Breaking News

Breaking News

ಮಹಿಳೆಯ ಬೆರಳು ಕತ್ತರಿಸಿ ಚಿನ್ನದ ಸರ ಎಗರಿಸಿದ್ದ ಆರೋಪಿಗಳು ಅಂದರ್.

ಬೈಕ್ನಲ್ಲಿ ಬಂದು ಮಹಿಳೆ ಕತ್ತಿಗೆ ಕೈ ಹಾಕಿ ಸರ ಎಗರಿಸಿದ್ದರು. ಈ ವೇಳೆ ಆರೋಪಿ ಯೋಗಾನಂದ ಮಹಿಳೆಯರನ್ನು ರಸ್ತೆಯಲ್ಲೇ ಅಟ್ಟಾಡಿಸಿದ್ದ.ಈ ಕೃತ್ಯ ಇಡೀ ಬೆಂಗಳೂರು ಬೆಚ್ಚಿ ಬಿಳುವಂತೆ ಮಾಡಿತ್ತು. ಸೆಪ್ಟಂಬರ್ 13 ರಾತ್ರಿ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ ಈ ಘಟನೆ ನಡೆದಿತ್ತು.ಆರೋಪಿಗಳ ಬೆನ್ನುಬಿದ್ದ ಪೊಲೀಸರು,ಒಂದು ತಿಂಗಳಿಂದ ಊರಿನಲ್ಲೇ ಕಾದು ಕುಳಿತು ಖೆಡ್ಡಾಗೆ ಕೆಡವಿದ್ದಾರೆ. ಈ ವೇಳೆ ಆರೋಪಿಗಳು ಗೋವಾ-ಮುಂಬೈ ಸುತ್ತಿ ಸುತ್ತಿ ಇದ್ದ ಹಣವನ್ನೆಲ್ಲಾ ಖರ್ಚು …

Read More »

ಡಿವೋರ್ಸ್‌ ಕೊಟ್ಟಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಪೊಲೀಸ್‌!

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ಹತ್ಯೆಗೈದಿರುವ ಘಟನೆ ಬೆಳಗಾವಿಯ ಸವದತ್ತಿಯಿಲ್ಲಿ ನಡೆದಿದೆ. ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕಾಶಮ್ಮ ನೆಲ್ಲಿಕಟ್ಟಿ ಮೃತ ದುರ್ದೈವಿ. ಗಂಡ ಸಂತೋಷ್‌ ಕಾಂಬಳೆ ಕೊಲೆ ಆರೋಪಿಯಾಗಿದ್ದಾನೆ.ಹೆಂಡತಿಗೆ ಪ್ರತಿದಿನವೂ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿದ್ದ ಸಂತೋಷ ಅ . 13ರಂದು ಸಂಜೆ ಕಾಶಮ್ಮನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದ. ಇದೇ ವೇಳೆ ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ …

Read More »

ಕಾರ್ ಬೈಕ್ ನಡುವೆ ಡಿಕ್ಕಿ- ಹಾರಿದ ಹೆಲ್ಮೆಟ್, ಸವಾರ ಜಸ್ಟ್ ಮಿಸ್.

ಎದುರಿಗಿದ್ದ ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ ಸವಾರನೊಬ್ಬ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಹೆಲ್ಮೆಟ್‌ ಹಾರಿ ಬಿದ್ದಿರುವಂತಹ ಘಟನೆ ಬೆಂಗಳೂರಿನ ಯಲಹಂಕ ಪ್ರದೇಶದ ಅವಲಹಳ್ಳಿಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಅದೃಷ್ಟವಶಾತ್‌ ಬೈಕ್‌ ಸವಾರ ಪ್ರಾಣಾಪಾಯದಿಂದ ಜಸ್ಟ್‌ ಮಿಸ್‌ ಆಗಿದ್ದಾನೆ.ಅವಲಹಳ್ಳಿಯ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೈಕ್‌ ಸವಾರ ಸರ್ವಿಸ್ ರಸ್ತೆಯಲ್ಲಿ ಮತ್ತೊಂದು ವಾಹನವನ್ನು ಓವರ್ ಟೆಕ್ ಮಾಡಲು ಹೋಗಿ ಎದುರಿನಿಂದ ಬಂದ ಕಾರಿಗೆ …

Read More »

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿದ ಖಾಸಗಿ ಬಸ್‌!

