Breaking News

Breaking News

ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇಂದು ಕೂಡ ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಕೊಡಗು ಮುಂತಾದ ಕಡೆಗಳಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇಂದಿನಿಂದ 4 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ …

Read More »

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ

ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿಯೊಂದು ಸುವರ್ಣ ಅವಕಾಶ ನೀಡಲಾಗಿದೆ.  ಎಫ್ ಡಿಎ, ಎಸ್ ಡಿಎ, ಪಿಡಿಒ, ಗ್ರೂಪ್ ಡಿ ಹುದ್ದೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತಹ ಅಭ್ಯರ್ಥಿಗಳಿಗೆ ಕೆಆರ್ ಪುರದಲ್ಲಿನ ಇಂಡಿಯನ್ ಐಎಎಸ್, ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ನಾಲ್ಕು ತಿಂಗಳ ಉಚಿತ ತರಬೇತಿ ನೀಡಲಾಗುವುದು. ಏಪ್ರಿಲ್ 9ರಿಂದ ತರಬೇತಿ ಆರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಕೊಳ್ಳಬಹುದು.‌ ಪ್ರವೇಶಾವಕಾಶಕ್ಕಾಗಿ 9902829811 ಸಂಖ್ಯೆಗೆ ಕರೆ ಮಾಡಿ ಮಾಹಿತಿ …

Read More »

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

ನವದೆಹಲಿ: ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ ಅವರು, ಹೈನುಗಾರರಿಗೆ ಕೆಸಿಸಿ ಒದಗಿಸಲು ಸರ್ಕಾರವು ವಿಶೇಷ ಅಭಿಯಾನವನ್ನು ಸಹ ಆಯೋಜಿಸಿದೆ ಎಂದು ಹೇಳಿದರು. ಈ ವರ್ಷದ ಮಾರ್ಚ್ 25 ರವರೆಗೆ ದೇಶದ ಹಾಲಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕ ಕಂಪನಿಗಳಿಗೆ ಸಂಬಂಧಿಸಿದ ಅರ್ಹ ಹೈನುಗಾರರಿಗೆ ಸುಮಾರು 15 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ. ಈ ಕಾರ್ಡ್‌ಗಳು 10,974 …

Read More »

ಐಪಿಎಲ್ ಬೆಟ್ಟಿಂಗ್- ಬಿಗ್ ಟಿವಿ ವರದಿಗೆ ಎಚ್ಚೆತ್ತು ಎರಡು ಗಂಟೆಯಲ್ಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲಿಸರು- Big TV Impact..

ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳು ಸದ್ದಿಲ್ಲದೆ ನೆಡಿತಾನೆ ಇವೆ. ಅದೇ ಸಾಲಿಗೆ ಸೇರಿರುವ ಕ್ರೀಕೆಟ್ ಬೆಟ್ಟಿಂಗ್ ವಾಸನೆ ವಾಣಿಜ್ಯ ನಗರಿಯಲ್ಲಿ ಜೋರಾಗೆ ಹರಿದಾಡುತ್ತಿದ್ದು ಈ ಕುರಿತು ಬಿಗ್ ಟಿವಿ ನ್ಯೂಸ್ ವರದಿ ಪ್ರಸಾರ ಮಾಡಿತ್ತು.ವರದಿ ಕಂಡು ಎಚ್ಚೆತ್ತ ಅಧಿಕಾರಿಗಳು ಹಾಗೂ ಪೋಲಿಸರು ಬೆಟ್ಟಿಂಗ್ ನೆಡೆಸುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಕಾಶಿನಾಥ ಪವಾರ್ ಹಾಗೂ ಕಿರಣ ಭಜಂತ್ರಿ ಎನ್ನಲಾಗಿದ್ದು. ಐಪಿಎಲ್ …

Read More »

ಹುಬ್ಬಳ್ಳಿ ಉಣಕಲ್ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಗರದ ಉಣಕಲ್ ಕೆರೆಯಲ್ಲಿ ನಡೆದಿದೆ. ಇಂದು ಮುಂಜಾನೆ ಸಾರ್ವಜನಿಕರು ಕೆರೆಯ ಪಕ್ಕದಲ್ಲಿ ವಾಯುವಿಹಾರಗೆಂದು ಹೋದಾಗ ಕೆರೆಯಲ್ಲಿ ವ್ಯಕ್ತಿಓರ್ವನ ಶವ ತೇಲಾಡುತ್ತಿದ್ದನ್ನು ನೋಡಿದ ಜನರು ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಗೆ ಕಳಿಸಿದ್ದಾರೆ. ಕೆರೆಯಲ್ಲಿ ಶವ ಪತ್ತೆಯಾದ ವ್ಯಕ್ತಿ ಯಾರು ಏನು ಆಗಿದೆ, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರಿಂದ ತಿಳಿಯಬೇಕಾಗಿದೆ. ಆದಷ್ಟು ಬೇಗೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

ಏ. 7 ರಂದು ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಬ್ಬಳ್ಳಿ : ೭೫ ವರ್ಷಗಳ ಪ್ರಗತಿಪರ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಅಂಗವಾಗಿ ಒಲಿಂಪಿಕ್ಸ್ ಭಾರತ ಜಾಗತಿಕ ಸಂಸ್ಥೆ ಆಯೋಜಿಸಿದ ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ದಿ. ೭ ರಂದು ನಗರದ ಬಸ್ ನಿಲ್ದಾಣದ ಹಿಂದಗೆಡೆಯ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಫೇಷಲ್ ಒಲಿಂಪಿಕ್ಸ್ ಭಾರತ ಕ್ರೀಡಾ ನಿರ್ದೇಶಕರಾದ ಭಾರತಿ ಕೊಠಾರಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು, ದೇಶಾದ್ಯಂತ …

