Breaking News

Breaking News

ಹುಬ್ಬಳ್ಳಿ: ಗುಂಪಿಗೆ ಸೇರುವ ಕುರಿತು ಹೊಡೆದಾಡಿಕೊಂಡು ಚಾಕುವಿನಿಂದ ಕೊಲೆಗೆ ಯತ್ನ!!

ಇಬ್ರಾಹಿಂ ಎಂಬಾತನಿಗೆ ತಮ್ಮ ಗುಂಪಿಗೆ ಸೇರಿಕೊಳ್ಳಲು ಹೇಳಿದ್ದು, ಅದನ್ನು ನಿರಾಕರಿಸಿದ ಕಾರಣಕ್ಕಾಗಿ ದಿನಾಂಕ‌ 9.4.2025 ರಂದು ರಾತ್ರಿ 9:30 ಗಂಟೆಗೆ ಹುಬ್ಬಳ್ಳಿಯ ಬಾಕಳೆಗಲ್ಲಿ ಹತ್ತಿರ ಚಾಕುವಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ., ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ನಿಟ್ಟೂರು, ಸೆಟ್ಲಮೆಂಟ್, ಹುಬ್ಬಳ್ಳಿ ಮಹ್ಮದ ಹಫೀಜ್ ಶೇಖ್ ಮಂಟೂರ್ ರೋಡ್ ಹುಬ್ಬಳ್ಳಿ, ಅಕೀಬ್ ಬಳ್ಳಾರಿ, ಮಂಟೂರ್ ರೋಡ್ ಹುಬ್ಬಳ್ಳಿ,ದತ್ತಾತ್ರೇಯ …

Read More »

ಸಾಮೂಹಿಕ ವಿವಾಹ ಹೆಸರಲ್ಲಿ ಯುವತಿಯರ ಮಾರಾಟ!!ಸಂತ್ರಸ್ತೆಯಿಂದಲೇ ‘ಖತರ್ನಾಕ್ NGO’ ಖೆಡ್ಡಾಕ್ಕೆ!

ರಾಜಸ್ತಾನ ರಾಜಧಾನಿ ಜೈಪುರ ಬಳಿ ಸಾಮೂಹಿಕ ವಿವಾಹದ ಹೆಸರಲ್ಲಿ ಬಡ ಕುಟುಂಬದ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಜಾಲವನ್ನು ಪೊಲೀಸರು ಬೇದಿಸಿದ್ದಾರೆ.ಬಡ ಕುಟುಂಬಗಳ ಮಹಿಳೆಯರಿಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎನ್‌ಜಿಒ ಸೋಗಿನಲ್ಲಿ ನಡೆಸಲಾಗುತ್ತಿದ್ದ ಮಾನವ ಕಳ್ಳಸಾಗಣೆ ಜಾಲ ಇದಾಗಿದ್ದು, ಎನ್‌ಜಿಒ ನಡೆಸುತ್ತಿದ್ದ ಮಹಿಳೆ, ಬಡ ಕುಟುಂಬಗಳಿಂದ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್‌ಗಳಿಂದ ‘ಖರೀದಿಸಿ’ ವಧುವನ್ನು ಹುಡುಕುತ್ತಿರುವ ಯುವಕರಿಗೆ 2.5-5 ಲಕ್ಷ ರೂ.ಗೆ ‘ಮಾರಾಟ’ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಸ್ಸಿಯ …

Read More »

ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಮಗಳ ಮನೆಗೆ ಕರೆಸಿ ಕೊಂದ ತಂದೆ!!

ತನ್ನ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲ ಎಂದು ಆಕೆ ಕೆಲ ವಾರಗಳ ಹಿಂದೆ ಪ್ರಿಯಕರನೊಂದಿಗೆ ದೆಹಲಿಗೆ ಪರಾರಿಯಾಗಿದ್ದಳು. ಈ ವಿಚಾರ ಟಾಡಾ ಗ್ರಾಮದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಮನೆಯವರು ಆಕೆಯ ಸ್ನೇಹಿತರ ನೆರವಿನಿಂದ ಸಾಕ್ಷಿಯನ್ನು ಸಂಪರ್ಕಿಸಿ ಆಕೆ ಮನೆಗೆ ಬರುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಆಕೆ ಒಪ್ಪಿರಲಿಲ್ಲವಾದರೂ ಬಳಿಕ ಮನೆಯವರು ಮದುವೆಗೆ ಒಪ್ಪಿದ್ದಾರೆ ಎಂದು ಪುಸಲಾಯಿಸಿದ್ದಾರೆ. ಆಗ ಸಾಕ್ಷಿ ಮನೆಗೆ ಬರಲು ಒಪ್ಪಿದ್ದಾಳೆ.ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ …

Read More »

ಲಕ್ಕೂರು ಸೇತುವೆ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೆ ಡಿಕ್ಕಿ!!

ತುಮಕೂರು ಸಮೀಪದ ಗ್ರಾಮವೊಂದರ ಸಂಬಂಧಿಕರ ಮನೆಯಲ್ಲಿಆಯೋಜಿಸಿದ್ದ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾರುತಿ ಸೆಲೆರಿಯೊ ಕಾರಿನಲ್ಲಿ ತೆರಳುತ್ತಿದ್ದರು. ಲಕ್ಕೂರು ಸೇತುವೆ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ಕಾರಿನಲ್ಲಿದ್ದವರು ಸೀಟ್ ಬೆಲ್ಟ್‌ ಹಾಕಿದ್ದರೆ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ನೆಲಮಂಗಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ತಿಳಿಸಿವೆ.’ಬೆಂಗಳೂರು ಕಡೆಯಿಂದ ತುಮಕೂರು ಕಡೆ ಕಾರು ಚಲಿಸುತ್ತಿತ್ತು. ಅದೇ ಮಾರ್ಗವಾಗಿ ಹೋಗುತ್ತಿದ್ದ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದ. ಲಾರಿಗೆ …

Read More »

ಇಬ್ಬರು ಮಕ್ಕಳ ಕೊಂದು ತಂದೆಯೂ ಆತ್ಮಹತ್ಯೆ!!

