Breaking News

Breaking News

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. ಮಸೀದಿ ಮುಂದೆ ಮೆರವಣಿಗೆ ಹಾಗೂ ಪಟಾಕಿ ಸಿಡಿಸದಂತೆ ಯುವಕರಿಗೆ ಅವರು ಸೂಚಿಸಿದ್ದಾರೆ. ಪೊಲೀಸರು ಸೂಚಿಸುವ ಮಾರ್ಗದಲ್ಲೇ ಮೆರವಣಿಗೆ ನಡೆಸಬೇಕು ಹಾಗೂ ನಿಗದಿತ ಮಾರ್ಗಕ್ಕೆ ಅನುಗುಣವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇನ್ಸ್‌ಪೆಕ್ಟರ್ ಮಾತನಾಡಿರುವ ವಿಡಿಯೋ ಸಾಮಾಜಿಕ …

Read More »

ಪೌರಕಾರ್ಮಿಕಗೆ ಕೇರಳ ಯುವತಿಯಿಂದ ಕಲ್ಲೇಟು

ಬೆಂಗಳೂರು: ರಸ್ತೆಬದಿ ಚಹಾ ಕಪ್ ಎಸೆಯದಂತೆ ಸಲಹೆ ನೀಡಿದ ಪೌರಕಾರ್ಮಿಕನ ಮೇಲೆ ಕೇರಳ ಮೂಲದ ಮಹಿಳೆ ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ವೈದೇಹಿ ಹಾಗೂ ಆಕೆಯ ಸ್ನೇಹಿತನನ್ನು ವೈಟ್‌ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಟ್ಟಂದೂರು ಅಗ್ರಹಾರದ ಕುವೆಂಪು ರಸ್ತೆಯಲ್ಲಿ ಚಹಾ ಕುಡಿದ ಬಳಿಕ ವೈದೇಹಿ ಕಪ್‌ ಅನ್ನು ರಸ್ತೆಬದಿ ಎಸೆದಿದ್ದಳು. ಇದನ್ನು ಗಮನಿಸಿದ ಪೌರಕಾರ್ಮಿಕ ಕಪ್‌ ಅನ್ನು ಕಸದ ಡಬ್ಬಿಗೆ ಹಾಕುವಂತೆ ಸೂಚಿಸಿದ್ದರಿಂದ ಮಹಿಳೆ ಆಕ್ರೋಶಗೊಂಡು …

Read More »

21 ವರ್ಷದ ಯುವಕನಿಗೆ ಆಂಟಿ ಮೇಲೆ ಲವ್ ; ವಿರೋಧಿಸಿದ್ದಕ್ಕೆ ಒಂದೇ ನೇಣಿಗೆ ಕೊರಳೊಡ್ಡಿ ಇಬ್ಬರೂ ಆತ್ಮಹತ್ಯೆ.!

ಕಲಬುರಗಿ: ಕುಟುಂಬಸ್ಥರ ವಿರೋಧಕ್ಕೆ ಬೇಸತ್ತು ಪ್ರೀತಿಸುತ್ತಿದ್ದ ಜೋಡಿ ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶರಣಮ್ಮ (32) ಹಾಗೂ ಬಸವರಾಜ್ (21) ಮೃತರು. ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಗುಡ್ಡದ ಪ್ರದೇಶದಲ್ಲಿ ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ …

Read More »

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ ಪಡೆದ ಆರೋಪ ಡಾ. ಅಂಕಿತಾ ಯರಗಲ್ ವಿರುದ್ಧ ಕೇಳಿಬಂದಿದೆ. 2026ರ ಮಾರ್ಚ್‌ನಲ್ಲಿ MD ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದ ಬಳಿಕ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗಿಲ್ಲ ಎನ್ನಲಾಗಿದ್ದು, ಇದರಿಂದ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ ಬಹುತೇಕ ಬಂದ್ ಸ್ಥಿತಿಯಲ್ಲಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಡಿಹೆಚ್ಓ ಡಾ. ರಾಜಕುಮಾರ ಯರಗಲ್ …

Read More »

ದನ ವಧೆ ಮಾಡಿ ಮಾಂಸ ಮಾರಾಟ ಯತ್ನ: ಇಬ್ಬರ ಬಂಧನ

ಮಂಗಳೂರು: ಕಸಬಾ ಬೆಂಗ್ರೆ ಗ್ರಾಮದ ಮನೆಯ ಹಿಂಭಾಗದಲ್ಲಿ ದನವನ್ನು ವಧೆ ಮಾಡಿ ಮಾಂಸ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಪಣಂಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಫಹಾದ್ ಹಾಗೂ ಮೊಹಮ್ಮದ್ ನೌಫಲ್ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸೆ.10ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳು ದನದ ಮಾಂಸವನ್ನು ಪ್ಯಾಕ್ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಸ್ಥಳದಿಂದ ಸುಮಾರು 143 ಕೆ.ಜಿ. 800 ಗ್ರಾಂ ಮಾಂಸ, ದನದ ಚರ್ಮ, ತಲೆ, ಕಾಲುಗಳು, …

Read More »

ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಯುವಕನ ಶವ ಪತ್ತೆ

ಕಲಬುರಗಿ: ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದ ಗುಡ್ಡದಲ್ಲಿ ಯುವಕ ಮತ್ತು ಮಹಿಳೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಶರಣಮ್ಮ (32) ಮತ್ತು ಬಸವರಾಜ (21) ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More »

ಪತಿಯಿಂದ ದೂರವಿದ್ದ ಮಹಿಳೆ ಹತ್ಯೆ ಶಂಕೆ: ಪ್ರಿಯಕರ ಶಬ್ಬೀರ್‌ ಫೋನ್‌ನೊಂದಿಗೆ ಪರಾರಿ!

ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ 28 ವರ್ಷದ ವಿವಾಹಿತೆ ಚೈತ್ರಾ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪತಿಯಿಂದ 8 ವರ್ಷಗಳಿಂದ ದೂರವಿದ್ದ ಆಕೆ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಚೈತ್ರಾ ಶಬ್ಬೀರ್ ಎಂಬಾತನೊಂದಿಗೆ ಲಿವ್‌ಇನ್ ಸಂಬಂಧದಲ್ಲಿದ್ದು, ಇತ್ತೀಚೆಗೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆಯ ದಿನ ಶಬ್ಬೀರ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಚೈತ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ನಂದಿಗಿರಿಧಾಮ …

Read More »

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ ಔಷಧಿಗಳ ಭಾರಿ ಸಂಗ್ರಹ ಪತ್ತೆಹಚ್ಚಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ವೀರೇಶ್‌ಕುಮಾರ್‌ನನ್ನು ಬಂಧಿಸಲಾಗಿದೆ. ಕ್ಯಾನ್ಸರ್‌ ಮಾತ್ರೆಗಳು, ಜೀವ ರಕ್ಷಕ ಔಷಧಿಗಳು ಹಾಗೂ ಐಸಿಯು ಇಂಜೆಕ್ಷನ್‌ಗಳನ್ನು ನಕಲಿ ಮಾಡಿ ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆ, ಕ್ಲಿನಿಕ್‌ ಮತ್ತು ಮೆಡಿಕಲ್‌ ಶಾಪ್‌ಗಳಿಗೆ ಪೂರೈಸಲಾಗುತ್ತಿತ್ತು ಎನ್ನಲಾಗಿದೆ. ಅವಧಿ ಮುಗಿದ ಔಷಧಿಗಳನ್ನು ಮರುಪ್ಯಾಕ್ ಮಾಡಿ …

Read More »

ಮಂಗಳೂರು | ಮಾದಕ ವಸ್ತು ಸೇವನೆ ಮಾಡಿದ ಆರೋಪ: 9 ಮಂದಿ ಸೆರೆ

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಪಾಂಡೇಶ್ವರ, ಕದ್ರಿ, ಕೊಣಾಜೆ ಹಾಗೂ ಉಳ್ಳಾಲ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಈ ಬಂಧನ ನಡೆಸಿದ್ದಾರೆ. ಸೆ.9ರಂದು ಅಬ್ದುಲ್ ತೌಫಿಕ್ ಹಾಗೂ ಸೆ.10ರಂದು ರಿತುಲ್ ಎಸ್. ಚಂದ್ರನ್, ಅಬ್ದುಲ್ಲಾ, ಅಭಯ್ ಕೃಷ್ಣ, ಧೀರಾಜ್ ಶೆಟ್ಟಿ ಮತ್ತು ನಂದಿತ್ ಎಸ್. ಬೆಳ್ಚಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ …

Read More »

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹5.73 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಪುಷ್ಪರಾಜ್ ಶೆಟ್ಟಿ ಅವರಿಗೆ ಯು.ಕೆ.ಯಲ್ಲಿ ಹೌಸ್‌ಕೀಪಿಂಗ್ ಸೂಪರ್‌ವೈಸರ್ ಉದ್ಯೋಗ ಕೊಡಿಸುವುದಾಗಿ ಆಶ್ಲೆ ಕರ್ನೇಲಿಯೋ ಎಂಬಾತ ಭರವಸೆ ನೀಡಿದ್ದ. ವೀಸಾ ಪ್ರಕ್ರಿಯೆ, ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ₹5.73 ಲಕ್ಷ ಹಣ ಪಡೆದಿದ್ದಾರೆ. ಈ ಪೈಕಿ …

Read More »