Breaking News

Breaking News

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಆನೇಕಲ್: 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಜಿಗಣಿ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ರಾಮಾಯಣ್ ಯಾದವ್(56) ಮತ್ತು ಸಬೀರ್(51) ಬಂಧಿತರು. ಕಿಡಿಗೇಡಿಗಳು ಯಾರಿಗೂ ತಿಳಿಯದಂತೆ ಒಡಿಶಾದಿಂದ ಪೌಲ್ಟ್ರಿ ಫೀಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಜಿಗಣಿ ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದ ತಂಡದಿಂದ ಬೇಗೂರು ಮುಖ್ಯರಸ್ತೆಯ ಕೊಪ್ಪ …

Read More »

ಆನ್‌ಲೈನ್ ಗೇಮಿಂಗ್ ಕಂಪೆನಿಗಳಿಗೆ ಶಾಕ್: ಬೆಂಗಳೂರು ಸಹಿತ 16 ಕಡೆಗಳಲ್ಲಿ ಇಡಿ ದಾಳಿ

ಆನ್‌ಲೈನ್ ಗೇಮಿಂಗ್ ಕಂಪೆನಿಗಳಿಗೆ ಇಂದು ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದ್ದು, ಬೆಂಗಳೂರು ಸಹಿತ ದೇಶಾದ್ಯಂತ 16 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು ಮೂಲದ ಗೇಮ್ಸ್‌ಕ್ರಾಫ್ಟ್ ಕಂಪನಿಯು ರಮ್ಮಿ ಕಲ್ಚರ್ ಎಂಬ ಆಪ್ ಮೂಲಕ ಬಳಕೆದಾರರಿಗೆ ವಂಚನೆ ಮಾಡಿದೆ. ಆಟದ ಹೆಸರಿನಲ್ಲಿ ದೊಡ್ಡ ಮಟ್ಟದ ಹಣಕಾಸು ಅಕ್ರಮ ನಡೆಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ದೆಹಲಿಯಲ್ಲಿ ಎಫ್‌ಐಆರ್ ಗಳು ದಾಖಲಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಇಡಿ ತನಿಖೆ …

Read More »

ನಿಯಂತ್ರಣ ತಪ್ಪಿ ಅರಣ್ಯದತ್ತ ನುಗ್ಗಿದ ಸಾರಿಗೆ ಬಸ್

ಹನೂರು: ತಾಲೂಕಿನ ರಾಮಾಪುರ ಸಮೀಪದ ನಾಲ್‌ರೋಡ್ ಬಳಿ ಬುಧವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದತ್ತ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 11 ಗಂಟೆಯಲ್ಲಿ ಹನೂರಿನಿಂದ ಜಲ್ಲಿಪಾಳ್ಯದ ಕಡೆಗೆ ಹೊರಟ ಸಾರಿಗೆ ಬಸ್‌ನಲ್ಲಿ 39 ಪ್ರಯಾಣಿಕರಿದ್ದರು. ಈ ವೇಳೆ ನಾಲ್‌ರೋಡ್ ಬಳಿ ಎದುರು ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಬದಿಗೆ ಸರಿಸಿದಾಗ ಬಸ್ ಚಾಲಕ ನಿಯಂತ್ರಣ ತಪ್ಪಿದೆ …

Read More »

ಯುವಕನಿಗೆ ತಂಡದಿಂದ ಹಲ್ಲೆ: 30 ಮಂದಿಯ ವಿರುದ್ಧ ಎಫ್‌ಐಆರ್; ಮೂವರ ಬಂಧನ

ಕೊಪ್ಪಳ: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೆ ಸಂಬಂಧಿಸಿ ನಗರ ಠಾಣೆಯ ಪೊಲೀಸರು, 30ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಮೊಬೈಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಅಹ್ಮದ್ ಮೂಲಿಮನಿ (22) ಮೇ 6 ರಂದು ರಾತ್ರಿ 8:30ರ ಸುಮಾರಿಗೆ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಹೋಟೆಲ್ …

Read More »

ಅಕ್ರಮ ಪಡಿತರ ಅಕ್ಕಿ ದಂಧೆ? ಎಸ್ಪಿ ಗನ್‌ಮ್ಯಾನ್ ಬಂಧನ!

