Breaking News

Breaking News

ಸತ್ಯಾತ್ಮತೀರ್ಥ ಶ್ರೀಪಾದಂಗಳ ಕಾರು ಅಪಘಾತ: ಸ್ವಾಮೀಜಿ ಸೇರಿ ಮೂವರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಬೆಂಗಳೂರಿನ ಬಸವನಗುಡಿಯ ಉತ್ತರಾಧಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿಗಳ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಸ್ವಾಮೀಜಿ ಸೇರಿ ಮೂವರು ಗಾಯಗೊಂಡಿದ್ದಾರೆ. ಧಾರವಾಡದಿಂದ ಸವಣೂರಿಗೆ ತೆರಳುತ್ತಿದ್ದ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಾಟರ್ ಪಾರ್ಕ್ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸತ್ಯಾತ್ಮತೀರ್ಥ ಶ್ರೀಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಯಾವುದೇ ಗಂಭೀರ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಧಾರವಾಡ …

Read More »

ನನ್ನಂತ ಮುಗ್ಧನಿಗೆ ಮೋಸ ಮಾಡಿದ್ಳು, ಬಿಡ್ಬೇಡಿ ಸರ್..’ ಆತ್ಮಹ*ತ್ಯೆಗೂ ಮುನ್ನ ಕಣ್ಣೀರಿಟ್ಟ ಪತಿ!

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತ ದೊರೆ (27) ಎಂಬಾತ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ಪತ್ನಿಗೆ ಬೇರೆ ಯುವಕನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿರುವ ದೊರೆ, ಈ ವಿಚಾರ ತಿಳಿದಿದ್ದರೂ ಪತ್ನಿಯ ಪೋಷಕರು ಆಕೆಯ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ತನ್ನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿರುವ ಆತ, ಪತ್ನಿಯ ಮೊಬೈಲ್ …

Read More »

ಲೈಂಗಿಕ ಕಿರುಕುಳ ಆರೋಪ, ಮಹಿಳೆಯಿಂದ ವ್ಯಕ್ತಿಯ ಭೀಕರ ಹ*ತ್ಯೆ!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆ ತನ್ನ ಶಾಲಾ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಣವೀರ ರಜಪೂತ ಎಂಬಾತ ಶ್ರೀದೇವಿ ರಜಪೂತ ಎಂಬ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳದಿಂದ ಬೇಸತ್ತ ಶ್ರೀದೇವಿ, ತನ್ನ ಶಾಲಾ ಸ್ನೇಹಿತ ಬೈರು ಪವಾರ್ ಬಳಿ ವಿಷಯ ತಿಳಿಸಿದ್ದಾಳೆ. ಬಳಿಕ ಇಬ್ಬರೂ ಸೇರಿ ರಣವೀರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. …

Read More »

ಹಾವೇರಿಯ ಜಿಲ್ಲಾಸ್ಪತ್ರೆ ಕ್ಯಾಂಟೀನ್ ನಲ್ಲಿ ಉಪ್ಪಿಟ್ಟು, ಕೇಸರಿಬಾತ್ ನಲ್ಲಿ ಹಲ್ಲಿ ಪತ್ತೆ : ಬೆಚ್ಚಿಬಿದ್ದ ರೋಗಿಗಳು!

ಹಾವೇರಿ: ಜಿಲ್ಲಾ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ರೋಗಿಗಳಿಗೆ ನೀಡಲಾಗಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ಕೇಸರಿಬಾತ್ ಹಾಗೂ ಉಪ್ಪಿಟ್ಟಿನಲ್ಲಿ ಹಲ್ಲಿ ಇರುವುದನ್ನು ಕಂಡು ರೋಗಿಗಳು ಆಘಾತಕ್ಕೊಳಗಾಗಿದ್ದಾರೆ. ರೋಗಿಗಳಿಗೆ ಪಾರ್ಸೆಲ್ ಮಾಡಲಾಗಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಘವೇಂದ್ರ ಕ್ಯಾಂಟೀನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕ್ಯಾಂಟೀನ್ ಮಾಲೀಕರ ವಿರುದ್ಧ ರೋಗಿಗಳು ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ರಾಘವೇಂದ್ರ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಮಂಗಳೂರು| ʼಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಹತ್ಯೆʼ ಸಂಚು ರೂಪಿಸಿದ ತಂಡದ ಸದಸ್ಯನಿಂದಲೇ ದೂರು ದಾಖಲು

ಮಂಗಳೂರು: ಹಿಂದುತ್ವ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾದ ಅಭಿಷೇಕ್ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಸುದೀಪ್ ಎಂಬಾತ ಪ್ರತೀಕಾರದ ಕುರಿತು ಮಾತನಾಡಿ, ಕೊಲೆ ಕೃತ್ಯಕ್ಕೆ ₹24 ಲಕ್ಷ ನೀಡುವುದಾಗಿ ಹಾಗೂ ಜೈಲಿಗೆ ಹೋದರೆ ಕುಟುಂಬಗಳಿಗೆ ಹಣ ಮತ್ತು …

Read More »

ಸತ್ತ ವ್ಯಕ್ತಿಯ ಖಾತೆಗೆ ಬ್ಯಾಂಕ್ ಮಾನೇಜರ್ ಕನ್ನ – ಲಕ್ಷಲಕ್ಷ ಲೂಟಿ!

