BigTv News
August 24, 2026
Breaking News
ಉಡುಪಿ: ತಂದೆ, ತಾಯಿಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಬ್ರಹ್ಮಾವರದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗಾಂಧಿನಗರದ ನಿವಾಸಿ ಮೆಹಬೂಬ್ ಅಲಿ ಹಾಗೂ ಪತ್ನಿ ಶಂಶಾದ್ ಬೇಗಂ ಕೊಲೆಯಾದವರು. ಆರೋಪಿ ಶಾಹಿದ್ ಅಲಿ ಎಂಬಾತನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಹಬೂಬ್ ಅಲಿ ಅವರು ಲಾರಿ ಚಾಲಕರಾಗಿದ್ದು, ಮಗ ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿ ಯಾವ ಕಾರಣಕ್ಕೆ ತಂದೆ, …
Read More »
BigTv News
August 24, 2026
Breaking News
ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಮುಂಬೈ ಗ್ಯಾಂಗ್‌ಸ್ಟರ್ ಹಾಗೂ ಬಿಹಾರದ ಅನುಜ್ ಪಾಟೀಲ್ (35) ಗುಂಡೇಟಿಗೆ ಒಳಗಾದ ಆರೋಪಿ. ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಕರೆತರುತ್ತಿದ್ದ ವೇಳೆ ಅನುಜ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲ್ಲೂರು ಠಾಣೆ ಪಿಎಸ್‌ಐ ವಿನಯ್ ಅವರ ಆಯುಧ ಕಸಿದು ಗುಂಡು ಹಾರಿಸಿದ್ದಾನೆ ಎಂದು ಎಸ್‌ಪಿ …
Read More »
BigTv News
August 24, 2026
Breaking News
ಜಮಖಂಡಿ: ಬಸ್ ನಿಲ್ದಾಣದ ಬಳಿ ಜೇಬಿನಲ್ಲಿಟ್ಟಿದ್ದ ಪವರ್ ಬ್ಯಾಂಕ್ ಏಕಾಏಕಿ ಸ್ಫೋಟಗೊಂಡು ಯುವಕ ಗಾಯಗೊಂಡ ಘಟನೆ ನಡೆದಿದೆ. ಸಿದ್ದು ಎಂಬ ಯುವಕನ ಕಾಲು, ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಯುವಕನ ಶರ್ಟ್ ಹಾಗೂ ಪ್ಯಾಂಟ್ ಸುಟ್ಟುಹೋಗಿದ್ದು, ಪವರ್ ಬ್ಯಾಂಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಆತ ಯಾವ ಕಂಪನಿಯ …
Read More »
BigTv News
August 24, 2026
Breaking News
ಚಿಕ್ಕಮಗಳೂರು : ಟಿಪ್ಪು ಸುಲ್ತಾನ್ ಕಟೌಟ್ ಗೆ ಪಾಕಿಸ್ತಾನ ಪರ ಇರುವ ಸಾಂಗ್ ಬಳಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಲಾಗಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಸುಮೋಟೋ ಕೇಸ್ ದಾಖಲಾಗಿದೆ. ಪವರ್ ಟಿಪ್ಪು ಬಾಯ್ಸ್ ಇನ್‌ಸ್ಟಾಗ್ರಾಮ್ ಪೇಜ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ದೇಶ ವಿರೋಧಿ ಕೃತ್ಯ ಕೋಮು ಪ್ರಚೋದನೆಯಡಿ ದಾಖಲಾಗಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಚಿಕ್ಕಮಂಗಳೂರಲ್ಲಿ ಟಿಪ್ಪು ಕಟೌಟ್ ಹಾಕಲಾಗಿದ್ದು, ನಗರದ ಟಿಪ್ಪು ನಗರದಲ್ಲಿ ಈ …
Read More »
BigTv News
August 23, 2026
Breaking News
ಮಂಡ್ಯ: ಅಕಾಲಿಕವಾಗಿ ಮೃತಪಟ್ಟ ಭಿಕ್ಷುಕಿಯೊಬ್ಬರ ಮನೆಯಲ್ಲಿ ಬರೋಬ್ಬರಿ ₹8.50 ಲಕ್ಷ ಹಣ ಪತ್ತೆಯಾಗಿದ್ದು, ಈ ಹಣವನ್ನು ಅವರು ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದರು. ಹಣವನ್ನು ಮೂಟೆಯಲ್ಲಿ ಇಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುತ್ತಲು ಬಡಾವಣೆಯ ಸಬ್ದರಿಯಾ ಬಾದ್ ನಿವಾಸಿ 68 ವರ್ಷದ ಹೂರ್ ಮೃತ ಭಿಕ್ಷುಕಿ. ಆಕೆಗೆ ಇಬ್ಬರು ಸಹೋದರರಿದ್ದು, ಅವರಿಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಹೋದರಿ ಮೃತಪಟ್ಟ ಸುದ್ದಿ ತಿಳಿದು ಮನೆಗೆ ಬಂದಾಗ, ₹10 ಮತ್ತು …
Read More »
BigTv News
August 23, 2026
Breaking News
ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲೇ ಮೆಡಿಕಲ್ ಸ್ಟೋರ್ ಮಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೊಹೇಲ್ ಮೃತ ವ್ಯಕ್ತಿ. ಮಂಗಮ್ಮನ ಪಾಳ್ಯ ನಿವಾಸಿಯಾಗಿದ್ದ ಸೊಹೇಲ್ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ರಾತ್ರಿ 9.30ರ ಸುಮಾರಿಗೆ ಅಂಗಡಿ ಮುಚ್ಚಿ ಬೈಕ್‌ನಲ್ಲಿ ಮಡಿವಾಳದಿಂದ ಕೋರಮಂಗಲದತ್ತ ತೆರಳುತ್ತಿದ್ದಾಗ, ಟ್ರಾಫಿಕ್‌ನಿಂದಾಗಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು ನಾಲ್ವರು ದುಷ್ಕರ್ಮಿಗಳು ಸಾರ್ವಜನಿಕರ ಮುಂದೆಯೇ ಏಕಾಏಕಿ ದಾಳಿ …
Read More »
BigTv News
August 23, 2026
Breaking News
ಚಿಕ್ಕಮಗಳೂರು: ದೈವಾರಾಧನೆ ಹೆಸರಿನಲ್ಲಿ ಭೂತ ಬಿಡಿಸುವ ನೆಪದಲ್ಲಿ ಸತೀಶ್ ಪಾತ್ರಿ ಎಂಬಾತ ಯುವತಿಗೆ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ, ಆಡಿಯೋ ತುಣುಕುಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಯುವತಿಯನ್ನು ಹೆದರಿಸಿ, ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿ, ಕರ್ಪೂರದ ಬೆದರಿಕೆ ಹಾಕಿರುವ ದೃಶ್ಯಗಳಿವೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಎನ್.ಆರ್.ಪುರ ಠಾಣೆಗೆ ದೂರು ನೀಡಲಾಗಿದೆ. ಆದರೆ ಆರೋಪಗಳನ್ನು …
Read More »
BigTv News
August 23, 2026
Breaking News
ಉಡುಪಿ: ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಲಾಟರಿ ಜಾಹೀರಾತು ನೋಡಿ ಟಿಕೆಟ್ ಖರೀದಿಸಿದ ಜುಲಿಯಾನ ಎಂಬ ಮಹಿಳೆ ಸೈಬರ್ ವಂಚಕರ ಬಲೆಗೆ ಬಿದ್ದು ₹27,06,862 ಕಳೆದುಕೊಂಡಿದ್ದಾರೆ. ಲಾಟರಿ ಬಹುಮಾನ ಬಂದಿದ್ದು, ಅದನ್ನು ಪಡೆಯಲು ಪ್ರೊಸೆಸಿಂಗ್, ಶಿಪ್ಪಿಂಗ್ ಹಾಗೂ ಇತರೆ ಶುಲ್ಕ ಪಾವತಿಸುವಂತೆ ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಏಪ್ರಿಲ್‌ನಿಂದ ಜುಲೈ 31ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಬಹುಮಾನವೂ ಬಾರದೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ …
Read More »
BigTv News
August 23, 2026
Breaking News
ಉಪ್ಪಿನಂಗಡಿ: ಭೂ ವಿವಾದಕ್ಕೆ ಸಂಬಂಧಿಸಿ ನೆಲ್ಯಾಡಿ ಗ್ರಾಮದ ಹುಣ್ಸೆಬೆಟ್ಟು ಎಂಬಲ್ಲಿ ಎಚ್.ಸೂರ್ಯನಾರಾಯಣ ಜೋಗಿತ್ತಾಯ ಎಂಬುವರ ಮೇಲೆ ವಾಸುದೇವ ಗೌಡ ಎಂಬುವರು ವಾರಕಾಯುಧದಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸೂರ್ಯನಾರಾಯಣ ಜೋಗಿತ್ತಾಯ ಲೋಕ ಅದಾಲತ್‌ನಲ್ಲಿ ಮಂಜೂರಾದ ಭೂಮಿಯಲ್ಲಿ ತಂತಿ ಬೇಲಿ ನಿರ್ಮಿಸಿ ಹುಲ್ಲು ತೆಗೆಯುತ್ತಿದ್ದ ಸಂದರ್ಭದಲ್ಲಿ ವಾಸುದೇವ ಗೌಡ ಅಕ್ರಮ ಪ್ರವೇಶಮಾಡಿ ಕೊಕ್ಕೆ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿ, ಕೊಲ್ಲುವುದಾಗಿ ಜೀವ …
Read More »
BigTv News
August 23, 2026
Breaking News
ಆಗ್ರಾದಲ್ಲಿ ರೈಲಿನಲ್ಲಿ ಪತ್ತೆಯಾದ ಕೆಂಪು ಸೂಟ್‌ಕೇಸ್‌ನಲ್ಲಿದ್ದ ಮಹಿಳೆಯ ತುಂಡರಿಸಿದ ದೇಹದ ಪ್ರಕರಣದ ತನಿಖೆ ಇದೀಗ ಚೆನ್ನೈವರೆಗೆ ತಲುಪಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಗುಡುವಂಚೇರಿಯ ಬಾಡಿಗೆ ಮನೆಯೊಂದನ್ನು ಪತ್ತೆಹಚ್ಚಿದ್ದು, ಅಲ್ಲಿಯೇ ಮಹಿಳೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 6ರಂದು ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ತಮಿಳುನಾಡು ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯಲ್ಲಿ ಸೂಟ್‌ಕೇಸ್ ಪತ್ತೆಯಾಗಿತ್ತು. ಅದರೊಳಗಿನ ‘ಚೆನ್ನೈ’ ಎಂದು ಬರೆದಿದ್ದ ಚೀಲದ ಸುಳಿವಿನಿಂದ ತನಿಖೆ ಮುಂದುವರಿದಿದ್ದು, ಚೆನ್ನೈ ಸೆಂಟ್ರಲ್‌ನ …
Read More »