Breaking News

Breaking News

ರೇಣುಕಸ್ವಾಮಿ ಕೊಲೆ ಪ್ರಕರಣ: ಪತ್ನಿಗೆ ಪ್ರದೂಷ್‌ ಕರೆ‌, ದೂರು ದಾಖಲು

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್‌ ರಾವ್‌ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಜೈಲಿನಿಂದ ಬಿಡುಗಡೆಯಾಗಿದ್ದ ಕೈದಿ ವಿಷ್ಣುವರ್ಧನ್‌ ಹೆಸರಿನಲ್ಲಿ ಮೊಬೈಲ್‌ ಸಂಖ್ಯೆ ನೋಂದಾಯಿಸಿಕೊಂಡು ಪತ್ನಿಗೆ ಕರೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಪ್ರದೂಷ್‌ ರಾವ್‌ ಜೈಲಿನಲ್ಲಿ ಮೂರು ಮೊಬೈಲ್‌ ಸಂಖ್ಯೆಗಳನ್ನು ನೋಂದಾಯಿಸಿಕೊಂಡಿದ್ದರು. ಬಳಿಕ ಆಗಸ್ಟ್‌ 26ರಂದು ಬಿಡುಗಡೆಯಾದ ವಿಷ್ಣುವರ್ಧನ್‌ ಹೆಸರಿನಲ್ಲೂ ಮತ್ತೊಂದು ಸಂಖ್ಯೆ ನೋಂದಾಯಿಸಿಕೊಂಡು ಪತ್ನಿಯೊಂದಿಗೆ ಮಾತನಾಡಿರುವುದು ಪತ್ತೆಯಾಗಿದೆ. ಪತ್ನಿಯ ಸಂಖ್ಯೆಯನ್ನು …

Read More »

ಧಾರವಾಡದಲ್ಲಿ ವಿಚ್ಛೇದನ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಪತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ಧಾರವಾಡದಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದ್ದು, ನ್ಯಾಯಾಲಯದ ವಿಚಾರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಪತಿಯ ಮೇಲೆ ಸುಮಾರು 6 ಮಂದಿಯ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಎಸ್‌ಬಿಐ ಮುಖ್ಯ ಶಾಖೆ ಸಮೀಪ ಘಟನೆ ನಡೆದಿದ್ದು, ಶಶಿಧರ್ ಶಿರಾಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆಯಲ್ಲಿ ಶಶಿಧರ್ ಅವರ ತಲೆ, ಕೈ ಹಾಗೂ ಖಾಸಗಿ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಮೊದಲು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ …

Read More »

ಗಾಂಜಾ ಮಾರಾಟ: ತಲೆಮರೆಸಿಕೊಂಡಿದ್ದ ರೌಡಿಶೀಟರ್‌ ಬಂಧನ

ದೊಡ್ಡಬಳ್ಳಾಪುರದಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದ ಆರೋಪದ ಮೇಲೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ ಸೋಮಶೇಖರ ಅಲಿಯಾಸ್‌ ಡೆಡ್ಲಿ ಸೋಮ (30)ನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.11ರಂದು ಕಾರ್ಯಾಚರಣೆ ನಡೆಸಿ ಸೋಮಶೇಖರನನ್ನು ಬಂಧಿಸಿದ್ದು, ಆತನಿಂದ ₹1 ಲಕ್ಷ ಮೌಲ್ಯದ 2 ಕೆ.ಜಿ. 64 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವೈಎಸ್‌ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ ನಗರ ಠಾಣೆ ಪ್ರಭಾರ ಇನ್‌ಸ್ಪೆಕ್ಟರ್ ಎಚ್‌. ಮುತ್ತುರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Read More »

ಡಿಜೆಗಾಗಿ ಹೆದ್ದಾರಿ ತಡೆದು ಪ್ರತಿಭಟನೆ: ಐವರು ಅರೆಸ್ಟ್

ಚಿತ್ರದುರ್ಗ: ಶ್ರೀಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಡಿಜೆ ಬಳಸಲು ಅವಕಾಶ ನೀಡುವಂತೆ ಆಗ್ರಹಿಸಿ ಸೆ.12ರಂದು ಹಿರಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ-48 ತಡೆದು ಯುವಕರು ಪ್ರತಿಭಟನೆ ನಡೆಸಿದ್ದರು. ಹೆಚ್ಚುವರಿ ಸೌಂಡ್ ಬಳಸಿ ಮೆರವಣಿಗೆ ನಡೆಸಿದ ಆರೋಪದಡಿ ಹಿರಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Read More »

ಜೇವರ್ಗಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ; ನೆಲಕ್ಕೆ ಕೆಡವಿ ಹತ್ತಕ್ಕೂ ಹೆಚ್ಚು ಮಂದಿಯಿಂದ ಹಲ್ಲೆ!

