Breaking News

Breaking News

ಹಳೇಬೀಡು ಶಾರ್ಟ್ ಸರ್ಕೀಟ್‌ನಿಂದ ₹1.5 ಕೋಟಿ ನಷ್ಟ; ಅಂಗಡಿ ಸರಕುಗಳು ಸುಟ್ಟು ಭಸ್ಮ

ಬೇಲೂರು ತಾಲೂಕಿನ ಲೇಬೀಡಿನ ದುರ್ಗಾಸ್ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡು, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಹೋಗಿವೆ. ಘಟನೆಯಲ್ಲಿ ಸುಮಾರು ₹1.5 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಟಿವಿ, ಫ್ರಿಡ್ಜ್, ವಾಶಿಂಗ್ ಮಶೀನ್, ಮೊಬೈಲ್ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತಂದರೂ ಹೆಚ್ಚಿನ ಸರಕುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಅಂಗಡಿಯ ದಾಖಲೆಗಳು ಹಾಗೂ ವ್ಯವಹಾರ ಸಂಬಂಧಿತ …

Read More »

ಕಾಸರಗೋಡು:ಅವಯವ ಅವ್ಯವಹಾರ ಪ್ರಕರಣ: ವಿವಿಧೆಡೆ ಇ.ಡಿ. ದಾಳಿ

ಕೇರಳವನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿದ್ದ ಅಕ್ರಮ ಅವಯವ ಸಾಗಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮುಹಮ್ಮದ್ ನಜೀಬ್ ಕಲ್ಲಟ್ರನ ಮನೆ ಹಾಗೂ ಹಲವು ಸ್ಥಳಗಳ ಮೇಲೆ ಇ.ಡಿ. ಗುರುವಾರ ದಾಳಿ ನಡೆಸಿದೆ. ಎರ್ನಾಕುಳಂ, ಕೊಲ್ಲಂ ಸೇರಿದಂತೆ ಹಲವು ಆಸ್ಪತ್ರೆಗಳು ಮತ್ತು ವ್ಯವಹಾರ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದ ಅವಯವ ಸಾಗಾಟ ಜಾಲ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವಯವ ದಾನಿಗಳಿಗೆ ₹5 ರಿಂದ ₹10 ಲಕ್ಷ ನೀಡಿ, ಬಳಿಕ …

Read More »

ಅತ್ಯಾಚಾರಕ್ಕೊಳಗಾದ 9ನೇ ತರಗತಿ ಬಾಲಕಿ 3 ತಿಂಗಳ ಗರ್ಭಿಣಿ: ಪೋಕ್ಸೋ ಕೇಸ್ ದಾಖಲು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿಯ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಶಿಟ್ಲಘಟ್ಟ ತಾಲೂಕಿನ ಗಾಂಡ್ಲಚಿಂತೆ ಗ್ರಾಮದ ಬಾಲಕಿ ಗಡಿಗವಾರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಗಾಡ್ಲಚಿಂತೆ ಗ್ರಾಮದ 23 ವರ್ಷದ ಚಂದ್ರು ಬಾಲಕಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. …

Read More »

ಅನಾಥಾಶ್ರಮ ಹೆಸರಿನಲ್ಲಿ ದಂಧೆ!?

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಆಶ್ರಯ ಗೃಹದ ಮೇಲೆ ಅಧಿಕಾರಿಗಳು ದಾಳಿ ನಡೆಸಿ 64 ಮಹಿಳೆಯರು ಹಾಗೂ ಪುರುಷರನ್ನು ರಕ್ಷಿಸಿದ್ದಾರೆ. ಸಾಧನ ಮಹಿಳಾ ಸಂಘದ ದೂರಿನ ಮೇರೆಗೆ ತಹಸೀಲ್ದಾರ್ ಮತ್ತು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಆಶ್ರಯ ಗೃಹದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜನರನ್ನು ಇರಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ರಕ್ಷಿಸಲಾದವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು …

Read More »

ದಾವಣಗೆರೆಯಲ್ಲಿ 40 ನಕಲಿ ವೈದ್ಯರ ಪತ್ತೆ: ಇಂಜೆಕ್ಷನ್, ಸ್ಟೀರಾಯ್ಡ್ ನೀಡಿದರೆ 3 ವರ್ಷ ಜೈಲು ಶಿಕ್ಷೆ ಖಚಿತ!

ದಾವಣಗೆರೆ ಜಿಲ್ಲೆಯಲ್ಲಿ ತಲೆ ಎತ್ತಿರುವ ನಕಲಿ ಕ್ಲಿನಿಕ್‌ಗಳು ಮತ್ತು ನಕಲಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯ ವರದಿ ಹಾಗೂ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಈಗಾಗಲೇ 40 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ತಾಲೂಕು ವೈದ್ಯಾಧಿಕಾರಿಗಳ ತಂಡ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ಮುಂದುವರಿಸಿದೆ. ಕೆಪಿಎಂಇ ಕಾಯ್ದೆಯ ಪ್ರಕಾರ ಮಾನ್ಯ ವೈದ್ಯಕೀಯ …

Read More »

