BigTv News
February 2, 2026
Breaking News
ನಗರದ ವಿವಿಧೆಡೆ 20ಕ್ಕೂ ಅಧಿಕ ಬೈಕ್ ಕದ್ದ ಆರೋಪದಡಿ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿಯ ಸಂಜು ಮೇಖಳಿ ಬಂಧಿತ. ಈಚೆಗೆ ಕೋಟೆ ರಸ್ತೆಯಲ್ಲಿ ಮತ್ತು ಕಪಿಲೇಶ್ವರ ದೇವಸ್ಥಾನ ಬಳಿ ಈತ ವಾಹನಗಳ ಕಳ್ಳತನ ಮಾಡಿದ್ದ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ₹2,78,000 ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
February 2, 2026
Breaking News
ಬೆಂಗಳೂರು: ಕಳೆದ 3 ದಿನಗಳ ಹಿಂದೆ ಕಾಣೆಯಾಗಿದ್ದ 14 ವರ್ಷದ ಬಾಲಕ, ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಸಮೀಪ ಶವವಾಗಿ ಪತ್ತೆಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ.ಈ ದುರ್ಘಟನೆಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ. ಪೈಪ್‌ಲೈನ್‌ಗಾಗಿ ತೆಗೆಯಲಾಗಿದ್ದ ಸಂಪ್‌ಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಬಾಲಕ ಓಡಾಡುವ ವೇಳೆ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಎಂದು ಸ್ಥಳೀಯರು ದೂರಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾತಗುಣಿಯ …
Read More »
BigTv News
February 2, 2026
Breaking News
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು. ಕುಡಿದ ಮತ್ತಿನಲ್ಲಿ ಟವರ್ ಏರಿ ನಿಂತಿದ್ದ ಎನ್. ಅರ್ಜುನ್, ತುತ್ತ ತುದಿಯಲ್ಲಿ ಎರಡು ಕೈಬಿಟ್ಟು ಎದ್ದು ನಿಂತಿದ್ದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೇ ಕೆಳಗಿದ್ದವರ ಮೊಬೈಲ್‌ಗೆ ಫೋನ್ ಮಾಡಿ ಮಾತನಾಡುವುದಲ್ಲದೇ, ಸೆಲ್ಫಿಯನ್ನು ಹೊಡೆದುಕೊಳ್ಳುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಧ ಗಂಟೆ ಕಾಲ ಅಲ್ಲಿಯೇ ಇದ್ದನು. ಕೆಳಗಿದ್ದ ಕೆಲವರು ಮೊಬೈಲ್ …
Read More »
BigTv News
February 2, 2026
Breaking News
ಮನೆ ಎದುರು ಬಂದು ಗಲಾಟೆ ಮಾಡಿದ ಕಾರಣಕ್ಕೆ ತಂದೆಯ ಎರಡನೇ ಪತ್ನಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ನಗರದ ಮಾಲ್ದಾರಬಾಡಾದಲ್ಲಿ ನಡೆದಿದೆ. ಅಲ್ಫಿಯಾ (26) ಗಾಯಗೊಂಡವರು. ಅವರನ್ನು ಚಿಕಿತ್ಸೆಗಾಗಿ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರೋಪಿ ಮಲ್ಲಿಕ್‌ರೇಹಾನ್ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಡುಗೆ ಕೆಲಸ ಮಾಡಿಕೊಂಡಿರುವ ನಿಸಾರ್‌ಅಹ್ಮದ್ ಖಾನ್ ಅವರು ಕೌಸರ್ ಹಾಗೂ ಅಲ್ಪಿಯಾ ಅವರನ್ನು ಮದುವೆಯಾಗಿದ್ದರು. ಅವರಿಬ್ಬರಿಗೂ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಮೊದಲ ಪತ್ನಿ …
Read More »
BigTv News
February 2, 2026
Breaking News
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅನೀಲ ಕೇಸು ರಾಠೋಡ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವೂರ ತಾಂಡಾದಿಂದ ಪಡಗಾನೂರ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ಬೈಕ್ ನಲ್ಲಿದ್ದ ಮತ್ತೊಬ್ಬ ಸವಾರ ಅವಿನಾಶ ಮನೋಹರ ರಾಠೋಡ (26) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಇಂಡಿ ಕಡೆಗೆ ತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