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣ ಸಂಬಂಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಎಸ್ಪಿ ಗನ್‌ಮ್ಯಾನ್ ಬಂಧಿಸಲಾಗಿದೆ. ಅಕ್ರಮ ಪಡಿತರ ಅಕ್ಕಿ ಸಾಗಣೆದಾರರಿಂದ ಸುಮಾರು 3 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಎಸ್ಪಿ ಕಚೇರಿಯ ಗನ್‌ಮ್ಯಾನ್ ದೇವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ. ಮಾಹಿತಿಯ ಪ್ರಕಾರ, ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಕಾನೂನು ಕ್ರಮದ …

Read More »

ಆಸ್ತಿ ಕಲಹ: ಕಿಚ್ಚಿಟ್ಟು ಮಹಿಳೆಯ ಕೊಲೆ ಯತ್ನ

ಕಡಬ: ಆಸ್ತಿ ವಿಷಯಕ್ಕೆ ಸಂಬಂಧಿಸಿದ ಮನಸ್ತಾಪವೊಂದು ವಿಕೋಪಕ್ಕೆ ತಿರುಗಿ, ಐತ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕುಸಮಾಧರ ಎಂಬಾತನನ್ನು ಬಂಧಿಸಿದ್ದಾರೆ. ಐತ್ತೂರು ಗ್ರಾಮದ ಕೆರ್ಮಾಯಿ ಪಾದೆಮಜಲು ನಿವಾಸಿ ಬೇಬಿ ಹಾಗೂ ಅವರ ಮೈದುನ ಕುಸಮಾಧರ ಅವರಿಗೆ ಆಸ್ತಿ ವಿಷಯದಲ್ಲಿ ಮನಸ್ತಾಪವಿದೆ. ಬೇಬಿ ಅವರ ಪತಿ ನೋಣಯ್ಯ ಹಾಗೂ ಅವರ ಸಹೋದರ …

Read More »

ಮುರ: ರಿಕ್ಷಾ ಚಾಲಕ – ಇತರರಿಂದ ಬಸ್ಸು ಚಾಲಕನಿಗೆ ಹಲ್ಲೆ

ಪುತ್ತೂರಿನ ಮುರದಲ್ಲಿ ಬಸ್ಸು ಚಾಲಕನೋರ್ವನಿಗೆ ಆಟೋ ರಿಕ್ಷಾ ಚಾಲಕ ಹಾಗೂ ಇತರ ಮೂವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಮೇ 6ರಂದು ನಡೆದಿದೆ. ಪುತ್ತೂರು ಸಾಮೆತ್ತಡ್ಕ ನಿವಾಸಿ ರಾಕೇಶ್ ಡಿಸೋಜ ಹಲ್ಲೆಗೊಳಗಾದವರು. ಅವರು ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಮೇ 6ರಂದು ಬಸ್ಸನ್ನು ಚಲಾಯಿಸಿಕೊಂಡು ವಿಟ್ಲದಿಂದ ಮದುವೆ ದಿಬ್ಬಣವನ್ನು ಮಡಿಕೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಬಸ್ಸು ಉರಿಮಜಲಿಗೆ ತಲುಪಿದಾಗ ಮುಂದೆ ಹೋಗುತ್ತಿದ್ದ ಆಟೋವನ್ನು ಅದರ ಚಾಲಕ ಏಕಾಏಕಿ ನಿಲ್ಲಿಸಿರುವುದನ್ನು …

Read More »

ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರೇ ಎಚ್ಚರ, ಕಾರ್ ಗ್ಲಾಸ್ ಒಡೆದು ಕನ್ನ ಹಾಕಿದ ಕಳ್ಳರು-

ಬೆಂಗಳೂರು ನಗರದ ರಸ್ತೆಬದಿಗಳಲ್ಲಿ ವಾಹನ ನಿಲ್ಲಿಸುವವರು ಈಗ ಅತೀವ ಜಾಗರೂಕರಾಗಿರಬೇಕಿದೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸ ಮಾದರಿಯ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದ ದುಬಾರಿ ಪರಿಕರಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಾರಿನಲ್ಲೇ ಇಟ್ಟು ಮಾಲೀಕರು ಮನೆಗೆ ತೆರಳಿದ್ದರು. ಮರುದಿನ ಮುಂಜಾನೆ ಬಂದು ನೋಡಿದಾಗ, ದುಷ್ಕರ್ಮಿಗಳು ಕಿಟಕಿಯ ಗಾಜು ಪುಡಿಮಾಡಿ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿರುವುದು ಕಂಡುಬಂದಿದೆ. ಬೆಂಗಳೂರಿನಾದ್ಯಂತ ಬೀಡುಬಿಟ್ಟಿರುವ ಇಂತಹ ಚಾಣಾಕ್ಷ …

Read More »

ಅರಣ್ಯ ಸಿಬಂದಿಗೆ ಬೆದರಿಕೆ ; ಆರೋಪಿ ಬಂಧನ

ಕುಂದಾಪುರ: ಸದಾಶಿವ ಕೋಟೆಕಾರ್ ಎಂಬುವರು ಬೆದರಿಸಿ, ಹಣಕ್ಕೆ ಬೆದರಿಕೆ ಹಾಕಿರುವುದಾಗಿ ಅರಣ್ಯ ಇಲಾಖೆಯಲ್ಲಿ ಅರಣ್ಯ ಗಸ್ತು ಪಾಲಕನಾಗಿರುವ ಆನಂದ ಬಳೆಗಾರ್ ದೂರು ನೀಡಿದ್ದಾರೆ.ಪ್ರಕರಣ ಸಂಬಂಧ ಆರೋಪಿ ಸದಾಶಿವ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಮೇ 1 ರಂದು ಆರೋಪಿಯು ನನ್ನ ಇಲಾಖಾ ಸಮವಸ್ತ್ರಕ್ಕೆ ಕೈ ಹಾಕಿ, ನಿನ್ನ ಎಲ್ಲ ವಿಚಾರ ನನಗೆ ತಿಳಿದಿದೆ. ನನಗೆ 25 ಸಾವಿರ ರೂ. ಹಣ ಕೊಡಬೇಕು. ಇಲ್ಲದಿದ್ದರೆ ಎಲ್ಲ ವಿಚಾರ …

Read More »

ಬಾರ್ ನಲ್ಲಿ ಕುಡಿದು ಹಣ ನೀಡದೆ ಗಲಾಟೆ; ದೂರು ದಾಖಲು

ಬಂಟ್ವಾಳ: ಬಾರ್ ನಲ್ಲಿ ಮದ್ಯ ಸೇವಿಸಿ ಹಣ ನೀಡದೆ ಗಲಾಟೆ ಮಾಡಿದ ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಮೆಮಾರ್ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನು ಫರಂಗಿಪೇಟೆಯಲ್ಲಿರುವ ಬಾರ್ ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ 1,560 ರೂ.ಗಳ ಬಿಲ್ಲು ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಹೇಳಿ ಉಡಾಫೆ ಹಾಗೂ ಗಲಾಟೆ ಮಾಡಿದ್ದಾನೆ ಹಾಗೂ ಬಿಲ್ ಕೊಡದೆ ಹೋಗಿದ್ದನು. ಬಾರ್ ನ ಸಿಬಂದಿ ವಾಸವಿರುವ ರೂಂ ಬಳಿಗೆ …

Read More »