್ಲಿ ಅದ್ಭುತ ಪವಾಡವೊಂದು ನಡೆದಿದೆ. ಆಂಜನೇಯನ ನೇತ್ರದಿಂದ ಆನಂದ ಭಾಷ್ಪ ಸುರಿದಿದೆ. ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಈ ಅದ್ಭುತ ಪವಾಡ ನಡೆದಿದೆ. ಶ್ರೀ ಹನುಮಾನ್ ಜಯಂತಿ ಅಂಗವಾಗಿ ಇಂದು ಬುಡರಸಿಂಗಿ ದೇವಸ್ಥಾನದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತರುವ ಆಂಜನೇಯನ ಕಣ್ಣಿನಿಂದ ಆನಂದ ಬಾಷ್ಪ ಬಂದಿದೆ. ಆಂಜನೇಯ …

Read More »

ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗೆ ನುಡಿನಮನ: ಸಿಬ್ಬಂದಿಯೊಬ್ಬರ ವಿನೂತನ ಗೌರವ

ಹುಬ್ಬಳ್ಳಿ: ಅವರೆಲ್ಲರೂ ಖಾಕಿ ಬಟ್ಟೆ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುವ ಸೇನಾನಿಗಳು. ಅದೆಷ್ಟೋ ಕಾರ್ಯಾಚರಣೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ಸೈನಿಕರು. ಹೋರಾಟದ ನಡುವೆಯೇ ಜೀವ ಕಳೆದುಕೊಂಡ ಹುತಾತ್ಮರಿಗೆ ಸಿಬ್ಬಂದಿಯೊಬ್ಬರು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಎಲ್ಲಿಯಾದರೂ ಬೆಂಕಿ ಹತ್ತಿದರೇ, ಯಾರಾದರೂ ನೀರಿನಲ್ಲಿ ಮುಳುಗಿದರೇ ಹೀಗೆ ಹತ್ತು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರ ರಕ್ಷಣೆಗೆ ಮೊಳಗುವ ಶಬ್ಧವೇ ಅಗ್ನಿಶಾಮಕ ಹಾಗೂ ತುರ್ತು ಸೇವೆಯ ಇಲಾಖೆಯ ವಾಹನದ …

Read More »

ವರುಣನ ಆರ್ಭಟಕ್ಕೆ ನೆಲಕ್ಕೆ ಉರುಳಿದ ಮರ

ಧಾರವಾಡ: ನಗರದ ಸೇರಿದ ಭಾರಿ ಮಳಿಗೆ ನಗರದ ಹೊರವಲಯದಲ್ಲಿರುವ ಕಮಲಾಪುರ ರಸ್ತೆ ಯಲ್ಲಿ ಪ್ರತ್ಯೇಕ ಮಠದ ಮುಂದೆ ಮರವೊಂದು ಬಿದ್ದಿದೆ. ಮರಬಿದ್ದ ಪರಿಣಾಮ ವಾಹನಗಳ ಜಖಂ ವಾಗಿವೆ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಇದೇ ರಸ್ತೆ ಮೇಲೆ ಹಾದು ಹೇಗುವ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Read More »