BigTv News
December 6, 2025
Breaking News
ನಗರದ ಪೊಲೀಸ್ ಲೇನ್ ನಲ್ಲಿ ವಾಸವಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಮನೆಗೆ ಬಂದಿದ್ದ ಅವರ ಅಣ್ಣ ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ಮೊಹಮ್ಮದ್ ಅಶ್ರಫ್ (49) ಅವರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾಗಿರುವ ಅಶ್ರಫ್ 5.4 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಉದ್ದ ತೋಳಿನ ಚೆಕ್ಸ್ ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು ಹಾಗೂ ಬ್ಯಾರಿ ಭಾಷೆ …
Read More »
BigTv News
December 6, 2025
Breaking News
ಶಿವಮೊಗ್ಗದ ಸ್ತ್ರೀ ರೋಗ ತಜ್ಞೆ ಮತ್ತು ಅವರ ಪುತ್ರನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿರುವುದಾಗಿ ವರದಿಯಾಗಿದೆ.ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಮೃತಪಟ್ಟವರು.ಸ್ಥಳಕ್ಕೆ ವಿನೋಬ ನಗರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Read More »
BigTv News
December 6, 2025
Breaking News
ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ಆತನ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗುದೆ. ಕೊಳೆತ ಸ್ಥಿತಿಯಲ್ಲಿ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅಂದಾಜು 10 ದಿನಗಳ ಹಿಂದೆಯೇ ಈ ವ್ಯಕ್ತಿ ಸಾವು ಕಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.ಬಸವೇಶ್ವರ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು 48 ವರ್ಷದ ಯುವರಾಜ್ ಎಂದು ಗುರುತಿಸಲಾಗಿದೆ.
Read More »
BigTv News
December 6, 2025
Breaking News
ಪ್ರೀತಿ-ಪ್ರೇಮದ ವಿಚಾರವಾಗಿ ಆರಂಭವಾದ ಗಲಾಟೆ ಯುವಕನ ಹತ್ಯೆಯಲ್ಲಿ ಕೊನೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಪವನ್ (28) ಕೊಲೆಯಾದ ಯುವಕ. ವೃತ್ತಿಯಲ್ಲಿ ಆಟೋ ಚಾಲಕ. ದೊಡ್ದಬಳ್ಳಾಪುರದ ಡಿ ಕ್ರಾಸ್ ಬಳಿಯ ಟಿಬಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಹತ್ಯೆ ಮಾಡಿದ್ದಾರೆ. ಯುವತಿಯ ವಿಚಾರವಾಗಿ ಈ ಹಿಂದೆ ನಡೆದಿದ್ದ ಗಲಾಟೆ ದ್ವೇಷಕ್ಕೆ ತಿರುಗಿದ್ದು ಇದೇ ಕಾರಣಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ ಎಂದು ಪವನ್ ಕುಟುಂಬದವರು ಆರೋಪಿಸಿದ್ದಾರೆ.
Read More »
BigTv News
December 6, 2025
Breaking News
ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ರದ್ದು ರಾದ್ಧಾಂತ ಶನಿವಾರ(ಡಿ.6) ಕೂಡ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಾಲ್ಕು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ದೇಶಾದ್ಯಂತ ಪೈಲಟ್‌ಗಳ ವಾರದ ವಿಶ್ರಾಂತಿಗೆ ಸಂಬಂಧಿಸಿದಂತೆ ಹೊಸ ನಿಯಮದ ಅನುಷ್ಠಾನವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಾತ್ಕಾಲಿಕವಾಗಿ ಹಿಂಪಡೆದಿರುವ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.ಇದರಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 124 ವಿಮಾನಗಳು (ಹೊರಡಬೇಕಾಗಿದ್ದ 63 …
