BigTv News
September 15, 2026
Breaking News
ಬೆಂಗಳೂರು: ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಪಾನಮತ್ತ ಗ್ಯಾಂಗ್ ವ್ಯಕ್ತಿಯೊಬ್ಬರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಬೇಗಿಹಳ್ಳಿಯಲ್ಲಿ ನಡೆದಿದೆ. ರೌಡಿ ಕನಕರಾಜು ಹಾಗೂ ಆತನ ಗ್ಯಾಂಗ್ ರಾತ್ರಿ ಎಗ್‌ರೈಸ್ ತಿನ್ನಲು ಬಂದಿದ್ದು, ಅಂಗಡಿ ಮುಚ್ಚುತ್ತಿದ್ದ ಮಾಲೀಕ ಎಗ್‌ರೈಸ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕಿರಿಕ್ ಮಾಡಿದ ಆರೋಪಿಗಳು, ಪಕ್ಕದ ಅಂಗಡಿಗೆ ಪೇಂಟಿಂಗ್ ಮಾಡುತ್ತಿದ್ದ ಮಂಜುನಾಥ್ ಎಂಬುವವರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಅವರ ಕೈಗೆ …
Read More »
BigTv News
September 15, 2026
Breaking News
ಬೆಳಗಾವಿಯ ಚವ್ಹಾಣಗಲ್ಲಿಯಲ್ಲಿ ಗಣೇಶೋತ್ಸವದ ನಡುವೆಯೇ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಗಜಾನನ ದಮೋನೆ (65), ರೋಷನ (21), ಶಾರಧಾ (45) ಹಾಗೂ ಭಾರತಿ (50) ಮೃತಪಟ್ಟಿದ್ದಾರೆ. ಪ್ರಿಯಾ (28) ಹಾಗೂ ಗಂಗಾ (25) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಇಡೀ ಮನೆಗೆ ವ್ಯಾಪಿಸಿದೆ ಎನ್ನಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ …
Read More »
BigTv News
September 15, 2026
Breaking News
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಚಾಮನಾಳ ಗ್ರಾಮದ ದಲಿತ ಭಕ್ತರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ವೇಳೆ ಜಾತಿ ನಿಂದನೆ ಹಾಗೂ ಕೊಲೆಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, …
Read More »
BigTv News
September 15, 2026
Breaking News
ಬೆಳಗಾವಿಯ ಚಾವ್ಹಾಟ್ ಗಲ್ಲಿಯಲ್ಲಿ ಗಣೇಶ ಹಬ್ಬದ ದಿನವೇ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಮೃತಪಟ್ಟಿದ್ದಾರೆ. ಪ್ರಿಯಾ (28) ಹಾಗೂ ಗಂಗಾ (25) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಕೆಟ್ …
Read More »
BigTv News
September 14, 2026
Breaking News
ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ತನ್ನ ಚಿಕ್ಕಪ್ಪನಿಗೆ ಚಾಕು ಇರಿದಿದ್ದಾನೆ. ಶ್ರೀನಿವಾಸ್ (52) ಗಾಯಗೊಂಡಿದ್ದು, ಅವರ ಸೋದರ ಸಂಬಂಧಿ ಮಂಜುನಾಥ್ ವಿರುದ್ಧ ಆರೋಪ ಕೇಳಿಬಂದಿದೆ. ರಾಜಪ್ಪ ಹಾಗೂ ಶ್ರೀನಿವಾಸ್ ಕುಟುಂಬಗಳ ನಡುವೆ ಕೆಲ ದಿನಗಳಿಂದ ವಿವಾದವಿತ್ತು. ಇದೇ ವಿಚಾರವಾಗಿ ಗಲಾಟೆ ನಡೆದ ವೇಳೆ ಕಾರಿನಲ್ಲಿ ಬಂದ ಮಂಜುನಾಥ್ ಚಾಕುವಿನಿಂದ ಶ್ರೀನಿವಾಸ್ ಮೇಲೆ ದಾಳಿ ನಡೆಸಿದ್ದಾನೆ …
Read More »
BigTv News
September 14, 2026
Breaking News
ನವದೆಹಲಿ: ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಜಿಮ್ ತರಬೇತುದಾರನನ್ನು ದುಷ್ಕರ್ಮಿಗಳು ಸುಮಾರು 20 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇಬ್ಬರು ಆರೋಪಿಗಳು ವಾಹನದಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಫತೇಪುರ್ ಬೆರಿ ಠಾಣಾ ವ್ಯಾಪ್ತಿಯ ಹಂಸಾ ಚೌಕ್‌ನ ದಿ ಪರ್ಫೆಕ್ಟ್ ಜಿಮ್‌ನಲ್ಲಿ ಘಟನೆ ನಡೆದಿದೆ. ವೈಯಕ್ತಿಕ ದ್ವೇಷ ಅಥವಾ ದರೋಡೆಕೋರರ ನಂಟಿನಿಂದ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ವಿಶೇಷ ಘಟಕ ಹಾಗೂ ವಿಶೇಷ ಸಿಬ್ಬಂದಿ …
