Breaking News

Breaking News

ಕಸ್ಟಮ್ಸ್ ಅಧಿಕಾರಿ ಮೇಲೆ ಅತ್ಯಾಚಾರ: ಕೃಪಲಾನಿ ವಿರುದ್ಧ ಇನ್ನೊಂದು ಕೇಸ್‌

ಬೆಂಗಳೂರು: ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿರುವ ಕೃಪಲಾನಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಕಸ್ಟಮ್ಸ್ ಅಧಿಕಾರಿ ಆಂಥೋನಿ ರಾಜ್ ನೀಡಿದ ದೂರಿನ ಮೇರೆಗೆ ಹಲಸೂರು ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಸ್ಮಗ್ಲಿಂಗ್ ಪ್ರಕರಣದಲ್ಲಿ ದಂಡ ವಿಧಿಸಿದ್ದಕ್ಕೆ ಕೋಪಗೊಂಡಿದ್ದ ಆರೋಪಿ, ಆಂಥೋನಿ ರಾಜ್ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಜಿಎಸ್‌ಟಿ ಹಾಗೂ ಕಸ್ಟಮ್ಸ್ ಮಹಿಳಾ ಅಧಿಕಾರಿಗಳೊಂದಿಗೆ ಸಲುಗೆ ಬೆಳೆಸಿ, ಬಳಿಕ ಪ್ರೀತಿ ಹಾಗೂ ಮದುವೆಯ …

Read More »

ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳು, ಪೊಲೀಸರ ಮೇಲೆ ಹ*ಲ್ಲೆ; ಆರೋಪಿ ವಶಕ್ಕೆ

ಚಿಕ್ಕಮಗಳೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಬಾಲ್ಯ ವಿವಾಹ ತಡೆಯಲು ತೆರಳಿದ್ದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪಿಡಿಒ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಗಲಾಟೆ ಸಂಭವಿಸುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯ ಸಬ್ ಇನ್ಸೆಕ್ಟರ್ ರಘುನಾಥ್ …

Read More »

ಲಾಡ್ಜ್ ರೂಮ್ ನಲ್ಲಿ ಗನ್ ಬುಲೆಟ್ ‌ಗಳ ಸಂಗ್ರಹ – ಓರ್ವ ಆರೋಪಿ ಸೆರೆ!

ಬೆಂಗಳೂರು ಹೃದಯಭಾಗದಲ್ಲಿರುವ ಗಾಂಧಿನಗರದ ಲಾಡ್ಜ್‌ ಒಂದರಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ಜೀವಂತ ಗುಂಡುಗಳು ಪತ್ತೆಯಾಗಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.​ ಮೆಜೆಸ್ಟಿಕ್ ಸಮೀಪದ ಗಾಂಧಿನಗರದಲ್ಲಿರುವ ಲಾಡ್ಜ್‌ನ ಸಿಬ್ಬಂದಿಗೆ ಶಂಕಿತನ ನಡೆ ಹಾಗೂ ಆತನ ಬಳಿಯಿದ್ದ ವಸ್ತುಗಳ ಬಗ್ಗೆ ಅನುಮಾನ ಬಂದಿದೆ. ತಕ್ಷಣ ಜಾಗೃತರಾದ ಸಿಬ್ಬಂದಿ ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಲಾಡ್ಜ್ ರೂಮ್ …

Read More »

