Breaking News

Breaking News

ತುಂಗಾ ನದಿಯ ಚಕ್ರತೀರ್ಥದ ಸಮೀಪ ಈಜಲು ತೆರಳಿದ್ದ ಯುವ ಸಾವು

ತೀರ್ಥಹಳ್ಳಿ: ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ.ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ. ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ.ಈ ವೇಳೇ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ …

Read More »

ಮುರುಡೇಶ್ವರದಲ್ಲಿ ಜೂಜು: 12 ಜನರ ಮೇಲೆ ಪ್ರಕರಣ ದಾಖಲು

ಮುರುಡೇಶ್ವರದ ಉತ್ತರಕೊಪ್ಪ ರಸ್ತೆಯ ಕೀರ್ತಿ ಲಾಡ್ಜ್‌ ರೂಂ ಸಂ.206ರಲ್ಲಿ ಗುರುವಾರ ಮಧ್ಯಾಹ್ನ ಜೂಜಾಟ ಆಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು ಎರಡು ಮೊಬೈಲ್‌ ವಶಪಡಿಸಿಕೊಂಡು 12 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆಮುರುಡೇಶ್ವರ ಗುಮ್ಮನಹಕ್ಲ ನಿವಾಸಿ ಸುಬ್ರಮಣ್ಯ ಜಟ್ಟ ನಾಯ್ಕ , ತೇರ್ನಮಕ್ಕಿ ನಿವಾಸಿಗಳಾದ ನಾರಾಯಣ ಮಂಜಪ್ಪ ನಾಯ್ಕ, ಮಹೇಶ ಗಣಪತಿ ನಾಯ್ಕ, ನಾಗರಾಜ ಮಂಜುನಾಥ ನಾಯ್ಕ, ಭಾಸ್ಕರ ಪರಮೇಶ್ವರ ನಾಯ್ಕ, ರೋಹಿದಾಸ ಮಂಜುನಾಥ ನಾಯ್ಕ, ರಾಜೇಶ …

Read More »

ಕಾರವಾರ: ಆನ್‌ಲೈನ್ ಉಡುಗೊರೆ ನೆಪದಲ್ಲಿ ವಂಚನೆ

ಆನ್‌ಲೈನ್ ಶಾಪಿಂಗ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ₹1.37 ಲಕ್ಷ ವಂಚಿಸಿದ್ದಾಗಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುದಗಾದ ಸೀಬರ್ಡ್ ಕಾಲೊನಿಯ ಸಚಿನ್ ದುರ್ಗೇಕರ ವಂಚನೆಗೆ ಒಳಗಾದವರು. ಅ.25ರಂದು ಆನ್‍ಲೈನ್ ಮೂಲಕ ವಸ್ತುವೊಂದನ್ನು ಖರೀದಿಸಿದ್ದ ಅವರಿಗೆ ಕೆಲ ದಿನಗಳ ಬಳಿಕ ಖರೀದಿಗೆ ವಿಶೇಷ ಉಡುಗೊರೆ ಇದೆ ಎಂದು ನಂಬಿಸಿದ್ದ ವಂಚಕರು ಲಿಂಕ್ ಕಳಿಸಿದ್ದರು.ಅದರಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಭರಿಸಲು ಸೂಚಿಸಿದ್ದರು. ಇದನ್ನು ನಂಬಿದ ಸಚಿನ್ ವಂಚಕರ …

Read More »

ಯುವತಿಯ ಮಾನಭಂಗ ಯತ್ನ; ಬಂಧನ

ಮುಳ್ಳೇರಿಯ: ಯುವತಿಯನ್ನು ಮಾನಭಂಗಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಾಮಕೊಚ್ಚಿ ನಿವಾಸಿ ನಾರಾಯಣ(42) ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ನೆಲ್ಲಿಕುಂಜೆ ಕಡಪ್ಪುರ ನಿವಾಸಿಯಾದ ರತೀಶ್‌(42)ನನ್ನು ಮಹಿಳಾ ಪೊಲೀಸರು ಮಲಪ್ಪುರಂ ಕುಟ್ಟಿಪ್ಪುರದಿಂದ ಬಂಧಿಸಿದ್ದಾರೆಕಾಸರಗೋಡು ಪೊಲೀಸ್‌ಠಾಣೆ ವ್ಯಾಪ್ತಿಯ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ …

Read More »

ಮರ್ಯಾದೆಗಾಗಿ ಮಡದಿಯನ್ನೇ ಮುಗಿಸಲು ಸ್ಕೆಚ್: ಪಾನಿಪುರಿ ವ್ಯಾಪಾರಿಯ ‘ಖತರ್ನಾಕ್’ ಪ್ಲಾನ್ ಉಲ್ಟಾ!

