Breaking News

Breaking News

ಫೇಸ್‌ಬುಕ್‌ನಲ್ಲಿ ಪರಿಚಯ, ಬಳಿಕ ಲೈಂಗಿಕ ದೌರ್ಜನ್ಯ; ಮಹಿಳೆಯ ಪತಿ-ಮಗಳಿಗೆ ಖಾಸಗಿ ವಿಡಿಯೋ ಕಳುಹಿಸಿದ ಆರೋಪಿ ಬಂಧನ

ಕಾಸರಗೋಡು,: ಫೇಸ್‌ಬುಕ್‌ನಲ್ಲಿ ನಕಲಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ವಿವಾಹಿತ ಮಹಿಳೆಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ಕೊಲ್ಲಂ ಮೂಲದ 32 ವರ್ಷದ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ‘ಪ್ರೇಮ್’ ಎಂಬ ಹೆಸರಿನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಕೋಝಿಕ್ಕೋಡ್, ಕಣ್ಣೂರಿನ ಪರಶಿನಿಕಡವು ಪ್ರದೇಶದ ಲಾಡ್ಜ್ ಹಾಗೂ ಮಹಿಳೆಯ ಮನೆಯಲ್ಲಿಯೂ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆ ತನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ …

Read More »

ಪುತ್ತೂರು | ಅಕ್ರಮ ಗೋ ಸಾಗಾಟ ಪ್ರಕರಣ: ಆರೋಪಿ ಶಿವಪ್ರಸಾದ್‌ನ ಮನೆ, ಕೊಟ್ಟಿಗೆ ಜಪ್ತಿ

ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಪ್ರಸಾದ್ ಎಂಬಾತನ ಮನೆ ಮತ್ತು ಕೊಟ್ಟಿಗೆಯ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.8ರಂದು ಈ ಕ್ರಮ ಕೈಗೊಳ್ಳಲಾಗಿದೆ. ಅ.5ರಂದು ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಲಾಗಿದ್ದ 11 ಜಾನುವಾರುಗಳು ಪತ್ತೆಯಾಗಿದ್ದವು. ಅಗತ್ಯ ಪರವಾನಿಗೆ ಇಲ್ಲದೆ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು …

Read More »

ಹಿರಿಯಡ್ಕ | ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹಿರಿಯಡ್ಕ: ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಅ.9ರಂದು ಠಾಣೆಯ ಎದುರಿನ ಜಂಕ್ಷನ್ ಬಳಿ ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಸತ್ತರ್ (54) ಮತ್ತು ಯೋಗೀಶ ನಾಯ್ಕ್ (49) ಎಂದು ಗುರುತಿಸಲಾಗಿದೆ. ಪೊಲೀಸರು ಟೆಂಪೋವನ್ನು ತಡೆದು ಪರಿಶೀಲಿಸಿದಾಗ ನಾಲ್ಕು ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದು, ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಅಬಕಾರಿ ಇಲಾಖೆ ಕಾರ್ಯಾಚರಣೆ: 24 ಸಾವಿರ ಲೀ. ಅಕ್ರಮ ಮದ್ಯಸಾರ ಸಾಗಿಸುತ್ತಿದ್ದ ಟ್ಯಾಂಕರ್ ಜಪ್ತಿ

ಬೆಳಗಾವಿ: ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯಸಾರ ಸಾಗಿಸುತ್ತಿದ್ದ 12 ಚಕ್ರದ ಟ್ಯಾಂಕರ್‌ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಟ್ಯಾಂಕರ್‌ ಹಾಗೂ ಮದ್ಯಸಾರ ಸೇರಿ ಒಟ್ಟು ₹32.40 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ 12.25ರ ಸುಮಾರಿಗೆ ಗಸ್ತು ನಡೆಸುತ್ತಿದ್ದಾಗ ಅಕ್ರಮ ಸಾಗಣೆ ಪತ್ತೆಯಾಗಿದೆ. ಟ್ಯಾಂಕರ್ …

Read More »

ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ರಾಯಚೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯಚೂರಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಚೇರಿಯಲ್ಲಿ ವಾಮಾಚಾರದ ಶಂಕೆ ವ್ಯಕ್ತವಾಗಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಮೇಲ್ಭಾಗದಲ್ಲಿರುವ ಹುಣಸೆ ಮರಕ್ಕೆ ಮಾನವ ಆಕೃತಿಯ ಕಪ್ಪು ಗೊಂಬೆಯನ್ನು ನೇತುಹಾಕಲಾಗಿತ್ತು. ಕಚೇರಿ ಪರಿಶೀಲನೆಗೆ ತೆರಳಿದ್ದ ಸಿಬ್ಬಂದಿಯೊಬ್ಬರು ಗೊಂಬೆಯನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿ ಗೊಂಬೆಯನ್ನು ಸುಟ್ಟು ಹಾಕಿದ್ದಾರೆ. ಬಾಕಿ ಉಳಿದ ಬಿಲ್‌ಗಳು ಹಾಗೂ ವಿಲೇವಾರಿಯಾಗದ ಕಡತಗಳಿಂದ ಬೇಸತ್ತವರು ಈ ಕೃತ್ಯ ಎಸಗಿರಬಹುದು ಎಂದು …

Read More »

ಮಸೀದಿಯ ಮೇಲೆ ನಿಂತು ಬಿಯರ್‌ ಸೇವಿಸಿ ಹುಚ್ಚಾಟ – ಕಾನ್ಸ್‌ಟೇಬಲ್‌ ಕುಕೃತ್ಯಕ್ಕೆ ಕೆರಳಿದ ಜನ!

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಹರಸೂರು ಗ್ರಾಮದಲ್ಲಿ ಕರ್ತವ್ಯದ ವೇಳೆ ಮಸೀದಿ ಛಾವಣಿ ಮೇಲೆ ನಿಂತು ಬಿಯರ್ ಕುಡಿದ ಪೊಲೀಸ್ ಕಾನ್ಸ್‌ಟೇಬಲ್ ಹಣಮಂತ ಅವರನ್ನು ಅಮಾನತುಗೊಳಿಸಲಾಗಿದೆ. ಗ್ರಾಮದಲ್ಲಿ ಗಲಾಟೆ ನಡೆದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈ ವೇಳೆ ಮಹಾಗಾಂವ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹಣಮಂತ ಮಸೀದಿಯ ಛಾವಣಿ ಏರಿ ಬಿಯರ್ ಸೇವಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, …

Read More »

ಗಂಡ ಸತ್ತರೆ ಸಾಲಮನ್ನಾ ಆಗುತ್ತೆ ಎಂದು ಪತಿಯನ್ನೇ ಮುಗಿಸಿದ ಪತ್ನಿ

ಕೊಪ್ಪಳ: ಪತಿ ಮೃತಪಟ್ಟರೆ ಸಾಲ ಮನ್ನಾ ಆಗುತ್ತದೆ ಎಂಬ ಉದ್ದೇಶದಿಂದ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಗಂಗಾವತಿ ತಾಲೂಕಿನ ಮುಸ್ಟೂರು ಕ್ಯಾಂಪಿನ ಉಮಾದೇವಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ರಾಘವೇಂದ್ರ ಅವರು ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಿಂದ ಸುಮಾರು ₹12.5 ಲಕ್ಷ ಸಾಲ ಪಡೆದಿದ್ದರು. ಸಾಲದ ವಿಮೆ ಮೂಲಕ ಹಣ ಪಾವತಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಉಮಾದೇವಿ, ಅಳಿಯ ಶಿವಾಜಿ ಹಾಗೂ ಸ್ನೇಹಿತ ಖಲೀಲ್ ಮನ್ಸೂರ್ ಸಾಬ್ ಜೊತೆ …

Read More »

ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಯುವಕನನ್ನು ಕಿಡ್ನಾಪ್ ಮಾಡಿ ಗುಪ್ತಾಂಗ ಕತ್ತರಿಸಿದ ಮಂಗಳಮುಖಿಯರು!

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನಲ್ಲಿ ಹೂ ಮಾರಾಟ ಮಾಡುತ್ತಿದ್ದ ಯುವಕನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 1ರಂದು ಯುವಕನನ್ನು ದಾವಣಗೆರೆಗೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ಯುವಕನಿಗೆ ಬಿಸಿನೀರು ಸುರಿದು, ಬರೆ ಎಳೆದು ಹಿಂಸೆ ನೀಡಲಾಗಿದ್ದು, ಹೇಗೋ ತಪ್ಪಿಸಿಕೊಂಡು ಮನೆಗೆ ಮರಳಿದ್ದಾನೆ. ಆದರೆ, ಕುಟುಂಬಸ್ಥರು ಮರ್ಯಾದೆಗೆ ಅಂಜಿ ಘಟನೆ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಗುರುವಾರ ಯುವಕನ ಮನೆಗೆ …

Read More »

ಮಂಗಳೂರು ಪೊಲೀಸರಿಂದ ಮಹತ್ವದ ಕಾರ್ಯಾಚರಣೆ: 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ಸಹಿತ ಮೂವರ ಬಂಧನ

ಮಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ₹1.58 ಕೋಟಿ ಮೌಲ್ಯದ 1.79 ಕೆಜಿ MDMA ವಶಪಡಿಸಿಕೊಂಡಿದ್ದು, ಅಬ್ದುಲ್ ಹಾಫಿಲ್ (25), ಝಿಯಾವುಲ್ ಹಕ್ (30) ಹಾಗೂ ಅಲ್ತಾಫ್ (28) ಎಂಬ ಮೂವರನ್ನು ಬಂಧಿಸಿದ್ದಾರೆ. ಮೊಬೈಲ್‌ಗಳು, ಕಾರು ಮತ್ತು ಆಟೋ ರಿಕ್ಷಾ ಸೇರಿದಂತೆ ಒಟ್ಟು ₹1.63 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉಳ್ಳಾಲ ತಾಲೂಕಿನ ಕುಂಪಲದ ಡಿ ಮಾರ್ಟ್ ಬಳಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು …

Read More »

ರೈತನಿಗೆ ಮದ್ಯ ಕುಡಿಸಿ ಮನಸೋ ಇಚ್ಛೆ ಹಲ್ಲೆ, ₹15000 ಲಂಚಕ್ಕೆ ಬೇಡಿಕೆ?: ಅರಣ್ಯ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ!

ರಾಯಚೂರು: ಜಮೀನಿನಲ್ಲಿ ಸಸಿ ನೆಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಸ್ಕಿ ತಾಲ್ಲೂಕಿನ ಯರದೊಡ್ಡಿ ಗ್ರಾಮದ ರೈತ ರಮೇಶ್ ಹಲ್ಲೆಗೊಳಗಾಗಿದ್ದು, ಬೆನ್ನಿನ ಮೇಲೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮೇಶ್ ಅವರ ಜಮೀನಿನಲ್ಲಿ ದಾಳಿಂಬೆ ಗಿಡಗಳ ಬಳಿ ಅರಣ್ಯ ಸಿಬ್ಬಂದಿ ಸಸಿ ನೆಡಲು ಮುಂದಾಗಿದ್ದರು. ಈ ವೇಳೆ ಜಮೀನಿನ ಹೊರಭಾಗದಲ್ಲಿ ಸಸಿ ನೆಡುವಂತೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರು. …

Read More »