Breaking News

Breaking News

ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು

ಪುತ್ತೂರು: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಾಲಕಿಯನ್ನು ಆಕೆಯ ಮನೆಗೆ ಬಿಡುವ ಸಲುವಾಗಿ ರವಿವಾರ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಅದ್ದು ಪಡೀಲ್ ಎಂಬಾತ ದಾರಿ ಮಧ್ಯೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಯು ತನ್ನ ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ಕರೆದೊಯ್ಯುತ್ತಾ ದಾರಿ ಮಧ್ಯೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿಯು ನೀಡಿದ ದೂರಿನಂತೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆ.75, ಬಿಎನ್‌ಎಸ್ 2023 …

Read More »

ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ರಿಕ್ಷಾಕ್ಕೆ ಬೆಂಕಿ- ಪಕ್ಕದಲ್ಲಿದ್ದ ಕಾರು, ಸ್ಕೂಟರ್‌ಗೂ ತಗುಲಿದ ಬೆಂಕಿ

ಉಡುಪಿ: ಪೆರಂಪಳ್ಳಿ ಸಮೀಪ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಂಜಿನಿಯರ್ ಮನೋಜ್ ಹಾಗೂ ಯುವ ಉದ್ಯಮಿ ಶರತ್ ಸ್ಥಳಕ್ಕೆ ಧಾವಿಸಿ, ಬೆಂಕಿಯ ನಡುವೆಯೇ ಕಾರನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬಳಿಕ ನೀರು ಹಾಗೂ ಮಣ್ಣು ಬಳಸಿ ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ …

Read More »

ಒಂದೇ ಒಂದು ಕೀಲಿಕೈ.. ಖತರ್ನಾಕ್ ಕೊಲೆ ರಹಸ್ಯ ಭೇದಿಸಿದ ತುಮಕೂರು ಖಾಕಿ!

ತುಮಕೂರು: ಸುಮಾರು ಒಂದು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಶ್ರಿಹಾಳ್ ಗ್ರಾಮದ ಹೊರವಲಯದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಮನೆಯ ಕೀಲಿಕೈಯೇ ಮೃತಳ ಗುರುತು ಪತ್ತೆಹಚ್ಚಲು ಪ್ರಮುಖ ಸುಳಿವಾಗಿದೆ. ಮೃತಳನ್ನು ಗುಬ್ಬಿ ತಾಲೂಕಿನ ಚೆಂಗಾವಿ ಗ್ರಾಮದ ಲಕ್ಷ್ಮಿದೇವಮ್ಮ ಎಂದು ಗುರುತಿಸಲಾಗಿದೆ. ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ನಾಗರಾಜ್ ಎಂಬಾತ ಹಣಕಾಸಿನ ವಿಚಾರದ ಜಗಳದಿಂದ ಕೊಲೆಗೆ ಸಂಚು ರೂಪಿಸಿದ್ದ …

Read More »

ಬೆಂಗಳೂರಲ್ಲಿ ಪುಂಡರ ಹಾವಳಿ: ಗಾಂಜಾ ಮತ್ತಿನಲ್ಲಿ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಬೆಂಗಳೂರು: ಯಲಹಂಕದ ಅಟ್ಟೂರು ಲೇಔಟ್‌ನಲ್ಲಿ ಡೆಲಿವರಿ ಬಾಯ್‌ ಮೇಲೆ ಆರೇಳು ಮಂದಿ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ರಶ್ಮಿ ಬಾರ್‌ ಸಮೀಪ ನಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಬೈಕ್‌ಗಳಲ್ಲಿ ಬಂದ ಯುವಕರು ಡೆಲಿವರಿ ಬಾಯ್‌ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇದೇ ಪ್ರದೇಶದಲ್ಲಿ ಸಾರ್ವಜನಿಕರನ್ನು ತಡೆದು ಗಲಾಟೆ ಮಾಡುವ ಆರೋಪಗಳೂ ಕೇಳಿಬಂದಿವೆ. ಯುವಕರು ಮಾದಕ ವಸ್ತು ಸೇವಿಸಿದ್ದರು ಎಂಬ ಆರೋಪವೂ ಇದ್ದು, ಇದನ್ನು ಪೊಲೀಸರು ದೃಢಪಡಿಸಬೇಕಿದೆ. …

Read More »

ಬೆಳಗಾವಿಯಲ್ಲಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು : ಪೋಷಕರಿಂದ ಕೊಲೆ ಆರೋಪ!

ಬೆಳಗಾವಿ: ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಗೌತಮ್ ಭಜಂತ್ರಿ ಎಂಬ ಬಾಲಕನ ಮೃತದೇಹ ಶಾಲೆಯ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಬಾಲಕನ ತಾಯಿ ಲಕ್ಷ್ಮೀಬಾಯಿ ಭಜಂತ್ರಿ ಅವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾಲೆಯ ಆವರಣದಲ್ಲೇ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ …

Read More »

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ!

ಮೈಸೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರು ನ್ಯಾಯಾಲಯ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. 2022ರಲ್ಲಿ ಎನ್‌.ಆರ್‌. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಬಾಬು ಥಾಮಸ್, ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿ ಬಳಿಕ ಕಾರಿನಿಂದ …

Read More »

ಬಳ್ಳಾರಿಯಲ್ಲಿ ಟೈರ್ ಬ್ಲಾಸ್ಟ್: 20ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ

ಬಳ್ಳಾರಿ: ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಮಹೇಂದ್ರ ಜೀತೋ ಗೂಡ್ಸ್ ವಾಹನ ಅಪಘಾತಕ್ಕೀಡಾದ ಘಟನೆ ಬಳ್ಳಾರಿ ತಾಲೂಕಿನ ಚರಕುಂಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ನಡೆದಿದೆ. ಆಂಧ್ರಪ್ರದೇಶದಿಂದ ಭತ್ತದ ಸಸಿ ನಾಟಿ ಕೆಲಸಕ್ಕೆ ಬಂದಿದ್ದ 26ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ವಾಹನದಲ್ಲಿದ್ದರು. ಅಪಘಾತದಲ್ಲಿ 15ರಿಂದ 20 ಮಂದಿ ಗಾಯಗೊಂಡಿದ್ದು, ನಾಲ್ಕೈದು ಮಂದಿಗೆ ಮೂಳೆ ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಎರಡು ಆಂಬುಲೆನ್ಸ್‌ಗಳ ಮೂಲಕ ಬಳ್ಳಾರಿ ಟ್ರಾಮಾ …

Read More »

ಮೇಲಧಿಕಾರಿಗಳ ಕಿರುಕುಳ ಆರೋಪ: ಸರಕಾರಿ ನೌಕರ ಕಾಲುವೆಗೆ ಹಾರಿ ಆತ್ಮಹತ್ಯೆ

ಗಂಗಾವತಿ: ಮೇಲಧಿಕಾರಿಗಳ ಕಿರುಕುಳದಿಂದ ಮನನೊಂದು ಸರ್ಕಾರಿ ನೌಕರರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಗಾವತಿ ಬಿಇಒ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ವಿಕಲಚೇತನ ನೌಕರ ಮಂಜುನಾಥ ನಾಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಆರಾಳ ಗ್ರಾಮದ ಸಮೀಪ ಕಾಲುವೆ ಬಳಿ ಮಂಜುನಾಥ ಅವರ ತ್ರಿಚಕ್ರ ವಾಹನ ಹಾಗೂ ಪಾದರಕ್ಷೆಗಳು ಪತ್ತೆಯಾಗಿವೆ. ಡೆತ್‌ನೋಟ್‌ನಲ್ಲಿ ಬಿಇಒ ನಟೇಶ್ ಎಚ್.ಬಿ., ಸುಪರಿಂಟೆಂಡೆಂಟ್ ಶಿವಪ್ರಸಾದ್ ಸ್ವಾಮಿ ಹಾಗೂ ಅಧೀಕ್ಷಕಿ ರೇಣುಕಾ …

Read More »

ಹನೂರು ಶೂಟೌಟ್‌ ಕೇಸ್​: ಮೃತರ ಒಳ ಉಡುಪಿನಲ್ಲಿ ಪ್ರೈಮರ್ ಪತ್ತೆ; FSL ವರದಿಯಲ್ಲಿ ಸ್ಫೋಟಕ ಅಂಶ ಬಯಲು

ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಮೂವರ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಂತೋನಿಸ್ವಾಮಿ, ಪೀಟರ್ ಹಾಗೂ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಮತ್ತು FSL ವರದಿ ಹಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ. ಮೂವರ ಎದೆ, ಹೊಟ್ಟೆ ಹಾಗೂ ತೊಡೆ ಭಾಗಕ್ಕೆ ಗುಂಡೇಟು ತಗುಲಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಂತೋನಿಸ್ವಾಮಿ ಹಾಗೂ ಪೀಟರ್ ಅವರ ಒಳಉಡುಪುಗಳಲ್ಲಿ ಗನ್‌ಪೌಡರ್‌ನ ಪ್ರೈಮರ್ ಅಂಶಗಳು ಪತ್ತೆಯಾಗಿದ್ದು, ಅತ್ಯಂತ ಸಮೀಪದಿಂದ ಗುಂಡಿನ ಚಕಮಕಿ ನಡೆದಿರುವ ಸಾಧ್ಯತೆಯನ್ನು FSL …

Read More »

ಬೆಂಗಳೂರಿನ ಮಡಿವಾಳದಲ್ಲಿ ಸುಹೇಲ್ ಭೀಕರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ರೌಡಿಶೀಟರ್ ಸೇರಿ 6 ಆರೋಪಿಗಳ ಬಂಧನ

ಬೆಂಗಳೂರು: ಮಡಿವಾಳ ಅಂಡರ್‌ಪಾಸ್ ಬಳಿ ಮೆಡಿಕಲ್ ಶಾಪ್ ಮಾಲೀಕ ಸುಹೇಲ್‌ರನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ರೌಡಿಶೀಟರ್ ಆದಿಲ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ, ಹಳೆಯ ದ್ವೇಷವೇ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜನವರಿಯಲ್ಲಿ ಬಂಡೆಪಾಳ್ಯದಲ್ಲಿ ನಡೆದ ಶಬ್ಬೀರ್ ಹತ್ಯೆ ಪ್ರಕರಣದಲ್ಲಿ ಸುಹೇಲ್ ಸಹೋದರರು ಭಾಗಿಯಾಗಿದ್ದರು ಎನ್ನಲಾಗಿದ್ದು, ಶಬ್ಬೀರ್‌ನ ಆಪ್ತನಾಗಿದ್ದ ಆದಿಲ್ ಸುಹೇಲ್ ಕುಟುಂಬದ ವಿರುದ್ಧ ದ್ವೇಷ …

Read More »