Breaking News

Breaking News

ಅಕ್ರಮವಾಗಿ 150 ನಾಡಬಾಂಬ್‌ ಸಂಗ್ರಹ, ಬಟ್ಲಹಳ್ಳಿಯಲ್ಲಿ ಓರ್ವನ ಬಂಧನ!

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ 150ಕ್ಕೂ ಹೆಚ್ಚು ನಾಡಬಾಂಬ್‌ಗಳು ಹಾಗೂ ಒಂದು ನಾಡಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 35 ವರ್ಷದ ನರಸಿಂಹಪ್ಪ ಎಂಬಾತನನ್ನು ಬಂಧಿಸಲಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಂಬ್‌ಗಳು ಹಾಗೂ ಬಂದೂಕನ್ನು ಜಪ್ತಿ ಮಾಡಿದ್ದಾರೆ. ನಾಡಬಾಂಬ್‌ಗಳು ಮತ್ತು ಬಂದೂಕನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. …

Read More »

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಮುಖ ಆರೋಪಿ ಲೋಕೇಶ್‌ಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ, ಮತ್ತೊಬ್ಬ ಆರೋಪಿ ಗುರುಪ್ರಸಾದ್‌ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಲಾಗಿದೆ. 2020ರ ಅಕ್ಟೋಬರ್‌ನಲ್ಲಿ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

Read More »

300 ರೂ. ಮೆಡಿಸಿನ್ 6 ಸಾವಿರಕ್ಕೆ ಸೇಲ್: ಸೈಲೆಂಟ್ ಆಗಿ ನಡೀತಿದ್ದ ನಕಲಿ ಆಂಟಿಬಯೋಟಿಕ್ ದಂಧೆ; SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ನಕಲಿ ಔಷಧ ಜಾಲದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ₹200ರಿಂದ ₹300 ಬೆಲೆಯ ಆಂಟಿಬಯೋಟಿಕ್ ಔಷಧಗಳಿಗೆ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ, 26ರಿಂದ 30 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಎಸ್‌ಐಟಿ ಪತ್ತೆಹಚ್ಚಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಹಿಮಾಚಲ ಪ್ರದೇಶ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಅಗ್ಗದ ಔಷಧಗಳನ್ನು ತರಿಸಿಕೊಂಡು, ಬೆಂಗಳೂರಿನ ಸಮೀಪದ ಬಿಡದಿಯಲ್ಲಿ ನಕಲಿ …

Read More »

ಲಕ್ಷಾಂತರ ಸಾರಿಗೆ ನೌಕರರ ಪಿಎಫ್ ಹಣಕ್ಕೆ ಕನ್ನ; ಡ್ರೈವರ್, ಕಂಡಕ್ಟರ್​ಗಳ ಖಾತೆಗೆ ಜಮಾ ಆಗದ 2,500 ಕೋಟಿ ರೂ.!

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸುಮಾರು 1.10 ಲಕ್ಷ ನೌಕರರ ₹2,500 ಕೋಟಿ ಪಿಎಫ್ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ನೌಕರರ ಭವಿಷ್ಯಕ್ಕಾಗಿ ಮೀಸಲಿಟ್ಟ ಹಣವನ್ನು ನಿಗಮಗಳು ಇತರೆ ಖರ್ಚುಗಳಿಗೆ ಬಳಸಿಕೊಂಡಿವೆ ಎನ್ನಲಾಗಿದೆ. ಬಿಎಂಟಿಸಿಯಲ್ಲಿ ₹1,000 ಕೋಟಿ ಹಾಗೂ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ₹1,500 ಕೋಟಿ ಪಿಎಫ್ ಹಣ ಬಾಕಿಯಿದೆ ಎಂದು ವರದಿಯಾಗಿದೆ. ಈ ಹಣವನ್ನು ಡೀಸೆಲ್ ಖರೀದಿ ಹಾಗೂ ವೇತನ …

Read More »

ಕಲಬುರಗಿ: ಅಂತರ್ಜಾತಿ ವಿವಾಹ ಪ್ರೋತ್ಸಹಧನ ಹೆಸರಲ್ಲಿ ಭಾರಿ ಗೋಲ್ಮಾಲ್, ನಕಲಿ ಜೋಡಿಗಳ ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ

ಕಲಬುರಗಿ: ರಾಜ್ಯ ಸರ್ಕಾರ ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಚಿಂಚೋಳಿ ತಾಲೂಕಿನಲ್ಲಿ ಕೇಳಿಬಂದಿದೆ. ನಕಲಿ ಜೋಡಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಚಿಂಚೋಳಿ ತಾಲೂಕಿನಲ್ಲಿ 170ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆದಿದ್ದು, ಇವುಗಳಲ್ಲಿ ಎಷ್ಟು ನೈಜ ಎಂಬ ಅನುಮಾನ ಮೂಡಿದೆ. ಕೆಲವೆಡೆ ಅಧಿಕಾರಿಗಳು ಪಂಚನಾಮೆ ನಡೆಸದೆ ಹಣ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕೆಲವು ಏಜೆಂಟರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣ …

Read More »

