Breaking News

Breaking News

ನಿಜವಾದ ಕೆಲಸ ಸಂಜೆ 4 ಗಂಟೆಯ ನಂತರ ಎನ್ನುತ್ತಿದ್ದ ಡಾ. ಶಾಹೀನ್‌!

ದೆಹಲಿ ಸ್ಫೋಟದಲ್ಲಿ ಬಂಧಿತವಾಗಿರುವ ಮಹಿಳಾ ಉಗ್ರೆ ಡಾ. ಶಾಹೀನ್‌ ಸಯೀದ್‌ ತನ್ನ ನಿಜವಾದ ಕೆಲಸ ಸಂಜೆ 4 ಗಂಟೆಯ ನಂತರ ಆರಂಭವಾಗುತ್ತದೆ ಎಂದು ಹೇಳುತ್ತಿದ್ದಳು.ಈ ಬಗ್ಗೆ ಶಾಹೀನ್‌ ಸಹಪಾಠಿಯೊಬ್ಬರು ಮಾಹಿತಿ ನೀಡಿದ್ದು, ಆಕೆಯ ನಡವಳಿಕೆ ವಿಚಿತ್ರವಾಗಿತ್ತು. ಕಾಲೇಜಿಗೆ ಬರುವಾಗ ಜಪಮಾಲೆ ಹಾಗೂ ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ಸಂಗ್ರಹದ ಪುಸ್ತಕವನ್ನು ತರುತ್ತಿದ್ದಳು. ಸಂಸ್ಥೆಯ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಯಾವಾಗ ಬೇಕೆಂದರೆ ಆಗ ಬರುತ್ತಿದ್ದಳು, ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ.

Read More »

ಭಯೋತ್ಪಾದಕ ಚಟುವಟಿಕೆಗೆ ವೈದ್ಯರನ್ನೇ ಬಳಸಿದ್ದು ಯಾಕೆ: ಇಲ್ಲಿದೆ ಶಾಕಿಂಗ್ ಕಾರಣ

ದೆಹಲಿ ಕಾರು ಬಾಂಬ್ ಸ್ಪೋಟದ ಬಳಿಕ ಟೆರರ್ ವೈದ್ಯರ ಗ್ಯಾಂಗ್ ಜಾತಕವೆಲ್ಲಾ ಬಯಲಾಗಿದೆ. ಅಷ್ಟಕ್ಕೂ ಭಯೋತ್ಪಾದನಾ ಚಟುವಟಿಕೆಗೆ ವೈದ್ಯರನ್ನೇ ಬಳಸುವುದು ಯಾಕೆ? ಇಲ್ಲಿದೆ ಶಾಕಿಂಗ್ ಕಾರಣ.ದೆಹಲಿ ಸ್ಪೋಟಕ್ಕೆ ಮುನ್ನ ಹರ್ಯಾಣದಲ್ಲಿ ಸ್ಪೋಟಕದೊಂದಿಗೆ ಬಂಧಿತರಾಗಿದ್ದವರೂ ಇಬ್ಬರು ಟೆರರ್ ವೈದ್ಯರು.ದೆಹಲಿಯಲ್ಲಿ ಸ್ಪೋಟ ನಡೆಸಿದ್ದವನೂ ವೈದ್ಯನೇ. ಶಸ್ತ್ರಾಸ್ತ್ರ ಸಂಗ್ರಹಣೆ ಆರೋಪದಲ್ಲಿ ಬಂಧಿತರಾದವರೂ ವೈದ್ಯರೇ. ವೈದ್ಯಕೀಯ ಸೇವೆಯಂತಹ ಇನ್ನೊಬ್ಬರ ಜೀವ ಉಳಿಸುವ ವೃತ್ತಿ ಶಿಕ್ಷಣ ಪಡೆಯುವ ಇವರು ಈ ರೀತಿಯ ಕೃತ್ಯಕ್ಕೆ ಇಳಿಯುವಂತಹ ಮತಾಂಧ ಮನಸ್ಥಿತಿ …

Read More »

