Breaking News

Breaking News

ಮೂಡುಬಿದಿರೆ| ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಲೋಕೇಶ್ ಬಂಧನ

ಮೂಡುಬಿದಿರೆ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಮೂಡುಬಿದಿರೆ ಸಮೀಪ ಬಂಧಿಸಿದ್ದಾರೆ.ಮೂಡುಬಿದಿರೆ ಸಮೀಪದ ನಿವಾಸಿ, ಲಾರಿ ಡ್ರೈವರ್‌, ವಿವಾಹಿತ ಲೋಕೇಶ್ (35) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ವಿದ್ಯಾರ್ಥಿನಿಯ ಪರಿಚಯಸ್ಥನೇ ಆಗಿರುವ ಲೋಕೇಶ್‌ ಕಾಲೇಜು ಬಿಟ್ಟು ಮನೆಗೆ ಹೋಗುತ್ತಿದ್ದ ಯುವತಿಯನ್ನು ತನ್ನ ಬೈಕ್‌ ನಲ್ಲಿ ಕೂರಿಸಿಕೊಂಡು ಹೋಗಿದ್ದು, ಬಳಿಕ ದಾರಿ ಮಧ್ಯೆ ತಾನು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆ ತೋರಿಸುವುದಾಗಿ ಮನೆಯೊಳಗೆ ಕರೆದುಕೊಂಡು ಹೋಗಿ …

Read More »

ಜಮೀನು ಖಾತೆಗೆ ₹2 ಲಕ್ಷ ಲಂಚ; ಹಲಗೂರು ವಿಭಾಗದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಮಳವಳ್ಳಿ (ಮಂಡ್ಯ): ಜಮೀನಿನ ಪೋಡಿ ಸಂಬಂಧ ₹10 ಸಾವಿರ ಲಂಚ ಪಡೆಯುತ್ತಿದ್ದ ಹಲಗೂರು ವಿಭಾಗದ ಕಂದಾಯ ನಿರೀಕ್ಷಕ ಮಧುಸೂದನ್ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಲಗೂರು ಹೋಬಳಿಯ ದಳವಾಯಿ ಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬುವವರು ತಮ್ಮ ತಾಯಿ ಹೆಸರಿನಲ್ಲಿ 12 ಗುಂಟೆ ಸೇರಿದಂತೆ ಸರ್ವೆ ನಂ.72ರ 5 ಎಕರೆ 28 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ₹2 ಲಕ್ಷ ಲಂಚ …

Read More »

ಜೈಲಿನಲ್ಲಿಯೇ ಸಾವನ್ನಪ್ಪಿದ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ

ಬೆಂಗಳೂರು: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಪ್ರಕರಣದ ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದಾಗಲೇ ಈ ಘಟನೆ ನಡೆದಿದೆ. 2010ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್ ಅವರ ಆರೋಗ್ಯದಲ್ಲಿ ಗುರುವಾರ ಏಕಾಏಕಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. …

Read More »

ಅಕ್ರಮ ಸಾಗಾಟ; ವಾಹನ, ಜಾನುವಾರ ಸಮೇತ ಇಬ್ಬರು ಪೊಲೀಸ್ ವಶಕ್ಕೆ

ಆನಂದಪುರ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು 1 ಹಸು, 2 ಹೋರಿ ಕರಗಳು ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಜೂ.11ರ ಗುರುವಾರ ಸಂಜೆ ನಡೆದಿದೆ. ಬಟ್ಟೆ ಮಲ್ಲಪ್ಪದಿಂದ ಆನಂದಪುರದ ಕಡೆಗೆ ಲಗೇಜ್ ಪಿಕಪ್ ವಾಹನದಲ್ಲಿ ಜಾನುವಾರಗಳನ್ನು ಸಾಗಿಸುತ್ತಿದ್ದ ವಿಷಯ ತಿಳಿದು ಬಸವನ ಹೋಂಡ ಬಳಿ ಪೊಲೀಸರು ವಾಹನ, ಜಾನುವಾರ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಬಂಧಿಸಿದ್ದು, ಪರವಾನಿಗೆ …

Read More »

ಸಂಬಳ ಇದ್ದರೂ ಲಂಚಕ್ಕೆ ಕೈ ಹಾಕುವವರ ಪರಿಸ್ಥಿತಿ ಇದೇ..! ನೋಡ್ರಿ ಕೊನೆಗೆ ಏನಾಗುತ್ತೆ ಅಂತ!

ಸಂಬಳ ದಪ್ಪ… ಆದ್ರೆ ಲಂಚದ ಲಾಲಸೆ ತಪ್ಪಿಲ್ಲ..! ಕೊನೆಗೆ ಲೋಕಾಯುಕ್ತ ಬಲೆಗೆ ಬಿದ್ದು ಮಾನ ಹರಾಜು..! ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ಕಾರ ಸಂಬಳ ಕೊಡ್ತಿದ್ರೂ ಲಂಚಕ್ಕೆ ಕೈ..? ಕೊನೆಗೆ ಸಿಗೋದು ಅವಮಾನ, ಅಮಾನತು, ಕೇಸ್..! ಸರ್ಕಾರದಿಂದ ಉತ್ತಮ ಸಂಬಳ, ಸೌಲಭ್ಯ, ಗೌರವ ಎಲ್ಲವೂ ಸಿಕ್ಕಿದರೂ ಕೆಲ ಅಧಿಕಾರಿಗಳು ಇನ್ನೂ ಲಂಚದ ಮೋಹ ಬಿಡುತ್ತಿಲ್ಲ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. …

Read More »

ನೌಕರಿ ಸಿಗದ್ದಕ್ಕೆ ಶ್ರೀಗಂಧ ಕಳ್ಳ ಸಾಗಣೆಗೆ ಇಳಿದ ಮೆಕ್ಯಾನಿಕಲ್‌ ಎಂಜಿನಿಯರ್‌!

ಬೆಂಗಳೂರು: ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಮಹಿಳೆ ಸೇರಿ ಇಬ್ಬರನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಕನಕಪುರ ಕೊಳಗೊಂಡ ನಿವಾಸಿ ಮದುಮತ್ತಿ (39) ಹಾಗೂ ಈಕೆಯ ಸಂಬಂಧಿ ಕೇರಳ ಧರ್ಮಪುರಿಯ ನವೀನ್‌ಕುಮಾರ್‌(23) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ಲಗ್ಗೆರೆ ಪಕ್ಕದ ಸೇತುವೆ ಬಳಿ ಕಾರಿನಲ್ಲಿ 44.780 ಕೆ.ಜಿ.ತೂಕದ 68 ಶ್ರೀಗಂಧ ಮರದ ತುಂಡು …

Read More »

ಗದಗ: ಕುಡಿದ ಮತ್ತಿನಲ್ಲಿ ಪೊಲೀಸ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪುಡಿ ರೌಡಿಗಳು

ಗದಗ ನಗರದ ದೋಬಿ ಘಾಟ್ ಬಳಿ ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದ ಯುವಕರನ್ನು ಬಿಡಿಸಲು ಹೋದ ಶಿರಹಟ್ಟಿ ಠಾಣೆಯ ಪೇದೆ ಅಶೋಕ ಪಾಟೀಲ ಮೇಲೆ ಹಲ್ಲೆ ನಡೆದಿದೆ. ಮಲ್ಲಸಮುದ್ರ ಗ್ರಾಮದ ಯುವಕರು ಅಶೋಕ ಅವರ ತಲೆ, ಮುಖ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದು, ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More »

ಗಾಂಜಾ ಮಾರಾಟಗಾರರಿಬ್ಬರ ಬಂಧನ

ವಿಜಯಪುರ: ಸಮೀಪದ ರಾಷ್ಟ್ರೀಯ ಹೆದ್ದಾರಿ 44ರ ಬುಳ್ಳಹಳ್ಳಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವಿಜಯಪುರ ಸಮೀಪದ ಆವತಿ ಗ್ರಾಮದ ಬಾಲಾಜಿ (23) ಹಾಗೂ ಬಾಲರಾಜ್​ (53) ಬಂಧಿತರು. ಬಂಧಿತರಿಂದ 650 ಗ್ರಾಂ ತೂಕದ ಹಸಿ ಮತ್ತು ಒಣ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಿಜಯಪುರ ಠಾಣೆ ವೃತ್ತ ನಿರೀಕ್ಷಕ ಲಕ್ಷ್ಮಿನಾರಾಯಣ್​ ನೇತೃತ್ವದಲ್ಲಿ …

Read More »

ದೊಡ್ಡಬಳ್ಳಾಪುರದಲ್ಲಿ 6 ಕೆಜಿ ಗಾಂಜಾ ಜಪ್ತಿ: ಉತ್ತರ ಪ್ರದೇಶ ಮೂಲದ ಯುವಕ ಬಂಧನ

6 ಕೆಜಿ 126 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯುವಕನೊಬ್ಬನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರಪ್ರದೇಶ ಮುರಾಬಾದ್ ಮೂಲದ 23 ವರ್ಷದ ಮುಷರಫ್ ಅಲಿ ಎಂದು ಗುರುತಿಸಲಾಗಿದ್ದು, ದೊಡ್ಡಬಳ್ಳಾಪುರ ನಗರದ ಅರ್ಕಾವತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎನ್ನಲಾಗಿದೆ. ಆರೋಪಿಯು ನಗರದಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶದಿಂದ ದೊಡ್ಡಬಳ್ಳಾಪುರಕ್ಕೆ ಒಣ ಗಾಂಜಾವನ್ನು ತಂದು ತನ್ನ ಮನೆಯಲ್ಲಿ ಶೇಖರಿಸಿಟ್ಟಿದ್ದ, ಖಚಿತ ಮಾಹಿತಿ ಮೇರೆಗೆ …

Read More »

ಬೀದರ್‌: 11.775 ಕೆಜಿ ಗಾಂಜಾ ಜಪ್ತಿ; ಇಬ್ಬರ ಬಂಧನ

ಬೀದರ್‌: ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು 11.775 ಕೆಜಿ ಗಾಂಜಾ ಜಪ್ತಿ ಮಾಡಿ, ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ. ತಾಲ್ಲೂಕಿನ ಮರ್ಜಾಪುರ (ಟಿ) ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ₹5.88 ಲಕ್ಷ ಮೌಲ್ಯದ 11.775 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಇನ್ನಿತರೆ ಐವರ …

Read More »