ಸಂಕೇಶ್ವರ ಹೆದ್ದಾರಿ 48ರ ಮೇಲೆ ಗಂಗಾವತಿ-ಕೊಲ್ಲಾಪುರ ಸಾರಿಗೆ ಬಸ್ ಭೀಕರ ಅಪಘಾತ; ಚಾಲಕ ಸ್ಥಳದಲ್ಲೇ ದುರ್ಮರಣ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟಿಪ್ಪರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಸಂಗಪ್ಪ ತಳವಾರ ಸ್ಥಳದಲ್ಲೇ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಾವತಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಟಿಪ್ಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮೃತ ಚಾಲಕ ಗದಗ ಜಿಲ್ಲೆಯ ರೋಣ ತಾಲೂಕಿನ ಸವದಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. …

Read More »

ಹು-ಧಾ ನಡುವೆ ದೇಶದ ಮೊದಲ ಐರೋಪ್ಯ ಮಾದರಿ ಟ್ರ್ಯಾಮ್? ಇನ್ಮುಂದೆ ಪ್ರಯಾಣ ಮತ್ತಷ್ಟು ಸೂಪರ್!

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ನಡುವೆ ಆಧುನಿಕ ಟ್ರ್ಯಾಮ್ ಸಾರಿಗೆ ವ್ಯವಸ್ಥೆ ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಈಗಿರುವ 23 ಕಿ.ಮೀ ಉದ್ದದ ಬಿಆರ್‌ಟಿಎಸ್‌ ಮಾರ್ಗದಲ್ಲೇ ಹಳಿ ಅಳವಡಿಸಿ ಟ್ರ್ಯಾಮ್‌ ಓಡಿಸುವ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನ ನಡೆಸಲಾಗುತ್ತಿದೆ. ವಿದ್ಯುತ್ ಚಾಲಿತ ಟ್ರ್ಯಾಮ್‌ಗಳು ಒಂದೇ ಬಾರಿಗೆ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲಿದ್ದು, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲಿವೆ. ಮೆಟ್ರೋಗೆ ಹೋಲಿಸಿದರೆ ಟಿಕೆಟ್ ದರ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. …

Read More »

ಪಾರ್ಕ್‌ನಲ್ಲಿ ಕುಳಿತಿದ್ದವರ ಮೇಲೆ ಹಲ್ಲೆ: ಯುವತಿಗೆ ಗಾಯ

ಬೆಂಗಳೂರು: ಪಾರ್ಕ್‌ನಲ್ಲಿ ಕುಳಿತಿದ್ದ ವಿಚಾರಕ್ಕೆ ಯುವಕ-ಯುವತಿ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ನಡೆದ ಜಗಳದಲ್ಲಿ ಯುವತಿ ಚಾಕುವಿನಿಂದ ಗಾಯಗೊಂಡ ಘಟನೆ ದೊಮ್ಮಲೂರಿನ ಕನಕದಾಸ ಪಾರ್ಕ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೇರಳ ಮೂಲದ 22 ವರ್ಷದ ಅನಿಮಾ ಗಾಯಗೊಂಡಿದ್ದಾರೆ. ರಾತ್ರಿ 8ರ ಸುಮಾರಿಗೆ ಅನಿಮಾ ಸ್ನೇಹಿತನೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಅನಿಮಾ ಸ್ನೇಹಿತನೊಂದಿಗೆ ಮಾತಿನ ಜಗಳ ನಡೆದಿದ್ದು, ಆರೋಪಿ ಚಾಕುವಿನಿಂದ ಯುವಕನ ಮೇಲೆ ಹಲ್ಲೆಗೆ …

Read More »

ಲಾಭದಾಸೆ ತೋರಿಸಿ ವಂಚನೆ

ಧಾರವಾಡ: ಇನ್‌ಸ್ಟಾಗ್ರಾಮ್‌ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಜಾಹೀರಾತು ನಂಬಿದ ವ್ಯಕ್ತಿಯೊಬ್ಬರು ₹6.53 ಲಕ್ಷ ಕಳೆದುಕೊಂಡಿದ್ದಾರೆ. ಧಾರವಾಡದ ಮಹಾರಾಜ ಹುಲಗೂರ ವಂಚನೆಗೊಳಗಾದವರು. ಮೈಂತ್ರಾ ಡಿಜೈನ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಜಾಹೀರಾತು ನೋಡಿ ಸಂಪರ್ಕಿಸಿದ ಮಹಾರಾಜರಿಗೆ ಟೆಲಿಗ್ರಾಂ ಮೂಲಕ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ಅವರ ಹಾಗೂ ತಾಯಿಯ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವಿತ್‌ಡ್ರಾ ಮಾಡಲು ಶೇ.20ರಷ್ಟು ತೆರಿಗೆ ಪಾವತಿಸುವಂತೆ ಹೇಳಿ, ಬಳಿಕ …

Read More »

ಮಗುವಿಗೆ ಜನ್ಮ ನೀಡಿದ ಅತ್ಯಾಚಾರಕ್ಕೊಳಗಾದ ಯುವತಿ; ಕೇಸು ದಾಖಲು

ಕಾಸರಗೋಡು: ಅತ್ಯಾಚಾರಕ್ಕೊಳಗಾದ 21 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕ 40 ವರ್ಷದ ಚಂದ್ರ ವಿರುದ್ಧ ಮಂಜೇಶ್ವರ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಭಯದಿಂದ ಯುವತಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ. ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಬಳಿಕ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ …

Read More »