ಮೈಸೂರು: ಮೃತ ಗ್ರಾಹಕನ ಖಾತೆ ಸೇರಿದಂತೆ ಬ್ಯಾಂಕಿನ ಆಂತರಿಕ ಖಾತೆಯಿಂದ ₹61.57 ಲಕ್ಷ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಚಾಮುಂಡಿಪುರಂ ಎಸ್‌ಬಿಐ ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗಿದೆ. 2009ರಿಂದ 2011ರ ಅವಧಿಯಲ್ಲಿ ಕುಲಕರ್ಣಿ, 2005ರಲ್ಲೇ ಮೃತಪಟ್ಟಿದ್ದ ಕೃಷ್ಣ ಅಯ್ಯರ್ ಅವರ ಖಾತೆಯಲ್ಲಿದ್ದ ₹40.53 ಲಕ್ಷ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಲ್ಲಿದ್ದ ₹21.04 ಲಕ್ಷವನ್ನು ತಮ್ಮ ಹಾಗೂ …

Read More »

ಕೊಪ್ಪಳದ ಲಾಡ್ಜ್‌ನಲ್ಲಿ ಯುವಕನ ಶವಪತ್ತೆ

ಕೊಪ್ಪಳ: ಪಶುಸಂಗೋಪನಾ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯಮನೂರಪ್ಪ ಮುರಡಿ (27) ನಗರದ ಕನಕದಾಸ ವೃತ್ತದ ಬಳಿಯ ಪ್ರಿಯಾಂಕಾ ಪ್ಯಾರಡೈಸ್‌ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಯಮನೂರಪ್ಪ ಸೆ.16ರಿಂದ ಕಾಣೆಯಾಗಿದ್ದರು. ಈ ಕುರಿತು ಕುಟುಂಬದವರು ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಲಾಡ್ಜ್‌ನಿಂದ ಹೊರಡಬೇಕಿದ್ದರೂ ಕೊಠಡಿಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದಾಗ ಯಮನೂರಪ್ಪ …

Read More »

ಆಸ್ತಿ ಕಲಹ: ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಮಗನನ್ನು ಕೊಂದ ತಂದೆ

ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರಕ್ಕೆ ತಂದೆ-ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ತಂದೆ ಮಲ್ಲಿಕಾರ್ಜುನಗೌಡ ಸಣ್ಣಗೌಡ್ರ ಮಗ ಮಾದೇಗೌಡ (29) ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಮಾದೇಗೌಡ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More »

ಕರ್ನಾಟಕ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್: ಶಂಕಿತ ಉಗ್ರ ಪೊಲೀಸ್ ಬಲೆಗೆ, ಲಿಸ್ಟ್‌ನಲ್ಲಿದ್ದವರ ಹೆಸರು ಕೇಳಿದ್ರೆ ಬೆಚ್ಚಿಬೀಳ್ತೀರಾ!

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಿ, ರಾಜ್ಯದ ಮೂವರು ಬಿಜೆಪಿ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಶಬ್ಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಪೂಜಿನಗರ ನಿವಾಸಿಯಾಗಿರುವ ಶಬ್ಬೀರ್ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Read More »

ಪ್ರಧಾನಿ ಮೋದಿ, ಅನಂತ್ ಅಂಬಾನಿ ಡೀಪ್‌ಫೇಕ್‌ ವಿಡಿಯೋ ನಂಬಿ ಕೆಟ್ಟ ಬೆಂಗಳೂರು ವ್ಯಕ್ತಿ: 7.66 ಲಕ್ಷ ರೂ. ವಂಚನೆ

ಬೆಂಗಳೂರು: ಡೀಪ್‌ಫೇಕ್ ವಿಡಿಯೋಗಳನ್ನು ನೈಜವೆಂದು ನಂಬಿದ ಮಹಾಲಕ್ಷ್ಮಿ ಲೇಔಟ್‌ನ 39 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿ ₹7.66 ಲಕ್ಷ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್ ಮೂಲಕ ವ್ಯಕ್ತಿ ₹22 ಸಾವಿರ ಹೂಡಿಕೆ ಮಾಡಿದ್ದರು. ಬಳಿಕ ವಂಚಕರು ಕರೆ ಮಾಡಿ ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭದ …

Read More »