Read More »

ಚಿಕ್ಕ ವಯಸ್ಸಿನಲ್ಲೇ ದೇಶವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಅಥರ್ವ

ಹುಬ್ಬಳ್ಳಿ: ಚಿಕ್ಕ ವಯಸ್ಸಿನಲ್ಲೇ ಇಂಗ್ಲಿಷನ ಪದಗಳ ಜೋಡಣೆ ಸೇರಿದಂತೆ ಹಲವುಗಳಲ್ಲಿ ಅಥರ್ವ ಇಂಡಿಯಾ ಬುಕ್ ಆಪ್ ರಿಕಾರ್ಡ ಮಾಡಿದ್ದಾನೆ ಎಂದು ಅಥರ್ವ ತಾಯಿ ಹೇಳಿದರು.ನ ಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕ ವಯಸ್ಸಿನಲ್ಲೆ ದೇಶವೆ ಗಮನ ಸೆಳೆತುವ ದಾಖಲೆ ಮಾಡಿದ್ದಾನೆ, ಇಂಗ್ಲೀಷ್ ಪದಗಳ ಜೋಡನೆ, ವಿರುದ್ದಾರ್ಥಕ ಪದಗಳ ಹೇಳುವೀಕೆ ಮತ್ತು ಸಾಮಾಜ್ಯ ತಿಳುವಳಿಕೆ ಪ್ರಶ್ನೆ, ಪ್ರಾಣಿ ಮತ್ತು ಪಕ್ಷಿಗಳನ್ನು ಗುರುತಿಸಿ ಹೇಸರು ಹೆಳುತ್ತಾನೆ ಮತ್ತು ಮನೆಯಲ್ಲಿನ ವಸ್ತು ವಾಹನಗಳನ್ನು ಗುಂಪು …

Read More »

ಸಿದ್ಧಾರೂಢರ‌ 186 ನೆ ಜಯಂತ್ಯೋತ್ಸ ನಿಮಿತ್ತ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆ

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮೀಟಿ ‌ವತಿಯಿಂದ ಶ್ರೀ ಸಿದ್ಧಾರೂಢರ‌ 186 ನೆ ಜಯಂತ್ಯೋತ್ಸವದ ನಿಮಿತ್ತವಾಗಿ ಏಳನೆಯ ವರ್ಷದ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆ ಆಯೋಜಿಸಲಾಗಿದೆ. ಇಲ್ಲಿನ‌ ಶ್ರೀ‌ ಸಿದ್ಧಾರೂಢ ಮಠದ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಜನಾ‌ ಸ್ಪರ್ಧೆಯಲ್ಲಿ ರಾಜ್ಯದ ನಾನಾ‌ ಮೂಲೆಗಳಿಂದ ನೂರಾರು ಭಜನಾ ತಂಡಗಳು ‌ಸ್ಪರ್ದೆಯಲ್ಲಿ‌ ಭಾಗವಹಿಸಿವೆ.

Read More »

ಅವಳಿ ನಗರದ ಸಂತೋಷ ಚವ್ಹಾಣ ಉಪಸ್ಥಿತಿಯಲ್ಲಿ 25 ವಾರ್ಡಗಳ ವಿಸ್ತಾರಕರ ವರದಿಗಳ ಪರಿಶೀಲನೆ

ಹುಬ್ಬಳ್ಳಿ : ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವತಿಯಿಂದ 25 ವಾರ್ಡಗಳ ವಿಸ್ತಾರಕರ ವರದಿಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ವಿರೂಪಾಕ್ಷ ರಾಯನಗೌಡ್ರ, ಗೋಪಾಲ ಬದ್ದಿ, ಅವಿನಾಶ ಹರಿವಾಣ ವಿಸ್ತಾರಕ ಪ್ರಮುಖರಾದ ಬಸವರಾಜ , ಅವಿನಾಶ, ಪಧಾದಿಕಾರಿಗಳಾದ ಅಕ್ಕಮ ಹೆಗಡೆ, ಸೀಮಾ ಲದವಾ, ಉಮಾ ಮುಕುಂದ , ಮೇನಕಾ ಹುರಳಿ, ಗೀತಾ ಮುದ್ದಿ, ಸಂಗೀತಾ ಇಜಾರದ, ಚಂದ್ರು ನೋಲ್ವಿ ಸೇರಿದಂತೆ …

Read More »

ಮಸೀದಿ ಮೈಕ್ ನಿಷೇಧಿಸಕ್ಕೆ ತಹಶೀಲ್ದಾರರು ಡೋಂಟ್ ಕೇರ್ : ಮುತಾಲಿಕ್ ಆರೋಪ

ಧಾರವಾಡ :ಮಸೀದಿ ಮೇಲೆ ಹಾಕಲಾಗಿರುವ ಮೈಕ್ ನಿಷೇಧಿಸಬೇಕು ಇಲ್ಲವೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಕಳೆದ 6 ತಿಂಗಳ ಹಿಂದೆ ಶ್ರೀರಾಮ ಸೇನೆ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು . ಆದರೆ , ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು. ನಗರದಲ್ಲಿ ಮಾತನಾಡಿರುವ ಅವರು , ಮಸೀದಿಗಳಿಂದ ಬರುತ್ತಿರುವ ಶಬ್ದವನ್ನು ತಡೆಗಟ್ಟುವ ಸಂಬಂಧ ಶಬ್ದ ಮಾಲಿನ್ಯ ತಡೆಗಟ್ಟುವ ಇಲಾಖೆಗೆ ಮನವಿ …

Read More »