BigTv News
August 19, 2025
Breaking News
ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ನಡೆದಿದೆ.ಅರ್ನವಿ(11), ಯಶ್(20) ಸ್ಥಳದಲ್ಲೇ ಮೃತಪಟ್ಟಿದ್ದು, 29 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
BigTv News
August 19, 2025
Breaking News
ಚಾಲಕನ ನಿಯಂತ್ರಣ ತಪ್ಪಿದ ಕೆ.ಎಸ್.ಆರ್.ಟಿ.ಸಿ ಬಸ್ಸು ರಸ್ತೆ ಪಕ್ಕದ ದಿಬ್ಬಕ್ಕೆ ಗುದ್ದಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಮುಟ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆಯಿಂದ ಸೂರ್ಲಬಿ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಮುಟ್ಲು ಗ್ರಾಮದ ಸುಬ್ರಮಣ್ಯ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಸಮೀಪ ದಿಬ್ಬಕ್ಕೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಸಣ್ಣ ಗಾಯಗಳಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ ಬಸ್ ನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಆದ್ರೆ ಇಂದು …
Read More »
BigTv News
August 19, 2025
Breaking News
ತುಮಕೂರಿನ ಶಿರಾ ತಾಲೂಕಿನ ಕೊಟ್ಟ ರಂಗಾಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಶಿರಾದಿಂದ ಪಟ್ಟನಾಯಕನಹಳ್ಳಿ ಕಡೆಗೆ ತೆರಳುತಿದ್ದ ಖಾಸಗಿ ಬಸ್ ಎದುರಿನಲ್ಲಿ ಅತೀ ವೇಗವಾಗಿ ಬೈಕ್ ಆಗಮಿಸಿತ್ತು. ಬೈಕ್‌ಗೆ ಡಿಕ್ಕಿಯಾಗುವುದು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಇದರ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣ ಗಾಯವಾಗಿದೆ. ಗಾಯಾಳುಗಳನ್ನು ಶಿರಾ ಆಸ್ಪತ್ಪೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Read More »
BigTv News
August 19, 2025
Breaking News
ರಾಜ್ಯದಲ್ಲಿ ಒಂದೆಡೆ ಭಾರಿ ಮಳೆ ಪರಿಣಾಮ ಹಲವು ಅವಾಂತರ ಸಂಭವಿಸಿದ್ದರೆ, ಮತ್ತೊಂದೆಡೆ ರಸ್ತೆ ಅಪಘಾತಗಳು ವರದಿಯಾಗಿದೆ. ಇದೀಗ ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಓವರ್ ಟೇಕ್ ವೇಳೆ ಇನ್ನೋವಾ ಕಾರಿಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್‌ನಲ್ಲಿದ್ದ ಅಣ್ಣ ಹಾಗೂ ತಂಗಿ ಇಬ್ಬರು ಮೃತಪಟ್ಟಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
Read More »
Shaikh BigTv
August 19, 2025
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ-ಧಾರವಾಡ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಶಾಂತಿ ಸಭೆಯನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲಾಯಿತು.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ,ವೇದಿಕೆ ಮೇಲೆ ಹಲವು ಧರ್ಮದ ಧರ್ಮ ಗುರುಗಳು ಉಪಸ್ಥಿತಿ ಮೂರು ಸಾವಿರ ಮಠದ ಗುರುಸಿದ್ದ, ರಾಜಯೊಗಿಂದ್ರ ಶ್ರೀ, ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಸಿಕ್ ಗುರುಗಳಾದ ಗುರುವಂತ ಸಿಂಗ್ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳಾದ ಡಿಸೋಜ ಹಾಜರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ …
Read More »
Shaikh BigTv
August 19, 2025
Breaking News, Crime, ಕರ್ನಾಟಕ, ಧಾರವಾಡ
ಹುಬ್ಬಳ್ಳಿ ಬೆಲೆ ಎಷ್ಟೇ ಇರಲಿ ಸುಮಂಗಲಿಯರಿಗೆ ತಾಳಿಯ ಮಹತ್ವದ ಬಗ್ಗೆ ಗೊತ್ತೇ ಇರುತ್ತದೆ. ಈ ದಿವಸ ಕೆ ಸಿ ಸರ್ಕಲ್ ದಲ್ಲಿ ಸಂಚಾರ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರಿಗೆ ಮಂಗಳ ಸೂತ್ರವೊಂದು ಸಿಕ್ಕಿದ್ದು, ಅದನ್ನು ಹತ್ತಿರದ ಉಪನಗರ ಠಾಣೆಯ ತಾನಾಧಿಕಾರಿಗಳಿಗೆ ಒಪ್ಪಿಸಿದ್ದು ನಂತರ ಕಳೆದುಕೊಂಡ ಬಡ ಕುಟುಂಬಕ್ಕೆ ಒಪ್ಪಿಸಿದ್ದು ಇರುತ್ತದೆ. ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ.
