BigTv News
May 3, 2026
Breaking News
ಮಧ್ಯಪ್ರದೇಶದ ಜಬಲ್ಪುರ್ ದೋಣಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿದೆ. 5 ವರ್ಷದ ಬಾಲಕ ಮತ್ತು ಆತನ ದೊಡ್ಡಪ್ಪನ ಮೃತದೇಹ ಭಾನುವಾರ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನು ಮಯೂರಂ (5) ಹಾಗೂ ಕಾಮರಾಜ್ (50) ಎಂದು ಗುರುತಿಸಲಾಗಿದೆ. ಬಾರ್ಗಿ ಜಲಾಶಯದ ನದಿ ಪಾತ್ರದಲ್ಲಿ ಮೃತದೇಹಗಳು ತೇಲುತ್ತಿದ್ದನ್ನು ಗಮನಿಸಿ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ದುರಂತದಲ್ಲಿ ನಾಪತ್ತೆಯಾಗಿದ್ದ …
Read More »
BigTv News
May 3, 2026
Breaking News
ಬೈಕ್ ಅಪಘಾತಕ್ಕೀಡಾದ ಯುವಕರು ಹಾಗೂ ಅವರ ಸಹಾಯಕ್ಕೆ ಬಂದ ಗೆಳೆಯರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಚಿನ್ನದ ಸರ ಲೂಟಿ ಮಾಡಿರುವ ಘಟನೆ ಉಡುಪಿ ತಾಲೂಕಿನ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಉಡುಪಿಯ ಬಡಗುಬೆಟ್ಟು ನಿವಾಸಿ ವೈಭವ್ ಬಿ ನಾಯಕ್ ಅವರ ಗೆಳೆಯರಾದ ಅಭಯ್ ಸ್ಯಾಮುವೆಲ್ ಮತ್ತು ಶಾಶ್ವತ್ ಶೆಟ್ಟಿ ಮೇ 3ರಂದು ಮಧ್ಯರಾತ್ರಿ ಬೈಕ್‌ನಲ್ಲಿ ಹೊರಟಿದ್ದರು. ಕುಕ್ಕಿಕಟ್ಟೆ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಆಯತಪ್ಪಿ ಇಬ್ಬರೂ …
Read More »
admin
May 3, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ದುಬಾರಿ ಕಾರು, ಕಳ್ಳತನದ ದಂಧೆ! ಪಾರ್ಚೂನರ್ ಗ್ಯಾಂಗ್‌ನ ರಹಸ್ಯ ಬಯಲು, ಒಬ್ಬ ಅರೆಸ್ಟ್.. ಹುಬ್ಬಳ್ಳಿ ರಸ್ತೆಯಲ್ಲಿ Toyota Fortuner ಕಾರು ಕಾಣಿಸಿಕೊಂಡರೆ ಸಾಕು ಜನರು ಹುಬ್ಬೇರಿಸುತ್ತಾರೆ. ಅಬ್ಬಾ… ಪಾರ್ಚೂನರ್.! ಅಂತ ಗೌರವದಿಂದ ನೋಡುವಂತಹ ಈ ದುಬಾರಿ ಕಾರಿನ ಬೆಲೆ ನಲವತ್ತು ಲಕ್ಷದಿಂದಲೇ ಆರಂಭವಾಗುತ್ತದೆ.. ಸಾಮಾನ್ಯವಾಗಿ ಶ್ರೀಮಂತರ ಸಿಂಬಲ್ ಆಗಿ ಗುರುತಿಸಿಕೊಂಡಿರುವ ಈ ಕಾರು ಈಗ ಕ್ರೈಂ ಸ್ಟೋರಿಯಲ್ಲೂ ಎಂಟ್ರಿ ಕೊಟ್ಟಿದೆ.! ಶಾಕ್ ಆಗೋ ವಿಚಾರ ಏನು ಗೊತ್ತಾ..? ಶಿವಮೊಗ್ಗದ ಕಳ್ಳರ …
Read More »
BigTv News
May 3, 2026
Breaking News
