Breaking News

Breaking News

ಸ್ವಾಮೀಜಿಗಳು ಸರ್ಕಾರ ನೀಡಿದ ಅನುದಾನದಿಂದ ಕೆಲಸ ಮಾಡುತ್ತಾರೆ :ವಿಶ್ವನಾಥ್‌ ಸಲಹೆ

ಮೈಸೂರು: ಮಠಗಳಿಗೆ ಹಣ ನೀಡುವ ಬದಲು, ಅದನ್ನು ಇತರ ಕಾರ್ಯಗಳಿಗೆ ಮೀಸಲಿಡಬೇಕು’ . ‘ಸ್ವಾಮೀಜಿಗಳು ಸರ್ಕಾರ ನೀಡಿದ ಅನುದಾನದಿಂದ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಸಲಹೆ ನೀಡಿದರು. ನಗರದಲ್ಲಿ ಶುಕ್ರವಾರ ಒಡನಾಡಿ ಸಂಸ್ಥೆಯು ಏರ್ಪಡಿಸಿದ್ದ ‘ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ಸಂವಾದದಲ್ಲಿ ಮಾತನಾಡಿದ ಅವರು, ‘ನಗರಕ್ಕೆ ಗುರುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಗಳು ಮಾಡುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಾರೆ ಎಂದಿದ್ದರು.

Read More »

ಮನೆ, ಜಮೀನು ಖರೀದಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಫ್ಲಾಟ್, ಅಪಾರ್ಟ್ಮೆಂಟ್ ಗಳ ಮಾರ್ಗಸೂಚಿ ದರವನ್ನು ಜನವರಿ 1 ರಿಂದ 31 ರವರೆಗೆ ಅನ್ವಯವಾಗುವಂತೆ ಶೇಕಡ 10 ರಷ್ಟು ಕಡಿಮೆ ಮಾಡಲಾಗಿದೆ. ಇದನ್ನು ಮೂರು ತಿಂಗಳು ವಿಸ್ತರಿಸುವ ಸರ್ಕಾರ ಚಿಂತನೆ ನಡೆಸಿದೆ. ಕಂದಾಯ ಸಚಿವ ಆರ್. ಅಶೋಕ್, ಈ ಬಗ್ಗೆ ಮಾಹಿತಿ ನೀಡಿದ್ದು, ರಿಯಲ್ ಎಸ್ಟೇಟ್ ಉದ್ಯಮ ಪ್ರೋತ್ಸಾಹಿಸಲು ಜನವರಿಯಿಂದ ಮಾರ್ಚ್ 31ರವರೆಗೆ ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಶೇಕಡ …

Read More »

ಟೋಲ್ ಕಲೆಕ್ಟ್ ಮಾಡುವುದನ್ನು ಮೋದಲು ಬಿಡಿ : ಪಿ.ಎಚ್.ನೀರಲಕೇರಿ

ಹುಬ್ಬಳ್ಳಿ : ಹೋಸಪೇಟೆವರೆಗೂ ಇನ್ನು ರಾಷ್ಟ್ರೀಯ ಹೆದ್ದಾರಿ ಮಾಡುವ ಕಾರ್ಯವೆ ಮುಗಿದಿಲ್ಲ ಟೋಲ್ ಕಲೆಕ್ಟ್ ಮಾಡುವುದು ನಿಯಮಗಳಿಗೆ ವಿರುದ್ದವಾಗಿದ್ದು ಎಂದು ಕೆ.ಪಿ.ಸಿ.ಸಿ ಮಾದ್ಯಾಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿದರು..ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೆದ್ದಾರಿ ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಳ್ಳಿಗಳಿಗೆ ಹೋಗಲು ಯಾವುದೆ ಸರ್ವಿಸ್ ರಸ್ತೆಯನ್ನ ನಿರ್ಮಾಣ ಮಾಡಿಲ್ಲ ಇಗಾಗಲೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಇದರಿಂದ ಟೋಲ್ ಗೇಟ್ ಗೆ ಹತ್ತಿರವಿರುವ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಜನರಿಗೆ ತುಂಬ ತೊಂದರೆಯಾಗುತ್ತಿದೆ …

Read More »

ಕಲಬುರ್ಗಿ ಹತ್ಯೆ ಆರೋಪಿಗಳು ಮತ್ತೆ ಕೋರ್ಟ್‌ಗೆ ಹಾಜರು: ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ

ಧಾರವಾಡ: ಧಾರವಾಡದ ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ ಮಧ್ಯೆ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಅಮೋಲ್ ಕಾಳೆ, ಪ್ರವೀಣ ಚತುರ್, ಗಣೇಶ ಮಿಸ್ಕಿನ್, ಅಮಿತ್ ಬುದ್ಧಿ, ವಾಸುದೆವ ಸೂರ್ಯವಂಶಿ ಹಾಗೂ ಶರತ್ ಕಲಾಸ್ಕರ್ ಎಂಬ ಆರು ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಈ ಆರೂ ಜನ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಬಿಳಿ ಬಣ್ಣದ ಬಟ್ಟೆ …

Read More »

ಏ.10 ರಂದು ಸಿರಿಧಾನ್ಯಗಳಿಂದ ತಯಾರಿಸಿದ ವಿನೂತನ ಉತ್ಪನ್ನಗಳ ಬಿಡುಗಡೆ ಹಾಗೂ ಗಾಯತ್ರಿ ಇಂಡಸ್ಟ್ರೀಸ್ ಉದ್ಘಾಟನೆ

ಹುಬ್ಬಳ್ಳಿ: ಸಿರಿಧಾನ್ಯಗಳಿಂದ ತಯಾರಿಸಿದ ವಿನೂತನ ಉತ್ಪನ್ನಗಳ ಬಿಡುಗಡೆ ಹಾಗೂ ಗಾಯತ್ರಿ ಇಂಡಸ್ಟ್ರೀಸ್ ಉದ್ಘಾಟನೆ ಸಮಾರಂಭ ಏ.10 ರಂದು ಬೆಳಿಗ್ಗೆ 11 ಕ್ಕೆ ಗಾಯಮಗಟ್ಟಿ ಕೈಗಾರಿಕಾ ಪ್ರದೇಶದ ಮಹಿಳಾ ಉದ್ಯಮಿ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ ಎಂದು ಗಾಯತ್ರಿ ಇಂಡಸ್ಟ್ರೀಸ್ ಮುಖ್ಯಸ್ಥ ಪ್ರಸನ್ನ ಅನಂತಾಚಾರ್ಯ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಾರ್ಖಾನೆ ಉದ್ಘಾಟನೆಯನ್ನು ಆರ್ ಎಸ್ಎಸ್ ನ‌ ಉತ್ತರ ಪ್ರಾಂತದ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಕೇಂದ್ರ ಸಚಿವ ಪ್ರಲ್ಹಾದ್ …

Read More »

ಡಾ. ಬಾಬಾಜೀ ಅವರ ಭವನ ಲೋಕಾರ್ಪಣೆಗೊಂಡರೇ ಅದರ ಶ್ರೇಯಸ್ಸು ಅಬ್ಬಯ್ಯಯವರಿಗೆ ಸಲ್ಲುತ್ತದೆ : ಉಳ್ಳಿಕಾಶಿ

ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ಮುಂದಿನ ದಿನಗಳಲ್ಲಿ ಹಸಿರು ಕ್ರಾಂತಿಯ ಹರಿಕಾರ, ಡ. ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣ ಪೂರ್ಣವಾಗುವ ಖಚಿತತೆಯ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ ಅನ್ಯರು ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಸಮುದಾಯವೊಂದಕ್ಕೆ ಅನ್ಯಾಯ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದು, ಸಮುದಾಯದಕ್ಕೆ ಅನ್ಯಾಯ ಮಾಡುವುದು ತಪ್ಪು ಹಾಗೂ ಖಂಡನೀಯವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಡಾ. ಬಾಬುಜೀ ಅವರ ಭವನ ಲೋಕಾರ್ಪಣೆಗೊಂಡರೆ ಅದರ ನಿಜವಾದ ಶ್ರೇಯಸ್ಸು …

Read More »

ದಾಸಿಮಯ್ಯನವರ ವಚನಗಳು ಸಾಮಾಜಿಕ ಕ್ರಾಂತಿ ಮಾಡಿದ್ದವು

ನವಲಗುಂದ: ಕನ್ನಡದ ಮೊಟ್ಟ ಮೊದಲ ವಚನಕಾರ ಶಿವಶರಣ ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಮಾನವ ಕುಲಕ್ಕೆ ಸನ್ಮಾರ್ಗವನ್ನು ತೋರಿಸಿದ್ದಾರೆ. ಅಂತಹ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ತಹಶೀಲ್ದಾರ್ ಅನೀಲ ಬಡಿಗೇರ ಸಲಹೆ ನೀಡಿದರು. ಬುಧವಾರ ತಾಲ್ಲೂಕಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ ದೇವರ ದಾಸಿಮಯ್ಯ ಜಯಂತ್ಯುತ್ವದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ ಅವರು ಮಾತನಾಡಿದರು. ನೇಕಾರಿಕೆ  ವೃತ್ತಿ ಮಾಡುವವರಿಗೆ …

Read More »

ಕೂಲ್ ಆಗೋಕೆ ಈ ಪುಟ್ಟ ಬಾಲಕ ಮಾಡಿದ್ದೇನು ಗೊತ್ತಾ?