16 ವರ್ಷ ಗಿರಗಿಟ್ಲೆ ಆಡಿಸಿದ್ದವ ಅಂದರ್

ಹುಬ್ಬಳ್ಳಿ: ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಬಂಧಿಸುವಲ್ಲಿ ಇಲ್ಲಿಯ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಕಮಲಾಪೂರದ ಲೋಕೇಶ ಭೀಮಕ್ಕನವರ ಬಂಧಿತ. ಶ್ರೀರಾಮ ಫೈನಾನ್ಸ್‌ನಲ್ಲಿ ಸೀಜ್ ಮಾಡಿ ನಿಲ್ಲಿಸಿದ್ದ ಲಾರಿಯ ನಂಬರ್ ಪ್ಲೇಟ್ ತೆಗೆದುಕೊಂಡು ತನ್ನ ಲಾರಿಗೆ ಹಾಕಿ, ಟ್ರಾನ್ಸ್‌ಪೋರ್ಟ್ ಕಂಪನಿಯೊಂದರ ವ್ಯವಸ್ಥಾಪಕರಿಗೆ ನಂಬಿಸಿದ್ದಾನೆ. ನಕಲಿ ದಾಖಲಾತಿಗಳನ್ನು ಹಾಜರುಪಡಿಸಿ ಹಿಂದೂಸ್ತಾನ ಲೀವರ್ ಕಂಪನಿಯಿಂದ ಹೊಸಪೇಟೆ ಮತ್ತು ಕಂಪ್ಲಿಗೆ ಹೋಗಬೇಕಾದ 14,87,289 ರೂ. ಮೌಲ್ಯದ ಸೋಪು, ಪೌಟರ್, ಶ್ಯಾಂಪೂ ಇತರ …

Read More »

ಬಳ್ಳಾರಿ | ವೇಶ್ಯಾವಾಟಿಕೆ: ಮಹಿಳೆಯ ರಕ್ಷಣೆ

ಇಲ್ಲಿನ ಸೊಂತ ಲಿಂಗಣ್ಣ ಕಾಲೋನಿಯ ತಿರುಮಲ ಆಸ್ಪತ್ರೆ ಮುಂಭಾಗದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಆಧರಿಸಿ ಗಾಂಧಿನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬಾಗಲಕೋಟೆ ಮೂಲದ ಮಹಿಳೆಯನ್ನು ರಕ್ಷಿಸಿ, ನಗರದ ಸ್ತ್ರೀ ಸೇವಾ ನಿಕೇತನ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ದೇವಿಪ್ರಸನ್ನ ಮತ್ತು ಜಲ್ಲಾ ಸೂರಿ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪ್ರಮುಖ ಆರೋಪಿ ದೇವಿಪ್ರಸನ್ನ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. …

Read More »

ಬೆಳ್ತಂಗಡಿ | ಕಾರು ಡಿಕ್ಕಿ: ಮಹಿಳೆ ಸಾವು

ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಬಳಿ ಆಲ್ಟೊ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಸಾಗುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ಮೃತರನ್ನು ಬೆಳ್ತಂಗಡಿ ತಾಲ್ಲೂಕಿನ ಬಳಂಜ ಗ್ರಾಮದ ಶೈಲಜಾ (35) ಎಂದು ಗುರುತಿಸಲಾಗಿದೆ. ಅವರು ಅನಿಲ್ ಫಾರ್ಮ್‌ನ ಮಾಲೀಕ ಅನಿಲ್ ಭಟ್ ಅವರ ಪತ್ನಿ.ಘಟನೆಯಲ್ಲಿ ಅನಿಲ್ ಭಟ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ್ ಭಟ್ ಮತ್ತು ಶೈಲಜಾ ತಮ್ಮ ಪಾರ್ಮ್‌ನ ಕೆಲಸ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬೆಳ್ತಂಗಡಿ …

Read More »

ಗಾಳದ ವಿಷಯಕ್ಕೆ ಚಾಕು ಇರಿತ

ಹುಬ್ಬಳ್ಳಿ: ಉಣಕಲ್ ಕೆರೆಯಲ್ಲಿ ಮೀನು ಹಿಡಿಯುವ ವಿಷಯವಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ವಿದ್ಯಾನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ತಾಫ್ ಮತ್ತವನ ಸ್ನೇಹಿತರು ಸೇರಿ ಇಸ್ಮಾಯಿಲ್ ನದಾಫ್ (22) ಎಂಬಾತನಿಗೆ ಇರಿದಿದ್ದಾರೆ. ಗಾಯಗೊಂಡ ಇಸ್ಮಾಯಿಲ್‌ನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೇ 17ರಂದು ಮಧ್ಯಾಹ್ನ ಮೀನು ಹಿಡಿಯಲು ಇವರೆಲ್ಲರೂ ಹೋಗಿದ್ದರು. ಮೀನಿನ ಗಾಳದ ದಾರ ದಾಟುವ ಸಂಬಂಧ ಜಗಳವಾಗಿ ಇಸ್ಮಾಯಿಲ್ ಕುತ್ತಿಗೆ ಹತ್ತಿರ ಚಾಕುವಿನಿಂದ ಇರಿಯಲಾಗಿದೆ ಎಂದು …

