Breaking News

Breaking News

ಹಾಸನ :ತಂದೆ ಎದುರೇ ಮಗಳ ಅಪಹರಣ, ಮಗಳ ರಕ್ಷಣೆಗೆ ಕಾರಿನ ಕಿಟಕಿಗೆ ಜೋತುಬಿದ್ದ ಗಾಯಗೊಂಡ ತಂದೆ!

ಅರೇಹಳ್ಳಿಯಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಚನ್ನರಾಯಪಟ್ಟಣದ ಯುವಕ ಪ್ರಜ್ವಲ್ ತನ್ನ ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಯುವತಿಯ ತಂದೆ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿ ಚಲಿಸುತ್ತಿದ್ದ ಕಾರಿನ ಬಾಗಿಲಿಗೆ ನೇತಾಡಿದ್ದಾರೆ.ಘಟನೆಯ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಜ್ವಲ್ ಮತ್ತು ಪ್ರಸ್ಟಲ್ ಚನ್ನರಾಯಪಟ್ಟಣ ಪೊಲೀಸರ ಎದುರು ಹಾಜರಾಗಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು …

Read More »

ದೆಹಲಿ :ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಭೇಟಿಯಾದ ವಿರಾಟ್​, ಅನುಷ್ಕಾ ದಂಪತಿ.

ಟೀಮ್​ ಇಂಡಿಯಾದ ಆಟಗಾರ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದು. ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅವರು ವೃಂದಾವನದ ಸ್ವಾಮಿ ಪ್ರೇಮಾನಂದ್ ಮಹರಾಜ್​ರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದಾರೆ.ಈ ದಂಪತಿಗಳು ಆಧ್ಯಾತ್ಮಿಕ ನಾಯಕನನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ ಮತ್ತು ನಿಯಮಿತವಾಗಿ ಅವರ ಸತ್ಸಂಗಗಳಿಗೆ ಹಾಜರಾಗಿದ್ದಾರೆ. ಆಗಾಗ್ಗೆ ತಮ್ಮ …

Read More »

ಬೀದರ್ :ಕುಡಿದು ಮರ್ಯಾದೆ ಕಳೆಯುತ್ತಾನೆ ಎಂದು ಹೆತ್ತ ತಂದೆಯನ್ನೇ ಕೊಂದ ಮಗ!

ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಘಟನೆ ನಡೆದಿದ್ದು. ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ 52 ವರ್ಷದ ಶಿವಕುಮಾರ್​ ಕುಡಿತದ ಚಟವನ್ನ ಮೈಗಂಟಿಸಿಕೊಂಡಿದ್ದನು, ಇದೇ ಕುಡಿತದ ಚಟ ಇಂದು ಆತನನ್ನ ಚಟ್ಟ ಏರುವಂತೆ ಮಾಡಿದ್ದು, ನಿತ್ಯ ಕುಡಿದು ಗಲಾಟೆ ಮಾಡುತ್ತಾನೆ, ಊರಿನಲ್ಲಿ ಕುಟುಂಬದ ಮರ್ಯಾದೆ ಕಳೆಯುತ್ತಿದ್ದಾನೆ ಅಂತಾ ಸ್ವಂತ ಮಗನೆ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿಕೊಲೆ ಮಾಡಿದ ಆರೋಪಿ ರೇವಣ್ಣಪ್ಪಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೃತನ ಮಗಳ …

Read More »

ರಾಮನಗರ : ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ!

ಬಾಲಕಿಯನ್ನ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ತಾಲೂಕಿನ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿ ಬಳಿ ನಡೆದಿದೆ. ದುಷ್ಕರ್ಮಿಗಳು 14 ವರ್ಷದ ವಿಕಲಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯನ್ನ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.ರಾತ್ರಿ ಎಷ್ಟು ಹೊತ್ತಾದರೂ ಸಹಾ ಮನೆಗೆ ಆಕೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು, ಸಂಬಂಧಿಕರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಮಾರನೇ ದಿನ ಬೆಳಗ್ಗೆ ಗ್ರಾಮದ ರೈಲ್ವೆ ಟ್ರಾಕ್ ಪಕ್ಕದಲ್ಲಿ …

Read More »

ಮೈಸೂರು :ಪತಿಗೆ ಪತ್ನಿಯಿಂದ ಕೊಲೆ ಬೆದರಿಕೆ: 5 ಮಂದಿ ವಿರುದ್ದ FIR ದಾಖಲು!

ಕೌಟುಂಬಿಕ ಕಲಹ ಹಿನ್ನಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋದ ಪತಿಗೆ ಪತ್ನಿಯೇ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಪತ್ನಿ,ಅತ್ತೆ ಸೇರಿದಂತೆ 6 ಮಂದಿ ವಿರುದ್ದ ಪತಿ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಜಾತಿವಿಚಾರದಲ್ಲಿ ಉಷಾ ಹಾಗೂ ಅತ್ತೆ ರಾಜಲಕ್ಷ್ಮಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ.ಇದರಿಂದ ಬೇಸತ್ತ ರಾಜೇಶ್ ಕುಮಾರ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಪ್ರತಿತಿಂಗಳು 25 ಸಾವಿರ ಜೀವನಾಂಶ ಪಾವತಿಸುತ್ತಾ ಬಂದಿದ್ದಾರೆ. ಕೌಟುಂಬಿಕ …

Read More »

ಬೆಂಗಳೂರು : ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯ ಬರ್ಬರ ಹತ್ಯೆ.!

ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 3 ದಿನದ ಹಿಂದೆ ಈ ಘಟನೆ ನಡೆದಿದ್ದು, ವೀರಮಣಿ, ಪವನ್, ಅಜೀಜ್ ಎಂಬುವರು ಪಾರ್ಟಿ ಮಾಡಿದ್ದು, ಇವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು.ಅಜೀಜ್ ಪಾರ್ಟಿ ಮಾಡುತ್ತಿದ್ದ ವೇಳೆ ಪವನ್ ಜಾಯಿನ್ ಆಗಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ಪವನ್ ಹಾಗೂ ಅಜೀಜ್ ನಡುವೆ ಗಲಾಟೆಯಾಗಿದ್ದು, ಈ ವೇಳೆ ಪವನ್ ಅಜೀಜ್ ನನ್ನು ಹತ್ಯೆ ಮಾಡಲಾಗಿದೆ.

Read More »

ಬೆಳಗಾವಿ:14 ವರ್ಷದ ಬಾಲಕಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ!

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಆಕ್ರೋಶ ಹೊರಹಾಕಿದ್ದರು.ಸದ್ಯ ಈ ಘಟನೆ ಕುರಿತಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Read More »

ಕಾಪು :ವ್ಯವಹಾರದಲ್ಲಿ ನಷ್ಟ, ಉದ್ಯಮಿ ನಾಪತ್ತೆ!!

ವ್ಯವಹಾರದಲ್ಲಿ ಉಂಟಾದ ನಷ್ಟ ಚಿಂತೆಯಲ್ಲಿ ಮೇ 11ರಂದು ಬೆಳಗ್ಗೆ ಸೈಟ್‌ಗೆ ಹೋಗಿ ಬರುವುದಾಗಿ ಹೇಳಿ ಕಾರಿನಲ್ಲಿ ಹೋದ ಮಜೂರು ಗ್ರಾಮದ ಯೋಗಿಶ್(41) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ನಗರದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ಉದ್ಯಮಿಯ ಹುಡುಕಾಟ ಕಾರ್ಯಾಚರಣೆ ನಡೆಸಿದ್ದಾರೆ.

Read More »

ದಾಂಡೇಲಿ : ಗಾಂಜಾ ಅಕ್ರಮ ಮಾರಾಟ, ಇಬ್ಬರ ಬಂಧನ!

ಬೈಯಲಪಾರಿನ ಐ.ಪಿ.ಎಂ ಗೇಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಸೋಲಾಪುರ ನಿವಾಸಿ ವಾಸಿಮ್ ಇಸಾಕ ಮುಜಾವರ (27), ದಾಂಡೇಲಿಯ ಸುಭಾಸ ನಗರದ ನಿವಾಸಿ ಶಾನವಾಜ ಇಮ್ತಿಯಾಜ ಶೇಖ (22) ಬಂಧಿತ ಆರೋಪಿಗಳಾಗಿದ್ದು, ಅವರಿಂದ ₹60,000 ಮೌಲ್ಯದ 1ಕೆ.ಜಿ 198 ಗ್ರಾಂ ಗಾಂಜಾ ಹಾಗೂ ಮಾರಾಟ ಮಾಡಿ ಬಂದ ನಗದು ₹550 ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Read More »

ಹುಬ್ಬಳ್ಳಿ : ಪುಡಿ ರೌಡಿಗಳ ಅಟ್ಟಹಾಸಕ್ಕೆ, ಎನ್. ಶಶಿಕುಮಾರ್ ಹೇಳಿಕೆ. ಹುಬ್ಬಳ್ಳಿ ಪ್ರಕರಣಗಳ ಬಗ್ಗೆ ಮಾತನಾಡಿದ ಆಯುಕ್ತಕ ಶಶಿಕುಮಾರ್.

ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿದೆ ಚಾಕು ಇರಿಯುವ ಪ್ರಕರಣ ಬೆಳಕಿಗೆ ಬಂದಿವೆ.ಸಾಮಾಜಿಕ ಜಾಲತಾಣಗಳನ್ನ ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ತಾ ಇದ್ದರೋ ಮೇಲೆ ನಿಗಾ ಇಟ್ಟಿದ್ದೇವೆ.28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ.ಈ ಪ್ರಕರಣಗಳಲ್ಲಿ 58 ರೌಡಿ ಶೀಟರ್ ಗಳನ್ನ ಗುರಿಯಾಗಿಸಿಕೊಂಡಿದ್ದೇವೆ 700 ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಅಳವಡಿಸಿಕೊಂಡಿದ್ದೇವೆ. ಕಾಮೆಂಟ್ ಗಳನ್ನ ಸಹ ಪರಿಶೀಲನೆ ನಡೆಸಿದ್ದೇವೆ. ತಲ್ವಾರ್ ಸೇರಿ ಆಯುಧಗಳನ್ನ ಇಟ್ಟುಕೊಂಡು ವ್ಯಯಕ್ತಿಕ ವೈಭವಿಕರಣ ಮಾಡುವಂತವರ ಮೇಲೆ ಕ್ರಮ ಕೈಗೊಂಡಿದ್ದೇವೆ.ಯುವ ಸಮುದಾಯಗಳನ್ನ ಅಪರಾಧ ಜಗತ್ತಿಗೆ ಸೆಳೆಯುವಂತೆ …

Read More »