Read More »
BigTv News
September 14, 2026
Breaking News
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ UUCMS ತಂತ್ರಾಂಶ ದುರುಪಯೋಗಪಡಿಸಿಕೊಂಡು ಫೇಲ್ ಆಗಿದ್ದ ವಿದ್ಯಾರ್ಥಿಯ ಅಂಕಗಳನ್ನು ಅಕ್ರಮವಾಗಿ ತಿದ್ದಿ ಪಾಸ್ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಸಿಬ್ಬಂದಿ ಅನುಷಾ ಹಾಗೂ PES ಕಾಲೇಜಿನ ವಿದ್ಯಾರ್ಥಿ ವರ್ಷಿತ್ ಎನ್. ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷಿತ್ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರೂ, ಫಲಿತಾಂಶ ಪ್ರಕಟಕ್ಕೂ ಮುನ್ನವೇ UUCMS ಪೋರ್ಟಲ್‌ನಲ್ಲಿ ಅಂಕಗಳನ್ನು ಬದಲಾಯಿಸಿ ಪಾಸ್ ಮಾಡಲಾಗಿದೆ. ಒಂದು ವಿಷಯದ ಅಂಕ ತಿದ್ದಲು …
Read More »
BigTv News
September 14, 2026
Breaking News
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ ಆರೋಪದಡಿ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 6 ಆರೋಪಿಗಳನ್ನು ಬಂಧಿಸಿದ್ದಾರೆ. ಅಮಾವಾಸ್ಯೆ ಜಾತ್ರೆ ಮುಗಿಸಿ ಭಕ್ತರು ಆಟೋದಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಆಟೋ ಸ್ಥಳೀಯ ಬಾಲಕನಿಗೆ ತಾಗಿದ್ದರಿಂದ ಮಾತಿನ ಚಕಮಕಿ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ …
Read More »
BigTv News
September 14, 2026
Breaking News
ಕುಮಟಾ: ಪಟ್ಟಣದಲ್ಲಿ ನಡೆದ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಓರ್ವ ಆರೋಪಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ರಸ್ತೆಬದಿ ಮಲಗಿದ್ದ ಗೋವನ್ನು ಇಬ್ಬರು ವ್ಯಕ್ತಿಗಳು ಕಾರಿನ ಡಿಕ್ಕಿಗೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋವಿಗೆ ತಿನಿಸು ನೀಡಿ ಬಳಿಕ ಹಗ್ಗದಿಂದ ಎಳೆದುಕೊಂಡು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 60ಕ್ಕೂ ಅಧಿಕ ಸಿಸಿಟಿವಿ ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಮಂಗಳೂರು …
Read More »
BigTv News
September 14, 2026
Breaking News
ಬೆಂಗಳೂರು: 2017ರಲ್ಲಿ ಹದಿಹರೆಯದ ಬಾಲಕಿಯನ್ನು ಅಪಹರಿಸಿ ಸರಣಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ತ್ವರಿತಗತಿ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ರಾಘವೇಂದ್ರ ಹಾಗೂ ಸಾಗರ್‌ಗೆ ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹20 ಸಾವಿರ ದಂಡ ವಿಧಿಸಲಾಗಿದೆ. 2017ರ ಅಕ್ಟೋಬರ್‌ನಲ್ಲಿ ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿ ಸ್ನೇಹಿತೆಯ ಹೆಸರಿನಲ್ಲಿ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದ ಆರೋಪಿಗಳು ಅತ್ಯಾಚಾರ ಎಸಗಿದ್ದರು. ಬಳಿಕ ಬಾಲಕಿಯನ್ನು 10 ದಿನಗಳ …
Read More »