ಉತ್ತರಪ್ರದೇಶ: ಇಲ್ಲಿನ ಕಾಸಗಂಜ್ ಜಿಲ್ಲೆಯ ಯಾಕುತ್‌ಗಂಜ್ ಗ್ರಾಮದಲ್ಲಿ ನಡೆದ ನಾಮಕರಣ ಸಮಾರಂಭವೊಂದು ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಮದ್ಯಪಾನ ಮಾಡುತ್ತಿದ್ದ ಧನೇಶ್ ಯಾದವ್ ಎಂಬ ವ್ಯಕ್ತಿ, ಕುಡಿಯಲು ನೀರು ಕೇಳಿದಾಗ ಒಂಬತ್ತು ವರ್ಷದ ಬಾಲಕ ಯಶ್‌ಪಾಲ್ ಅದನ್ನು ತರಲು ನಿರಾಕರಿಸಿದ್ದಾನೆ. ಇದರಿಂದ ಕೆರಳಿದ ಧನೇಶ್, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಬಾಲಕನ ಹೊಟ್ಟೆಗೆ ನೇರವಾಗಿ ಗುಂಡು ಹಾರಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯಶ್‌ಪಾಲ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅಸುನೀಗಿದ್ದಾನೆ. ಈ ಘಟನೆ ನಡೆದ ಬೆನ್ನಲ್ಲೇ ಪರಾರಿಯಾಗಿದ್ದ …
Read More »
BigTv News
May 3, 2026
Breaking News
ಪುಂಜಾಲಕಟ್ಟೆ: ಬಡಗಕಜೆಕ್ಕಾರು ಗ್ರಾಮದ ಪಾಂಡವರಕಲ್ಲು ಬಳಿಯ ಕೋಮಿನಡ್ಕ ಎಂಬಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಕಾರ್ಯಾಚರಣೆ ವೇಳೆ ಒಬ್ಬ ಪರಾರಿಯಾಗಿದ್ದಾನೆ.ಇಲ್ಲಿನ ಮುಹಮ್ಮದ್ ಸಮೀರ್ (28) ಹಾಗೂ ಮಹಮ್ಮದ್ ಇರ್ಪಾನ್ (26) ಬಂಧಿತರಾಗಿದ್ದು, ರಶೀದ್ ಕುಂಡಡ್ಕ ಸದ್ಯ ತಲೆ ಮರೆಸಿಕೊಂಡಿದ್ದಾನೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, 2.38 ಲಕ್ಷ ರೂ. ಮೌಲ್ಯದ 500 ರೂ. ಮುಖಬೆಲೆಯ ಖೋಟಾ ನೋಟುಗಳು, 3 ಮೊಬೈಲ್ ಪೋನ್ …
Read More »
BigTv News
May 3, 2026
Breaking News
ಬೆಳಗಾವಿ: ಈಜಲು ಹೋಗಿದ್ದ ಇಬ್ಬರು ಬಾಲಕರು ದುರ್ಮರಣ ಹೊಂದಿದ ಘಟನೆ ಬೆಳಗಾವಿಯಲ್ಲಿ ರವಿವಾರ (ಮೇ.03) ಬೆಳಿಗ್ಗೆ ನಡೆದಿರುವ ದುರ್ಘಟನೆ. ನಗರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಪರಶುರಾಮ (11) ಮತ್ತು ಶಿವಂ (9) ಮೃತ ದುರ್ದೈವಿ ಬಾಲಕರು. ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈ ಬಾಲಕರು ಗುಂಪಾಗಿ ಈಜಲು ಬಂದಿದ್ದರು ಎನ್ನಲಾಗಿದೆ. ಹೊಂಡಕ್ಕೆ ಇಳಿದ …
Read More »
BigTv News
May 3, 2026
Breaking News
ಹಾಸನ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮ್ಯಾ.ಎ.ಆರ್ (35) ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಚಂದ್ರ (41) ಹತ್ಯೆಗೈದ ಆರೋಪಿ ಎಂದು ತಿಳಿದುಬಂದಿದೆ. ವಿಧವೆಯಾಗಿದ್ದ ರಮ್ಯಾ ಬೆಂಗಳೂರಿನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು, ಆರೋಪಿ ಚಂದ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಏ.28ರಂದು ಅತ್ತೆಯ ಅಂತ್ಯಸಂಸ್ಕಾರಕ್ಕೆಂದು ಸ್ವಗ್ರಾಮ ಅತ್ತಿಹಳ್ಳಿಗೆ ಬಂದಿದ್ದಾಗ, ರಾತ್ರಿ ಮನೆಗೆ ಬಂದ ಚಂದ್ರ ಲೈಂ*ಗಿಕ …