32 ವಾಹನಗಳು, 4 ಟಾರ್ಗೆಟ್: ಬೆಚ್ಚಿ ಬೀಳಿಸುವಂತಿದೆ ಟೆರರ್ ಗ್ಯಾಂಗ್ ನ ಸ್ಟೋರಿ

ದೆಹಲಿ ಸ್ಪೋಟದ ರೂವಾರಿಗಳ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಈ ಗ್ಯಾಂಗ್ 32 ವಾಹನಗಳನ್ನು ಬಳಸಿ 4 ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿ ದಾಳಿ ಮಾಡುವ ಹುನ್ನಾರ ನಡೆಸಿದ್ದರು ಎಂಬ ಬೆಚ್ಚಿ ಬೀಳಿಸುವ ಅಂಶ ಹೊರಬೀಳುತ್ತಿದೆ.ಇದಕ್ಕಾಗಿ 32 ಹಳೆಯ ವಾಹನಗಳನ್ನು ಖರೀದಿಸಿದ್ದ ಉಗ್ರರು ದೇಶದ ಪ್ರಮುಖ ನಾಲ್ಕು ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದರು.ಈ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸುವ ಯೋಜನೆ ಉಗ್ರರದ್ದಾಗಿತ್ತು. ಇದಕ್ಕೆ ಉಗ್ರರಿಂದ ವಶಪಡಿಸಿಕೊಳ್ಳಲಾದ ಭಾರೀ ಪ್ರಮಾಣದ ಸ್ಪೋಟಕವೇ ಸಾಕ್ಷಿ. ಈ …

Read More »

ಹಳೆಯ ದ್ವೇಷಕ್ಕೆ ಹರಿಯಿತು ನೆತ್ತರು: ಮೀತಿಮಿರಿದ ಅಟ್ಟಹಾಸ…

ಚಾಕು ಹಾಕಿ ಕೊಲೆ, ಜೀವಕ್ಕಿಲ್ಲ ಬೆಲೆ… ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ, ಯುವಕನೊಬ್ಬನಿಗೆ ಪಾಪಿಗಳು ಚಾಕು ಹಾಕಿ ಕೊಲೆ ಮಾಡಿದ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ ನಡೆದಿದೆ.ಹೌದು,,, ಮಲ್ಲಿಕ ಅದಂಬಾಯಿ ಕೊಲೆಯಾದ ಯುವಕ, ಆತನ ಸಹಚರರು ಹಳೇ ದ್ವೇಷಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಸೆಟ್ಲಿಮೆಂಟ್ ಹುಡುಗರು ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ. ಈ ಘಟನೆ ಬೆಂಡಿಗೇರಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, …

Read More »
Featured Video Play Icon

15ರಂದು ಸರ್ದಾರ್ ಏಕತಾ ನಡಿಗೆ ಕಾರ್ಯಕ್ರಮ: ಮೇಯರ್ ಜ್ಯೋತಿ ಪಾಟೀಲ…

ಉಕ್ಕಿನ ಮನುಷ್ಯನ ಸ್ಮರಣೆಗೆ ಏಕತಾ ನಡಿಗೆ..! ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಮೇರಾ ಯುವ ಭಾರತ ನೇತೃತ್ವದಲ್ಲಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ (MY Bharat) ಮೂಲಕ “ವಿಕಸಿತ ಭಾರತ್ ಪಾದಯಾತ್ರೆ” ಎಂಬ ರಾಷ್ಟ್ರೀಯ ಅಭಿಯಾನವನ್ನು ಇದೇ ನವೆಂಬರ್15ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಅಭಿಯಾನದ ಉದ್ದೇಶ ರಾಷ್ಟ್ರಪ್ರೇಮವನ್ನು ಉತ್ತೇಜಿಸುವುದು. ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಆಳವಾಗಿ …

Read More »

ದೆಹಲಿ ಸ್ಪೋಟದ ಹಿಂದಿದೆ ‘ಬಿರಿಯಾನಿ’ ಕೋಡ್ ವರ್ಡ್… ಚಾಟ್ ಮೂಲಕ ಸ್ಪೋಟಕ ಮಾಹಿತಿ ಬಹಿರಂಗ…!

