Breaking News

Breaking News

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ ದಾಳಿ ನಡೆಸಿದ್ದಾನೆ. ಸೆ.29ರಂದು ನಡೆದ ಘಟನೆಯಲ್ಲಿ ಯುವತಿ ಹಾಗೂ ಆರೋಪಿ ಚಂದನ್ (27) ಸುಟ್ಟ ಗಾಯಗೊಂಡಿದ್ದಾರೆ. ಚಂದನ್ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆ ನಿರಾಕರಿಸಿದರೂ ಪದೇಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ರಾಜಿ ಪಂಚಾಯಿತಿ ನಡೆದಿದ್ದರೂ, ಮತ್ತೆ ಹಿಂಬಾಲಿಸಿ ಪ್ರೀತಿ …

Read More »

ಚಲಿಸುತ್ತಿದ್ದ ಸ್ಲೀಪರ್ ಬಸ್ ನಲ್ಲಿ ಭೀಕರ ಅಗ್ನಿ ಅವಘಡ: ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ ಬಸ್

ಶಿವಮೊಗ್ಗ: ಬೆಂಗಳೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಆನಂದಪುರ ಬಳಿಯ ಮುಂಬಾಳು ಗ್ರಾಮದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಬಸ್ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿದ್ದಾರೆ. ಬಹುತೇಕ ಪ್ರಯಾಣಿಕರು ಶಿವಮೊಗ್ಗದಲ್ಲೇ ಇಳಿದಿದ್ದು, ಸಾಗರಕ್ಕೆ ಇಬ್ಬರು ಮಾತ್ರ ತೆರಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ …

Read More »

ಶಾಸಕ ಯತ್ನಾಳ್ ವಿರುದ್ಧ FIR ದಾಖಲು

ವಿಜಯಪುರ: ಮತದಾರರ ಪಟ್ಟಿಯ ಎಸ್‌ಐಆರ್ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೀವಂತ ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆ ಎಂದು ತೋರಿಸಿ ದಾಖಲೆ ಸಲ್ಲಿಸಿದ ಆರೋಪದಡಿ ಅಬ್ದುಲ್ ರಜಾಕ್ ಬಾಗವಾನ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ವಿಜಯಪುರ ಕ್ಷೇತ್ರದ 1,054 ಮತದಾರರ ಹೆಸರುಗಳನ್ನು ಕೈಬಿಡುವಂತೆ ಯತ್ನಾಳ್ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದ್ದು, ಅದರಲ್ಲಿ 8 ಮುಸ್ಲಿಂ ಮತದಾರರು ಮೃತಪಟ್ಟಿದ್ದಾರೆ ಎಂದು ಮರಣ ಪ್ರಮಾಣಪತ್ರಗಳನ್ನು ಲಗತ್ತಿಸಲಾಗಿತ್ತು ಎಂಬ …

Read More »

ಮದುವೆಯಾಗುವಂತೆ ಹಠ ಹಿಡಿದಿದ್ದಳು; ಅದಕ್ಕೆ ಆಕೆಯ ಕಥೆಯನ್ನೇ ಮುಗಿಸಿ ಬಿಟ್ಟೆ; ಜೋಗತಿ ಕೊಲೆ ರಹಸ್ಯ ಬಾಯ್ಬಿಟ್ಟ ಆರೋಪಿ

ಯಾದಗಿರಿ: ದಟ್ಟ ಅರಣ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಜೋಗತಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಿಯಕರ ಸುರೇಶ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ನಾಲ್ವಾರ್ ಗ್ರಾಮದ ಶಾಂತಮ್ಮ (48) ಕೊಲೆಯಾದವರು. ಶಾಂತಮ್ಮಳ ಕುಟುಂಬಸ್ಥರು ಸ್ಥಳದಲ್ಲಿ ಸಿಕ್ಕ ಬಳೆಯನ್ನು ಗುರುತಿಸಿದ ಬಳಿಕ ಆಕೆಯ ಗುರುತು ಪತ್ತೆಯಾಯಿತು. ಕಾಲ್‌ ಡಿಟೇಲ್ಸ್ ಪರಿಶೀಲಿಸಿದಾಗ ಕೊನೆಯದಾಗಿ ಸುರೇಶ್ ಕರೆ ಮಾಡಿರುವುದು ಗೊತ್ತಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಶಾಂತಮ್ಮ ₹1 …

Read More »

ಪಾರ್ಕ್‌ನಲ್ಲಿ ಕುಳಿತಿದ್ದವರ ಮೇಲೆ ಹಲ್ಲೆ: ಯುವತಿಗೆ ಗಾಯ

ಬೆಂಗಳೂರು: ಪಾರ್ಕ್‌ನಲ್ಲಿ ಕುಳಿತಿದ್ದ ವಿಚಾರಕ್ಕೆ ಯುವಕ-ಯುವತಿ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ನಡೆದ ಜಗಳದಲ್ಲಿ ಯುವತಿ ಗಾಯಗೊಂಡ ಘಟನೆ ದೊಮ್ಮಲೂರಿನ ಕನಕದಾಸ ಪಾರ್ಕ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೇರಳ ಮೂಲದ, ನಗರದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ ಅನಿಮಾ (22) ಗಾಯಗೊಂಡ ಯುವತಿ. ಅನಿಮಾ ಸ್ನೇಹಿತನೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಮಾತಿನ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ವ್ಯಕ್ತಿ ಚಾಕುವಿನಿಂದ ಯುವಕನ …

Read More »