Read More »
BigTv News
May 3, 2026
Breaking News
ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮತ್ತಿಕೆರೆ ವ್ಯಾಪ್ತಿಯಲ್ಲಿ ನಡೆದಿದೆ.4 ವರ್ಷದ ನಿವೇದ್ ಹಾಗೂ 2 ವರ್ಷದ ನಿರ್ಮಲ್ ತಾಯಿ ಕೈಯಿಂದಲೇ ಕೊಲೆಯಾದ ಮಕ್ಕಳು.ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಪವಿತ್ರಾ ಅವರ ಸ್ಥಿತಿಯೂ ಗಂಭೀರವಾಗಿದೆ. ಪವಿತ್ರಾ ಹಾಗೂ ಪತಿ ಪ್ರಶಾಂತ್ ನಡುವೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಪವಿತ್ರಾ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಮಕ್ಕಳಿಬ್ಬರಿಗೂ …
Read More »
BigTv News
May 3, 2026
Breaking News
ನವದೆಹಲಿ: ವಸತಿ ಕಟ್ಟಡದಲ್ಲಿ ಎಸಿ ಸ್ಫೋಟಗೊಂಡು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 9 ಜನರು ಸಜೀವದಹನವಾಗಿರುವ ಘಟನೆ ನವದೆಹಲಿಯ ವಿವೇಕ ವಿಹಾರದಲ್ಲಿ ನಡೆದಿದೆ.ವಿವೇಕ ವಿಹಾರದ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಇಂದು ಮುಂಜಾನೆ 3:47ರ ಸುಮಾರಿಗೆ ಎಸಿ ಸ್ಫೋಟಗೊಂಡ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 9 ಜನರುಸಜೀವದಹನವಾಗಿದ್ದಾರೆ. ಘಟನೆಯಲ್ಲಿ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ಕಟ್ಟಡದ ತುಂಬಾ ವ್ಯಾಪಿಸಿದ್ದು, ಹಲವರು ಹೊರಬರಲಾಗದೇ …
Read More »
BigTv News
May 3, 2026
Breaking News
ರಾಯಚೂರು: ತಾಲ್ಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಕುರಿ ಶೆಡ್ ಸಂಪೂರ್ಣ ಭಸ್ಮವಾಗಿದ್ದು, 10 ಮೇಕೆಗಳು ಹಾಗೂ 20 ಕೋಳಿಗಳು ಸಜೀವ ದಹನವಾಗಿವೆ. ಒಂದು ಮನೆಗೂ ಹಾನಿಯಾಗಿದೆ. ಗ್ರಾಮದ ನಾಗಮ್ಮ ಅವರಿಗೆ ಸೇರಿದ ಕುರಿ ಶೆಡ್ ಹಾಗೂ ಮನೆ ಈ ಅವಘಡದಲ್ಲಿ ಹಾನಿಗೀಡಾಗಿವೆ. ನಾಗಮ್ಮ ಅವರ ಹೊಲದ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಹೊಲದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಅದರ ಕಿಡಿಗಳು ಗಾಳಿಗೆ ಹಾರಿ ಕುರಿಗಳಿದ್ದ ಶೆಡ್‌ಗೆ ತಗುಲಿ …
Read More »