ಈ ಘಟನೆ ಈಗ ಕೇವಲ ಒಬ್ಬ ವ್ಯಕ್ತಿ ಮಾಡಿರುವ ಕೃತ್ಯವಾಗಿರದೇ ಬೃಹತ್ ಭಯೋತ್ಪಾದಕ ಜಾಲದ ಪಿತೂರಿಯಾಗಿದೆ.ತನಿಖಾ ಸಂಸ್ಥೆಗಳು ತನಿಖೆಗೆ ಒಳಪಡಿಸಿದಾಗ ಆಘಾತಕಾರಿ ಸಂಗತಿಗಳು ಹೊರಬಂದಿವೆ.ಭಯೋತ್ಪಾದಕರು ತಮ್ಮ ಸಂಭಾಷಣೆಗಳನ್ನು ಮರೆಮಾಡಲು ತಮ್ಮ ಚಾಟ್‌ಬಾಕ್ಸ್‌ಗಳಲ್ಲಿ ಕೋಡ್ ಪದಗಳನ್ನು ಬಳಸಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ಈಗ ತನಿಖೆ ಮೂಲಕ ತಿಳಿದು ಬಂದಿದೆ.ಹಾಗೇ ನೋಡಿದರೆ ಈ ಕೋಡ್‌ಗಳನ್ನು ನೋಡಿದಾಗ ಅವು ಅನುಮಾನ ಮೂಡಿಸದೇ ಇರಬಹುದು.ಆದರೆ ಈ ಪದಗಳೇ ಈಗ ಉಗ್ರರ ಸಂಚಿನ ಯೋಜನೆಯ ಭಾಗವಾಗಿವೆ.ಈ ಚಾಟ್ …

Read More »

ಮಂಗಳೂರು – ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

ಕೆಲಸಕ್ಕೆಂದು ನವೆಂಬರ್ 11 ರಿಂದ ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ …

Read More »

EPFO ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣ: ಅಕೌಂಟೆಂಟ್ ಮನೆ ಮೇಲೆ ಪೊಲೀಸರ ದಾಳಿ

ಇಪಿಎಫ್ ಒ ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸೊಸೈಟಿಯ ಅಕೌಂಟೆಂಟ್ ಜಗದೀಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ.ಇಪಿಎಫ್ ಒ ಸೊಸೈಟಿ ಅಕೌಂಟೆಂಟ್ ಆಗಿದ್ದ ಜಗದೀಶ್ ಅವರ ಬೆಂಗಳೂರಿನ ಅಂಜನಾಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.21 ಸಾವಿರ ಸಂಬಳ ಪಡೆಯುತ್ತಿದ್ದ ಅಕೌಂಟೆಂಟ್ ಜಗದೀಶ್, 5 ಕೋಟಿ ರೂ ಮನೆ ನಿರ್ಮಿಸಿದ್ದಾರೆ. ಅಲ್ಲದೇ ಬೆಂಗಳೂರಿನ ದಕ್ಷಿಣ …

Read More »

ಮಟನ್ ಪೀಸ್’ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು.!

ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಕುರಿಮಾಂಸದ ತುಂಡು ವ್ಯಕ್ತಿಯೊಬ್ಬರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.ಮದ್ಯ ಸೇವಿಸಿದ ನಂತರ ಕುರಿಮಾಂಸದ ತುಂಡು ತಿನ್ನುತ್ತಿದ್ದ ಲಕ್ಷ್ಮಯ್ಯ ಅವರ ಗಂಟಲಿನಲ್ಲಿ ಮಟನ್ ಪೀಸ್ ಸಿಲುಕಿಕೊಂಡಿದೆ. ಉಸಿರುಗಟ್ಟುವಿಕೆಯಿಂದಾಗಿ ಅವರು ಪ್ರಜ್ಞೆ ತಪ್ಪಿದರು. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದು ಗ್ರಾಮದಲ್ಲಿ ದುಃಖದ ವಾತಾವರಣ ಮೂಡಿಸಿದೆ. ಲಕ್ಷ್ಮಯ್ಯ ಅವರ ಕುಟುಂಬ ಸದಸ್ಯರು ಶೋಕದಲ್ಲಿ ಮುಳುಗಿದ್ದಾರೆ.

Read More »

8 ಮಂದಿ ಶಂಕಿತರಿಂದ 4 ಸ್ಥಳಗಳಲ್ಲಿ ಸರಣಿ ಸ್ಪೋಟ ನಡೆಸಲು ಸ್ಕೆಚ್ : ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ.!

ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಪೋಟಕ ಅಂಶ ಬಹಿರಂಗವಾಗಿದ್ದು, ಸುಮಾರು 8 ಮಂದಿ ಶಂಕಿತರು ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸರಣಿ ಸ್ಪೋಟ ನಡೆಸಲು ಯೋಜಿಸಿದ್ದರು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.ಸುಮಾರು ಎಂಟು ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು. ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು. ಪ್ರತಿ ಗುಂಪು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು ಎಂದು …

Read More »