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಸಾವಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಇಬ್ಬರು ಮಕ್ಕಳ ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ದಾವಣಗೆರೆಯ ಎಸ್‌ಪಿಎಸ್ ನಗರದ 2ನೇ ಹಂತದಲ್ಲಿ ನಡೆದಿದೆ.ಉದಯ್‌ಕುಮಾರ್ ಸಾವಿಗೂ ಮುನ್ನ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿರುವುದು ದೊರೆತಿದೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಮಕ್ಕಳು ಅಮ್ಮ… ಅಮ್ಮ… ಎಂದಾಗ, ಅಮ್ಮ ಎಲ್ಲಿಗೆ ಹೋಗಿದ್ದಾಳೆ.. ಎಂದೆಲ್ಲ ಕೇಳಿದಾಗ ಏನು ಹೇಳುವುದು ಎಂಬುದು ಗೊತ್ತಾಗದೆ ಮನಸಿಗೆ …

Read More »

ಕಾರವಾರ: ಹೃದಯಾಘಾತದಿಂದ ಸೈನಿಕ ಸಾವು!!!

ಪಂಜಾಬ್ ಫ್ರಂಟ್‍ಲೈನ್ ಬೆಟಾಲಿಯನ್‍ನಲ್ಲಿ ನಾಯಕ್ ಸುಬೇದಾರ್ ಆಗಿದ್ದ ವಿಜಯ ವಿಠ್ಠೋಬಾ ತಾಮ್ಸೆ (44) ಹೃದಯಾಘಾತದಿಂದ ಮಂಗಳವಾರ ಹರಿಯಾಣ ರಾಜ್ಯದ ಅಂಬಾಲಾದಲ್ಲಿ ನಿಧನರಾದರು.ಸೈನ್ಯದ ಪರೇಡ್ ವೇಳೆ ಎದೆ ನೋವಿನಿಂದ ವಿಜಯ ಕುಸಿದು ಬಿದ್ದರು.ಅವರನ್ನು ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ವಿಜಯ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.’25 ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದರು. ಸೈನ್ಯದಿಂದ ನಿವೃತ್ತರಾಗಲು ಮೂರು ವರ್ಷ ಬಾಕಿ ಇತ್ತು. ಮೃತರ ಅಂತ್ಯಕ್ರಿಯೆ ಗುರುವಾರ …

Read More »

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ!!

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಮ್ ನ ಮುಂಭಾಗದ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ. ರವಿ ಬಾಗಲಕೋಟೆ ತಾಲುಕಿನ‌ ಮುಚಖಂಡಿ‌ ಗ್ರಾಮದ ನಿವಾಸಿಯಾಗಿದ್ದು, ಮನೆಯಲ್ಲಿ‌ ಜಗಳ ಮಾಡಿಕೊಂಡು‌ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನಿಡಗುಂದಿ‌ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಕಾಲೇಜಿಗೆ ಹೋಗು ಎಂದು ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!!!

ಕಾಲೇಜಿಗೆ ಹೋಗು ಎಂದು ಬೈದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಬಿಗಿದುಕೊಂಡು ಸಾಗರ್ ತುಕಾರಾಮ ಕುರಾಡೆ(19) ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಗರ್ ಚಿಕ್ಕೋಡಿಯಲ್ಲಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಕಾಲೇಜಿಗೆ ಹೋಗು ಎಂದು ಬೈಯ್ದು ಬುದ್ಧಿವಾದ ಹೇಳಿದ್ದಕ್ಕೆ ಈ ನಿರ್ಧಾರ ಕೈಗೊಂಡಿದ್ದಾನೆ.

Read More »

ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು:

ಮುದ್ದೇನಹಳ್ಳಿಯ ಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್​​ ಓದುತ್ತಿದ್ದ ಹೇಮಂತ್, ತಾಯಿ ವೈದ್ಯೆಯ ಜೊತೆ ಪ್ರವಾಸ ಮುಗಿಸಿ ಮನೆಗೆ ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ಸಂಜೆ ಸ್ನಾನ ಮುಗಿಸಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಹೇಮಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಹೇಮಂತ್ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Read More »

ಕಾಣಹೋಸ್ಸಳ್ಳಿ: ಕಾರು – ದ್ವಿಚಕ್ರ ವಾಹನ ಡಿಕ್ಕಿ , ಸವಾರ ಸ್ಥಳದಲ್ಲೇ ಸಾವು!!

ಕಾರು ಮತ್ತು ದ್ವಿಚಕ್ರ ವಾಹನ ಸಾವರ ಚಿತ್ರದುರ್ಗಕೆಕ ಹೋಗುತ್ತಿದ್ದು, ಕಾರಿನ ಚಾಲಕನು ಓವರ್‍ಟೇಕ್ ಮಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪಿಎಸ್‍ಐ ಸಿದ್ದರಾಂ ಬಿದ್ರಾಣಿ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »