Breaking News

Breaking News

ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್‌, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!

ದಾವಣಗೆರೆ ಜಿಲ್ಲೆಯಲ್ಲಿ ವಂಚನೆ ಪ್ರಕರಣಗಳಿಗೆ ಕುಖ್ಯಾತನಾಗಿರುವ “ಸಿಗ್ಲಿ ಬಸ್ಯಾ” ವಿರುದ್ಧ ಮತ್ತೊಂದು ಮೋಸ ಪ್ರಕರಣ ದಾಖಲಾಗಿದೆ. ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಕೊಡಿಸುವುದಾಗಿ ನಂಬಿಸಿ ನ್ಯಾಮತಿ ತಾಲೂಕಿನ ಶಿವರಾಜ್ (59) ಅವರಿಂದ ₹70 ಸಾವಿರ ಪಡೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವರಾಜ್ ಅವರನ್ನು ಜಗಳೂರಿಗೆ ಕರೆತಂದ ಆರೋಪಿ, ಪೊಲೀಸ್ ಠಾಣೆ ಪಕ್ಕದ ಹೋಟೆಲ್‌ನಲ್ಲಿ ಹಣ ಪಡೆದು “ಚಿನ್ನ ತಂದುಕೊಡುತ್ತೇನೆ” ಎಂದು ಹೇಳಿ ನಾಪತ್ತೆಯಾಗಿದ್ದಾನೆ. ಬಳಿಕ ವಿವಿಧ ನೆಪ ಹೇಳಿ …

Read More »

ಟೀ ಕುಡಿಯಲು ಹೋಗಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಶಿವಮೊಗ್ಗ: ಟೀ ಕುಡಿಯಲು ಹೋಗಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಭದ್ರಾವತಿಯಲ್ಲಿ ಸೋಮವಾರ (ಜೂ.08) ನಡೆದಿದೆ. ವಿಶ್ವ ಅಲಿಯಾಸ್ ಮುದ್ದೆ (35) ಹಲ್ಲೆಗೊಳಗಾದ ಯುವಕ. ಭದ್ರಾವತಿ ನಗರದ ಅನ್ವರ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಭದ್ರಾವತಿ ಹಳದಮ್ಮ ಬೀದಿಯ ನಿವಾಸಿಯಾದ ವಿಶ್ವ ಟೀ ಕುಡಿಯಲು ಹೋಗಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಎರಡು ಕೈ ತುಂಡಾಗುವ ರೀತಿ ಹಾಗೂ ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ …

Read More »

ವಿದ್ಯಾರ್ಥಿನಿಯ ಮೇಲೆ ರೇಪ್ ಅಟೆಂಪ್ಟ್ – ಚಿಂದಿ ಆಯುವಾತ ಅರೆಸ್ಟ್!

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ 27 ವರ್ಷದ ಸೈಫುಲ್ ಮಂಡಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 2ರ ಮುಂಜಾನೆ ಪಟ್ಟಂದೂರು ಅಗ್ರಹಾರದಲ್ಲಿರುವ ಕೋ-ಲಿವಿಂಗ್ ಪಿಜಿ ಸಮೀಪ ಈ ಘಟನೆ ನಡೆದಿದೆ. ಕೇರಳ ಮೂಲದ 23 ವರ್ಷದ ವಿದ್ಯಾರ್ಥಿನಿ ಟೀ ಕುಡಿದು ಪಿಜಿಗೆ ಮರಳುತ್ತಿದ್ದ ವೇಳೆ ಆರೋಪಿ ಹಿಂಬಾಲಿಸಿ ದಾಳಿ ನಡೆಸಿ, ಕತ್ತಲೆಯಿದ್ದ ರಸ್ತೆಯ ಬದಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡ …

Read More »

ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ: ಆರೋಪಿ ಬಂಧನ

ಬೆಂಗಳೂರು: ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಮೊಬೈಲ್‌ ದೋಚಿ ಪರಾರಿಯಾಗಿದ್ದ ಅಸ್ಲಂ ಪಾಷಾ ಎಂಬಾತನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇನಹಳ್ಳಿಯ ಅಸ್ಲಂ ಪಾಷಾ ಹೆಬ್ಬಾಳದ ಬಳಿಯ ಸಿಐಎಲ್‌ ಲೇಔಟ್‌ ನಿವಾಸಿ ಜಯಶ್ರೀ ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದ.ಆರೋಪಿಯಿಂದ 6.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಸ್ಲಂ ಪಾಷಾ, ಜಯಶ್ರೀ ಅವರ ಮನೆ …

Read More »

ಮೊಮ್ಮಗನ ನೋಡಲು ಸೊಸೆ ಮನೆಗೆ ಹೋದ ಅಜ್ಜನ ಕೊಲೆ

ಕಲಬುರಗಿ: ಮೊಮ್ಮಗನನ್ನು ನೋಡಲು ಹೋಗಿದ್ದ ಅಜ್ಜನನ್ನು ಸೊಸೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿದ ಘಟನೆ ಕಲಬುರಗಿ ಹೊರವಲಯದ ಬೇಲೂರ ಕ್ರಾಸ್ ಸಮೀಪ ನಡೆದಿದೆ. ಬೇಲೂರ ತಾಂಡಾ ನಿವಾಸಿ ರಾಜು ರಾಥೋಡ್(48) ಕೊಲೆಯಾದ ವ್ಯಕ್ತಿ. ರಾಜು ರಾಥೋಡ್ ಮಗ ಶಿವಕುಮಾರ್ ಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತು. ಮುಂಬೈನ ಆಸ್ಪತ್ರೆಗೆ ಮೊಮ್ಮಗನನ್ನು ನೋಡಲು ತೆರಳಿದಾಗ ಬೀಗರ ಜೊತೆಗೆ ರಾಜು ರಾಥೋಡ್ ಗೆ ಜಗಳವಾಗಿದೆ. ಮುಂಬೈನಿಂದ ಕಲಬುರಗಿಗೆ ವಾಪಸ್ …

Read More »

ಮರಳು ಅಕ್ರಮ ದಾಸ್ತಾನು ಪತ್ತೆ; ಪ್ರಕರಣ ದಾಖಲು

ವೇಣೂರು: ಆರಂಬೋಡಿ ನಿಡ್ಯಾಲಬೆಟ್ಟು ಪ್ರದೇಶದಲ್ಲಿ ಮರಳು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸರು ದಾಳಿ ನಡೆಸಿ ಸುಮಾರು 12 ಟಿಪ್ಪರ್ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ದಿನೇಶ್ ಕುಲಾಲ್ ಅವರು ಕಳೆದ 2-3 ದಿನಗಳಿಂದ ಪಲ್ಗುಣಿ ನದಿಯಿಂದ ಮರಳು ಅಕ್ರಮವಾಗಿ ಸಾಗಿಸಿ ಸುಂದರ ಪೂಜಾರಿ ಅವರ ಖಾಲಿ ಜಾಗದಲ್ಲಿ ಸಂಗ್ರಹಿಸಿದ್ದು, ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಬೃಹತ್ ಚಿನ್ನ ಕಳ್ಳಸಾಗಾಣಿಕೆ ಜಾಲ : ಬಿಜೆಪಿ ಮುಖಂಡ ಸೇರಿ ಏಳು ಮಂದಿ ಬಂಧನ

ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಭಾರಿ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಭೇದಿಸಿರುವ ಡಿಆರ್‌ಐ ಅಧಿಕಾರಿಗಳು, ಬಿಜೆಪಿ ಮುಖಂಡ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೇಣದಲ್ಲಿ ಮಿಶ್ರಣ ಮಾಡಿದ್ದ ಚಿನ್ನದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹5 ಕೋಟಿ ಎಂದು ಅಂದಾಜಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ವಿಮಾನ ನಿಲ್ದಾಣದ ಸಮೀಪದ ಹೋಟೆಲ್ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು, ಚಿನ್ನ ಸಾಗಾಟದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ವಿಮಾನ ನಿಲ್ದಾಣ …

Read More »

ಬೆಂಗಳೂರು | ನಕಲಿ ಅಂಕಪಟ್ಟಿ ಸೃಷ್ಟಿಸುವ ಜಾಲ ಪತ್ತೆ: ತನಿಖೆ ಚುರುಕು

ಬೆಂಗಳೂರು ನಗರದಲ್ಲಿ ನಕಲಿ ಅಂಕಪಟ್ಟಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಮತ್ತೊಂದು ಬೃಹತ್ ಜಾಲವನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಪತ್ತೆಹಚ್ಚಿದೆ. ಕೋರಮಂಗಲದ ಡಿಜಿಟಲ್ ಎಜುಕೇಷನ್ ಸಂಸ್ಥೆಯ ಮಾಲೀಕ ರಾಜಾ ರೆಡ್ಡಿ ಹಾಗೂ ಸಹಚರ ಆರ್ಯನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಕಾಲೇಜು ವ್ಯಾಸಂಗ ಮಾಡದ ಅಭ್ಯರ್ಥಿಗಳಿಂದ ₹30 ಸಾವಿರದಿಂದ ₹50 ಸಾವಿರದವರೆಗೆ ಹಣ ಪಡೆದು ನಕಲಿ ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಪದವಿ ಅಂಕಪಟ್ಟಿಗಳನ್ನು …

Read More »

ಕಾಯಿಪಲ್ಲೆ ಖರೀದಿ ನೆಪದಲ್ಲಿ ಬಂಡಾರ ಎರಚಿ ಹಣವನ್ನು ದೋಚಿದ ಸಾಧುವೇಷದ ಕದೀಮರು

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್‌ ತರಕಾರಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು 1 ಲಕ್ಷ ರೂ. ನಗದು ದೋಚಿ ಪರಾರಿಯಾಗಿದೆ. ಭಾನುವಾರ ಸಂತೆ ವೇಳೆ ನಡೆದ ಈ ಘಟನೆ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಲಕ್ಷ್ಮೀ ವೆಂಕಟೇಶ್ವರ ತರಕಾರಿ ಮಳಿಗೆಯ ಮಾಲೀಕ ಮೌನೇಶ್ ಅವರೊಂದಿಗೆ ವ್ಯಾಪಾರದ ಮಾತುಗಳನ್ನಾಡಿದ ಆರೋಪಿಗಳು, ಒಂದು ರೂಪಾಯಿ ನಾಣ್ಯವನ್ನು ಕೆಳಗೆ ಬಿಸಾಕಿ ಅದನ್ನು ಎತ್ತಲು ಬಗ್ಗಿದ …

Read More »

ಬೆಂಗಳೂರು: ಹಲ್ಲೆ ನಡೆಸಿ ಆಭರಣ ದೋಚಿದ್ದ ಆರೋ‍ಪಿ ಸೆರೆ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಹೋಂಸ್ಟೇ ನಲ್ಲಿ ಮೈಸೂರಿನ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿನುತಾ(27) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆ ನಿವಾಸಿಯಾಗಿರುವ ಜಗನ್ನಾಥ ಮತ್ತು ರೇಣುಕಾ ದಂಪತಿಯ ಪುತ್ರಿ ವಿನುತಾ ಸೇರಿದಂತೆ 14 ಜನರ ತಂಡ ಕೊಡಗು ಜಿಲ್ಲಾ ಪ್ರವಾಸಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ವಿನುತಾ ಕುಸಿದು …

Read More »