ಬೆಳಗಾವಿಯಲ್ಲಿ ನಡುರಸ್ತೆಯಲ್ಲೇ ಪುಂಡಾಟ: ಬಸ್ ಟಚ್ ಆಗಿದ್ದಕ್ಕೆ KSRTC ಚಾಲಕನ ಮೇಲೆ ಹಲ್ಲೆ

ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಟಚ್ ಆಯಿತು ಎಂಬ ಕಾರಣಕ್ಕೆ ಬೈಕ್ ಸವಾರನೊಬ್ಬ ಬಸ್ ಚಾಲಕನನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಹೊರವಲಯದಲ್ಲಿ ನಡೆದಿದೆ. ಬೈಕ್ ಸವಾರ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾನೆ. ಬಳಿಕ ಹೆಲ್ಮೆಟ್‌ನಿಂದ ಬಸ್ ಗಾಜಿಗೆ ಹೊಡೆದು ಹಾನಿ ಮಾಡಲು ಯತ್ನಿಸಿ, ಚಾಲಕನ ಮೇಲೂ ಹಲ್ಲೆ ನಡೆಸಿದ್ದಾನೆ. ಸ್ಥಳೀಯ ಕೆಲ ಯುವಕರನ್ನು ಕರೆಸಿ ಹಲ್ಲೆ ಮುಂದುವರಿಸಿದ ಆರೋಪವೂ ಕೇಳಿಬಂದಿದೆ. ಹಲ್ಲೆಯಿಂದ …

Read More »

ಲಗೇಜ್‌ ಟ್ರ್ಯಾಲಿಯಲ್ಲಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ ಸೀಜ್!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನದ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು, ಸುಮಾರು ₹1.80 ಕೋಟಿ ಮೌಲ್ಯದ 1.3 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಲಾಲಂಪುರದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಆರೋಪಿಗಳು ಈ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಪ್ರಯಾಣಿಕರ ಲಗೇಜ್ ಟ್ರ್ಯಾಲಿಗಳ ಕೆಳಭಾಗಕ್ಕೆ ಚಿನ್ನದ ಬಿಸ್ಕೆಟ್‌ಗಳನ್ನು ಅಂಟಿಸುತ್ತಿದ್ದರು. ಬಳಿಕ ಅಮಾಯಕ ಪ್ರಯಾಣಿಕರು ಅದೇ ಟ್ರ್ಯಾಲಿಗಳನ್ನು ಬಳಸಿಕೊಂಡು ಕಸ್ಟಮ್ಸ್ ವಲಯ ದಾಟಿದ …

Read More »

ಆನ್ ಲೈನ್ ಗೇಮ್ ಗೀಳಿಗೆ ಬಿದ್ದ ಸ್ನೇಹಿತರಿಂದ ಟಾರ್ಚರ್: ನೊಂದ ಬಾಲಕ ಆತ್ಮಹತ್ಯೆ

ದಾವಣಗೆರೆ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಸ್ನೇಹಿತರು ಹಣ ನೀಡುವಂತೆ ಪೀಡಿಸಿದ್ದರಿಂದ ಬೇಸತ್ತು 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ. ಮನೋಜ್ ಟಿ.ಆರ್. (13) ಮೃತಪಟ್ಟ ಬಾಲಕ. ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಗೇಮ್‌ಗೆ ಹಣ ಹಾಕುವಂತೆ ಮನೋಜ್‌ಗೆ ಒತ್ತಾಯಿಸಿ, ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಸ್ನೇಹಿತರ ಒತ್ತಾಯದ ಮೇರೆಗೆ ಮನೋಜ್ ಮನೆಯಿಂದ ಸುಮಾರು …

Read More »

ಕುಷ್ಟಗಿ: ನೌಕರನಿಂದ ₹70 ಲಕ್ಷ ಹಣ ದುರ್ಬಳಕೆ

ಮಹಾಲೇಖಪಾಲಕರ (ಎಜಿ) ಲೆಕ್ಕಪರಿಶೋಧನೆಯಲ್ಲಿ ಸರ್ಕಾರಿ ಹಣ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ನೀಡಿದ ದೂರಿನ ಮೇರೆಗೆ ಎಸ್‌ಡಿಎ ಕನಕನಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅನಂತಕುಮಾರ ಅವರು ಅವರನ್ನು ಅ.6ರಂದು ಅಮಾನತುಗೊಳಿಸಿದ್ದಾರೆ. ಲೆಕ್ಕಪರಿಶೋಧನೆ ವೇಳೆ 135 ಕಡತಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕನಕನಗೌಡ ಕೇವಲ 45 ಕಡತಗಳನ್ನು ಮಾತ್ರ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. 2020ರಿಂದಲೇ ಹಣ ದುರ್ಬಳಕೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, …

Read More »

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ CCB ದಾಳಿ! ಬಾಡಿಗೆ ಮನೆಯೊಳಗೆ ನಡೆಯುತ್ತಿತ್ತು ಅಕ್ರಮ ದಂಧೆ

ಬೆಂಗಳೂರು: ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ವಿಭಾಗದ ಪೊಲೀಸರು ಮಹದೇವಪುರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಕುಟುಂಬದೊಂದಿಗೆ ವಾಸಿಸುವುದಾಗಿ ಹೇಳಿ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಅನುಪಮಾ ಎಂಬ ಮಹಿಳೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದಳು ಎನ್ನಲಾಗಿದೆ. ಪರಿಚಯಸ್ಥರ ಮೂಲಕ ಗ್ರಾಹಕರ ಮೊಬೈಲ್ ಸಂಖ್ಯೆಗಳು ಪಡೆದು ಸಂಪರ್ಕಿಸಿ, ಮಹಿಳೆಯರನ್ನು ಮನೆಗೆ ಕರೆಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವಿದೆ. ದಾಳಿ ವೇಳೆ ವೇಶ್ಯಾವಾಟಿಕೆಗಾಗಿ ಮಹಿಳೆಯರನ್ನು ಮನೆಯಲ್ಲಿ …

Read More »