Read More »
BigTv News
December 6, 2025
Breaking News
ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್‌ನಿಂದ ಪತ್ತೆಹಚ್ಚಲಾಗಿತ್ತು.ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದು ಶವ ಹಸ್ತಾಂತರ ಮಾಡಲಾಯಿತು. ಎತ್ತರದ ಕಟ್ಟುಮಸ್ತಾದ ವ್ಯಕ್ತಿಯಾಗಿದ್ದ ಪಂಚಾಕ್ಷರಿ ಸಾಲಿಮಠ ಅವರ ದೇಹ ಎಷ್ಟು ಮಟ್ಟಿಗೆ ಸುಟ್ಟು ಹೋಗಿತ್ತೆಂದರೆ, ಚಿಕ್ಕ ಮಕ್ಕಳ ಮೃತದೇಹ ಎನ್ನುವಂತೆ …
Read More »
BigTv News
December 6, 2025
Breaking News
ನವದೆಹಲಿ: ಇತ್ತೀಚೆಗೆ ಇಂಡಿಗೋ ವಿಮಾನ ಹಾರಾಟದಲ್ಲಿ ಪದೇ ಪದೇ ವ್ಯತ್ಯಯಗಳುಂಟಾದ ಬೆನ್ನಲ್ಲೇ, ಇತರ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಮನಬಂದಂತೆ ಟಿಕೆಟ್ ದರ ವಸೂಲಿಗೆ ಇಳಿದಿದ್ದವು. ಈ ಅಕ್ರಮ ದರ ಹೆಚ್ಚಳದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾದ ಕೇಂದ್ರ ಸರ್ಕಾರ, ವಿಮಾನಯಾನ ಸಂಸ್ಥೆಗಳ ದುಪ್ಪಟ್ಟು ಟಿಕೆಟ್ ದರ ಲೂಟಿಗೆ ತಡೆ ನೀಡಿ, ಏಕರೂಪ ಟಿಕೆಟ್ ದರ ನಿಗದಿಪಡಿಸಿದೆ. ಇಂಡಿಗೋ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ …
Read More »
Shaikh BigTv
December 6, 2025
Breaking News, Crime, ಕರ್ನಾಟಕ
ಇತ್ತೀಚೆಗೆ ಕೆಲವು ದರೋಡೆ, ಕಳ್ಳತನ ಮತ್ತು ವಂಚನೆ ಕೃತ್ಯಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯವರುಗಳ ಹೆಸರುಗಳು ತಳಕು ಹಾಕಿಕೊಂಡಿರುವುದು.. ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಡಿಜಿ-ಐಜಿಪಿ ಡಾ.ಎಂಎ ಸಲೀಂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿ, ಮೇಲ್ವಿಚಾರಣೆಯಲ್ಲಿ ವಿಫಲರಾಗುವ ಹಿರಿಯ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತುಕ್ರಮದ ಎಚ್ಚರಿಕೆ. ಬೆಂಗಳೂರು: ಅಪರಾಧ ಕೃತ್ಯಗಲ್ಲಿ ಪದೇಪದೆ ಪೊಲೀಸ್ ಸಿಬ್ಬಂದಿಯೇ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ …
Read More »
BigTv News
December 6, 2025
Breaking News
ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನ.27ರಂದು ಮನೆಯಲ್ಲಿ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.4ರಂದು ಮೃತಪಟ್ಟಿದ್ದಾರೆ.ಮೃತರನ್ನು ಈದು ಗ್ರಾಮದ ಕಂಠಾವು ನಿವಾಸಿ ಗಂಗಯ್ಯ ದೇವಾಡಿಗ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
December 6, 2025
Breaking News
ಕಲ್ಲು ಕ್ವಾರೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲೂಕಿನ ಸೋಮಗುದ್ದು ಸಮೀಪದ ಕ್ವಾರೆಯಲ್ಲಿ ನಡೆದಿದೆ.ಸೋಮುಗುದ್ದು ಹಾಗೂ ಅರಣ್ಯ ಪ್ರದೇಶದ ಮಧ್ಯ ಇರುವ ಕಲ್ಲಿನ ಕ್ವಾರೆಯ ನೀರಿನಲ್ಲಿ ಈಜಲು ಹೋಗಿದ್ದ ಸೋಮುಗುದ್ದ ಗ್ರಾಮದ 22 ವರ್ಷದ ನವೀನ್ ಮೃತ ದುರ್ದೈವಿಯಾಗಿದ್ದಾನೆ. ತನ್ನ ತಂದೆಯ ಜೊತೆಗೆ ನವೀನ್ ಕ್ವಾರೆಗೆ ತೆರಳಿದ್ದ. ತಂದೆ ಬಂಡೆ ಒಡೆಯುವ ಕೆಲಸದಲ್ಲಿ ತೊಡಗಿದಂತಹ ಸಮಯದಲ್ಲಿ ನವೀನ್ ಈಜಲು ಹೋಗಿ ನವೀನ …
Read More »