Read More »
BigTv News
August 19, 2025
Breaking News
ರಾಜ್ಯಾದ್ಯಂತ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಜಿಪಿಎಸ್ ಅಳವಡಿಕೆ ಹಾಗೂ ಸ್ಕ್ವಾಡ್ ತಂಡವನ್ನು ಬಿಗಿಗೊಳಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಪರಿಷತ್‌ನಲ್ಲಿ ತಿಳಿಸಿದರು.ಅಕ್ರಮ ಮರಳುಗಾರಿಕೆ ನಡೆಸುವವರ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಲಾರಿ, ಟ್ರ್ಯಾಕ್ಟರ್, ಎತ್ತಿನಗಾಡಿ ಮತ್ತಿತರ ವಾಹನಗಳನ್ನು ಬಿಟ್ಟು ಓಡಿಹೋಗುತ್ತಾರೆ. ಆದರೂ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ ಕಾನೂನು ಪ್ರಕಾರವೇ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.ಅಕ್ರಮ ಮರಳುಗಾರಿಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಮತ್ತಿತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. …
Read More »
BigTv News
August 19, 2025
Breaking News
ಅಮೆರಿಕಕ್ಕೆ ಸಾಕಷ್ಟು ಸಮುದ್ರ ಆಹಾರ ವಸ್ತುಗಳನ್ನು ರಫ್ತು ಮಾಡುತ್ತಿದ್ದ ಭಾರತ ಈಗ ಶೇ. 50 ಟ್ಯಾರಿಫ್ ಕಾರಣಕ್ಕೆ ಪರ್ಯಾಯ ಮಾರ್ಗಗಳತ್ತ ಹೆಜ್ಜೆ ಹಾಕುತ್ತಿದೆ. ಜಪಾನ್, ಚೀನಾ, ಬ್ರಿಟನ್ ಮತ್ತು ಯೂರೋಪಿಯನ್ ಒಕ್ಕೂಟಗಳತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ.ಭಾರತದಿಂದ ರಫ್ತಾಗುವ ಸೀಗಡಿ ಮೀನುಗಳಲ್ಲಿ ಶೇ. 40ರಷ್ಟವು ಅಮೆರಿಕಕ್ಕೆ ಹೋಗುತ್ತಿದ್ದುವು. ಈಗ ಶೇ. 50ರ ಟ್ಯಾರಿಫ್ ಕಾರಣದಿಂದ ಅಮೆರಿಕದ ಬಾಗಿಲು ಬಹುತೇಕ ಬಂದ್ ಆಗಿದೆ. ಈ ಕಾರಣಕ್ಕೆ ಜಪಾನ್, ಚೀನಾ ಮತ್ತು ಬ್ರಿಟನ್ …
Read More »
BigTv News
August 19, 2025
Breaking News
ಕಾಂತಾರ ಚಿತ್ರತಂಡ ಇದೀಗ ಒಂದೊಂದಾಗಿ ಪಾತ್ರಗಳ ಪರಿಚಯವನ್ನು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ರುಕ್ಮೀಣಿ ವಸಂತ್ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ತಂಡ ಇದೀಗ ಮತ್ತೊಂದು ಪ್ರಮುಖ ಪಾತ್ರದ ಫಸ್ಟ್ ಲುಕ್ ರೀವಿಲ್ ಮಾಡಿದೆ.ಕನ್ನಡಗಿ ಹೆಚ್ಚಾಗಿ ಬಾಲಿವುಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿರು ನಟ ಗುಲ್ಷನ್ ದೇವಯ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕುಲಶೇಖರ ಹೆಸರಿನ ಪಾತ್ರದಲ್ಲಿ ಗುಲ್ಷನ್ ದೇವಯ್ಯ ನಟಿಸುತ್ತಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ …
Read More »
BigTv News
August 19, 2025
Breaking News
ಬಾಲಿವುಡ್ ನಟ ಅಚ್ಯುತ್ ಪೋತ್‌ದಾರ್ ಇಂದು ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನ ಅಚ್ಯುತ್ ಪೋತ್‌ದಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಥಾಣೆಯ ಜ್ಯೂಪಿಟರ್ ಆಸ್ಪತ್ರೆಯಲ್ಲಿ ಅಚ್ಯುತ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.ಅಚ್ಯುತ್ ಅವರು ತ್ರೀ ಈಡಿಯಟ್ಸ್ ಸೇರಿ ಹಲವು ಚಿತ್ರಗಳಲ್ಲಿ, ಸಿರಿಯಲ್‌ನಲ್ಲೂ ನಟಿಸಿದ್ದಾರೆ. ಅಚ್ಯುತ್ ಸಾವಿಗೆ ಬಾಲಿವುಡ್ ಚಿತ್ರರಂಗ, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
Read More »