ಮೈಸೂರಿನ ಬಿ.ಎಂ. ಶ್ರೀ ನಗರದಲ್ಲಿ ಪತ್ನಿ ತನಗೆ ಗೌರವ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿ ಮಹೇಶ್ ಎಂಬಾತ ತನ್ನ ಪತ್ನಿ ನಾಗರತ್ನಳನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಪತ್ನಿ ತನ್ನ ಹಣವನ್ನು ಬಡ್ಡಿಗೆ ನೀಡುತ್ತಿದ್ದರೂ ತನಗೆ ಹಣ ನೀಡುತ್ತಿರಲಿಲ್ಲ ಎಂಬುದು ಮಹೇಶನ ಅಸಮಾಧಾನಕ್ಕೆ ಕಾರಣವಾಗಿತ್ತು.ಇದಕ್ಕಾಗಿ ತನ್ನ ಸ್ನೇಹಿತರಾದ ಭಾಸ್ಕರ್ ಮತ್ತು ಅಭಿಷೇಕ್ ಎಂಬುವವರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಆರೋಪಿಗಳು ನಾಗರತ್ನ ಒಬ್ಬರೇ ಇದ್ದಾಗ ಮನೆಗೆ ನುಗ್ಗಿ …

Read More »

ಅಲೆಗಳ ಅಬ್ಬರಕ್ಕೆ ಮುಳುಗಿದ ದೋಣಿ; ಮೀನು ಹಿಡಿಯಲು ಹೋಗಿದ್ದ ಸಹೋದರರ ಸಾವು

ಹೊನ್ನಾವರ ತಾಲ್ಲೂಕಿನ ಮಂಕಿಯ ಮಂಡಿ ಕಡಲತೀರದ ಬಳಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ಸಹೋದರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.ಮದನ ನಾರಾಯಣ ಖಾರ್ವಿ (17), ಸುಜನ ನಾರಾಯಣ ಖಾರ್ವಿ (15) ಮೃತ ಸಹೋದರರು. ಪಾತಿ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮುಳುಗಿದೆ.ತಡರಾತ್ರಿ ಅವರ ಮೃತದೇಹಗಳು ಪತ್ತೆಯಾಗಿದೆ ಎಂದು ಮಂಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Read More »

ಬೆಂಗಳೂರು: ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ; ಆರೋಪಿ ಬಂಧನ

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆನೀಲಸಂದ್ರದ ಶಿವಕುಮಾರ್ (19) ಬಂಧಿತ ಆರೋಪಿ. ಆರೋಪಿ ಗುಜರಿ ವ್ಯಾಪಾರ ಮಾಡುತ್ತಿದ್ದ, ಕದ್ದ ಮುಚ್ಚಳವನ್ನು ರೂ.700ಕ್ಕೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ.ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬುದಾಗಿ ರಿಕಿ ಕೇಜ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆರೋಪಿಗಳು ಕೃತ್ಯ ಎಸಗುತ್ತಿರುವ …

Read More »

ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವಕನ ಬರ್ಬರ ಹತ್ಯೆ

ತುಮಕೂರು: ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾ ಅವರು 25 ವರ್ಷದ ಮಧುವನ್ ನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಮೂರು ಕೋಟಿ ರೂಪಾಯಿ ಮೌಲ್ಯದ ಎರಡು ಎಕರೆ ಜಮೀನಿಗಾಗಿ ಕೊಲೆ ಮಾಡಲಾಗಿದೆ. ನಿನ್ನೆ ತೋಟದಲ್ಲಿ ಇಬ್ಬರು ಆರೋಪಿಗಳು ಮಧುವನ್ ನನ್ನು ಕೊಲೆ ಮಾಡಿದ್ದಾರೆ. 2015 ರಲ್ಲಿ ಜಮೀನು ಮಾರಾಟಕ್ಕೆ ಮಧುವನ್ ತಂದೆ ನಿರ್ಧರಿಸಿದ್ದರು. ತುಮಕೂರಿನ ಅಮಾನಿಕೆರೆ ಸಮೀಪದ ಜಮೀನು ಮಾರಾಟಕ್ಕೆ ಚಿಂತನೆ ನಡೆಸಿದ್ದರು. ತನ್ನ ತಾಯಿಯಿಂದ ನಾರಾಯಣಸ್ವಾಮಿಗೆ ಜಮೀನು …

Read More »

88 ಜನ ಪೊಲೀಸರೇ ಕ್ರಿಮಿನಲ್ಸ್​​: ವಿಧಾನ ಪರಿಷತ್​​ನಲ್ಲಿ ಗೃಹ ಸಚಿವ ಪರಮೇಶ್ವರ್​​ ಮಾಹಿತಿ..

ಬೆಳಗಾವಿ, ಕಳ್ಳತನ, ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡುಬಂದರೆ ಅಂಥವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವ ಕಾನೂನು ಜಾರಿ ಮಾಡಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ….ವಿಧಾನಪರಿಷತ್‌ನಲ್ಲಿ ಜೆಡಿಎಸ್‌‍ನ ಶರವಣ.ಟಿ.ಎ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ಇಲಾಖೆಯ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಯಾರಾದರೂ ಇಂಥ ಕೃತ್ಯಗಳಲ್ಲಿ ಶಾಮೀಲಾಗಿರುವುದು ಕಂಡುಬಂದರೆ ಅವರನ್ನು ಸೇವೆಯಿಂದ ಅಮಾನತುಪಡಿಸುವುದು, ಬಂಧಿಸುವುದು, ನೋಟಿಸ್‌‍ ಕೊಡುವ ಪ್ರಕ್ರಿಯೆ …

Read More »

ಹೆಬ್ರಿ : ಕೂಡ್ಲು ಫಾಲ್ಸ್ ನ ಬಂಡೆಯ ಮೇಲಿನಿಂದ ಬಿದ್ದು ಯುವಕ ಸಾವು

ಇಲ್ಲಿಗೆ ಸಮೀಪದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ನಲ್ಲಿನ ಬಂಡೆಯ ಮೇಲಿನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ.ಮನ್ವಿತ್ ಡಿ.12ರಂದು ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ಡಿ.14ರಂದು ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ …

Read More »