Breaking News

Breaking News

ರೋಡ್ ರೇಜ್; ಮಹಿಳೆಗೆ ನಿಂದಿಸಿ ಕಾರು ಜಖಂಗೊಳಿಸಿದ್ದ ಕಿಡಿಗೇಡಿಗಳ ಬಂಧನ!-

ಬೆಂಗಳೂರು: ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ವಿಚಾರವಾಗಿ ಪ್ರಶ್ನಿಸಿದ ಮಹಿಳೆಯ ಕಾರಿನ ಗಾಜು ಒಡೆದು, ಕಲ್ಲಿನಿಂದ ಹಾನಿಗೊಳಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 28ರಂದು ಮಹಿಳೆಯ ಕಾರಿಗೆ ಮೂವರು ಯುವಕರಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಯುವಕರು ಮಹಿಳೆಯೊಂದಿಗೆ ಜಗಳವಾಡಿ, ಹೆಲ್ಮೆಟ್ ಹಾಗೂ ಕಲ್ಲಿನಿಂದ ಕಾರಿನ ಗಾಜು, ಬಾನೆಟ್ ಮತ್ತು ರಿಯರ್ ವ್ಯೂ ಮಿರರ್ ಜಖಂಗೊಳಿಸಿದ್ದಾರೆ. …

Read More »

ಪ್ರೇಯಸಿಯ ಹತ್ಯೆಗೈದ ಪ್ರಿಯಕರ: ಗೋಕಾಕ್ ಫಾಲ್ಸ್ ಬಳಿ ಮೃತದೇಹ ಎಸೆದು ಪರಾರಿ; ಪ್ರಕರಣ ದಾಖಲು

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷ ಪ್ರೀತಿಸಿದ ಯುವಕ, ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಕೊಲೆಯಾದ ಯುವತಿ. ಬಸಪ್ಪ ಸಿದ್ದಪ್ಪ ಸಾತನ್ನವಣ್ಣ ಕೊಲೆ ಆರೋಪಿ. ಅಕ್ಟೋಬರ್ 28ರಂದು ರಕ್ಷಿತಾಳನ್ನು ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋದ ಬಸಪ್ಪ, ಮದುವೆ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳದ ವೇಳೆ ಆಕೆಯ ಕುತ್ತಿಗೆ ಹಿಸುಕಿ ಹಾಗೂ ವೇಲಿನಿಂದ …

Read More »

ಮಾದಕ ವಸ್ತು ಪೂರೈಸುತ್ತಿದ್ದ ಮಹಿಳೆ ಬಂಧನ

ಮಂಗಳೂರು: ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ ನಸೀಮಾ (42) ಎಂಬ ಮಹಿಳೆಯನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಕೆ ವಾಸವಿದ್ದ ಪಂಪ್‌ವೆಲ್ ಉಜ್ಜೋಡಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ₹15.30 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ. ನ.1ರಂದು ದಾಖಲಾಗಿದ್ದ ಮಾದಕ ವಸ್ತು ಸೇವನೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ನಸೀಮಾ ಮಾದಕ ವಸ್ತು ಪೂರೈಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ …

Read More »

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ₹11 ಲಕ್ಷ ಮೌಲ್ಯದ 74 ಗ್ರಾಂ ತೂಕದ ಮೂರು ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಅ.20ರಂದು ಕೂಡ್ಲುಗೇಟ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದರು. …

Read More »

ಆನ್‌ಲೈನ್ ಟ್ರೇಡಿಂಗ್ ಸಾಲಕ್ಕೆ ದೊಡ್ಡಮ್ಮನ ಸರ ಕದ್ದ ಯುವಕ 6 ಗಂಟೆಯಲ್ಲೇ ಸೆರೆ!

ಮೈಸೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದ ಯುವಕನೊಬ್ಬ, ಸ್ವಂತ ದೊಡ್ಡಮ್ಮನ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ದೋಚಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕುವೆಂಪು ನಗರ ಪೊಲೀಸರು ಕೇವಲ 6 ಗಂಟೆಯೊಳಗೆ ಆರೋಪಿ ರಜತ್ (24) ಎಂಬಾತನನ್ನು ಬಂಧಿಸಿದ್ದಾರೆ. ಅಕ್ಟೋಬರ್ 30ರಂದು ಮನೆಯಲ್ಲಿ ಒಬ್ಬರೇ ಇದ್ದ 69 ವರ್ಷದ ಲೀಲಾವತಿ ಅವರ ಮನೆಗೆ ಹೆಲ್ಮೆಟ್ ಧರಿಸಿ ನುಗ್ಗಿದ ಆರೋಪಿ, ಅವರ ಕಣ್ಣಿಗೆ ಖಾರದ ಪುಡಿ ಎರಚಿ 60 …

Read More »

ವಿಜಯನಗರ | ಮಹಿಳೆ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ

ಹರಪನಹಳ್ಳಿ (ವಿಜಯನಗರ): ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿ ಹನುಮಂತಪ್ಪ ಎಂಬಾತನಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹10 ಲಕ್ಷ ದಂಡ ವಿಧಿಸಿದೆ. ಮಹಿಳೆಯನ್ನು ಪ್ರೀತಿಸುತ್ತಿದ್ದ ಹನುಮಂತಪ್ಪ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ಒಪ್ಪದಿದ್ದಾಗ 2023ರ ಮಾರ್ಚ್ 5ರಂದು ಮಗನೊಂದಿಗೆ ಹೋಗುತ್ತಿದ್ದ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. …

Read More »

ರಾಯಚೂರು: ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಯಾದಗಿರಿ: ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ವಕೀಲರು ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದಿಂದ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ವಕೀಲ ಮಂಜುನಾಥ ಅವರ ಕೊಲೆ ಹಾಗೂ ಗೌರಿಬಿದನೂರಿನ ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಅವರ ಮೇಲಿನ ಹಲ್ಲೆಯನ್ನು ಖಂಡಿಸಿದರು. ವಕೀಲರ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. …

Read More »

ನೋಡೋಕೆ ಅಮಾಯಕರು.. ಆದ್ರೆ ಕಿರಾತಕರು..! ಹಣ ಡಬ್ಲಿಂಗ್‌ ಆಸೆ ತೋರಿಸಿ ಜೀವ ತೆಗೆದ ಕೀಚಕರು

ಬೆಂಗಳೂರು: ಹಣವನ್ನು ದ್ವಿಗುಣಗೊಳಿಸುವ ಆಮಿಷವೊಡ್ಡಿ ಬಡ ಕಾರ್ಮಿಕನಿಂದ ₹4.20 ಲಕ್ಷ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಮೂಲದ ಭೀಮಣ್ಣ (ಹೆಸರು) ಬೆಂಗಳೂರಿನ ಚಿಕ್ಕಜಾಲದಲ್ಲಿ ವಾಸವಿದ್ದು, ವಂಚನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಿಕಾಂಬದೇವಿ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯ ಮೂಲಕ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀಡುವುದಾಗಿ ಆರತಿ ಎಂಬ ಮಹಿಳೆ ಆಮಿಷವೊಡ್ಡಿದ್ದಳು. ಇದನ್ನು ನಂಬಿದ ಭೀಮಣ್ಣ ಸ್ನೇಹಿತರು ಹಾಗೂ ಪರಿಚಯಸ್ಥರಿಂದ ಹಣ ಪಡೆದು ಒಟ್ಟು ₹4.20 ಲಕ್ಷ ಹೂಡಿಕೆ …

Read More »

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ರಘು ಮತ್ತು ಪ್ರಕಾಶ್ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದ್ದು, ಇದನ್ನು ಬಿಡಿಸಲು ಹೋದ ನಂದನ್ ಮೇಲೆ ಶಿವರಾಜು ಎಂಬಾತ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ನಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕೃತ್ಯದಲ್ಲಿ ಧನುಷ್, ಶಿವರಾಜು ಹಾಗೂ …

Read More »

ಬಾಳೆಹೊನ್ನೂರು | ಕುಡಿದ ಮತ್ತಿನಲ್ಲಿ ಜೀವ ಬೆದರಿಕೆ: ಅಧಿಕಾರಿ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ವಿರುದ್ಧ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಕೊಲೆ ಬೆದರಿಕೆ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದೂರು ನೀಡಲು ತೆರಳುತ್ತಿದ್ದಾಗ ಶೃಂಗೇರಿ ವೃತ್ತದಲ್ಲಿ ಅಡ್ಡಗಟ್ಟಿ, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರವೀಂದ್ರ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ …

Read More »