Read More »

ಡಿಜಿ ಆದೇಶ ಗಾಳಿಗೆ… ಟ್ರಾಫಿಕ್ ಪೊಲೀಸರ ದೌರ್ಜನ್ಯ ಮಿತಿ ಮೀರಿ..!

ರಿಂಗ್ ರೋಡ್‌ನಿಂದ ಬೈಪಾಸ್‌ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ..! ಜನರ ರಕ್ಷಕರುನಾ…? ಅಥವಾ ರಸ್ತೆ ಮೇಲೆ ಹಪ್ತಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ ಸ್ಫೋಟ..! ರಸ್ತೆಯ ಮೇಲೆ ರಕ್ಷಕರುನಾ… ಅಥವಾ ಕಿರುಕುಳಗಾರರಾ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ! ನಗರದ ರಸ್ತೆಗಳಲ್ಲಿ ದಿನನಿತ್ಯ ಒಂದು ಹೊಸ ಭೀತಿ ಸೃಷ್ಟಿಯಾಗುತ್ತಿದೆ. ವಾಹನ ಸವಾರರಿಗೆ ಸುರಕ್ಷತೆ ನೀಡಬೇಕಾದ ಟ್ರಾಫಿಕ್ ಪೊಲೀಸರು ಈಗ ಕಿರುಕುಳದ …

Read More »

ಸಂಕೇಶ್ವರ | ಬೈಕ್‌ ಕಳವು: ಆರು ಆರೋಪಿಗಳ ಬಂಧನ-14 ಬೈಕ್‌ ವಶಕ್ಕೆ

ಸಂಕೇಶ್ವರ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ 6 ಬೈಕ್‌ ಕಳ್ಳರನ್ನು ಬಂಧಿಸಿದ್ದು ಅವರಿಂದ ₹6,10,000 ಮೌಲ್ಯದ 14 ಮೋಟಾರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ಅಮಿತ ಬಸವರಾಜ ಕೋಳಿ, ಆನಂದ ಯಲ್ಲಪ್ಪಾ ಘಸ್ತಿ, ಸುಮೀತ ಗಂಗಾರಾಮ ಕಮ್ಮಾರ, ಶಿವರಾಜ ನಿಂಗೌಡ ಪಾಟೀಲ, ಓಂಕಾರ ಮೋಹನ ಕಡಲಗಿಕರ, ಕಿರಣ ಹಣುಮಂತ ಕಮ್ಮಾರ ಅವರನ್ನು ಸಂಕೇಶ್ವರ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿ.ಪಿ.ಐ ಗಣಪತಿ ಕೊಂಗನೊಳ್ಳಿ, ಪಿ.ಎಸ್.ಐಗಳಾದ …

Read More »

ಕೇರಳಂ ರಾಜ್ಯ ಲಾಟರಿ ಮಾರುತ್ತಿದ್ದ ಆರೋಪಿ ಸೆರೆ

ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೇರಳಂ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಲಾಟರಿ ಟಿಕೆಟ್ ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಗೊವಿಂದನಾಯಕ(31) ಬಂಧಿತ. ಈತ ಪಟ್ಟಣದಲ್ಲಿ ಕೇರಳಂ ರಾಜ್ಯ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ, ಬಗ್ಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಈತನಿಂದ 200 ಟಿಕೆಟ್, ಒಟ್ಟು ರೂ.10,000 ಗಳ ಲಾಟರಿ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ …

Read More »