ಹುಬ್ಬಳ್ಳಿ: ದಿನೆ ದಿನೆ ಬಿಸಲಿನ ತಾಪ ಹೆಚ್ಚಾಗುತ್ತಿದೆ. ಜನರು ಕೂಡ ಅಷ್ಟೇ ಬೆಂದು ಹೋಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರದ ಹೇಮಂತ ನಗರದ ನಿವಾಸಿ ಶಶಿಕಾಂತ್, ಶೃತಿ ದಂಪತಿ ಮಗ ಶೌರ್ಯ ಎಂಬುವ ಪುಟ್ಟ ಬಾಲಕ ಫ್ರಿಡ್ಜ್ ಡೋರ್ ಓಪನ್ ಮಾಡಿ ಅದರಲ್ಲಿ ಕುಳಿತುಕೊಂಡು ಕೂಲ್ ಆಗಿದ್ದಾನೆ. ಎಸ್…. ಫ್ರಿಡ್ಜ್ ಡೋರ್ ಓಪನ್ ಮಾಡುತ್ತಿದ್ದಂತೆಯೇ ಹೊರ ಬರುವ ತಂಪಾದ ಗಾಳಿಗೆ ಮನಸೋತ ಬಾಲಕ ಶೌರ್ಯ ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಹೊಸ ಪ್ಲ್ಯಾನ್ …

Read More »

ಅಪರಿಚಿತ ವ್ಯಕ್ತಿ ಮನೆಗೆ ಬಂದ್ರರೆ ಹುಷಾರ್ !

ಹುಬ್ಬಳ್ಳಿ : ಭವಿಷ್ಯ ಕೇಳುವ ನೆಪದಲ್ಲಿ ಬಂದು ವ್ಯಕ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರದ ಬಿವಿಬಿ ಕಾಲೇಜಿನ ಹಿಂದಿನ ಗೇಟ್ ಹತ್ತಿರದ ನಿವಾಸಿ ದೇವೇಂದ್ರಪ್ಪ ಹೊನ್ನಳ್ಳಿ ಎಂಬುವರಿಗೆ ಅಪರಿಚಿತರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ . ಮುಖಕ್ಕೆ ಖರ್ಚಿಫ್ ಕಟ್ಟಿಕೊಂಡು ದೂರುದಾರರ ಕೊಠಡಿಗೆ ಬಂದ ಅಪರಿಚಿತ ಜೇಬಿನಿಂದ ಚಾಕು ತೆಗೆದು ಚುಚ್ಚಿ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ . ಈ ಕುರಿತು ವಿದ್ಯಾನಗರ ಪೊಲೀಸ್ …

Read More »

ದೇವರ ದಾಸಿಮಯ್ಯ ಜಯಂತೋತ್ಸವ ಆಚರಣೆ

ಹುಬ್ಬಳ್ಳಿ: ಗೋಕುಲ ರಸ್ತೆಯ ರಾಜೇಂದ್ರ ನಗರದ ಓರಿಯೆಂಟಲ್ ಶಾಲೆ ಬಳಿಯ ಸಮುದಾಯ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ ನೇಕಾರ ಸಮಾಜದ ವತಿಯಿಂದ ಶ್ರೀ ದೇವರ ದಾಸಿಮಯ್ಯ ಜಯಂತೋತ್ಸವ ಆಚರಿಸಲಾಯಿತು. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು , ಗುಳೇದಗುಡ್ಡ ಬ್ರಹನ್ಮಠದ ಗುರುಸಿದ್ದೇಶ್ವರ ಸ್ವಾಮೀಜಿ , ಇಸ್ಕಾನ್ ದೇವಸ್ಥಾನದ ಎಚ್.ಜಿ ದಾಸ ಸಾನಿಧ್ಯ ವಹಿಸಿದ್ದರು.ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ ನೇಕಾರ ಸಮಾಜ ಬಾಂಧವರು ಉಪಸ್ಥಿತರಿದ್ದರು .

Read More »