Breaking News

Breaking News

ತರಕಾರಿ ಗಾಡಿಯಲ್ಲಿ ಗಾಂಜಾ ಘಮಲು – ಜಪ್ತಿಯಾಯ್ತು 3 ಕೋಟಿ ರೂ. ಮೌಲ್ಯದ ಮಾಲು!

ಬೆಂಗಳೂರು: ತರಕಾರಿ ಸಾಗಾಣಿಕೆ ಹೆಸರಿನಲ್ಲಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲುಗೊಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹ ದಳ, ನಾಯಂಡಹಳ್ಳಿ ಬಳಿ ಲಾರಿಯನ್ನು ಸೀಜ್ ಮಾಡಿ ದೊಡ್ಡ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದೆ. ಆಂಧ್ರ ಪ್ರದೇಶದ ವೈಜಾಗ್ ಸಮೀಪದ ಅರಕ್ಕು ಪ್ರದೇಶದಿಂದ ಬೆಂಗಳೂರಿಗೆ ತರಲಾಗುತ್ತಿದ್ದ ಗಾಂಜಾವನ್ನು ಲಾರಿಯ ಕಂಟೇನರ್‌ನಲ್ಲಿ ಗುಪ್ತವಾಗಿ ಸಾಗಿಸಲಾಗುತ್ತಿತ್ತು. ಈ ಲಾರಿ ಬೆಂಗಳೂರು ಮೂಲಕ ಮೈಸೂರು ಹಾಗೂ …

Read More »

ಮಸೀದಿ ವಿಚಾರದಲ್ಲಿ ತಕರಾರು – ದೊಣ್ಣೆ , ತಲವಾರು ಹಿಡಿದು ಬಡಿದಾಟ!

ಮಂಗಳೂರು : ಮಸೀದಿ ವಿಚಾರಕ್ಕೆ ಎರಡು ಗುಂಪುಗಳು ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಸಮೀಪದ ಉಳ್ಳಾಲದ ಸಜಿಪ ಪಡು ತಲೆಮೊಗರು ಗಾಮದಲ್ಲಿ ಈ ಘಟನೆ ನಡೆದಿದ್ದು, ಮಸೀದಿ ಬಳಿ ಎರಡು ಗುಂಪುಗಳ ನಡುವಿನ ತಗಾದೆ ಜಗಳದಲ್ಲಿ ಕೊನೆಗೊಂಡಿದ್ದು ಈ ಘಟನೆಯ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ ನಲ್ಲಿ ಸೆರೆಯಾಗಿದೆ.ಮಸೀದಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ನಡೆಯುತ್ತಿತ್ತು. ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ತಕರಾರು ಉಂಟಾದ ಪರಿಣಾಮ …

Read More »

ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಜಗಳ: ತಮ್ಮನನ್ನೇ ಕೊಲೆಗೈದ ಅಣ್ಣ

ಬೆಳಗಾವಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಜಮೀನಿಗೆ ನೀರು ಹರಿಸುವ ವಿಚಾರವಾಗಿ ಅಣ್ಣ-ತಮ್ಮನ ನಡುವೆ ನಡೆದ ಗಲಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಣ್ಣ-ತಮ್ಮನ ನಡುವೆ ಜಗಳವಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾಗಿರುವ ವ್ಯಕ್ತಿ. ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ತಮ್ಮನನ್ನೇ ಕೊಂದ ಅಣ್ಣ, …

Read More »

ಅಜ್ಜಿಯನ್ನು ಕೊಲೆಗೈದು ಸಿಲಿಂಡರ್ ಸ್ಫೋಟದಲ್ಲಿ ಸಾವು ಎಂದು ಕಥೆ ಕಟ್ಟಿದ ಮೊಮ್ಮಗ

ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಜ್ಜಿ ಮೃತಪಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಇದು ಸಿಲಿಂಡರ್ ಸ್ಫೋಟವಲ್ಲ ಕೊಲೆ ಎಂಬುದು ಬಯಲಾಗಿದೆ. ಬಳ್ಳಾರಿಯ ಪಿ.ಡಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೆಕಲ್ಲು ಗ್ರಾಮದಲ್ಲಿ ಮಾರ್ಚ್ 21ರಂದು ಈರಮ್ಮ (58) ಸಾವನ್ನಪ್ಪಿದ್ದರು. ಮೊದಲಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎಂಬುದು ದೃಢಪಟ್ಟಿದೆ. ಮಹಿಳೆಯನ್ನು ಮೊದಲು ಹರಿತವಾದ ಆಯುಧಗಳಿಂದ …

Read More »

ಬೆಂಗಳೂರು: ಕಾರು ಕದ್ದ ಆರೋಪಿ ರಾಜಸ್ಥಾನದಲ್ಲಿ ಸೆರೆ

ಬೆಂಗಳೂರು: ಮನೆಯ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಕಾರನ್ನು ಕಳ್ಳತನ ಮಾಡಿ ರಾಜಸ್ಥಾನಕ್ಕೆ ಕೊಂಡೊಯ್ದಿದ್ದ ಆರೋಪಿಯನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಹರಿಭಜನ್‌ (24) ಬಂಧಿತ. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು, ಪೂರ್ವ ತಾಲ್ಲೂಕು ಮಿಟ್ಟಿಗಾನಹಳ್ಳಿಯ ಬಾಡಿಗೆ ಮನೆಯಲ್ಲಿ ಆರೋಪಿ ನೆಲಸಿದ್ದ ಎಂದು ಪೊಲೀಸರು ಹೇಳಿದರು. ದೂರುದಾರ ಬಾಲಾಜಿ ಅವರು ಮನೆಯ ಪಕ್ಕದಲ್ಲಿದ್ದ ಖಾಲಿ ಪ್ರದೇಶದಲ್ಲಿ ಕಾರು ನಿಲುಗಡೆ ಮಾಡಿದ್ದರು. ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಕಾರು …

Read More »

ಸಂದೇಶ್ ಪಿಜಿ ವಿರುದ್ಧದ ಪ್ರಕರಣ ; ಸಿ.ಐ.ಡಿ ತನಿಖೆಗೆ

ಬೆಳ್ತಂಗಡಿ; ಅಮಾನತುಗೊಂಡ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮುಂದಿನ ತನಿಖೆಯನ್ನು ಸಿ.ಐ.ಡಿ ನಡೆಸುವಂತೆ ಅದೇಶವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟನೆ ತಿಳಿಸಿದೆ.ಸಂದೇಶ್ ಪಿಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದರು. ಮಹಿಳೆ ದೂರಿನ ಹಿನ್ನೆಲೆ ಸಂದೇಶ್ ಪಿ.ಜಿ ಹಾಗೂ ಆತನ ಮೂವರು ಸಹಚರರಾದ ಖಾಸಗಿ ಕಾರು ಚಾಲಕ ಅಕ್ಬರ್, ಜತೆಗೆ ಆತನ ಪರಿಚಯದ …

Read More »

ಎರಡು ತಂಡಗಳ ಹೊಡೆದಾಟ: ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಸಜೀಪಪಡು ಗ್ರಾಮದ ತಲೆಮೊಗರು ಮಸೀದಿಯ ಬಳಿ ಮಾ. 22ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಇದೀಗ ಎರಡು ತಂಡಗಳು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ತಂಡದಿಂದ ಶೌಕತ್ ಆಲಿ ಅವರು ದಾವೂದ್, ಜುಬೈರ್, ಸೈದುದ್ದಿನ್, ನವಾಜ್, ಗಫೂರ್, ಶರೀಪ್, ಆಶಿಕ್, ಹೈದರ್, ಆಸೀಪ್, ಆಶ್ರಫ್ ಎಸ್.ಕೆ. , ಇರ್ಫಾನ್ ಎಸ್.ಕೆ. ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದು ತಂಡದಿಂದ …

Read More »

ಚೆನ್ನೈ- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಗಾಂಜಾ ಪತ್ತೆ

ಮಂಗಳೂರು: ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಸುಮಾರು 5,06,450 ರೂ. ಮೌಲ್ಯದ 10 ಕೆ.ಜಿ.129 ಗ್ರಾಂ. ಒಣ ಗಾಂಜಾ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ 11.56ರ ಸುಮಾರಿಗೆ ಇಲ್ಲಿನ ನಿಲ್ದಾಣದ ಒಂದನೇ ಫ್ಲಾಟ್ ಫಾರಂಗೆ ಆಗಮಿಸಿದ ರೈಲಿನ ಜನರಲ್ ಬೋಗಿಯಲ್ಲಿ ವಾರಸುದಾರರು ಇಲ್ಲದ ಬಾಕ್ಸ್ ನಲ್ಲಿ ಗಾಂಜಾ ಪತ್ತೆಯಾಯಿತು. ಆರ್ ಪಿಎಫ್ ನ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಅವರು ತಂಡದೊಂದಿಗೆ ಪರಿಶೀಲನೆ ನಡೆಸಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮುಂದಿನ …

Read More »

ರಾಜ್ಯದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿ : ರಾಯಚೂರಲ್ಲಿ ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಸಾವು!

ರಾಯಚೂರು : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ರೀಲ್ಸ್ ಹುಚ್ಚಾಟಕ್ಕೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ರಾಯಚೂರಿನಲ್ಲಿ ಮತ್ತೊಂದು ಘಟನೆ ನಡೆದಿದ್ದು ರಿಲ್ಸ್ ಹುಚ್ಚಾಟಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಈಜು ಬಾರದೆ ರಿಲೀಸ್ ಮಾಡಲು ಹೋಗಿ ತುಂಗಭದ್ರಾ ನದಿಯಲ್ಲಿ ಮುಳುಗಿ 22 ವರ್ಷದ ಅಮನ್ ಖಾನ್ ಎಂಬ ಯುವಕ ಮೃತಪಟ್ಟಿದ್ದಾನೆ. ಸಿಂಧನೂರು ಪಟ್ಟಣದ ಗಂಗಾ ನಗರ ನಿವಾಸಿಯಾಗಿದ್ದ ಅಮನ್ ಖಾನ್ ಗೆಳೆಯರ ಜೊತೆಗೆ ತುಂಗಭದ್ರನದಲ್ಲಿ ಸ್ನಾನಕ್ಕೆ …

Read More »

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಯಿಂದ ಹಿಂದೆ ಸರಿಯಬಾರದು; ಎನ್‌ಎಫ್‌ಐಡಬ್ಲ್ಯು

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಉತ್ತರ ನೀಡಲು ನಿರ್ದೇಶನ ನೀಡಿರುವುದನ್ನು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯು) ರಾಜ್ಯ ಸಮಿತಿ ಸ್ವಾಗತಿಸಿದೆ. ಬಾಲಕಿ ಸೌಜನ್ಯ ಪ್ರಕರಣದ ಮರುತನಿಖೆಗೆ ಕೋರಿ ಆಕೆಯ ತಾಯಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ನಿರ್ದೇಶನ ನೀಡಿರುವುದು ಕಗ್ಗತ್ತಲಲ್ಲಿರುವ ನಮಗೆ ಕೊಂಚ …

Read More »