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಹತ್ತಕ್ಕೂ ಹೆಚ್ಚು ಮಂದಿಯ ಗುಂಪು ಹಲ್ಲೆ ನಡೆಸಿರುವ ಘಟನೆ ಜೇವರ್ಗಿ ತಾಲೂಕಿನ ಮಯೂರ ಗ್ರಾಮದಲ್ಲಿ ನಡೆದಿದೆ. ಮಯೂರ ಗ್ರಾಮದ ಗುರುರಾಜ್ ಬಿರಾದರ್ (18) ಹಲ್ಲೆಗೊಳಗಾದ ಯುವಕ. ಗುರುರಾಜ್ ಒಂಟಿಯಾಗಿ ಸಿಕ್ಕ ವೇಳೆ ಶ್ರೀಶೈಲ್, ಅಜಯಕುಮಾರ್, ಮುತ್ತುರಾಜ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಏಕಾಏಕಿ ದಾಳಿ ನಡೆಸಿ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗುರುರಾಜ್ ನೀಡಿದ …

Read More »

ಬೆಂಗಳೂರು : ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಭೀಕರ ಕೊಲೆ

ಬೆಂಗಳೂರು, ಸೆ.15- ಯಾವುದೋ ವಿಚಾರಕ್ಕೆ ಯುವಕನೊಂದಿಗೆ ಜಗಳವಾಡಿದ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಕೂಲಿಕಾರ್ಮಿಕ ಮಹೇಶ್ (18) ಎಂದು ಗುರುತಿಸಲಾಗಿದೆ. ರಾಮಟೆಂಟ್ ರಸ್ತೆಯ ಬದಿ ಮಲಗಿದ್ದ ಮಹೇಶ್‌ನೊಂದಿಗೆ ರಾತ್ರಿ 11ರ ಸುಮಾರಿಗೆ ದುಷ್ಕರ್ಮಿಗಳು ಜಗಳವಾಡಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗ್ಗೆ 6ರ ಸುಮಾರಿಗೆ ಸ್ಥಳೀಯರು …

Read More »

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. ಕಡಿಮೆ ಬೆಲೆಗೆ ಔಷಧ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ. ಎಸ್‌ಐಟಿ ದಾಳಿಯಲ್ಲಿ ಕೃಪಾ ಫಾರ್ಮಸಿಯಲ್ಲಿ ಅಪಾರ ಪ್ರಮಾಣದ ನಕಲಿ ಔಷಧಿಗಳು ಹಾಗೂ ಬಿಲ್‌ಗಳು ಪತ್ತೆಯಾಗಿದ್ದು, ಮಾಲೀಕ ವೀರೇಶ್‌ಕುಮಾರ್‌ನನ್ನು ಬಂಧಿಸಲಾಗಿದೆ. ಆತನ ಮಾಹಿತಿ ಆಧರಿಸಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆಯಿದೆ. ಮತ್ತೊಬ್ಬ ಆರೋಪಿ ಪ್ರಶಾಂತ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, …

Read More »

ಭಕ್ತರ ಜನಜಂಗುಳಿಯಲ್ಲೇ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಕಳ್ಳಿಯರು

ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ದಟ್ಟಣೆ ಹೆಚ್ಚಿದ್ದ ಸಂದರ್ಭವನ್ನು ಬಳಸಿಕೊಂಡು ಮಹಿಳೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿದ ಘಟನೆ ಬ್ರಹ್ಮಾವರ ತಾಲ್ಲೂಕಿನ ಕೋಟ ವ್ಯಾಪ್ತಿಯ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಗಣೇಶ ಚತುರ್ಥಿ ಪ್ರಯುಕ್ತ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳಿಯರು, ದೇವಳದ ಗರ್ಭಗುಡಿ ಪಕ್ಕದಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ಭಕ್ತರೊಬ್ಬರ ಮಾಂಗಲ್ಯ ಸರವನ್ನು ಎಗರಿಸಿರುವುದಾಗಿ ತಿಳಿದುಬಂದಿದೆ. ಕಳ್ಳತನದ ಕೃತ್ಯ ದೇವಾಲಯದ …

Read More »

ವಿಜಯನಗರ : KKRTC ಬಸ್ ಹರಿದು 8 ಕುರಿಗಳು ದಾರುಣ ಸಾವು!

ವಿಜಯನಗರ: ಕೆಕೆಆರ್‌ಟಿಸಿ ಬಸ್ ಹರಿದು 8 ಕುರಿಗಳು ಸಾವನ್ನಪ್ಪಿ, 2 ಕುರಿಗಳಿಗೆ ಗಂಭೀರ ಗಾಯಗಳಾದ ಘಟನೆ ಹೊಸಪೇಟೆ ತಾಲೂಕಿನ ಕಾಕುಬಾಳು ಕ್ರಾಸ್ ಬಳಿ ನಡೆದಿದೆ. ಹರಿಜನ ಗಾಳೆಪ್ಪ ಅವರಿಗೆ ಸೇರಿದ ಕುರಿಗಳಾಗಿದ್ದು, ಎಮ್ಮಿಗನೂರಿನಿಂದ ಹಗರಿಬೊಮ್ಮನಹಳ್ಳಿಗೆ ಬಸ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬಸ್ ಹಗರಿಬೊಮ್ಮನಹಳ್ಳಿ ಡಿಪೋಗೆ ಸೇರಿದೆ. ಘಟನೆ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಗುಂಡ್ಲುಪೇಟೆಯಲ್ಲಿ ಕೇರಳಂ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರದ ಗಾಳೀಪುರ ನಿವಾಸಿ ಅಬೀವುಲ್ಲಾ ಬಂಧಿತ ಆರೋಪಿ. ಆತನಿಂದ ₹1.20 ಲಕ್ಷ ಮೌಲ್ಯದ 1,200 ಲಾಟರಿ ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಮಾಹಿತಿ ಆಧರಿಸಿ ಗುಂಡ್ಲುಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Read More »