ಚಿತ್ರದುರ್ಗದಲ್ಲಿ ಭೀಕರ ದುರಂತ; ಯುವಕ ಸಾವು

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಗ್ರ್ಯಾನೈಟ್ಸ್ ಗೋದಾಮಿನಲ್ಲಿ ಭಾರಿ ಗ್ರ್ಯಾನೈಟ್ ಬಿಲ್ಲೆ ಬಿದ್ದು ರಾಣಾ ಪ್ರತಾಪ್ ಸಿಂಹ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯಿಂದ ಗ್ರ್ಯಾನೈಟ್ ಇಳಿಸುವ ವೇಳೆ ಆಕಸ್ಮಿಕವಾಗಿ ಬಿಲ್ಲೆಯೊಂದು ಅವರ ಮೇಲೆ ಬಿದ್ದಿದ್ದು, ಕುತ್ತಿಗೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತರ ಕುಟುಂಬ ಕಣ್ಣು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಿತ್ರದುರ್ಗ: ಮನೆಯಿಂದಲೇ ಕೆಲಸ’ ಆಮಿಷವೊಡ್ಡಿ ₹ 860 ಕೋಟಿ ವಂಚನೆ; ಎಸ್‌ಪಿಗೆ ದೂರು

ಮನೆಯಿಂದಲೇ ಕೆಲಸ ನೀಡುವ ಆಮಿಷವೊಡ್ಡಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್‌ ಮತ್ತು ಮಾರ್ಕೆಟಿಂಗ್‌’ ಸಂಸ್ಥೆ ರಾಜ್ಯದ ಸಾವಿರಾರು ಜನರಿಂದ ₹860 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ 400ಕ್ಕೂ ಹೆಚ್ಚು ಜನರು ₹70 ಕೋಟಿ ಕಳೆದುಕೊಂಡಿದ್ದು, ಕಳೆದ ಮೂರು ತಿಂಗಳಿಂದ ವೇತನ ಹಾಗೂ ಹೂಡಿಕೆ ಹಣ ವಾಪಸ್‌ ಸಿಗುತ್ತಿಲ್ಲ ಎಂದು ಹೂಡಿಕೆದಾರರು ದೂರು ನೀಡಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕರು ನಾಪತ್ತೆಯಾಗಿದ್ದು, ಪ್ರಕರಣವನ್ನು ಸಿಐಡಿ …

Read More »

ಖಾಕಿ ಧರಿಸಿ ಬಂದ ನಕಲಿ ಸಬ್​ ಇನ್ಸ್​ಪೆಕ್ಟರ್​​: ಯಾವ ಸ್ಟೇಷನ್​ ಕೇಳಿದರೆ ನೋ ಆನ್ಸರ್​; ಅಸಲಿ ಪೊಲೀಸರಿಂದ ಅರೆಸ್ಟ್

ಮಿರ್ಜಾಪುರದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಸಬ್‌ಇನ್ಸ್‌ಪೆಕ್ಟರ್ ಎಂದು ಸೋಗು ಹಾಕುತ್ತಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್‌ರಾಜ್ ಮೂಲದ ಶಿವಲಾಲ್ ಪಾಲ್ ಕಲೆಕ್ಟರೇಟ್ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಸಾರ್ವಜನಿಕರು ಪ್ರಶ್ನಿಸಿದಾಗ ತಡಬಡಾಯಿಸಿದ್ದಾನೆ. ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ನಕಲಿ ಪೊಲೀಸ್ ಆಗಿ ಸುತ್ತಾಡುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Read More »

ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರ; ಮಲತಂದೆಗೆ 20 ವರ್ಷ ಜೈಲು

13 ವರ್ಷದ ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮಲತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕಲಬುರಗಿ ವಿಶೇಷ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ₹25 ಸಾವಿರ ದಂಡ ಹಾಗೂ ಬಾಲಕಿಗೆ ₹5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. 2025ರ ಜೂನ್ 14ರಂದು ನಡೆದ ಘಟನೆ ಸಂಬಂಧ ತಾಯಿ ನೀಡಿದ ದೂರಿನ ಮೇರೆಗೆ ಸಬರ್ಬನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ಬಾಲಕಿಯ …

Read More »

3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ: ತೃತೀಯ ಲಿಂಗಿಗಳಿಗೆ 35 ಸೀಟು ಫಿಕ್ಸ್ ಅರ್ಹತೆಗಳೇನು?

ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಖಾಲಿ ಇರುವ 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು 2,266 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗಾಗಿ ಮೀಸಲಿರಿಸಲಾಗಿದೆ. ಜೊತೆಗೆ ತೃತೀಯ ಲಿಂಗಿಗಳಿಗೂ 35 ಹುದ್ದೆಗಳನ್ನು ಮೀಸಲಿಟ್ಟು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪುರುಷ ಅಭ್ಯರ್ಥಿಗಳಿಗೆ 755 ಹುದ್ದೆಗಳು, ಮಾಜಿ ಸೈನಿಕರಿಗೆ 257 ಹುದ್ದೆಗಳು ಹಾಗೂ ಮಹಿಳಾ ಸೇವಾ ಸಿಬ್ಬಂದಿಗೆ …

Read More »