Read More »
BigTv News
February 2, 2026
Breaking News, Crime
ಹುಬ್ಬಳ್ಳಿ : ಚಾಕೊಲೇಟ್ ಕೊಡುವುದಾಗಿ ಹೇಳಿ 8 ವರ್ಷದ ಬಾಲಕಿ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ನಡೆಸಿ ಹೀನ ಕೃತ್ಯವೆಸಗಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಜ.29ರಂದು ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧ ತನ್ನ ಪಕ್ಕದ ಮನೆಯ ಬಾಲಕಿಯ ಮೇಲೆ ಈ ಹೀನ ಕೃತ್ಯವೆಸಗಿದ್ದಾನೆ. ಈ ಸಂಬಂಧ ವೃದ್ಧನ ವಿರುದ್ಧ ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಬಾಲಕಿಯ ಮೇಲೆ …
Read More »
BigTv News
February 2, 2026
Breaking News
ಗಾಳಿಪಟದ ದಾರ ಕಾಲಿಗೆ ಸಿಲುಕಿ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಆರ್ ಟಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಜನವರಿ 31 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ವ್ಯಕ್ತಿ ಜಿವಿಎ ಕಸದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲಿನ ನರ ಕಟ್ ಆಗಿವೆ. ಮೊದಲಿಗೆ ಬೈಕ್ ಸವಾರನಿಗೆ ಗಾಳಿಪಟದ ದಾರ ಕಾಣಿಸಿದೆ. ಆತ ದಾರ ಬಿಡಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಈ ವೇಳೆ ಹಿಂದೆ ನಡೆದುಕೊಂಡು ಬರುತ್ತಿದ್ದ …
Read More »
BigTv News
February 2, 2026
Breaking News
ಕೊಪ್ಪಳ ಜಿಲ್ಲೆಯಿಂದ ಬಂದಿರುವ ಈ ಸುದ್ದಿ ಈಗ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು, ಕೆಲಸದ ಒತ್ತಡ ಮತ್ತು ರಜೆ ಇಲ್ಲದ ದುಡಿಮೆಯ ಬಗ್ಗೆ ಬೇಸರ ವ್ಯಕ್ತಪಡಿಸಿ, ವಾಟ್ಸಾಪ್ ಸ್ಟೇಟಸ್ ಹಾಕಿರುವುದು ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಅವರು, “ವರ್ಷದ 365 ದಿನವೂ ಕೆಲಸ… ರಜೆ ಇಲ್ಲ… ಪೊಲೀಸ್ ಕೆಲಸಕ್ಕಿಂತ ರಸ್ತೆಯಲ್ಲಿ ನಿಂತು ಎಗ್ ರೈಸ್ ಮಾರುವುದು ಉತ್ತಮ” …
Read More »
Shaikh BigTv
February 2, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ನಗರದಲ್ಲಿ ಸಾಲದ ವಿಚಾರವಾಗಿ ಉಂಟಾದ ಕುಟುಂಬ ಕಲಹ ಪತ್ನಿಯ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ತೈಸಿನ್ ಶಿಗ್ಗಾಂ (28) ಹತ್ಯೆಯಾದ ಮಹಿಳೆ. ಪತಿ ಇರ್ಫಾನ್ ಶಿಗ್ಗಾಂ ಚಾಕುವಿನಿಂದ ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆ ಇರಿದು ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಗಾಂಧೀವಾಡದ ನಿವಾಸಿಗಳಾದ ದಂಪತಿಗಳು, ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರಕ್ಕೆ ಬಂದು ವಾಸವಾಗಿದ್ದರು. ಇರ್ಫಾನ್ ಗೌಂಡಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ …
Read More »
BigTv News
February 2, 2026
Breaking News
ಬೆಂಗಳೂರು: ಉಚಿತ ಬಸ್ ಟಿಕೆಟ್ ಗಾಗಿ ಹಿಂದೂ ಮಹಿಳೆಯ ಹೆಸರಿರುವ ಆಧಾರ್ ಕಾರ್ಡ್ ತೋರಿಸಿ ಮುಸ್ಲಿಂ ಮಹಿಳೆ ವಂಚಿಸಿದ್ದಾಳೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಲ್ಲಿ ಹಲವು ವಂಚನೆಗಳೂ ಕೇಳಿಬರುತ್ತಿವೆ.ಇದಕ್ಕೆ ಲೇಟೆಸ್ಟ್ ಸೇರ್ಪಡೆ ಈ ಮಹಿಳೆಯ ಪ್ರಕರಣ. ಮುಸ್ಲಿಂ ಮಹಿಳೆಯೊಬ್ಬರು ಬಸ್ ನಲ್ಲಿ ಪ್ರಯಾಣಿಸುವಾಗ ಉಚಿತ ಟಿಕೆಟ್ ಗಾಗಿ ಆಧಾರ್ ಕಾರ್ಡ್ ಒಂದನ್ನು …
Read More »