ಬೆಂಗಳೂರನಿಂದ ಇಳಕಲ್ಲ ಕಡೆ ಬರುತ್ತಿದ್ದ ಎಸ್‌ಆರ್‌ಎಸ್ ಬಸ್ ನಿಯಂತ್ರಣ ತಪ್ಪಿ ಈ ಇಂದು ಬೆಳಗ್ಗೆ ಅಪಘಾತ ಆಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.ನಿದ್ದೆಯ ಮಂಪರಿನಲ್ಲಿ ಚಾಲಕ ಡಿವೈಡರ್‌ ಮೇಲೆ ಹತ್ತಿಸಿದ ಎನ್ನಲಾಗಿದ್ದು, ಅಪಘಾತ ತೀವ್ರತೆಗೆ ಬಸ್‌ನ ಮುಂಬಾಗ ನಜ್ಜು ಗುಜ್ಜಾಗಿದೆ. ಚಾಲಕ ಸೇರಿ ಏಳೆಂಟು ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಇಳಕಲ್ಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Read More »

ರೈತನ ಮೇಲೆ ವ್ಯಾಘ್ರ ದಾಳಿ, ಸ್ಥಿತಿ ಗಂಭೀರ; ಅರಣ್ಯ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ!

ಬಡಗಲಪುರ ಗ್ರಾಮದ ರೈತ ಮಹದೇವಾ ಎಂಬ ವ್ಯಕ್ತಿಗೆ ಹುಲಿ ದಾಳಿ ನಡೆಸಿದೆ. ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದ ವೇಳೆ ಹುಲಿ ರೈತನ ಮೇಲೆ ದಾಳಿ ನಡೆಸಿದ್ದು, ರೈತನಿಗೆ ಗಂಭೀರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.ಕೊಂಬಿಂಗ್ ನಡೆಸುತ್ತಿದ್ದ ಅಣತಿ ದೂರದಲ್ಲೇ ಹುಲಿ ದಾಳಿ ನಡೆಸಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಾಹನಕ್ಕೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ. …

Read More »

ಮಂಗಳೂರು| ಕೋಟ್ಯಂತರ ರೂ. ವಂಚನೆ ಪ್ರಕರಣ: ದಂಪತಿಯ ಬಂಧನ

ಮುಲ್ಕಿ ತಾಲೂಕಿನ ಕಿನ್ನಿಗೋಳಿ ಪರಿಸರದ ಸಾರ್ವಜನಿಕರ ಬಳಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ರೂ. ಹಾಗೂ ಚಿನ್ನವನ್ನು ಪಡೆದು ಹಲವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಗಳಾದ ಕವತ್ತಾರು ಗ್ರಾಮದ ರಿಚರ್ಡ್ ಡಿಸೋಜ (52) ಮತ್ತಾತನ ಪತ್ನಿ ರಶ್ಮಿ ರೀಟಾ ಪಿಂಟೋ (47) ರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.ಕಳೆದ ವರ್ಷ ಈ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಗಳು ಪೊಲೀಸರಿಗೆ ಸಿಗದೆ ಮುಂಬೈನಲ್ಲಿ …

Read More »

ಬೈಕ್ ಹತ್ತದಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ!

ಮೈಸೂರು ತಾಲೂಕಿನ ಜಟ್ಟಿಹುಂಡಿಯಲ್ಲಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ದೇವರಾಜ್‌ನನ್ನು ಗುರುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ದೇವರಾಜ್‌ಗೆ ಸವಿತಾ ಎರಡನೇ ಪತ್ನಿಯಾಗಿದ್ದು, ಅವರ ಮಗಳಿಗೆ ಆರೋಗ್ಯದ ಸಮಸ್ಯೆಯಿದ್ದ ಕಾರಣ ಜಟ್ಟಿಹುಂಡಿ ಸಂತ ಜೋಸೆಫ್ ವೃದ್ಧಾಶ್ರಮದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆರು ತಿಂಗಳಿನಿಂದ ಅಲ್ಲೇ ಕೆಲಸ ಮಾಡುತ್ತಿದ್ದರು.ಸವಿತಾ ಅವರು ಪ್ರತಿ ಗುರುವಾರ ಕೆ.ಆರ್. ಆಸ್ಪತ್ರೆಗೆ ಬೆಳಿಗ್ಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಗುರುವಾರ 10.30ಕ್ಕೆ ಕೆ.ಆರ್.ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ವೆಂಕಟೇಶ್ ಬೈಕ್‌ನಲ್ಲಿ …

Read More »

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳ ವಿಚಾರಣೆ- ಪಾಟಿಸವಾಲು

ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಎರಡು ಸಾಕ್ಷಿಗಳ ಪಾಟಿ ಸವಾಲು ಇಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಯಿತು.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಸಾಕ್ಷಿಗಳಾದ ಆರೋಪಿಯನ್ನು ನೇಜಾರಿನಿಂದ ಸಂತೆಕಟ್ಟೆಯವರೆಗೆ ಬೈಕಿನಲ್ಲಿ ಕರೆದುಕೊಂಡು ಹೋದ ಬೈಕ್ ಸವಾರ ಶಿವಕುಮಾರ್ ಹಾಗೂ ನೇಜಾರಿನಿಂದ ಕರಾವಳಿ ಬೈಪಾಸ್‌ವರೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋದ ರಿಕ್ಷಾ ಚಾಲಕ ರಘುನಾಥ ಪೂಜಾರಿ ಯನ್ನು ಮುಖ್ಯ ವಿಚಾರಣೆಗೆ …

Read More »

ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ಕಂಡಕ್ಟರ್ ಆಗಿದ್ದ ಪತ್ನಿಯ ಇರಿದು ಕೊಂದ ಪಾಪಿ ಪತಿ.!

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು,ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶವ್ವ ಕರೀಕಟ್ಟಿ (34) ಅವರನ್ನು ಅವರ ಪತಿ ನಿಪ್ಪಾಣಿ ಠಾಣೆ ಕಾನ್ಸ್ಟೆಬಲ್ ಸಂತೋಷ ಕಾಂಬಳೆ (35) ಕೊಲೆ ಮಾಡಿದ್ದಾರೆ.ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶವ್ವ ಮತ್ತು ಸಂತೋಷ 2013ರಲ್ಲಿ ವಿವಾಹವಾಗಿದ್ದರು. ಕಾಶವ್ವ ಅವರು ನಿಪ್ಪಾಣಿಯಿಂದ ಸವದತ್ತಿ ಡಿಪೊಗೆ ವರ್ಗಾವಣೆ ಪಡೆದುಕೊಂಡಿದ್ದರು. ಸವದತ್ತಿಯ ರಾಮಾಪುರ ಬಡಾವಣೆ ಮನೆಯಲ್ಲಿ ವಾಸವಾಗಿದ್ದರು. ಪತಿ ಸಂತೋಷನ ವಿರುದ್ಧ …

Read More »

ಚಾಮರಾಜನಗರ: 27 ತಿಂಗಳ ಸಂಬಳ ಬಾಕಿ; ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲೇ ‘ವಾಟರ್ ಮ್ಯಾನ್’ ಆತ್ಮಹತ್ಯೆ!

ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಕಿರುಕುಳ ಹಾಗೂ 27 ತಿಂಗಳಿಂದ ಸಂಬಳ ಸಿಗದೆ ಮನನೊಂದ ‘ವಾಟರ್ ಮ್ಯಾನ್’ ಪಂಚಾಯಿತಿ ಕಚೇರಿಯ ಕಿಟಕಿ ಗ್ರಿಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಂಗನೂರಿನಲ್ಲಿ ನಡೆದಿದೆ.ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮೇಗೌಡ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು 27 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ.

Read More »